ಶೇ.50 ಮತ್ತು 70 ರ ಸಹಾಯಧನದಲ್ಲಿ ಹೈಟೆಕ್ ಹಾರ್ವೆಸ್ಟರ್ ಹಬ್
ಕೃಷಿ ಇಲಾಖೆ ವತಿಯಿಂದ ಹೈಟೆಕ್ ಹಾರ್ವೆಸ್ಟರ್ ಹಬ್‌ಗಳ ಸ್ಥಾಪನೆಗೆ ಸಹಾಯಧನ:
ಪ್ರೀಯ ಓದುಗರೇ, ಯುವ ರೈತ ಮಿತ್ರರೇ, ಕರ್ನಾಟಕ ರಾಜ್ಯದ ಕೃಷಿ ಇಲಾಖೆ ನಾಡಿನ ರೈತ ಸಮೂಹಕ್ಕೆ ಉಪಯೋಗವಾಗುವ ದೃಷ್ಟಿಯಿಂದ ಕೃಷಿಯಲ್ಲಿ ಕಾರ್ಮಿಕರ ಕೊರೆತೆ ನೀಗಿಸಲು ಇಲಾಖೆ ಎಲ್ಲಾ ವಿಭಾಗದಲ್ಲೂ ಕೃಷಿ ಯಂತ್ರಗಳ ಬಳಕೆಯನ್ನು ಹೆಚ್ಚು ಉತ್ತೇಜನ ನೀಡುತ್ತಿದೆ. ಹಾಗೂ ಇಲಾಖೆ ಯಂತ್ರೋಪಕರಣಗಳಿಗೆ ಸಹಾಯಧನ ನೀಡುತ್ತಿದೆ.
ಈ ನಿಟ್ಟಿನಲ್ಲಿ 2025-26 ನೇ ಸಾಲಿನ ಆರ್ಥಿಕ ವರ್ಷದಲ್ಲೂ ಹಲವು ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ನೀಡುತ್ತಿದೆ. ಅದರಲ್ಲಿ ಮುಖ್ಯವಾಗಿ ಹೈಟೆಕ್ ಹಾರ್ವೆಸ್ಟರ್ ಹಬ್
Application for Establishment of Hi-Tech Harvester Hub: ಹೈಟೆಕ್ ಹಾರ್ವೆಸ್ಟರ್ ಹಬ್‌ಗಳ ಸ್ಥಾಪನೆಗೆ ಅರ್ಜಿ ಆಹ್ವಾನ :
ಕೃಷಿ ಇಲಾಖೆ ವತಿಯಿಂದ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ಬಳಕೆ ಅಧಿಕ ಮಾಡುವ ನಿಟ್ಟಿನಲ್ಲಿ ಕೃಷಿ ಚಟುವಟಿಕೆಗಳಿಗೆ ಆಧುನಿಕ ತಂತ್ರಜ್ಞಾನದ ಬೃಹತ್ ಯಂತ್ರಗಳನ್ನು ಅಳವಡಿಸಿಕೊಂಡು, ಸಕಾಲದಲ್ಲಿ ಕೃಷಿ ಕಾರ್ಯಗಳನ್ನು ನೆರವೇರಿಸಲು ಹೈಟೆಕ್ ಹಾರ್ವೆಸ್ಟರ್ ಹಬ್‌ಗಳ (Harvester Center) ಸ್ಥಾಪನೆಗಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಂ. ಸೋಮಸುಂದರ ತಿಳಿಸಿರುತ್ತಾರೆ.
ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಅತೀ ಮುಖ್ಯವಾದ ಪ್ರಕಟಣೆ !!!
ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಅನುಷ್ಟಾನ ಮಾಡಲು ಚಾಲ್ತಿಯಲ್ಲಿರುವ ಕೃಷಿ ಯಂತ್ರಧಾರೆ ಕೇಂದ್ರಗಳು, ಸೇವಾದಾರ ಸಂಸ್ಥೆಗಳು, ವೈಯಕ್ತಿಕ ಫಲಾನುಭವಿಗಳು ಹಾಗೂ ನೋಂದಾಯಿತ ಸಂಘ ಸಂಸ್ಥೆಗಳು ಎಫ್‌ಪಿಓ (FPO)ಸಂಸ್ಥೆಗಳು ಯೋಜನೆಗೆ ಅರ್ಹರಾಗಿದ್ದು, ಆಸಕ್ತ ರೈತರು ಸಂಬಂಧಿಸಿದ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಜು.16 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯನ್ನು ಅನುಷ್ಟಾನ ಮಾಡಲು ಸರ್ಕಾರದ ಆದೇಶವಾಗಿದ್ದು, ಈ ಯಂತ್ರಗಳನ್ನು ಬಾಡಿಗೆಗೆ ನೀಡುವ ಮೂಲಕ ರೈತರು ಹೆಚ್ಚುವರಿ ಆದಾಯ ಪಡೆಯಬಹುದಾಗಿದೆ.
