ಕಳೆದ ವರ್ಷ ನೈಋತ್ಯ ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ಕರ್ನಾಟಕದಲ್ಲಿ ಬರ ಆವರಿಸಿದೆ. 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗೆ ಎಸ್.ಡಿ.ಆರ್.ಎಫ್/ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಅರ್ಹತೆಯ ಅನುಗುಣವಾಗಿ ಪರಿಹಾರವನ್ನು ರೈತರಿಗೆ ನೀಡಲಾಗುತ್ತಿದೆ.
ಈಗಾಗಲೇ ಮೊದಲ ಹಂತದಲ್ಲಿ ಅರ್ಹ ರೈತರಿಗೆ ಗರಿಷ್ಟ ರೂ. 2000 ವರೆಗೆ ಅರ್ಹತೆಯಂತೆ ಪಾವತಿಸಿರುವ ಬೆಳೆಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶಿಸಿದೆ.
ಅದರಂತೆ ಬೆಳ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇಲೆ FRUITS ID ಹೊಂದಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಹಂತಹಂತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಬರ ಪರಿಹಾರದ ಹಣ ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗುತ್ತಿದೆ.
ಇದನ್ನೂಓದಿ: ಕ್ರಿಮಿನಾಶಕಗಳನ್ನು ಬಳಸುವಾಗ ರೈತರು ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳು ನಿಮಗೆ ಗೊತ್ತೆ!
ಒಂದು ವೇಳೆ ನಿಮ್ಮ ಹೆಸರು ಆಧಾರ್ ಮತ್ತು FRUITS ಐಡಿಗೆ ಹೊಂದಿಕೆ ಆಗದೇ ಇರುವುದು. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದೇ ಇರುವುದು. ನಿಮ್ಮ ಬ್ಯಾಂಕ್‌ನ ಐ.ಎಫ್.ಎಸ್.ಸಿ ಕೋಡ್ ಸರಿಯಿರದೇ ಇರುವುದು. ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯ ಆಗಿರುವುದು ಮತ್ತು ಇತರೆ ಕಾರಣಗಳಿಗೆ ಪರಿಹಾರ ಜಮೆ ಆಗಿರುವುದಿಲ್ಲ ಎಂದು ತಿಳಿಸಲಾಗಿದೆ. ಈ ಸಮಸ್ಯೆಗಳಿಗೆ ರೈತರು ಪರಿಹಾರ ಕಂಡುಕೊಳ್ಳಬಹುದಾಗಿರುತ್ತದೆ. ಅದಕ್ಕಾಗಿ ರೈತರು ಬ್ಯಾಂಕ್ ಖಾತೆಗೆ ಹೋಗಿ ಖಾತೆಯನ್ನು ರಿ-ಓಪನ್ ಮಾಡಿಸಬೇಕು. FRUITS ತಂತ್ರಾಂಶದಲ್ಲಿ ಹೆಸರು ಅಪ್‌ಡೇಟ್ ಮಾಡಬೇಕು. ರೈತರು ಬ್ಯಾಂಕ್‌ಗೆ ಹೋಗಿ ಎನ್‌ಪಿಸಿಐ ಮಾಡಿಸಬೇಕು. ಅಕೌಂಟ್ ಬ್ಲಾಕ್ ಅಥವ ಕ್ಲೋಸ್ ಆಗಿದ್ದರೆ ರಿ-ಓಪನ್ ಮಾಡಿಸಬೇಕು. ರೈತರು ಬ್ಯಾಂಕ್ ಖಾತೆಗೆ ಹೋಗಿ ಐಎಫ್‌ಎಸ್‌ಸಿ ಅಪ್‌ಡೇಟ್ ಮಾಡಿಸಿ, N.P.C.I ಮಾಡಿಸಬೇಕು.
ಪರಿಹಾರದ ಹಣ ಜಮೆಯಾಗದೆ ಇರಲು ಪ್ರಮುಖ ಕಾರಣಗಳು:
1)ರೈತರು ಮೊದಲು ಜಮೀನಿನ ಪಹಣಿಗೆ ತಮ್ಮ FRUITS ID ಸಂಖ್ಯೆ ಇದೆಯೋ?, ಇಲ್ಲವೋ? ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.
2)ತಮ್ಮ ಬ್ಯಾಂಕ್ ಖಾತೆಗೆ N.P.C.I ಲಿಂಕ್ ಆಗಿದೆಯೇ?, ಇಲ್ಲವೇ? ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.
3)N.P.C.I ಲಿಂಕ್ ಇದ್ದಲ್ಲಿ FID (FRUITS ID)ಯಲ್ಲಿ ಇರತಕ್ಕಂತಹ ಬ್ಯಾಂಕ್ ಖಾತೆ, ಖಾತೆ ಸಂಖ್ಯೆಗೂ N.P.C.I ಲಿಂಕ್ ಇರುವ ಸಂಖ್ಯೆಯೂ ಒಂದೇ ಆಗಿರತಕ್ಕದ್ದು.
ಇದನ್ನೂ ಓದಿ:ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ ಪರವಾನಿಗೆ ಪಡೆಯಬೇಕಾದರೆ ಈ ಕೋರ್ಸ ಮಾಡಿದರೆ ಸಾಕು!
4)N.P.C.I ಲಿಂಕ್ ಹಾಗೂ FRUITS ID ಯಲ್ಲಿ ಇರುವ ಬ್ಯಾಂಕ್ ಖಾತೆ ಸಂಖ್ಯೆ ಬೇರೆ ಬೇರೆ ಇದ್ದಲ್ಲಿ FID ಯಲ್ಲಿ ಇರುವ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕೃಷಿ ಇಲಖೆಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬದಲಾವಣೆ ಮಾಡಿಸಿಕೊಳ್ಳುವುದು.
5)ಆಧಾರ್ ಕಾರ್ಡ್‌ನಲ್ಲಿ ಇರುವ ಹೆಸರೂ ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರೂ ಒಂದೇ ಆಗಿರಬೇಕು.
6)ಅಕೌಂಟ್ ಇನ್-ವ್ಯಾಲಿಡ್, ಕ್ಲೋಸ್, ಬ್ಲಾಕ್, ಆಧಾರ್ ನಾಟ್ ಸೀಡಿಂಗ್ ಹಾಗೂ ಇತರೆ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಳ್ಳುತ್ತಿದ್ದು, ಪರಿಶೀಲಿಸಿಕೊಂಡು ಚಾಲ್ತಿ ಮಾಡಿಸಿಕೊಳ್ಳುವುದು.
7)ಆಧಾರ್ ಕಾರ್ಡ್‌ನಲ್ಲಿ ಇರುವ ಹೆಸರಿಗೂ ಪಹಣಿ ಪತ್ರಿಕೆಯಲ್ಲಿ ಇರುವ ಹೆಸರೂ ಒಂದೇ ಆಗಿರಬೇಕು.
8)ರೈತರು https://parihara.karnataka.gov.in/service92/ ಈ ವೆಬ್‌ಸೈಟ್‌ನಲ್ಲಿ ಹೋಗಿ ಪರಿಶೀಲಿಸಿಕೊಳ್ಳಬಹುದು. 9)ಸರ್ಕಾರದಿಂದ ಇನ್ನು ಹಂತಹಂತವಾಗಿ ಪರಿಹಾರದ ಹಣವನ್ನು ಜಮೆ ಮಾಡಲಾಗುತ್ತಿರುತ್ತದೆ.