Thursday, May 15, 2025

Anabe training-ಉಚಿತ ಅಣಬೆ ಕೃಷಿ  ತರಬೇತಿಗೆ ಅರ್ಜಿ ಆಹ್ವಾನ!ರುಡ್‌ ಸೆಟ್‌ ಕುಮಟಾ.

ಭಾರತದಲ್ಲಿ ಸಸ್ಯಹಾರಿಗಳ ತುಂಬಾ ಜನಪ್ರಿಯ ಆಹಾರ ಪದಾರ್ಥವಾಗಿ ಅಣಬೆ ಪ್ರಸಿದ್ದವಾಗಿದೆ. ಹಾಗೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆದ ಆಹಾರ ಪದಾರ್ಥವಾಗಿದೆ. ಇದನ್ನು ಹೆಚ್ಚಾಗಿ ಬಳಸುತ್ತಿದ್ದು ಇದರ ಉತ್ಪಾದನೆ ತುಂಬಾ ಕಡಿಮೆ ಆಗಿದೆ ಹಾಗೂ ಬೇಡಿಕೆ ತುಂಬಾ ಇದೆ. ನಗರ ಪ್ರದೇಶ ಜನರಿಗೆ ಅಣಬೆ ಊಟಕ್ಕೆ ಜನಪ್ರಿಯವಾಗಿದೆ.

ಪ್ರಪಂಚದಾದ್ಯಂತ 6 ಕ್ಕೂ ಹೆಚ್ಚು ಆಯಿಸ್ಟರ್‌ ಅಣಬೆ ಪ್ರಭೇದವನ್ನು ಬೆಳೆಯುತ್ತಾರೆ. ಈ ಅಣಬೆ ಸಮಶಿತೋಷ್ಣ ಪ್ರದೇಶ ಮತ್ತು ಉಷ್ಣವಲಯ ಪ್ರದೇಶದಲ್ಲಿ, ಕಾಡುಗಳಲ್ಲಿ ಸುತ್ತಮುತ್ತ ಕೊಳೆಯುತ್ತಿರುವ ಮರಗಳ ಮೇಲೆ ಬೆಳೆಯುತ್ತದೆ. ಆಯಿಸ್ಟರ ಅಣಬೆ ಕಪ್ಪೆ ಚಿಪ್ಪಿನ ಆಕಾರದಲ್ಲಿರುತ್ತದೆ. ಅಥವಾ ಅಗಲವಾದ ಚಾಕು ಆಕಾರ ಹೊಂದಿರುತ್ತದೆ. ಇದು ಬಿಳಿ, ಕೆನೆ, ಬೂದು, ಹಳದಿ, ತಿಳಿ ಕಂದು ಮತ್ತು ಗುಲಾಬಿ ಬಣ್ಣ ಹೊಂದಿದೆ.

ಇದನ್ನೂ ಓದಿ:ಮಣ್ಣು ಪರೀಕ್ಷೆ ಮಹತ್ವ ಮತ್ತು ಅದರ ಪ್ರಯೋಜನಗಳು!

ಅಣಬೆ ಬೆಳೆಯಲು ಬೇಕಾಗುವ ವಸ್ತುಗಳು:

ಆಯಿಸ್ಟರ್‌ ಅಣಬೆ ಬೆಳೆಯಲು ಬೇಕಾಗುವ ಕಚ್ಚಾ ಸಾಮಗ್ರಿಗಳು ಭತ್ತದ ಹುಲ್ಲು, ಗೋಧಿ ಹುಲ್ಲು, ರಾಗಿ ಹುಲ್ಲು, ಕಬ್ಬಿನ ರವದಿ, ಕೃಷಿ ತ್ಯಾಜ್ಯಗಳನ್ನು ಉಪಯೋಗಿಸಬಹುದು. ಹುಲ್ಲನ್ನು ಸಣ್ಣದಾಗಿ ಕತ್ತರಿಸಿಕೊಂಡು 2-3 ಘಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ಅಣಬೆ ಬೀಜ ಮತ್ತು ಹಾಳೆ ಹಾಗೂ ಮಂದ ಬೆಳಕಿನ ಕೋಣೆ ಬೇಕಾಗುತ್ತದೆ.

ಆಯಿಸ್ಟರ್‌ ಅಣಬೆಯ ಆರೋಗ್ಯ ಪ್ರಯೋಜನಗಳು:

1)ರಕ್ತದೊತ್ತಡ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

2)ಆಸ್ಟಿಯೋಪೋರೋಸಿಸ್‌ ಮತ್ತು ಸಂಧಿವಾತವನ್ನು ತಡೆಯಲು ಸಹಾಯ ಮಾಡುತ್ತದೆ.

3)ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ.

4)ರಕ್ತ ಹೀನತೆಯನ್ನು ತಡೆಯಲು ಸಹಾಯಕಾರಿ.

5)ಕ್ಯಾನ್ಸರ್ ವಿರುದ್ಧ ರಕ್ಷಿಸುತ್ತದೆ.

6)ದೇಹದಲ್ಲಿ ಇನ್ಸುಲಿನ್‌ ಮಟ್ಟವನ್ನು ನಿಯಂತ್ರಿಸುತ್ತದೆ.

7)ಕಡಿಮೆ ಕ್ಯಾಲೋರಿ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.‌ 

ರುಡ್ ಸೆಟ್ ಸಂಸ್ಥೆ ಕುಮಟಾ, ಉತ್ತರ ಕನ್ನಡ (ಕಾರವಾರ) ಜಿಲ್ಲೆ ವತಿಯಿಂದ ಸ್ವ-ಉದ್ಯೋಗ ಆಕಾಂಕ್ಷಿಗಳಿಗೆ  ಉಚಿತ ಅಣಬೆ ಕೃಷಿ ಮತ್ತು ವಿವಿಧ ಬಗೆಯ ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಒಂದು ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ವಿವಿಧ ಬಗೆಯ ತರಬೇತಿ ನೀಡುವುದರ ಜೊತೆಗೆ ಸ್ವ-ಉದ್ಯೋಗವನ್ನು ಆರಂಭಿಸಲು ಬೇಕಾಗುವ ಬಂಡವಾಳಕ್ಕೆ ಆರ್ಥಿಕವಾಗಿ ನೆರವಾಗಲು ಬ್ಯಾಂಕ್ ಗಳಿಂದ ಸಾಲ ಪಡೆಯಲು ಸೂಕ್ತ ಮಾರ್ಗದರ್ಶನವನ್ನು ಸಹ ನೀಡಲಾಗುತ್ತದೆ.

ಇದನ್ನೂ ಓದಿ:ಪಡಿತರ ಚೀಟಿ ಹೊಂದಿರುವವರು ಕಡ್ಡಾಯವಾಗಿ ಇಕೆವೈಸಿ ಮಾಡಿಸಿ, ಇಲ್ಲವಾದಲ್ಲಿ ರೇಷನ್‌ ಕಾರ್ಡ್‌ ರದ್ದಾಗಲಿದೆ!

ರುಡ್ ಸೆಟ್ ಸಂಸ್ಥೆ ಕುಮಟಾ, ಉತ್ತರ ಕನ್ನಡ (ಕಾರವಾರ)(ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ) ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, ನಮ್ಮ ಸಂಸ್ಥೆಯಲ್ಲಿ ದಿನಾಂಕ 12/05/2025 ರಿಂದ 21/05/2025 (10 ದಿನಗಳ) ವರೆಗೆ ಅಣಬೆ ಕೃಷಿ ಉಚಿತ ತರಬೇತಿಯನ್ನು ನಡೆಸಲಾಗುತ್ತಿದೆ. ಆಸಕ್ತರು ಈ ತರಬೇತಿಯಲ್ಲಿ ಭಾಗವಹಿಸಲು ಆಸಕ್ತರು ಅರ್ಜಿ ಸಲ್ಲಿಸಲು ಸಂಸ್ಥೆಯ ನಿರ್ದೇಶಕರು ಪ್ರಕಟಣೆ ಹೊರಡಿಸಲಾಗಿದೆ.

ವಿಶೇಷ ಸೂಚನೆ: ತರಬೇತಿಯು ಸಂಪೂರ್ಣ ಊಟ ವಸತಿಯೊಂದಿಗೆ ಉಚಿತವಾಗಿರುತ್ತದೆ. ಹಾಗೂ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುವುದು  ಮತ್ತು ತರಬೇತಿಯ ಕೊನೆಯ ದಿನ ಪ್ರಮಾಣ ಪತ್ರ ನೀಡಲಾಗುತ್ತದೆ.

APPLY address-ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ:

ರುಡ್ ಸೆಟ್ ಸಂಸ್ಥೆ

ಕುಮಟಾ, ಉತ್ತರ ಕನ್ನಡ (ಕಾರವಾರ)

ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆಕುಮಟಾ-581343

9449860007, 9538281989, 9916783825, 8880444612 .

ಇತ್ತೀಚಿನ ಸುದ್ದಿಗಳು

Related Articles