Friday, September 20, 2024

150,000 ರೂ. ವಸತಿ ಯೋಜನೆಯಡಿ ಪ್ರತಿ ಮನೆಗೆ ಆರ್ಥಿಕ ಸಹಾಯ ಮತ್ತು ಇತರೆ ಪ್ರಮುಖ ಅಂಶಗಳು

ಯೋಜನೆಯ ಹೆಸರು : ಪ್ರಧಾನ ಮಂತ್ರಿ ಆವಾಸ್ (ಗ್ರಾಮೀಣ) (ಕೇಂದ್ರ ಪುರಸ್ಕೃತ) (ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಹಾಗೂ ಆರ್ಥಿಕವಾಗಿ ಹಿಂದುಳಿದವರ್ಗಗಳಿಗೆ ವಸತಿ ಕಲ್ಪಿಸುವ ಯೋಜನೆ.)
ಪ್ರತಿ ಮನೆಗೆ ಆರ್ಥಿಕ ಸಹಾಯ

ವರ್ಗ; ಎಸ್. ಸಿ./ ಎಸ್.ಟಿ, ಸಾಮಾನ್ಯ
ಒಟ್ಟು: ರೂ. 150000 , ರೂ. 120000
ಕೇಂದ್ರ: ರೂ. 72000 , ರೂ. 72000
ರಾಜ್ಯ: ರೂ. 78000 , ರೂ. 48000

ಅ) ಸಹಾಯಧನ : * ಎಸ್. ಸಿ./ ಎಸ್.ಟಿ ರೂ.1,50,000/-
* ಸಾಮಾನ್ಯ ರೂ. 1,20,000/-

ಇದನ್ನೂ ಓದಿ: ಹೊಲದ ಹದಬಸ್ತು ಮಾಡುವ ವಿಧಾನ ಅರ್ಜಿ ಸಲ್ಲಿಸುವುದು ಎಲ್ಲಿ?ಅದರ ಉಪಯೋಗ ಏನು?

ಆ) ಫಲಾನುಭವಿಯ ಸ್ವಸಹಾಯ ವಂತಿಗೆ : * ಎಲ್ಲಾ ವರ್ಗದ ಫಲಾನುಭವಿಗಳಿಗೆ ಕನಿಷ್ಟ ರೂ.10000/- ಈ ಯೋಜನೆಯಡಿಯಲ್ಲಿ ಒದಗಿಸಲಾಗುವ ಆರ್ಥಿಕ ಸಹಾಯಧನದ ಜೊತೆಗೆ , ಫಲಾನುಭವಿಯು ಕನಿಷ್ಟ ರೂ. 30000/- ಗಳನ್ನು ಅಥವಾ ತನ್ನ ಸಾಮರ್ಥ್ಯ ಹಾಗೂ ವಸತಿಯ ಅವಶ್ಯಕತೆಗೆ ಅನುಸಾರವಾಗಿ ಸಾದ್ಯವಾದಷ್ಟು ಸ್ವಂತ ಉಳಿತಾಯ ಹೂಡಿಕೆ ಮಾಡಿ ಹೆಚ್ಚಿನ ಹಾಗೂ ಉತ್ತಮ ಸೌಲಭ್ಯಗಳನ್ನು ಹೊಂದಬಹುದು.

ಡಿ.ಆರ್.ಐ.ಯಡಿ ಸಾಲ & ಬಡ್ಡಿಯ ದರ : ಈ ಯೋಜನೆಯಡಿ ಸ್ಥಳೀಯ ಬ್ಯಾಂಕಿನಿಂದ ರೂ. 20000/-ದವರೆಗೆ 4% ವಾರ್ಷಿಕ ಬಡ್ಡಿದರದಲ್ಲಿ ಡಿ.ಆರ್.ಐ.ಯಡಿಯಲ್ಲಿ ಸಾಲವನ್ನು ಆಯ್ಕೆಯಾದ ಫಲಾನುಭವಿಗಳು ಪಡೆದುಕೊಳ್ಳಲು ಅವಕಾಶವಿರುತ್ತದೆ.

ಫಲಾನುಭವಿಗಳ ಆಯ್ಕೆ: ಕೇಂದ್ರ ಸರ್ಕಾರದಿಂದ ನೀಡಲಾದ ಫಲಾನುಭವಿಗಳ ಪಟ್ಟಿಯಿಂದ ನಿಯಮಾನುಸಾರ ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಿ ಗ್ರಾಮ ಪಂಚಾಯತಿ ಸಾಮನ್ಯ ಸಭೆಯಲ್ಲಿ ಪಟ್ಟಿಗೆ ಅನುಮೋದನೆ ಪಡೆಯಲಾಗುವುದು. ನಂತರ ಸಂಬಂಧಪಟ್ಟ ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಐತಿಯ ಅನುಮೋದನೆಯೊಂದಿಗೆ ನಿಗಮದ ಅನುಮೋದನೆ ನೀಡಲಾಗುವುದು.

ಇದನ್ನೂ ಓದಿ: ಸಹಾಯಧನದಲ್ಲಿ ಕುರಿ ಮತ್ತು ಮೇಕೆಗೆ ಅರ್ಜಿ ಆಹ್ವಾನ

ಯೋಜನೆಯ ಅನುಷ್ಠಾನ :
ಪ್ರತಿ ವರ್ಷ ಕೇಂದ್ರ ಸರ್ಕಾರ ನಿಗಧಿಪಡಿಸುವ ಗುರಿಗನುಗುಣವಾಗಿ ಗುರಿ ನಿಗದಿ ಪಡಿಸಲಾಗುವುದು.

ಮೀಸಲಾತಿ : ಎಸ್. ಸಿ./ ಎಸ್.ಟಿ-ಶೇ. 60, ಅಲ್ಪಸಂಖ್ಯಾತ- ಶೇ.15 ಸಾಮಾನ್ಯ-ಶೇ. 25

ಜಿ.ಪಿ.ಎಸ್. ತಂತ್ರಾಂಶ ಅಳವಡಿಕೆ : 2011-12ನೇ ಸಾಲಿನಿಂದ ಜಿ.ಪಿ.ಎಸ್. ತಂತ್ರಾಂಶ ಅಳವಡಿಕೆ ಮಾಡಲಾಗುತ್ತಿದೆ. ಅವ್ಯವಹಾರವನ್ನು ತಡೆಗಟ್ಟಲು ಹಾಗೂ ಸರಕಾರದ ಹಣ ದುರುಪಯೋಗವಾಗದಂತೆ ನೋಡಿಕೊಂಡು ಫಲಾನುಭವಿಗಳಿಗೆ ವಸತಿ ಸೌಕರ್ಯವನ್ನು ಪಾರದರ್ಶಕತೆಯಮೂಲಕ ನೀಡಲು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಈ ತಂತ್ರಜ್ಞಾನದ ಉಪಯೋಗಗಳು ಇಂತಿವೆ
ಪ್ರತಿ ಮನೆಯ ಪ್ರಗತಿ ಹಂತದ ಛಾಯಾಚಿತ್ರವನ್ನು ಜಿ.ಪಿ.ಎಸ್. ಕ್ಯಾಮರಾ ಮೂಲಕ ಸೆರೆಹಿಡಿಯುವುದು.
ಒಮ್ಮೆ ವಸತಿ ಸೌಕರ್ಯ ಪಡೆದ ಫಲಾನುಭವಿಗಳ ಪುನರಾವರ್ತನೆಗೆ ತಡೆ.
ಛಾಯಾ ಚಿತ್ರದ ಆಧಾರದ ಮೇಲೆ ಅನುದಾನ ಬಿಡುಗಡೆ.
ಮಾಹಿತಿಗಾಗಿ ಎಲ್ಲಾ ಮನೆಗಳ ಛಾಯಾಚಿತ್ರಗಳು ನಿಗಮದ ವೆಬ್ಸೈಟ್ನಲ್ಲಿ ಲಭ್ಯ.
ಹಣದ ದುರ್ಬಳಕೆ ತಡೆ.

