ರಾಜ್ಯದಲ್ಲಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಕೃಷಿ ಯಾಂತ್ರಿಕರಣ ಪ್ರಮುಖ ಮತ್ತು ಅತೀ ಅವಶ್ಯಕವಾಗಿದೆ.ಕೃಷಿ ಯಂತ್ರೋಪಕರಣ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ದೇಶದಲ್ಲಿಯೇ ಮೊದಲ ಭಾರಿಗೆ ಪ್ರತಿ ಎಕರೆಗೆ 250 ರೂ ರಂತೆ ಗರಿಷ್ಠ 5 ಎಕರೆಗೆ DBT (Direct Beneficiary Transfer)ಮೂಲಕ ರೈತ ಶಕ್ತಿ ಎಂಬ ಹೊಸ ಯೋಜನೆಯನ್ನು 500 ರೂ ಕೋಟಿ ರೂ ನೀಡಲು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಘೋಷಿಸಿಲಿದ್ದಾರೆ.
ರೈತ ಶಕ್ತಿಯೋಜನೆಯನ್ನು ಅನುಷ್ಠಾನಗೊಳಿಸಲು ಮಾರ್ಗಸೂಚಿಗಳು:
ಕೃಷಿ ಇಲಾಖೆಯಲ್ಲಿ ರೈತರಿಗೆ ಯಾವುದೇ ಸೌಲಭ್ಯ ನೀಡಬೇಕಾದರೆ ಮೊದಲು ನೋಂದಣಿ ಮಾಡುವ ಒಂದು ಪ್ರಕ್ರಿಯೇ ಇರುತ್ತದೆ. ಈ FRUITS ತಂತ್ರಾಂಶದಲ್ಲಿ ನೋಂದಣಿಗೊಂಡ ರಾಜ್ಯದ ಎಲ್ಲ ರೈತರಿಗೆ ರೈತ ಶಕ್ತಿ ಯೋಜನೆಯನ್ನು ಸಹ FRUITS ತಂತ್ರಾಂಶ ಬಳಸಿಕೊಂಡ ನೇರ ನಗದು ಮೂಲಕ ಅನಿಷ್ಟಾನ ಮಾಡಲಾಗಿದೆ.
1.ರೈತ ಶಕ್ತಿ ಯೋಜನೆ ಅಡಿ FRUITS ಪೋರ್ಟಲನ್ನಲ್ಲಿ ನೋಂದಣಿಯಾದ ಜಮೀನಿನ ವಿಸ್ತೀರ್ಣವಾಗಿರುತ್ತದೆ.
2.FRUITS ತಂತ್ರಾಂಶದಲ್ಲಿ ನೋಂದಣಿಯಾದ ರಾಜ್ಯದ ಎಲ್ಲಾ ರೈತರು ಈ ಯೋಜನೆಯ ಫಲನಾಭವಿಗಳಾಗಿರುತ್ತಾರೆ.
3.ಯಾವುದೇ ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ದಾಖಲೆಗಳ ಪರಿಶೀಲನೆಯನ್ನು ಸರ್ಕಾರದ ಪೋರ್ಟಲನ್ನಲ್ಲಿ ಲಬ್ಯವಿರುವ ದತ್ತಾಂಶಗಳ ಆಧಾರ ಮೇಲೆ ಮಾಡಲಾಗುವುದು.
4.FRUITS ತಂತ್ರಾಂಶದಲ್ಲಿ ನೋಂದಣಿಯಾದ ಹಿಡುವಳಿಯ ವಿಸ್ತೀರ್ಣ ಆಧಾರದ ಮೇಲೆ ಡೀಸೆಲ್ ಸಹಾಯಧನವನ್ನು ನೇರ (DBT)ವರ್ಗಾವಣೆ ಮೂಲಕ ರೈತರ ಖಾತೆಗೆ ನೀಡಲಾಗುವುದು.
ಇದನ್ನೂ ಓದಿ: ಬೋರ್ವೆಲ್ ಕೊರೆಸಲು 2 ಲಕ್ಷ ಸಹಾಯಧನ ಯಾವ ನಿಗಮದಿಂದ, ಯಾರಿಗೆ, ಮಾಹಿತಿ ತಿಳಿದುಕೊಳ್ಳಿ
5.ಸಂಘ ಸಂಸ್ಥೆಗಳ/ಸ್ವ ಸಹಾಯ ಗುಂಪುಗಳ /ಟ್ರಸ್ಟಗಳ/ಸಂಸ್ಥೆಗಳ ಹೆಸರಿನಲ್ಲಿರುವ ಭೂ ಒಡೆತನಗಳಿಗೆ ಸಹಾಯಧನ ಒದಗಿಸಲು ಅವಕಶವಿರುವುದಿಲ್ಲ.
6.FRUITS ತಂತ್ರಾಂಶದಲ್ಲಿ ನೋಂದಣಿಗೊಂಡು FID ಹೊಂದಿದ ಎಲ್ಲಾ (ಏಕ ಖಾತೆ/ ಜಂಟಿ ಖಾತೆ) ಹೊಂದಿರುವ ರೈತರನ್ನು ಮಾತ್ರ ಪರಿಗಣಿಸಲಾಗುವುದು.
