Tuesday, July 15, 2025

7 ಲಕ್ಷ ಜನರನ್ನು ಈ ಯೋಜನೆಯಿಂದ ಕೈ ಬಿಟ್ಟ ಸರ್ಕಾರ.!!!

PM Kisan Scheme Ineligible Beneficiaries: 7 ಲಕ್ಷ ಜನರನ್ನು ಈ ಯೋಜನೆಯಿಂದ ಕೈ ಬಿಟ್ಟ ಸರ್ಕಾರ.!!!

ರೈತ ಬಾಂದವರೇ, ಪಿಎಂ ಕಿಸಾನ್ ಸಮ್ಮಾನ್ ಈ ಯೋಜನೆ ನಮ್ಮ ರಾಜ್ಯದಲ್ಲಿ ಗೊತ್ತಿರದೇ ಇರದ ರೈತರು ಯಾರು ಇಲ್ಲ ಅನ್ನಿಸುತ್ತೆ. ಏಕೆಂದರೆ ಈ ಯೋಜನೆ ಲಾಭ ಪಡೆಯುತ್ತಿರುವ ಫಲಾನುಭವಿಗಳ ಸಂಖ್ಯೆ ಕಡಿಮೆ ಅಂತೂ ಇಲ್ಲ ಬರೊಬ್ಬರಿ 53.81 ಲಕ್ಷಕ್ಕೂ ಅಧಿಕ ರೈತರು ನೋಂದಣಿ ಮಾಡಿಸಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ.

ಮುಂದುವರೆದು ಹೇಳುದಾದರೆ, ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ರಾಜ್ಯ ಸರ್ಕಾರ ರಾಜ್ಯದ ಸುಮಾರು ಏಳು ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ಅನರ್ಹ ಗೊಳಿಸಿದೆ. ಈ ರೀತಿ ಅನರ್ಹ ಗೊಳಿಸಲು ಕಾರಣ ತಿಳಿಯುವುದು ಬಹು ಮುಖ್ಯವಾಗಿರುತ್ತದೆ..

ಕೇಂದ್ರ ಸರ್ಕಾರ ಅಂದರೆ ಇಂದಿನ ಬಿಜೆಪಿ ಸರ್ಕಾರ ಮೋದಿ ಆಡಳಿತ ಸರ್ಕಾರ ರೈತರ ಆದಾಯ ದ್ವಿಗುಣ ಮಾಡುವ ಮತ್ತು ದೇಶದ ಸಣ್ಣ ಮತ್ತು ಅತೀ ಸಣ್ಣ ರೈತರ ಕೃಷಿ ಚಟುವಟಿಕೆಗಳಿಗೆ ಅನೂಕೂಲವಾಗು ಹಿತ ದೃಷ್ಟಿಯಿಂದ 2019 ಫೆಬ್ರುವರಿಯಲ್ಲಿ ದೇಶ ಎಲ್ಲಾ ರಾಜ್ಯಗಳಲ್ಲಿ ಜಾರಿಗೊಳಿಸಿತು. ಈ ಯೋಜನೆಯಡಿ ವಾರ್ಷಿಕ 6,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ. 3 ಕಂತುಗಳಲ್ಲಿ 4 ತಿಂಗಳಿಗೊಮ್ಮೆ ನೇರವಾಗಿ ರೈತರ ಖಾತೆಗೆ 2 ಸಾವಿರ ರೂ. ವರ್ಗಾಯಿಸಲಾಗುವುದು. ಜೊತೆಗೆ ಈ ಯೋಜನೆ ಕೆಲವು ಮಾರ್ಗಸೂಚಿಗಳನ್ನು ಮಾರ್ಪಡಿಸಿತ್ತು. ಆದರೆ ಜನರು ಈ ಮಾರ್ಗಸೂಚಿಗಳನ್ನು ಲೆಕ್ಕಿಸದೆ ನೋಂದಣಿ ಮಾಡಿಕೊಂಡಿರುತ್ತಾರೆ. ಯಾರು ಮಾರ್ಗಸೂಚಿ ಒಳಪಡದೇ ಇರುವ ಫಲಾನುಭವಿಗಳನ್ನು (ಅನರ್ಹ) ಈ ಯೋಜನೆಯಿಂದ ಕೈ ಬಿಡಲಾಗಿರುತ್ತದೆ.

ಇದನ್ನೂ ಓದಿ: Spices Board: ಅತೀ ಕಡಿಮೆ ದರಕ್ಕೆ ಸಂಬಾರ ಸಸಿಗಳ ಮಾರಾಟ:

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ನೋಂದಾಯಿಸಿದ್ದ ರಾಜ್ಯದ 7 ಲಕ್ಷಕ್ಕೂ ಅಧಿಕ ರೈತರನ್ನು ಅನರ್ಹಗೊಳಿಸಲಾಗಿದೆ.

ರಾಜ್ಯದಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಆರಂಭವಾದ ಒಂದು ವರ್ಷದಲ್ಲಿ 53.81 ಲಕ್ಷಕ್ಕೂ ಅಧಿಕ ರೈತರು ನೋಂದಣಿ ಮಾಡಿಸಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದರು.

ಇವರ ಪೈಕಿ 7 ಲಕ್ಷಕ್ಕೂ ಅಧಿಕ ರೈತರನ್ನು ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ಅನರ್ಹಗೊಳಿಸಲಾಗಿದೆ.

Reasons For Ineligible: ಅನರ್ಹಕ್ಕೆ ಕಾರಣ ಈ ಕೆಳಗಿನಂತಿವೆ.

1.ರೈತರ ಭೂ ದಾಖಲೆಗಳ ಕೊರತೆ, ಅಂದರೇ ಭೂಮಿ ಹೆಸರಿಗೆ ಇಲ್ಲದೇ ಇರುವುದು ಇದ್ದರೂ ಭೂ ಪರಿವರ್ತನೆಯಾಗಿರುವುದು, ಇನ್ನೂ ಅನೇಕ ಕಾರಣಗಳು ಇರಬಹುದು.
2.ಈ ಯೋಜನೆಯಡಿ ಇ-ಕೆವೈಸಿ ಆಗದೇ ಇರುವುದು
3.ಆದಾಯ ತೆರಿಗೆ ಪಾವತಿದಾರರು ಆಗಿರಬಹುದು.
4.ಸರ್ಕಾರಿ ನೌಕರಿ ಹೊಂದಿರುವುದು,
5.ಒಂದೇ ಕುಟುಂಬದಲ್ಲಿ ಗಂಡ ಹೆಂಡತಿ ನೋಂದಣಿ ಮಾಡಿರುವ ಕಾರಣ.( ಒಂದು ರೇಷನ್ ಕಾರ್ಡ ಒಬ್ಬರಿಗೆ ಅವಕಾಶ)
6.ಸಾಂವಿಧಾನಿಕ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ ಸೇರಿದಂತೆ ಅನೇಕ ಕಾರಣಗಳಿಂದ ಹಂತ ಹಂತವಾಗಿ ಪರಿಶೀಲನೆ ನಡೆಸಿ ಸುಮಾರು 7 ಲಕ್ಷ ರೈತರನ್ನು ಅನರ್ಹಗೊಳಿಸಲಾಗಿದೆ.

ಇದನ್ನೂ ಓದಿ: ಕೃಷಿ ಇಲಾಖೆ ವತಿಯಿಂದ ಹೈಟೆಕ್‌ ಹಾರ್ವೆಸ್ಟರ್ ಹಬ್‌ಗಳ ಸ್ಥಾಪನೆಗೆ ಸಹಾಯಧನ:

2018ರಲ್ಲಿ ಯೋಜನೆ ಆರಂಭವಾದ ಸಂದರ್ಭದಲ್ಲಿ 19,819 ರೈತರು ನೋಂದಾಯಿಸಿದ್ದು, 2019-20 ರಲ್ಲಿ 53,81,184 ರೈತರು ನೋಂದಾಯಿಸಿದ್ದರು. ಅರ್ಹರಲ್ಲದವರು ಕೂಡ ಹೆಸರು ನೋಂದಾಯಿಸಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದರಿಂದ ಪರಿಶೀಲನೆ ಕಾರ್ಯ ಆರಂಭಿಸಲಾಗಿದ್ದು, ಈಗ 47.50 ಲಕ್ಷ ರೈತರು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.

