ಹಾದು, ರೈತರೇ ಕರ್ನಾಟಕ ಸರಕಾರವು ಪ್ರತಿ ವರ್ಷದಂತೆ ಈವರ್ಷವು 2024 ರಮುಂಗಾರು ಹಂಗಾಮು ರೈತರ ಬೆಳೆ ಸಮೀಕ್ಷೆ ತಂತ್ರಂಶ ಆ್ಯಪ್ ನ್ನು ಬಿಡುಗಡೆ ಮಾಡಿದ್ದಾರೆ. ರೈತರು ತಮ್ಮಜಮೀನಿನಲ್ಲಿ ಬೆಳೆದ ಬೆಳೆಗಳನ್ನು ತಾವೇ ಸಮೀಕ್ಷೆ ಮಾಡಿಕೊಳ್ಳಲು ಇದೊಂದು ದೊಡ್ಡ ಅವಕಾಶವನ್ನು ಕಲ್ಪಿಸಲಾಗಿದೆ. ಈ ಆ್ಯಪ್ ಬಳಕೆ ಹಾಗೂ ಅದರ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ.
ಕರ್ನಾಟಕ ರಾಜ್ಯ ಸರಕಾರವು 2019 ರಿಂದ ಬೆಳೆ ಸಮೀಕ್ಷೆಯನ್ನು ಮಾಡುತ್ತಾ ಬರುತ್ತಿದೆ, ಅದರಲ್ಲಿ 2021 ರಿಂದ ರೈತರೇ ಸ್ವತಃ ಅವರ ಜಮೀನಿನ ಬೆಳೆಗಳನ್ನು ಸಮೀಕ್ಷೆ ಮಾಡಿಕೊಳ್ಳಲು ರೈತರ ಬೆಳೆ ಸಮೀಕ್ಷೆ ಆ್ಯಪ್ ನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದ ರೈತರೇ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಕುದ್ದಾಗಿ ತವೇ ದಾಖಲಿಸಿದ ಹಾಗೆ ಆಗುತ್ತದೆ. ಅದರಿಂದ ರೈತರಿಗೆ ಆಗುವ ನಷ್ಟ ತಪ್ಪುತ್ತವೆ.
ಈ ಮುಂಚೆ ಈ ಬೆಳೆ ಸಮೀಕ್ಷೆಯನ್ನು ಖಾಸಗಿ ನಿವಾಸಿಗಳಿಂದ ಮಾಡಿಸಲಾಗುತ್ತಿತ್ತು. ಅವರಿಂದ ಹಲವಾರು ರೈತರ ಬೆಳೆಗಳ ಬದಲಾವಣೆಗಳು ಕಂಡು ಬರುವುದರಿಂದ ರೈತರಿಗೆ ಬೆಳೆ ಸಮೀಕ್ಷೆ ಆ್ಯಪ್ ನ್ನು ಬಿಡುಗಡೆ ಮಾಡಿ ರೈತರಿಂದಲೇ ಸಮೀಕ್ಷೆ ಮಾಡಿಸಲಾಗುತ್ತಿದೆ. ಈ ಬಗ್ಗೆ ಕಾರ್ಯನಿರ್ವಹಣೆ ಬಗ್ಗೆ ತಿಳಿಯಲು ಈ ಕೆಳಗೆ ವಿವರಿಸಲಾಗಿದೆ.
ಬೆಳೆ ಸಮೀಕ್ಷೆಯನ್ನು ಏಕೆ ಮಾಡಬೇಕು?
1)ನಮ್ಮ ಜಮೀನಿನ ಬೆಳೆಗಳನ್ನು ದಾಖಲಿಸಲು.
2)ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ನ ಪರಿಹಾರ ಪಡೆಯಲು.
3)ಬೆಳೆ ಹಾನಿ ಪರಿಹಾರ ಪಡೆಯಲು.
4)ರಾಜ್ಯ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು.
