Monday, June 16, 2025

Rudset tailering class-ರುಡ್‌ ಸೆಟ್‌ ಉಜಿರೆಯಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ಉಚಿತ ತರಬೇತಿಗೆ ಅರ್ಜಿ ಆಹ್ವಾನ!

ದಕ್ಷಿಣ ಕನ್ನಡ(ಮಂಗಳೂರು) ಜಿಲ್ಲೆ ಧರ್ಮಸ್ಥಳದ ಹತ್ತಿರ ಉಜಿರೆ ರುಡ್ ಸೆಟ್ ಸಂಸ್ಥೆ ವತಿಯಿಂದ ಸ್ವ-ಉದ್ಯೋಗ ಆಕಾಂಕ್ಷಿಗಳಿಗೆ  ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ(ಮಹಿಳೆಯರ ಟೈಲರಿಂಗ್) ಮತ್ತು ವಿವಿಧ ಬಗೆಯ ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ತರಬೇತಿಗೆ ಅರ್ಜಿ ಸಲ್ಲಿಸಲು ಅವಕಾಶ.

ಈ ಒಂದು ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ವಿವಿಧ ಬಗೆಯ ತರಬೇತಿ ನೀಡುವುದರ ಜೊತೆಗೆ ಸ್ವ-ಉದ್ಯೋಗವನ್ನು ಆರಂಭಿಸಲು ಬೇಕಾಗುವ ಬಂಡವಾಳಕ್ಕೆ ಆರ್ಥಿಕವಾಗಿ ನೆರವಾಗಲು ಬ್ಯಾಂಕ್ ಗಳಿಂದ ಸಾಲ ಪಡೆಯಲು ಸೂಕ್ತ ಮಾರ್ಗದರ್ಶನವನ್ನು ಸಹ ನೀಡಲಾಗುತ್ತದೆ.

ಉಜಿರೆ ರುಡ್ ಸೆಟ್ ಸಂಸ್ಥೆ,ದಕ್ಷಿಣ ಕನ್ನಡ(ಮಂಗಳೂರು)(ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ) ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, ನಮ್ಮ ಸಂಸ್ಥೆಯಲ್ಲಿ ದಿನಾಂಕ 03/06/2025 ರಿಂದ 03/07/2025 (30 ದಿನಗಳ) ವರೆಗೆ ಮಹಿಳೆಯರ ವಸ್ತ್ರ ವಿನ್ಯಾಸ(ಮಹಿಳೆಯರ ಟೈಲರಿಂಗ್) ಉಚಿತ ತರಬೇತಿಯನ್ನು ನಡೆಸಲಾಗುತ್ತಿದೆ. ಆದ್ದರಿಂದ ಈ ತರಬೇತಿಯಲ್ಲಿ ಭಾಗವಹಿಸಲು ಆಸಕ್ತರು ಅರ್ಜಿ ಸಲ್ಲಿಸಲು ಸಂಸ್ಥೆಯ ನಿರ್ದೇಶಕರು ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ:ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಿ ಕೃಷಿ ಇಲಾಖೆಯಿಂದ ರೂ.30,000 ವರೆಗೂ ಸಹಾಯಧನ ಪಡೆದುಕೊಳ್ಳಿ!

Free training details-ಈ ಕೆಳಗೆ ತಿಳಿಸಿದ ತರಭೇತಿಗಳು ಉಚಿತವಾಗಿ ನಡೆಯಲಿವೆ.

1.ಸಿಸಿ ಟಿವಿ ಕ್ಯಾಮೆರಾ ಇನ್ಸ್ಟಾಲೆಷನ್(13 ದಿನಗಳು)

2. ಬೇಕರಿ ಆಹಾರ ತಯಾರಿಕೆ (1 ತಿಂಗಳು)

3.ಅಣಬೆ ಬೇಸಾಯ (10 ದಿನಗಳು)

4.ಹಪ್ಪಳ ಮತ್ತು ಚಿಪ್ಸ ತಯಾರಿಕೆ (10 ದಿನಗಳು)

5.ಬ್ಯೂಟಿಸಿಯನ್ ತರಬೇತಿ (1 ತಿಂಗಳು)

6. ಫಾಸ್ಟ ಫುಡ್ ತಯಾರಿಕೆ (10 ದಿನಗಳು)

7.ಕಂಪ್ಯೂಟರ್ ಟ್ಯಾಲಿ (30ದಿನಗಳು)

ಇದಲ್ಲದೇ ಇನ್ನೂ ಅನೇಕ ಯುವಕರು ಮತ್ತು ಯುವತಿಯರಿಗೆ  ಸ್ವ-ಉದ್ಯೋಗವನ್ನು ಕೈಗೊಳ್ಳುವಂತಹ ತರಬೇತಿಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ:ರೈತರಿಗೆ ಸಿಹಿ ಸುದ್ದಿ ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜ ವಿತರಣೆ ಪ್ರಾರಂಭ!

How to join training- ತರಬೇತಿಯನ್ನು ಯಾರೆಲ್ಲ ಸೇರಬಹುದು?

1.ವಯೋಮಿತಿ 18 ರಿಂದ 45 ವಯಸ್ಸಿನ ಒಳಗಿರಬೇಕು.

ವಿಶೇಷ ಸೂಚನೆ: ತರಬೇತಿಯು ಸಂಪೂರ್ಣ ಊಟ ವಸತಿಯೊಂದಿಗೆ ಉಚಿತವಾಗಿರುತ್ತದೆ. ಹಾಗೂ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುವುದು  ಮತ್ತು ತರಬೇತಿಯ ಕೊನೆಯ ದಿನ ಪ್ರಮಾಣ ಪತ್ರ ನೀಡಲಾಗುತ್ತದೆ.

APPLY address-ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ:

ರುಡ್ ಸೆಟ್ ಸಂಸ್ಥೆ

ಉಜಿರೆ,ದಕ್ಷಿಣ ಕನ್ನಡ (ಮಂಗಳೂರು)

Near ಧರ್ಮಸ್ಥಳ-574240

08256236404/9591044014/9591044014/9980885900

9902594791.Whatspp ಮೂಲಕ ಅರ್ಜಿ ಸಲ್ಲಿಸಲು:6364561982

Online ಮೂಲಕ ಅರ್ಜಿ ಸಲ್ಲಿಸಲು:www.rudsetujire.com 

ಇತ್ತೀಚಿನ ಸುದ್ದಿಗಳು

Related Articles