ರೈತರ ನೋಂದಣಿ ಕಾರ್ಯ ನಿರಂತರವಾಗಿ ನಡೆಯುವುದರಿಂದ ಪ್ರತಿ ಕಂತು ವಿತರಣೆಯ ಸಂದರ್ಭದಲ್ಲಿ ರೈತರ ಸಂಖ್ಯೆ ಹೆಚ್ಚು ಕಡಿಮೆಯಾಗುತ್ತದೆ

ಆಧಾ‌ರ್ ಮತ್ತು ಪಹಣಿಯೊಂದಿಗೆ ಫೂಟ್ಸ್ ಐಡಿ ತಂತ್ರಾಂಶದಲ್ಲಿ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿ ಇ-ಕೆವೈಸಿಯೊಂದಿಗೆ ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಜಮೀನಿನ ಮಾಲೀಕರು ನಿಧನರಾಗಿದ್ದಲ್ಲಿ ಇತರೆ ವಾರಸುದಾರರು ಪೌತಿ ಖಾತೆ ಮಾಡಿಸಿದರೆ ಯೋಜನೆಗೆ ಅರ್ಹರಾಗುತ್ತಾರೆ.

PM Kisan Scheme ಯೋಜನೆಗೆ ನೀವು ಅರ್ಹ ಅಥವಾ ಅನರ್ಹ ಖಾತ್ರಿ ಪಡಿಸಲು ಇಲ್ಲಿ ಕ್ಲಿಕ್ ಮಾಡಿ:

1.PM Kisan ಸೈಟ್ ಓಪನ್ ಆಗುವುದು ನಂತರ Get Details by Aadhar ಮೇಲೇ ನಿಮ್ಮ ಆಧಾರ ನಮೂದಿಸಿ
2.ನಂತರ PMK ID ದೊರಯುವುದು ನಂತರ ಅದನ್ನೂ Copy ಮಾಡಿಕೊಂಡು Home page ಗೆ ಮರಳಿ
3.ನಂತರ ಸ್ಥಿತಿ ಪರೀಶೀಲನೆ ಮೇಲೆ ಓತ್ತಿ PMK ID ನಮೂದಿಸಿ ನಿಮಗೆ ನಿಮ್ಮ ಅರ್ಜಿ ಅರ್ಹ ಅಥವಾ ಅನರ್ಹ ಎಂಬುದು ಖಚಿತವಾಗುತ್ತದೆ.
4.ಅನರ್ಹವಾಗಿದ್ದರೆ ಯಾವ ಕಾರಣಕ್ಕೆ ಅನರ್ಹ ಎಂಬುದು ಸಹ ಮಾಹಿತಿ ಇರುತ್ತದೆ.

ಇದನ್ನೂ ಓದಿ: PM Kisan: ಯಾರೆಲ್ಲಾ 20 ನೇ ಕಂತಿನ ಪಿ ಎಂ ಕಿಸಾನ್ (PM KISAN) ಯೋಜನೆಗೆ ಅರ್ಹರು?.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 2019 ರ ನಂತರ ಜಮೀನು ಖರೀದಿಸಿದವರು ಮತ್ತು ತಂದೆಯ ಜಮೀನನ್ನು ಭಾಗ ಮಾಡಿಕೊಂಡಿದ್ದರೆ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಲಾಗಿದೆ. ಒಂದು ವೇಳೆ ತಾಂತ್ರಿಕ ದೋಷ, ಇ-ಕೆವೈಸಿ ಸಮಸ್ಯೆಯಿಂದ ಯಾವುದೇ ರೈತರ ಹೆಸರು ಪಟ್ಟಿಯಿಂದ ಹೊರಗುಳಿದಿದ್ದರೆ ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಲು ಅವಕಾಶವಿದೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಈ ಯೋಜನೆ ಸದುಪಯೋಗ ಪಡೆಯಿರಿ.

ಇತ್ತೀಚಿನ ಸುದ್ದಿಗಳು

Related Articles