ನಮಸ್ಕಾರ ಜನರೇ, ಕರ್ನಾಟಕ ಸರಕಾರದ ಅಡಿಯಲ್ಲಿ ಬರುವ ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ಸಾಲ ಸಹಾಯಧನ ಮತ್ತು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗುತ್ತದೆ.
ಕರ್ನಾಟಕ ಸರಕಾರದ ದೇವರಾಜ ಅರಸು ನಿಗಮ, ಒಕ್ಕಲಿಗ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ನಿಗಮ, ಮಡಿವಾಳ ಮಾಚಿದೇವ ನಿಗಮ, ವೀರಶೈವ ಲಿಂಗಾಯತ ನಿಗಮ, ಮರಾಠ ನಿಗಮ, ಸವಿತಾ ಸಮಾಜ ನಿಗಮ. ಉಪ್ಪಾರ ಅಭಿವೃದ್ಧಿ ನಿಗಮ, ವಿಶ್ವಕರ್ಮ ಸಮುದಾಯ ನಿಗಮ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಹೀಗೆ ಹಲವಾರು ನಿಗಮಗಳಲ್ಲಿ ಸ್ವಯಂ ಉದ್ಯೋಗ ಸಾಲ(ವ್ಯಾಪಾರ ಚಟುವಟಿಕೆ), ಸ್ವಾವಲಂಭಿ ಸಾರಥಿ ಯೋಜನೆ ಮತ್ತು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಗಳನ್ನು ಕರೆಯಲಾಗಿದೆ.
ಇದನ್ನೂ ಓದಿ:ಕೃಷಿ ಉದ್ಯಮಿ ಮಾಡುವವರಿಗೆ ಸುರ್ಣಾವಕಾಶ ಉಚಿತ ತರಬೇತಿಗೆ ಅರ್ಜಿ ಆಹ್ವಾನ!
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
1)ಜಾತಿ ಪ್ರಮಾಣ ಪತ್ರ
2)ಆದಾಯ ಪ್ರಮಾಣ ಪತ್ರ
3)ಆಧಾರ್ ಕಾರ್ಡ್ ಪ್ರತಿ
4)1 ಫೋಟೋ
5)ಬ್ಯಾಂಕ್ ಪಾಸ್ ಬುಕ್ ಪ್ರತಿ
6)ಸಣ್ಣ ಹಿಡುವಳಿ ಪ್ರಮಾಣ ಪತ್ರ
7)ಆರ್, ಟಿ, ಸಿ
8)ರೇಷನ್ ಕಾರ್ಡ್ ಪ್ರತಿ
ಇದನ್ನೂ ಓದಿ:ಕೇಂದ್ರ ಸರಕಾರದ ಕಿಸಾನ್ ಯೋಜನೆಯ 20ನೇ ಕಂತು ಬಿಡುಗಡೆಗೆ ತಯಾರಿ.
ಸ್ವಯಂ ಉದ್ಯೋಗ ಸಾಲ(ವ್ಯಾಪಾರ ಚಟುವಟಿಕೆ) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
1)ಜಾತಿ ಪ್ರಮಾಣ ಪತ್ರ
2)ಆದಾಯ ಪ್ರಮಾಣ ಪತ್ರ
3)ಆಧಾರ್ ಕಾರ್ಡ್ ಪ್ರತಿ
4)1 ಫೋಟೋ
5)ಬ್ಯಾಂಕ್ ಪಾಸ್ ಬುಕ್ ಪ್ರತಿ
6)7ನೇ ಅಥವಾ SSLC ಅಂಕ ಪಟ್ಟಿ
7)ರೇಷನ್ ಕಾರ್ಡ್ ಪ್ರತಿ
ಸ್ವಾವಲಂಬಿ ಸಾರಥಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
1)ಜಾತಿ ಪ್ರಮಾಣ ಪತ್ರ
2)ಆದಾಯ ಪ್ರಮಾಣ ಪತ್ರ
3)ಆಧಾರ್ ಕಾರ್ಡ್ ಪ್ರತಿ
4)1 ಫೋಟೋ
5)ಬ್ಯಾಂಕ್ ಪಾಸ್ ಬುಕ್ ಪ್ರತಿ
6) DL ಪ್ರತಿ
7)ರೇಷನ್ ಕಾರ್ಡ್ ಪ್ರತಿ
8)ಯೋಜನಾ ವರದಿ
ಅರ್ಜಿಗಳನ್ನು ಎಲ್ಲಿ ಸಲ್ಲಿಸಬೇಕು?
ಅರ್ಜಿ ದಾರರು ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್ ಕೇಂದ್ರ, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ :
ನಿಮ್ಮ ಜಿಲ್ಲೆಯ ಅಥವಾ ತಾಲ್ಲುಕಿನ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮಕ್ಕೆ ಭೇಟಿ ನೀಡಿ ಇನ್ನು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.