ಅರ್ಹತೆ ಮತ್ತು ಷರತ್ತುಗಳು :
ಸಂಬಂಧಪಟ್ಟ ಗ್ರಾಮ ಪಂಚಾಯತ ವಾಸಿ ಆಗಿರಬೇಕು.
ಮನೆ/ನಿವೇಶನ ಹಕ್ಕುಪತ್ರವನ್ನು ಹೆಂಡತಿ ಹೆಸರಿನಲ್ಲಿ ವಿತರಿಸಬೇಕು.
ಬೇರೆ ಯಾವುದೇ ಯೋಜನೆ /ಇಲಾಖೆಗಳಿಂದ ಈಗಾಗಲೇ ವಸತಿ ಸೌಲಭ್ಯ ಪಡೆದಿರಬಾರದು.

ಮನೆಗಳ ವಿಸ್ತೀರ್ಣ ಮತ್ತು ವಿನ್ಯಾಸ : ಕನಿಷ್ಟ 25 ಚಮೀ. ನೆಲಗಟ್ಟು ವಿಸ್ತೀರ್ಣ ಇರುವಂತೆ ಮನೆ ನಿರ್ಮಿಸಬೇಕು. ಇದಕ್ಕಾಗಿ ಯಾವುದೆ ನಕ್ಷೆ ಅಥವಾ ವಿನ್ಯಾಸ ನಿಗದಿಪಡಿಸಿರುವುದಿಲ್ಲ. ಆದರೆ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಮಣ್ಣು, ಹವಾಗುಣ, ಪರಿಸ್ಥಿತಿ, ಸ್ಥಳೀಯವಾಗಿ ಲಭ್ಯವಿರುವ ಸಾಮಗ್ರಿಗಳ ಬಳಕೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಪ್ರದೇಶವಾರು ಮತ್ತು ಬದಲಿ ವಿನ್ಯಾಸಗಳನ್ನು ಅನುಸರಿಸಬಹುದು. ಮನೆ ನಿರ್ಮಾಣದ ಪ್ರತಿ ಹಂತದಲ್ಲಿಯೂ ಫಲಾನುಭವಿಯು ಸಕ್ರಿಯವಾಗಿ ಪಾಲ್ಗೊಂಡು ಒಳ್ಳೆಯ ಗುಣಮಟ್ಟದ ಹಾಗೂ ಹೆಚ್ಚಿನ ಸೌಲಭ್ಯಗಳನ್ನು ಹೊಂದಬಹುದು. ಒಟ್ಟಾರೆ ಆಗಿಂದಾಗೆ ಸರ್ಕಾರವು ವಸತಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿದಿಸಬಹುದಾದ ನಿಯಮ ಮತ್ತು ಷರತ್ತುಗಳು ತಪ್ಪದೇ ಪಾಲಿಸಬೇಕು.

ಮನೆ ನಿರ್ಮಾಣ ಮಾಡುವ ಕ್ರಮ:

ಸ್ವಂತ ಫಲಾನುಭವಿಗಳಿಂದ : ಫಲಾನುಭವಿಯೇ ಸ್ವತಃ ತನ್ನ ಮನೆಯನ್ನು ಸ್ಥಳೀಯವಾಗಿ ಅನುಮೋದಿತ ನಕ್ಷೆಗನುಗುಣವಾಗಿ ಕಟ್ಟಿಕೊಳ್ಳಬಹುದು (ಇದಕ್ಕಾಗಿ ಕಾಮಗಾರಿ ಆದೇಶ ಹೊರಡಿಸಿ ನಿಗದಿತ ಕಂತುಗಳಲ್ಲಿ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆ ಮೂಲಕ ನೀಡಲಾಗುವುದು. ನಿರ್ಮಾಣ ಸಂಸ್ಥೆ ಮೂಲಕ ಮನೆ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ.

