ನಮಸ್ಕಾರ ರೈತರೇ, ಕೃಷಿ ಇಲಾಖೆಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಳ್ಳುವ ರೈತರಿಗೆ 1 ಲಕ್ಷದವರೆಗೆ ಸಹಾಯಧನ ನೀಡುವ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಸಮಗ್ರ ಕೃಷಿ ಪದ್ಧತಿಗಳು ಯಾವುವು ಎಂಬ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಇತ್ತೀಚಿನ ದಿನಗಳಲ್ಲಿ ರೈತರು ಒಂದೇ ಬೆಳೆಯನ್ನು ಮಾಡಿ ನಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಅದನ್ನು ತಪ್ಪಿಸಲು ಕರ್ನಾಟಕ ರಾಜ್ಯ ಕೃಷಿ ಇಲಾಖೆಯು ರೈತರ ಆದಾಯವನ್ನು ಹೆಚ್ಚಿಸಲು ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಳ್ಳಲು ಸಬ್ಸಿಡಿ ನೀಡುತ್ತಿದೆ.
ನಮ್ಮ ರಾಜ್ಯದಲ್ಲಿ ಸಣ್ಣ ಮತ್ತು ಅತೀ ಸಣ್ಣ ಜಮೀನು ಹೊಂದಿದ ರೈತರೇ ಹೆಚ್ಚಾಗಿರುವುದರಿಂದ ಅವರ ಆದಾಯವು ಕಡಿಮೆ ಇರುವುದರಿಂದ ಅಂತಹ ರೈತರಿಗೆ ವಾರದ ಅಥವಾ ಪ್ರತಿ ತಿಂಗಳು ಆದಾಯ ಬರುವ ಹಾಗೆ ಮಾಡಲು ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಂಡಲ್ಲಿ ರೈತರಿಗೆ ಕೃಷಿಯಲ್ಲಿ ಯಾವುದೇ ನಷ್ಠ ಕಂಡುಬರುವುದಿಲ್ಲ.
ಇದನ್ನೂ ಓದಿ:ರೈತರಿಗೆ ಸಿಹಿ ಸುದ್ದಿ ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜಗಳ ವಿತರಣೆ ಆರಂಭ!
ಕೃಷಿಯ ಉಪಕಸುಬುಗಳಾದ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಆಡು/ಕುರಿ ಸಾಕಾಣಿಕೆ, ಮೊಲ ಸಾಕಾಣಿಕೆ,ಮೀನು ಸಾಕಾಣಿಕೆ ಇಂತಹ ಉಪಕಸುಬುಗಳನ್ನು ಮಾಡುವುದರಿಂದ ರೈತರಿಗೆ ಕೃಷಿಯಲ್ಲಿ ಯಾವುದೇ ನಷ್ಠ ಸಂಭವಿಸುವುದಿಲ್ಲ.
IFS scheme-ಕೃಷಿ ಇಲಾಖೆಯ ಸಮಗ್ರ ಕೃಷಿ ಪದ್ಧತಿಯ ಯೋಜನೆಯ ಘಟಕಗಳು:
1)ಕೃಷಿ ಹೊಂಡ ಮಾಡಿಕೊಳ್ಳಬೇಕು.
2)ಆಹಾರ ಬೆಳೆ ಬೆಳೆಯ ಬೇಕು.(ಭತ್ತ,ರಾಗಿ,ಜೋಳ,ಇತ್ಯಾದಿ)
3)ಹೈನುಗಾರಿಕೆ ಮಾಡಬೇಕು.
4)ಕೋಳಿ ಸಾಕಾಣಿಕೆ ಮಾಡಬೇಕು.
5)ಎರೆಹುಳು ಗೊಬ್ಬರದ ತೊಟ್ಟಿ ರಚನೆ.
6)ಅಜೋಲ್ಲ ತೊಟ್ಟಿ ರಚನೆ.
7)ಜೇನು ಸಾಕಾಣಿಕೆ ಪೆಟ್ಟಿಗೆ ಬೇಕು.
8)ಅರಣ್ಯ ಸಸಿಗಳನ್ನು ಬೆಳೆಯಬೇಕು.
9)ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ(ಅಗತ್ಯವಿದ್ದರೆ)
ಈ ಮೇಲೆ ತಿಳಿಸಿದ ಎಲ್ಲಾ ಘಟಕಗಳನ್ನು ಅಳವಡಿಸಿಕೊಳ್ಳುವ ರೈತರಿಗೆ 1 ಲಕ್ಷದವರೆಗೂ ಸಹಾಯಧನ ಸಿಗುತ್ತದೆ.
ಇದನ್ನೂ ಓದಿ:DAP ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಕೆಗೆ ಕೃಷಿ ಇಲಾಖೆ ಸೂಚನೆ!
Where apply IFS scheme-ಸಮಗ್ರ ಕೃಷಿ ಪದ್ಧತಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?
ಸಮಗ್ರ ಕೃಷಿ ಪದ್ಧತಿ ಮಾಡಲು ಆಸಕ್ತ ಇರುವ ರೈತರು ತಮ್ಮ ತಮ್ಮ ಹತ್ತಿರದ ಕೃಷಿ ಇಲಾಖೆಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.(ಸೂಚನೆ. ಈ ವರ್ಷದ ಅರ್ಜಿ ಸಲ್ಲಿಕೆ ಮುಕ್ತಾಯ ವಾಗಿದ್ದರೆ ಬರುವ ವರ್ಷಕ್ಕೆ ಈಗಲೇ ಹೆಸರು ನೊಂದಣಿ ಮಾಡಲು ಹೇಳಿ ಅಥವಾ ಅಧಿಕಾರಿಗಳ ಸಂಪರ್ಕದಲ್ಲಿದ್ದು ಮುಂದಿನ ವರ್ಷದ ಮಾಹಿತಿ ತಿಳಿದುಕೊಳ್ಳಿ.