Monday, June 16, 2025

Seeds distribution-ರೈತರಿಗೆ ಸಿಹಿ ಸುದ್ದಿ ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜಗಳ ವಿತರಣೆ ಆರಂಭ!

ನಮಸ್ಕಾರ ರೈತರೇ, ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದ್ದು, ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸೈಕ್ಲೊನ್‌ ಮಳೆ ಬೀಳುತ್ತಿದ್ದು ರೈತರಿಗೆ ಸಂತಸ ಮೂಡಿದೆ. ಇನ್ನೂ ರಾಜ್ಯದ ಕೃಷಿ ಇಲಾಖೆಯಲ್ಲಿ ರೈತರಿಗೆ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆ ಕಾರ್ಯ ಆರಂಭವಾಗಿದೆ. ಬಿತ್ತನೆ ಬೀಜಗಳನ್ನು ಪಡೆಯಲು ಬೇಕಾಗುವ ದಾಖಲೆಗಳು ಮತ್ತು ಮಾನದಂಡಗಳ ವಿವರನ್ನು ಈ ಲೇಖನದಲ್ಲಿ ತಿಳಿದುಕೊಳ್ಳುವ.

ಹೌದು ರೈತರೇ ರಾಜ್ಯದೆಲ್ಲೆಡೆ ಮುಂಗಾರು ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದು, ರೈತರಿಗೆ ಕಡಿಮೆ ದರದಲ್ಲಿ ಬಿತ್ತನೆ ಬೀಜಗಳು ರಾಜ್ಯದ ಕೃಷಿ ಇಲಾಖೆಗಳಲ್ಲಿ ವಿತರಣೆ ಮಾಡಲಾಗುತ್ತಿದೆ.

ರೈತರಿಗೆ ಕಡಿಮೆ ದರದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದ ವತಿಯಿಂದ ಬಿತ್ತನೆ ಬೀಜಗಳನ್ನು ರಾಜ್ಯದ ರೈತ ಸಂಪರ್ಕ ಕೇಂದ್ರ(ಕೃಷಿ ಇಲಾಖೆ)ಗಳಲ್ಲಿ ದಾಸ್ತಾನು ಮಾಡಲಾಗಿದೆ.

ಇದನ್ನೂ ಓದಿ: DAP ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಕೆಗೆ ಕೃಷಿ ಇಲಾಖೆ ಸೂಚನೆ !

Documents-ಬಿತ್ತನೆ ಬೀಜ ಪಡೆಯಲು ಬೇಕಾಗುವ ದಾಖಲೆಗಳು

1)ಪಹಣಿ/ಆರ್‌ ಟಿ ಸಿ

2)ಆಧಾರ್‌ ಪ್ರತಿ

3)SC-ST ಆದಲ್ಲಿ ಪ್ರಮಾಣ ಪತ್ರ

ಸೂಚನೆ: ರೈತರು ಕೃಷಿ ಇಲಾಖೆಯ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಲು ಮುಂಚಿತವಾಗಿ ರೈತರ ನೋಂದಣಿ(FID) ಮಾಡಿಕೊಂಡಿರಬೇಕು.

ರೈತರ ನೋಂದಣಿಯನ್ನು(FID) ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ( ಕೃಷಿ ಇಲಾಖೆಯಲ್ಲಿ ಮಾಡಿಸಬಹುದು.

ಇದನ್ನೂ ಓದಿ: ರೈತರ ನೋಂದಣಿಯನ್ನು(FID) ಏಕೆ ಮಾಡಿಸಬೇಕು ಮತ್ತು ಅದರ ಪ್ರಯೋಜನಗಳು!

ರೈತರ ನೋಂದಣಿಯನ್ನು(FID) ದಾಖಲೆಗಳು

1) ಪಹಣಿ/ಆರ್‌ ಟಿ ಸಿ

2)ಆಧಾರ್‌ ಪ್ರತಿ

3)ಬ್ಯಾಂಕ್‌ ಪ್ರತಿ

4)ಮೊಬೈಲ್‌ ನಂಬರ್‌

5)sc-st ಆದಲ್ಲಿ ಪ್ರಮಾಣ ಪತ್ರ

6)1 ಪೋಟೋ

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ವಿಚಾರಿಸಬಹುದು.

ಇತ್ತೀಚಿನ ಸುದ್ದಿಗಳು

Related Articles