5)ಬ್ಯಾಂಕ್ ಗಳಲ್ಲಿ ಕೃಷಿ ಸಾಲ ಪಡೆಯಲು.
6)ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸೌಲಭ್ಯಗಳನ್ನು ಪಡೆಯಲು.
7)ಕೃಷಿ ಬೆಳೆಗಳ ಅಂಕಿ ಸಂಖ್ಯೆಗಳನ್ನು ಕಲೆ ಹಾಕಲು ಸಹಕಾರಿ.
8)ಪ್ರಾಕೃತಿಕ ವಿಕೋಪದ ಬೆಳೆ ನಷ್ಟ ಪರಿಹಾರ ಪಡೆಯಲು.
Kharif crop survey-2024: ಮುಂಗಾರು ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ವಿಧಾನ:
ರೈತರು ಅಥವಾ ತಮ್ಮ ಮನೆಯಲ್ಲಿರುವ ಯಾರದಾದರು ಒಬ್ಬರ ಸ್ಕ್ರೀನ್ ಟಚ್ ಮೊಬೈಲ್ ನಲ್ಲಿ ಮೊದಲಿಗೆ ಈ Kharif crop survey app link ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ-ಸ್ಟೋರ್ ಭೇಟಿ ಮಾಡಿ ಇಲ್ಲಿ “ಮುಂಗಾರು ರೈತರ ಬೆಳೆ ಸಮೀಕ್ಷೆ 2024-25” ಎನ್ನುವ ಹೆಸರಿನ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
Kharif crop survey app: ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡುವ ವಿಧಾನ:
ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಗೂಗಲ್ ಪ್ಲೇ-ಸ್ಟೋರ್ ನಿಂದ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ನಿಮ್ಮ ಜಮೀನಿಗೆ ಭೇಟಿ ಮಾಡುವ ಮೊದಲು ಮೊದಲಿಗೆ ನೆಟ್ ವರ್ಕ ಇರುವ ಸ್ಥಳದಲ್ಲೇ ಈ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು ನಿಮ್ಮ ಅಧಾರ್ ವಿವರ ಮತ್ತು ಜಮೀನಿನ ಸರ್ವೆ ನಂಬರ್ ವಿವರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
Step-1: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಅಪ್ಲಿಕೇಶನ್ ಒಪನ್ ಮಾಡಿಕೊಂಡು 3 ರಿಂದ 4 ಬಾರಿ allow ಎಂದು ಒತ್ತಿ ಬಳಿಕ ಕೊನೆಯಲ್ಲಿ “Agree” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ “E-KYC ಮೂಲಕ ಆಧಾರ್ ದೃಡೀಕರಿಸಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ರೈತರ ಅಧಾರ್ ಕಾರ್ಡ ನಂಬರ್ ಅನ್ನು ಹಾಕಿ ಸಹಮತಿ ಇದೆ ಎಂದು ಟಿಕ್ ಮಾಡಿಕೊಂಡು ಕೆಳಗಡೆ ದೃಡೀಕರಣ ವಿಧಾನವನ್ನು ಆಯ್ಕೆ ಮಾಡಿ ಅಲ್ಲಿ OTP ಮೇಲೆ ಕ್ಲಿಕ್ ಮಾಡಿ “ಓಟಿಪಿ ಪಡೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-2: ತದನಂತರ ನಿಮ್ಮ ಮೊಬೈಲ್ ಗೆ ಬರುವ 6 ಅಂಕಿಯ OTP ಅನ್ನು ಹಾಕಿ ಸಲ್ಲಿಸಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಎಲ್ಲಾ ವಿವರ ಇಲ್ಲಿ ತೋರಿಸುತ್ತದೆ. ಇಲ್ಲಿ ಮೊಬೈಲ್ ನಂಬರ್ ಹಾಕಿ “ಸಕ್ರಿಯಗೊಳಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿ “ಸಲ್ಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ ಸಕ್ರಿಯಗೊಳಿಸಿಕೊಳ್ಳಬೇಕು.