ಮನೆ ನಿರ್ಮಾಣ ಅವಧಿ : ಗರಿಷ್ಟ ನಾಲ್ಕು (4) ತಿಂಗಳೊಳಗಾಗಿಮನೆಯನ್ನು ಪೂರ್ಣಗೊಳಿಸುವುದು.

ವಿ.ಸೂ. : ಚೆಕ್ ಲಿಸ್ಟ : (ಒದಗಿಸಬೇಕಾದ ದಾಖಲೆಗಳು-ಸಂಕ್ಷಿಪ್ತ)
ಫಲಾನುಭವಿಯಿಂದ :
1.ವಸತಿಗಾಗಾಗಿ ನಿಗದಿತ ಅರ್ಜಿ (ನಮೂನೆ-1)
2.ನಿವೇಶನ/ಮನೆಯನ್ನು ಸಾಲ ತೀರುವವರೆಗೂ ನಿಗಮದ ಪರವಾಗಿ ಅಡಮಾನ ಪತ್ರ ಬರೆದುಕೊಡಬೇಕು (ನಮೂನೆ3ಎ)
3.ಜಾತಿ ಪ್ರಮಾಣ ಪತ್ರ/ಆದಾಯ ಪ್ರಮಾಣ ಪತ್ರ.

ಸಂಬಂಧಿಸಿದ ಗ್ರಾಮ ಪಂಚಾಯತಿ/ಕಾರ್ಯನಿರ್ವಹಣಧಿಕಾರಿ/ಜಿಲ್ಲಾ ಪಂಚಾಯತ್ನ ಮು.ಕಾ.ನಿ ರಿಂದ :

  1. ಗ್ರಾಮ ಪಂಚಾಯತ /ಇಲಾಖೆ ಯೋಜನೆಯ ಅಡಿಯಲ್ಲಿ ನಿಯಮಗಳನ್ನು ಪಾಲಿಸಿರುವ ಬಗ್ಗೆ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ ಖಾತರಿಪಡಿಸಿಕೊಂಡ ಬಗ್ಗೆ ದೃಢೀಕರಣ ಪತ್ರ.
  2. ನಿಗದಿತ ನಮೂನೆಯಲ್ಲಿ ಪ್ರತಿ ತಿಂಗಳು /ವರ್ಷ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಗತಿ ವರದಿಯನ್ನು ತಪ್ಪದೇ ಸಲ್ಲಿಸಬೇಕು.
  3. .ವಸತಿ ಯೋಜನೆಯ ಯಶಸ್ವಿ ಅನುಷ್ಠಾನದ ಬಗ್ಗೆ ಸಂಬಂಧಿಸಿದ ಇತರೆ ಮಾಹಿತಿ ಇತ್ಯಾದಿ
  4. ಹೆಚ್ಚಿನ ಮಾಹಿತಿಗೆ ಈ ಕೆಳಕಂಡವರನ್ನು ಸಂಪರ್ಕಿಸಿ
  • ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ, ಜಿಲ್ಲಾಧಿಕಾರಿಗಳು, ಆಯಾಯ ಸಂಬಂಧಿಸಿದ ಜಿಲ್ಲೆಗಳು.
  • ಸಂಬಂಧಪಟ್ಟ ತಾಲೂಕು ಪಂಚಾಯತಿ ಆಯಾ ಕಾರ್ಯಾನಿರ್ವಹಣಾಧೀಕಾರಿಗಳು.
  • ಸಂಬಂಧಪಟ್ಟ ಗ್ರಾಮ ಪಂಚಾಯತಿ ಕಾರ್ಯದರ್ಶೀಗಳು.

ಇತ್ತೀಚಿನ ಸುದ್ದಿಗಳು

Related Articles