Who is eligible to apply: ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು:
ಸಂಘ-ಸಂಸ್ಥೆಗಳು, ಎಫ್‌ಪಿಓಗಳನ್ನೊಳಗೊಂಡಂತೆ ಟ್ರಸ್ಟಳು ಮಾತ್ರ ಕಂಬೈಂಡ್ ಹಾರ್ವೆಸ್ಟರ್ ಮತ್ತು ಶುಗರ್‌ಕೇನ್ ಹಾರ್ವೆಸ್ಟರ್‌ಗಳನ್ನು ಒಳಗೊಂಡ “ಕೋಂಬೊ ಹಾರ್ವೆಸ್ಟರ್ ಹಬ್” ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಲು ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಬೆಳೆಯ ವಿಧ ಮತ್ತು ಕಟಾವು ಅವಧಿಯ ಆಧಾರದ ಮೇಲೆ ಕಾರಿಡಾರ್ ಮಾದರಿಯಲ್ಲಿ ಸ್ಥಾಪಿಸಬಹುದು.
ಆರು ಅಥವಾ ಒಂಬತ್ತು ವರ್ಷಗಳ ಕಾಲ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು
ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ತಪಾಸಣೆಯಲ್ಲಿ ಸಂಪೂರ್ಣವಾಗಿ ಲೆಕ್ಕ-ಪತ್ರ ಹಾಗೂ ಯಂತ್ರೋಪಕರಣಗಳನ್ನು ಹಾಜರುಪಡಿಸಿರುವ ಕೃಷಿ ಯಂತ್ರಧಾರೆ ಕೇಂದ್ರಗಳ ಸೇವಾದಾರ ಸಂಸ್ಥೆಗಳು ಮಾತ್ರ ಅರ್ಜಿ ಸಲ್ಲಿಸಬೇಕು.
Departmental Subsidy:ಇಲಾಖೆಯ ಸಹಾಯಧನ:
ಇಲಾಖೆ ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಈ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನ ನೀಡುತ್ತಿರುತ್ತದೆ.
ಸಾಮಾನ್ಯ ವರ್ಗದ (General)ರೈತರಿಗೆ ಗರಿಷ್ಠ ಶೇ.50 ರಂತೆ ಗರಿಷ್ಟ ರೂ.40 ಲಕ್ಷ ಸಹಾಯಧನ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ರೈತರಿಗೆ (SC and ST)ಗರಿಷ್ಠ ಶೇ.70ರಂತೆ ಹಾಗೂ ಸಂಘ-ಸಂಸ್ಥೆಗಳಿಗೆ ಚಾಲ್ತಿಯಲ್ಲಿರುವ ಕೃಷಿ ಯಂತ್ರಧಾರೆ ಕೇಂದ್ರಗಳ ಸೇವಾದಾರ ಸಂಸ್ಥೆ, ಎಫ್‌ಪಿಓ (FPO)ಗಳನ್ನೊಳಗೊಂಡಂತೆ ಗರಿಷ್ಠ ಶೇ.70 ರಂತೆ ರಿಷ್ಟ ರೂ.50 ಸಹಾಯಧನ ನೀಡಲಾಗುತ್ತದೆ.
ಇದನ್ನೂ ಓದಿ: ಕಳೆದ ವರ್ಷದ ನಿಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿ ಪರೀಕ್ಷಿಸಿ :
ಕೃಷಿ ಯಂತ್ರೋಪಕರಣವಾರು ನಿಗದಿಪಡಿಸಿದ ಗರಿಷ್ಠ ಸಹಾಯಧನವನ್ನು ಒದಗಿಸಲಾಗಲಿದ್ದು, ಸಹಾಯಧನವನ್ನು ಕ್ರೆಡಿಟ್ ಲಿಂಕ್ ಬ್ಯಾಕ್ ಎಂಡೆಡ್ ಸಬ್ಸಿಡಿ ಮುಖಾಂತರ ಬಿಡುಗಡೆ ಮಾಡಲಾಗುತ್ತದೆ.
ಆಯ್ಕೆಯಾದ ಫಲಾನುಭವಿಗಳು ಅಥವಾ ಸಂಘ-ಸಂಸ್ಥೆಗಳು ಕೃಷಿ ಮೂಲಭೂತ ಸೌಕರ್ಯ ನಿಧಿ ಸಾಲದ ನೆರವನ್ನು ಪಡೆಯಲು ಸಹ ಅವಕಾಶವಿರುತ್ತದೆ. ಸಹಕಾರ ಸಂಘಗಳ ನಿಬಂಧನೆಯಂತೆ ಕಂಪನಿ ಕಾಯ್ದೆಯಡಿ ನೊಂದಾಯಿಸಿದ ಸಂಘ-ಸಂಸ್ಥೆಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತವೆ. ಕೃಷಿ ಯಂತ್ರಧಾರೆ ಕೇಂದ್ರಗಳ ಸೇವಾದಾರ ಸಂಸ್ಥೆಗಳ, ಕೃಷಿ ಯಂತ್ರೋಪಕರಣಗಳ ಬ್ಯಾಂಕ್, ರೈತ ಉತ್ಪಾದಕ ಸಂಸ್ಥೆಗಳು, ಇತರೆ ಸಂಘ-ಸಂಸ್ಥೆಗಳು ರಾಜ್ಯಾದ್ಯಂತ ಅರ್ಜಿಗಳನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ದೂ.08392-276224 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.