ಆತ್ಮೀಯ ರೈತ ಬಾಂದವರೇ , ನಾವು ಈ ಲೇಖನದಲ್ಲಿ ತಿಳಿಸಿರುವ ಮಾಹಿತಿ ಎಲ್ಲಾ ರೈತ ಬಾಂದವರಿಗೂ ತಿಳಿದಿರಬೇಕು ಏಕೆಂದರೆ ಇದು ನಿಮ್ಮ ಜಮೀನಿನ ಬೆಳೆಗೆ ಮತ್ತು ಕೃಷಿ ಸಾಲಕ್ಕೂ, ಹಾಗೂ ಅತಿವೃಷ್ಟಿಯಿಂದ ಬೆಳೆ ನಷ್ಟವಾದ ಸಂದರ್ಬದಲ್ಲಿ ಕೂಡಾ ಈ ಮಾಹಿತಿ ಬಹು ಮುಖ್ಯವಾಗಿ ಬೇಕಾಗಿರುತ್ತದೆ.
ಈ ಸಮೀಕ್ಷೇಯನ್ನು ಡಿ.ಪಿ.ಎ.ಆರ್., ಇ-ಆಡಳಿತ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ಆಧಾರಿತ ಬೆಳೆ ಸಮೀಕ್ಷೆ (Crop survey) ಆ್ಯಪ್ ಮೂಲಕ ಸರ್ವೆ/ಹಿಸ್ಪಾ ಸಂಖ್ಯೆವಾರು ಬೆಳೆ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸುವುದು ಬೆಳೆ ಸಮೀಕ್ಷೆಯ (Crop survey) ಮುಖ್ಯ ಉದ್ದೇಶವಾಗಿರುತ್ತದೆ.
ರಾಜ್ಯಾದ್ಯಂತ ಈ ಕಾರ್ಯವನ್ನು ಮುಂಗಾರು, ಹಿಂಗಾರು, ಬೇಸಿಗೆಯ ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ: 7 ಲಕ್ಷ ಜನರನ್ನು ಈ ಯೋಜನೆಯಿಂದ ಕೈ ಬಿಟ್ಟ ಸರ್ಕಾರ!!
Main Obectives of Crop survey :ಈ ಬೆಳೆ ಸಮೀಕ್ಷೆಯ ಮುಖ್ಯ ಉದ್ದೇಶಗಳು:
- ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಬಳಸಿ ಸಮೀಕ್ಷೆ ಮಾಡುವುದರ ಮೂಲಕ ಬೆಳೆ ಪ್ರದೇಶದ ನಿಖರ ಅಂಕಿ ಅಂಶಗಳನ್ನು ಕ್ರೂಢೀಕರಣ ಮಾಡಲಾಗುವುದು.
- ಆಯಾ ಋತುಮಾನಕ್ಕನುಗುಣವಾಗಿ ಪಹಣಿಗಳಲ್ಲಿ ಸರಿಯಾದ ಬೆಳೆ ಮಾಹಿತಿಯ ದಾಖಲು ಮಾಡುವುದು.
- ಬೆಳೆ ಸಮೀಕ್ಷೆ ಚಟುವಟಿಕೆಗಳಿಂದ ಸೆರೆಹಿಡಿಯಲಾದ ದತ್ತಾಂಶವನ್ನು ಸರ್ಕಾರದ ವಿವಿಧ ಯೋಜನೆಗಳಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ವಿವಿಧ ಆಹಾರ ಧಾನ್ಯಗಳ ಖರೀದಿ, ಅತಿವೃಷ್ಟಿ/ಅನಾವೃಷ್ಟಿ ಸಂದರ್ಭದಲ್ಲಿ ಬೆಳೆ ಪರಿಹಾರ, ಬೆಳೆ ವಿಮೆ ಯೋಜನೆಯಡಿ ಪರಿಹಾರ, ಬೆಳೆ ಪ್ರದೇಶದ ಅಂದಾಜು, ಕೃಷಿ ಮತ್ತು ತೋಟಗಾರಿಕೆ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಆಯ್ಕೆ ಮಾಡಲು ಬಳಸಲಾಗುತ್ತದೆ.
- ಸ್ಥಳೀಯ ಯುವಕರ ಸೇವೆಯನ್ನು ಬಳಸಿಕೊಳ್ಳುವುದರ ಮೂಲಕ ತಾತ್ಕಾಲಿಕ ಉದ್ಯೋಗ ಒದಗಿಸುವುದು.
- ವಿವಿಧ ಕೃಷಿಯೇತರ ಮತ್ತು ಪಾಳು ಜಮೀನುಗಳ ವಿವರಗಳನ್ನು ದಾಖಲು ಮಾಡುವುದು.
Uses of crop survey: ಬೆಳೆ ಸಮೀಕ್ಷೆಯ ಉಪಯೋಗಗಳು:
- ಅತಿವೃಷ್ಟಿ/ಅನಾವೃಷ್ಟಿ ಸಮಯದಲ್ಲಿ NDRF / SDRF ಮಾರ್ಗಸೂಚಿಯಂತೆ ಬೆಳೆ ಪರಿಹಾರ ನೀಡಲು ಬಳಸಲಾಗುವುದು.
- ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಬಳಸಲಾಗುವುದು
- ಬೆಳೆ ವಿಮೆ ಯೋಜನೆಯಡಿಯಲ್ಲಿ ರೈತರಿಗೆ ವಿಮೆ ಪರಿಹಾರ ಪಾವತಿ ಮಾಡಲು ಬಳಸಲಾಗುವುದು.
- ಬ್ಯಾಂಕುಗಳಲ್ಲಿ ರೈತರಿಗೆ ಬೆಳೆ ಸಾಲವನ್ನು ಬೆಳೆ ಸಮೀಕ್ಷೆ ಆಧಾರಿತ ದತ್ತಾಂಶವನ್ನು ಪರಿಗಣಿಸಿ ಮಂಜೂರಾತಿ ನೀಡಲು ಬಳಸಲಾಗುವುದು.
ಇದನ್ನೂ ಓದಿ: ಕೃಷಿ ಇಲಾಖೆಯಿಂದ ಹೈಟೆಕ್ ಹಾರ್ವೆಸ್ಟರ್ ಹಬ್ ಗಳ ಸ್ಥಾಪನೆಗೆ ಸಹಾಯಧನ:
Crop survey by farmers and private residents: ರೈತರಿಂದ ಹಾಗೂ ಖಾಸಗಿ ನಿವಾಸಿಗಳ ಮೂಲಕ ಬೆಳೆ ಸಮೀಕ್ಷೆ :
ಸರ್ಕಾರವು ನಿಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಬೆಳೆ ಸಮೀಕ್ಷೆ ತಂತ್ರಾಂಶದ ಮೂಲಕ ಸಂಗ್ರಹಿಸುತ್ತಿದೆ. ಬೆಳೆ ಸಮೀಕ್ಷೆಯಲ್ಲಿ ರೈತರು ನೇರವಾಗಿ ಭಾಗಿಯಾಗಲು ಅವಕಾಶ ನೀಡಲಾಗಿದ್ದು, ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಸ್ವತಃ ತಾವೇ ಪ್ಲೇ ಸ್ಟೋರ್ನನಲ್ಲಿ “ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್” ಡೌನ್ ಲೋಡ್ ಮಾಡಿಕೊಂಡು ಅದರ ಮೂಲಕ ತಾವು ಬೆಳೆದ ಬೆಳೆಗಳ ಛಾಯಾಚಿತ್ರ ಮತ್ತು ಬೆಳೆ ವಿವರಗಳನ್ನು ಅಪ್ ಲೋಡ್ ಮಾಡಬಹುದು.
ಜಿಲ್ಲಾಡಳಿತದಿಂದ ಕ್ಷೇತ್ರ ಸಿಬ್ಬಂದಿಗಳಿಗೆ (ಕೃಷಿ ಅಧಿಕಾರಿ, ಕಂದಾಯ ನಿರೀಕ್ಷಕರು, ಸಹಾಯಕ ಕೃಷಿ ಅಧಿಕಾರಿ, ಗ್ರಾಮ ಲೆಕ್ಕಿಗರು, ತೋಟಗಾರಿಕೆ ಮತ್ತು ರೇಷ್ಮೆ ಅಧಿಕಾರಿಗಳು) ಗ್ರಾಮಗಳನ್ನು ಹಂಚಿಕೆ ಮಾಡಿ, ಪ್ರತಿ ಗ್ರಾಮಕ್ಕೆ ತಂತ್ರಾಂಶದ ಜ್ಞಾನವುಳ್ಳ ಸ್ಥಳೀಯ ನಿವಾಸಿಯನ್ನು ನಿಯೋಜಿಸಿ ಸರ್ಕಾರಿ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ಸರ್ಕಾರವು ನಿಗಧಿಪಡಿಸಿರುವ ಅವಧಿಯಲ್ಲಿಯೇ “ಬೆಳೆ ಸಮೀಕ್ಷೆ ಆ್ಯಪ್” ಬಳಸಿ ಬೆಳೆ ಮಾಹಿತಿ ಸಂಗ್ರಹಿಸಲಾಗುವುದು.
ಬೆಳೆ ದರ್ಶಕ್ ಆ್ಯಪ್ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸುವ ವಿಧಾನ:
ಬೆಳೆ ದರ್ಶಕ ಆ್ಯಪ್ ಬೇಕಾದಲ್ಲಿ ಇಲ್ಲಿ ಓತ್ತಿ.
ಬೆಳೆ ಸಮೀಕ್ಷೆ ಕೈಗೊಳ್ಳುವ ಸಮಯದಲ್ಲಿ ಅಥವಾ ನಂತರದಲ್ಲಿ ಬೆಳೆ ದತ್ತಾಂಶದ ಕುರಿತು ಮರುಪರಿಶೀಲಿಸಲು ಅಥವಾ ಬೆಳೆ ತಪ್ಪಾಗಿ ನಮೂದಾಗಿರುವುದು ಕಂಡುಬಂದಲ್ಲಿ, ರೈತರು ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಬೆಳೆ ದರ್ಶಕ್ ಆ್ಯಪ್ ಅಥವಾ ವೆಬ್ ಆಪ್ಲಿಕೇಷನ್ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ.