ನಮಸ್ಕಾರ ಜನರೇ, ನಿರುದ್ಯೋಗ ಗ್ರಾಮೀಣ ಪ್ರದೇಶದ ಆಸಕ್ತ ಯುವಜನರಿಗೆ ಒಂದು ಅವಕಾಶ ಕೃಷಿ ಉದ್ಯಮಿ ತರಬೇತಿಗೆ ರುಡ್ ಸೆಟ್ ಸಂಸ್ಥೆವತಿಯಿಂದ ಅರ್ಜಿ ಆಹ್ವಾನಿಸಿದೆ.
ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ಹೇರೂರು ರುಡ್ ಸೆಟ್ ಸಂಸ್ಥೆ ವತಿಯಿಂದ ಉಚಿತ ಊಟ-ವಸತಿ ಸಹಿತ ಆಸಕ್ತ ಯುವಜನರಿಗೆ ಉಚಿತ ಕೃಷಿ ಉದ್ಯಮಿ ಮತ್ತು ವಿವಿಧ ಬಗೆಯ ಸ್ವ-ಉದ್ಯೋಗ ಪ್ರಾರಂಭಿಸುವ ತರಬೇತಿಗಳನ್ನು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಉಚಿತವಾಗಿ ಕಲಿಸಲಾಗುತ್ತದೆ.
ಈ ಒಂದು ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ವಿವಿಧ ಬಗೆಯ ತರಬೇತಿ ನೀಡುವುದರ ಜೊತೆಗೆ ಸ್ವ-ಉದ್ಯೋಗವನ್ನು ಪ್ರಾರಂಭಿಸಲು ಬೇಕಾಗುವ ಬಂಡವಾಳಕ್ಕೆ ಬ್ಯಾಂಕ್ ಗಳಿಂದ ಸಾಲ ಪಡೆಯಲು ಸೂಕ್ತ ಮಾರ್ಗದರ್ಶನವನ್ನು ಸಹ ನೀಡಲಾಗುತ್ತದೆ.
ಇದನ್ನೂ ಓದಿ:ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20ನೇ ಕಂತು ಬಿಡುಗಡೆಗೆ ತಯಾರಿ.
ನಮ್ಮ ಸಂಸ್ಥೆಯಲ್ಲಿ ದಿನಾಂಕ ದಿನಾಂಕ 09/06/2025 ರಿಂದ 21/06/2025 (13 ದಿನಗಳ) ವರೆಗೆ ಕೃಷಿ ಉದ್ಯಮ ಕುರಿತು ಉಚಿತ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಆದ ಕಾರಣ ಈ ತರಭೇತಿಯನ್ನು ಕಲಿಯಲು ಆಸಕ್ತ ಇರುವವರು ಅರ್ಜಿ ಸಲ್ಲಿಸಲು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯನ್ನು ಹೊರಡಿಸಲಾಗಿದೆ.
Free training details-ಈ ಕೆಳಗೆ ತಿಳಿಸಿದ ತರಭೇತಿಗಳು ಉಚಿತವಾಗಿ ನಡೆಯಲಿವೆ.
1.ಸಿಸಿ ಟಿವಿ ಕ್ಯಾಮೆರಾ ಇನ್ಸ್ಟಾಲೆಷನ್(13 ದಿನಗಳು)
2. ಬೇಕರಿ ಆಹಾರ ತಯಾರಿಕೆ (1 ತಿಂಗಳು)
3.ಅಣಬೆ ಬೇಸಾಯ (10 ದಿನಗಳು)
4.ಮೋಟಾರ್ ರಿವೈಂಡಿಗ್ ವರ್ಕ್ಸ್ (1 ತಿಂಗಳು)
5.ಬ್ಯೂಟಿಸಿಯನ್ ತರಬೇತಿ (1 ತಿಂಗಳು)
6. ಫಾಸ್ಟ ಫುಡ್ ತಯಾರಿಕೆ (10 ದಿನಗಳು)
7)ಮೋಬೈಲ್ ರಿಪೇರಿ (30 ದಿನಗಳು)
8)ಗೃಹಪೋಯೋಗಿ ವಸ್ತು ರಿಪೇರಿ (30 ದಿನಗಳು)
ಇದಲ್ಲದೇ ಇನ್ನೂ ಹಲವಾರು ಸ್ವ-ಉದ್ಯೋಗವನ್ನು ಕೈಗೊಳ್ಳುವಂತಹ ತರಬೇತಿಗಳನ್ನು ನೀಡಲಾಗುತ್ತದೆ.
How to join training- ತರಬೇತಿಯನ್ನು ಯಾರೆಲ್ಲ ಪಡೆಯಬಹುದು?
ವಯೋಮಿತಿ 18 ರಿಂದ 45 ವಯಸ್ಸಿನ ಒಳಗಿರಬೇಕು. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುತ್ತದೆ. ಮತ್ತು ತರಬೇತಿಯ ಕೊನೆಯ ದಿನ ಪ್ರಮಾಣ ಪತ್ರ ನೀಡಲಾಗುತ್ತದೆ.
ಇದನ್ನೂ ಓದಿ:ಸಮಗ್ರ ಕೃಷಿ ಅಳವಡಿಸಿಕೊಳ್ಳಿ ಕೃಷಿ ಇಲಾಖೆಯಿಂದ ರೂ.30,000 ವರೆಗೂ ಸಹಾಯಧನ ಪಡೆದುಕೊಳ್ಳಿ!
ಹೆಚ್ಚಿನ ವಿವರ ಮತ್ತು ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ:
ರುಡ್ ಸೆಟ್ ಸಂಸ್ಥೆ
ಬ್ರಹ್ಮಾವರ,(ಹೇರೂರು)
ಉಡುಪಿ ಜಿಲ್ಲೆ576213.
7022560492, 9844086383, 9591233748, 9900889234,8861325564
Whatspp ಮೂಲಕ ಅರ್ಜಿ ಸಲ್ಲಿಸಲು:9844086383, 7022560492.