Step-3: ಇದಾದ ಬಳಿಕ ನಿಮ್ಮ ಸರ್ವೆ ನಂಬರ್ ಗಳು ಇಲ್ಲಿ ತೋರಿಸುತ್ತವೆ ನಂತರ ನಿಮ್ಮ ಜಮೀನಿನ್ನು ಭೇಟಿ ಮಾಡಿ ಒಂದು ಒಂದು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ “ಬೆಳೆ ವಿವರ ದಾಖಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಪ್ರಸ್ತುತ ಬೆಳೆದಿರುವ ಬೆಳೆ ವಿವರವನ್ನು ಹಾಕಿ ಬೆಳೆಯ 2 ಪೋಟೋ ಕ್ಲಿಕ್ ಮಾಡಿಕೊಂಡು ಬೆಳೆ ವಿವರ ದಾಖಲಿಸಬೇಕು.
Step-4: ಒಂದೊಮ್ಮೆ ನಿಮ್ಮ ಸರ್ವೆ ನಂಬರ್ ಗಳು ಕಾಣಿಸದೇ ಇದ್ದಲ್ಲಿ “ಸರ್ವೆ ನಂಬರ್ ಸೇರಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ ಬಿಟ್ಟು ಹೋದ ಸರ್ವೆ ನಂಬರ್ ಅನ್ನು ಸೇರಿಸಬಹುದು.
Crop survey-ಬೆಳೆ ಸಮೀಕ್ಷೆ ವಿವರ ಅಪ್ಲೋಡ್ ಮಾಡುವ ವಿಧಾನ:
ಈ ಮೇಲಿನ ವಿಧಾನವನ್ನು ಅನುಸರಿ ನಿಮ್ಮ ಜಮೀನಿನ ಬೆಳೆ ವಿವರ ದಾಖಲಿಸಿದ ಬಳಿಕ ಕೊನೆಯಲ್ಲಿ “ಅಪ್ಲೋಡ್ ಮಾಡಿ” ಬಟನ್ ಮೇಲೆ ಕ್ಲಿಕ್ ಮಾಡಿ ತಪ್ಪದೇ ನೀವು ಮಾಡಿರುವ ಬೆಳೆ ಸಮೀಕ್ಷೆ ವರದಿಯನ್ನು ಅಪ್ಲೋಡ್ ಮಾಡಬೇಕು ಇಲ್ಲವಾದಲ್ಲಿ ಈ ವಿವರವು ನಿಮ್ಮ ಮೊಬೈಲ್ ನಲ್ಲೇ ಉಳಿದು ಬಿಡುತ್ತದೆ.
PR details-ನಿಮ್ಮ ಗ್ರಾಮದ ಖಾಸಗಿ ನಿವಾಸಿಯ ಸಹಾಯ ಪಡೆಯಬವುದು:
ರೈತರು ತಮಗೆ ಮೊಬೈಲ್ ಅಪ್ಲಿಕೇಶನ್ ಮೂಲಕ ಬೆಳೆ ಸಮೀಕ್ಷೆ ಮಾಡಲು ಗೊತ್ತಾಗದೇ ಇದ್ದ ಪಕ್ಷದಲ್ಲಿ ನಿಮ್ಮ ಗ್ರಾಮ ಬೆಳೆ ಸಮೀಕ್ಷೆ ಮಾಡಲು ಕೃಷಿ ಇಲಾಖೆಯಿಂದ ನೇಮಿಸಿರುವ ಖಾಸಗಿ ನಿವಾಸಿಯ ಸಹಾಯ ಪಡೆಯಬವುದು ಖಾಸಗಿ ನಿವಾಸಿಯ ವಿವರ ಪಡೆಯಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ.
Crop survey helpline- 18004253553 ಇನ್ನು ಹೆಚ್ಚಿನ ಮಾಹಿತಿ: