ನಮ್ಮ ಭಾರತ ದೇಶವು ಹೈನುಗಾರಿಕೆಯ ಹಾಲು ಉತ್ಪಾದನೆಯಲ್ಲಿ ಇಡೀ ಪ್ರಪಂಚದಲ್ಲೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಹಾಲು ಉತ್ಪಾದನೆಯಲ್ಲಿ ಅಷ್ಟೋಂದು ಮುಂದೆವರೆದರು ಇನ್ನೂ ಕೆಲವು ಜನ ರೈತರಿಗೆ ಸರಿಯಾಗಿ ಹಸುಗಳಿಗೆ ಯಾವ ಸಮಯಕ್ಕೆ ಯಾವ ಲಸಿಕೆಗಳನ್ನು ಕೊಡಬೇಕು ಎಂಬ ಮಾಹಿತಿ ಗೊತ್ತಿರುವುದಿಲ್ಲ. ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತೆಯಾಗಿ ಲಸಿಕೆಗಳನ್ನು ಹಾಕಿಸಬೇಕಾಗುತ್ತದೆ.
ಈ ಒಂದು ಸಮಸ್ಯೆಯಿಂದ ಎಷ್ಟೋ ಹಸುಗಳು ಮರಣ ಹೊಂದುತ್ತಿವೆ. ಅದಲ್ಲದೆ ರೈತರಿಗೆ ಇದರಿಂದ ಆರ್ಥಿಕ ಹೊರೆ ಉಂಟಾಗುತ್ತಿದೆ. ಹಸು ಮರಣ ಹೊಂದಿದಾಗ ರೈತರ ಜೀವನ ನಿರ್ವಹಣೆಗೆ ತಿಂಗಳಿಗೆ ಒಮ್ಮೆ ಬರುತ್ತಿದ್ದ ಆದಾಯ ನಿಂತು ಹೋಗಿ ರೈತರಿಗೆ ತುಂಬಲಾರದ ನಷ್ಟ ಉಂಟಾಗುತ್ತದೆ. ಇಂತಹ ಸಮಸ್ಯೆಗಳನ್ನು ಎದುರಿಸಬೇಡ ಎಂದರೆ ಜಾನುವಾರುಗಳಿಗೆ ತಪ್ಪದೇ ಹಾಕಿಸಬೇಕಾದ ಲಸಿಕೆಗಳು ತಿಳಿದುಕೊಳ್ಳಬೇಕಾಗುತ್ತದೆ.
ಇದಲ್ಲದೆ ಲಸಿಕೆಗಳನ್ನು ಹಾಕಿಸದೆ ಇದ್ದಲ್ಲಿ ಹಸುಗಳು ಸರಿಯಾದ ಸಮಯಕ್ಕೆ ಬೆದೆಗೆ ಬರದೆ ಕರುಗಳನ್ನು ಹಾಕಲು ತಡಮಾಡುತ್ತವೆ. ಇನ್ನೂ ಕೆಲವು ಹಸುಗಳು ಬರೆ ಗಡಸು ಹಸುಗಳಾಗಿ ಉಳಿಯು ಸಾಧ್ಯತೆಗಳಿರುತ್ತವೆ. ಕರು ಹಾಕಿದರು ಬೇಗನೆ ಸಾಯಿವ ಸಾದ್ಯತೆಗಳಿರುತ್ತವೆ. ಈ ಎಲ್ಲಾ ಸಮಸ್ಯೆಗಳನ್ನು ಓಡಿಸಬೇಕಾದರೆ ಜಾನುವಾರುಗಳಿಗೆ ತಪ್ಪದೇ ಹಾಕಿಸಬೇಕಾದ ಲಸಿಕೆಗಳು ಅದರ ಮಾಹಿತಿ ತಿಳಿದುಕೊಳ್ಳುವುದು ಎಲ್ಲಾ ರೈತರ ಜವಾಬ್ದಾರಿ ಆಗಿರುತ್ತದೆ.
ಲಸಿಕೆ ಹಾಕಿಸುವಾಗ ವಹಿಸಬೇಕಾದ ಕ್ರಮಗಳು:
1)ಪ್ರತಿಯೊಂದು ಪ್ರಾಣಿಗೂ ಕ್ರಿಮಿರಹಿತವಾದ ಸೂಜಿಯನ್ನು
ಉಪಯೋಗಿಸಬೇಕು.
2)ಕಂಪನಿಯವರು ನಿಗದಿಪಡಿಸಿದ ಪ್ರಮಾಣ ಮತ್ತು ಪ್ರಕಾರದಲ್ಲಿ ಲಸಿಕೆ ನೀಡಬೇಕು.
3)ಲಸಿಕೆಯನ್ನು ನಿಗದಿಪಡಿಸಿದ ಉಷ್ಣತೆಯಲ್ಲಿ ಇಡಬೇಕು.
4)ಹಿಂಡಿನಲ್ಲಿರುವ ಪ್ರತಿಯೊಂದು ಆರೋಗ್ಯದಿಂದ ಇರುವ ದನಕ್ಕೆ ಲಸಿಕೆ ಹಾಕಬೇಕು.
5)ರೋಗ ಬರುವ ಮೊದಲು ಮುಂಜಾಗ್ರತೆಯಾಗಿ ಲಸಿಕೆ ಹಾಕಿಸಬೇಕು.
6)ರೋಗ ಬಂದ ನಂತರ ಲಸಿಕೆಗಳನ್ನು ನೀಡಬಾರದು. ಅದರ ಬದಲಿಗೆ ರೋಗದ ಗುಣ ಲಸಿಕೆ ಹಾಕಿಸಿ.
7)ಲಸಿಕೆಯನ್ನು ಆದಷ್ಟು ಬೆಳಗಿನ ಜಾವದಲ್ಲಿಯೇ ಹಾಕಿಸಬೇಕು.
8) ಲಸಿಕೆ ಹಾಕುವಾಗ ಲಸಿಕೆ ಹಾಕುವ ಭಾಗವನ್ನು ಬಿಸಿ ನೀರಿನಿಂದ ಸ್ವಚ್ಛಗೊಳಿಸಿ ಹಾಕಿ.
9)ಲಸಿಕೆ ಹಾಕುವ 15 ದಿನಗಳ ಮುಂಚೆ ಜಂತುನಾಶಕ ಔಷಧಿ ಕೊಡಬೇಕು.
10)ತುಂಬು ಗರ್ಭಿಣಿ ಹಸುಗಳಿಗೆ ಲಸಿಕೆ ಹಾಕದೇ ಇರುವುದು ಸೂಕ್ತ.
ಇದನ್ನೂ ಓದಿ: ವಿದೇಸಿ ಹಣ್ಣು ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿಯಾದ ಯುವ ರೈತ.
ಪಶುಗಳಿಗೆ ಹಾಕಿಸಬೇಕಾದ ಲಸಿಕೆಗಳ ವಿವರ:
1)ಕಾಲು ಮತ್ತು ಬಾಯಿ ಬೇನೆ ರೋಗಕ್ಕೆ ಲಸಿಕೆ (ವರ್ಷಕ್ಕೆರೆಡು ಬಾರಿ) ಆಕಳು, ಎಮ್ಮೆ,ಎತ್ತು,ಕುರಿ,ಮೇಕೆ ಹಾಗೂ ಹಂದಿ
2)ಗಂಟಲು ಬೇನೆ ರೋಗಕ್ಕೆ ಲಸಿಕೆ (ವರ್ಷಕ್ಕೊಮ್ಮೆ) ಆಕಳು, ಎಮ್ಮೆ, ಎತ್ತು,ಕುರಿ, ಮೇಕೆ ಹಾಗೂ ಹಂದಿ
3)ಚಪ್ಪೆ ಬೇನೆ ರೋಗಕ್ಕೆ ಲಸಿಕೆ(ವರ್ಷಕ್ಕೊಮ್ಮೆ) ಆಕಳು, ಎಮ್ಮೆ, ಎತ್ತು,ಕುರಿ, ಮೇಕೆ
4)ನೆರಡಿ ರೋಗ ಲಸಿಕೆ(ವರ್ಷಕ್ಕೊಮ್ಮೆ) ಆಕಳು, ಎಮ್ಮೆ, ಎತ್ತು,ಕುರಿ, ಮೇಕೆ(ರೋಗ ಕಂಡು ಬಂದ ಪ್ರದೇಶಗಳಲ್ಲಿ ಬಳಕೆ)
5)ಕರಳು ಬೇನೆ(ವರ್ಷಕ್ಕೊಮ್ಮೆ)ಕುರಿ ಮತ್ತು ಆಡು
6)ಸಿಡುಬು ರೋಗ(ವರ್ಷಕ್ಕೊಮ್ಮೆ)ಕುರಿ ಮತ್ತು ಆಡು
7)ಪಿ.ಪಿ.ಆರ್ (ವರ್ಷಕ್ಕೊಮ್ಮೆ)ಕುರಿ ಮತ್ತು ಆಡು
8)ಗರ್ಭಪಾತ ರೋಗ ಲಸಿಕೆ ( ಒಂದು ಬಾರಿ) ಆಕಳು, ಎಮ್ಮೆ, ಎತ್ತು,ಕುರಿ, ಮೇಕೆ
ವಿಶೇಷ ಸೂಚನೆ: ಈ ಲಸಿಕೆಗಳ ಇನ್ನೂ ಹೆಚ್ಚಿನ ಮಾಹಿತಿಗೆ ರೈತರು ಪಶು ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ವಿಚಾರಿಸಿ, ಪ್ರಾಣಿಗಳಿಗೆ ಲಸಿಕೆಗಳನ್ನು ಹಾಕಿಸಿ.