7.ಜಂಟಿ ಖಾತೆಯನ್ನು ಹೊಂದಿರುವ ಸಂದರ್ಭದಲ್ಲಿ ಒಟ್ಟು ಜಮೀನನ್ನು ಸಮನವಾಗಿ ವಿಭಾಗಿಸಿದಾಗ ಪ್ರತಿಯೊಬ್ಬರಿಗೂ ಗರಿಷ್ಠ ಐದು ಎಕರೆ ಮೀರದಂತೆ ಪ್ರತಿಯೊಬ್ಬ ಪಾಲುದಾರರಿಗೂ ಪ್ರತ್ಯೇಕವಾಗಿ ವಿಸ್ತೀರ್ಣ ಪರಿಗಣಿಸಿ ಸಹಾಯಧನ ನೀಡಲಾಗುವುದು.
8.FRUITS ತಂತ್ರಾಂಶದಲ್ಲಿ ನೋಂದಣಿಯಾದ ರೈತರ ಭೂ ಹಿಡುವಳಿ ಆಧಾರ ಮೇಲೆ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ ರೂ 250 ಗಳಂತೆ ಗರಿಷ್ಠ 5 ಎಕರೆಗೆ ರೂ 1250/-ರೂ ವರೆಗೂ ಡಿಸೇಲ್ ಸಹಾಯಧನ ನೀಡಲಾಗುವುದು.
ಈ ರೀತಿ ಅರ್ಹರಾಗಿರುವ ರೈತರಿಗೆ ಸಹಾಯಧನವನ್ನು ಸರ್ಕಾರದ DBT ಪೋರ್ಟಲ್ ಮುಂಖಾತರ ರಾಜ್ಯ ಮಟ್ಟದಿಂದ ಕೇಂದ್ರಿಕೃತವಾದ ಕೆ-2 ಮುಂಖಾತರ ಆಧಾರ್ ಸಿಡೆಡ್ ಬ್ಯಾಂಕ್/ ಪೋಸ್ಟ ಆಫೀಸ್ ಖಾತೆಗೆ ವರ್ಷಕೊಮ್ಮೆ ವರ್ಗಾಹಿಸಲಾಗುವುದು.
ಇದನ್ನೂ ಓದಿ:ಸಿರಿಧಾನ್ಯ ಬೆಳೆದ ರೈತರಿಗೆ ಹೆಕ್ಟೇರ್ ಗೆ 15,000 ರೂ ಪ್ರೋತ್ಸಾಹಧನ
ಈಗಾಗಲೇ FRUITS ತಂತ್ರಾಂಶದಲ್ಲಿ ನೋಂದಣಿಗೊಂಡ FID ಹೊಂದಿದ ಎಲ್ಲಾ ರೈತರಿಗೂ ವರ್ಷ ಪ್ರತಿ ಒಂದು ಅಂತಿಮ ದಿನಾಂಕವನ್ನು ನಿಗದಿಪಡಿಸಿ ತಮ್ಮ ಹೊಡೆತನದಲ್ಲಿರುವ ಎಲ್ಲಾ ಸರ್ವೆನಂಬರಗಳನ್ನು FRUITS ತಂತ್ರಾಂಶದಲ್ಲಿ ಸೇರ್ಪಡೆ ಮಾಡಲು ವ್ಯಾಪಕ ಪ್ರಚಾರ ನೀಡಿ ರೈತರಿಗೆ ತಿಳಿಸಲಾಗುವುದು.ಅಂತಿಮ ದಿನಾಂಕದ ನಂತರ ನೊಂದಣಿಗೊಂಡ ಹೆಚ್ಚುವರಿ ವಿಸ್ತೀರ್ಣಕ್ಕೆ ಸಹಾಯಧನ ಒದಗಿಸಲು ಅವಕಾಶವಿರುವುದಿಲ್ಲ.
ಒಂದು ವೇಳೆ ದಿನಾಂಕದ ನಂತರ ಸೃಜನೆಯಾಗುವ ಹೊಸ FID ಗಳಿಗೆ ಮಾತ್ರ ವಿಸ್ತರಣೆ ಅನುಗುಣವಾಗಿ ಅನುದಾನ ಲಭ್ಯತೆಯ ಆಧಾರದ ಮೇಲೆ ಪರಿಗಣಿಸಲಾಗುದು
.
ಹೆಚ್ಚಿನ ಮಾಹಿತಿಗಾಗಿ: ರೈತ ಬಾಂದವರು ನಿಮ್ಮ ತಾಲೂಕಿನ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಕಛೇರಿಗಳನ್ನು ಸಂಪರ್ಕಿಸಿ ಈ ಯೋಜನೆಗೆ ಸಂಬಂಧ ಪಟ್ಟ ಮಾಹಿತಿಯನ್ನು ಪಡೆಯಬಹುವುದು.