Friday, September 20, 2024

MGNRGA scheme 2023:ನರೇಗಾ ಯೋಜನೆ ಕೂಲಿ ದಿನಗಳು ಹೆಚ್ಚಳಕ್ಕೆ ಚಿಂತನೆ: ಆನಲೈನ್ ನಲ್ಲಿ ಸಲ್ಲಿಸುವುದು ಹೇಗೆ?

ನರೇಗಾ ಯೋಜನೆ ಕೂಲಿ ದಿನಗಳು ಹೆಚ್ಚಳಕ್ಕೆ ಚಿಂತನೆ: ಆನಲೈನ್ ನಲ್ಲಿ ಸಲ್ಲಿಸುವುದು ಹೇಗೆ?
ಯೋಜನೆ ಕೂಲಿ ದಿನಗಳು ಹೆಚ್ಚಳ ದಿನಗಳು ಏಷ್ಟು? ಯಾರೆಲ್ಲಾ ಯೋಜನೆ ಕಾಮಗಾರಿಗಳನ್ನು ಪಡೆಯಬಹುದು?
ಯೋಜನೆ ಅನುಷ್ಟಾನು ಹೇಗೆ? ಅರ್ಜಿ ಸಲ್ಲಿಸುವುದು ಹೇಗೇ? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ

ಆತ್ಮೀಯ ರೈತ ಬಾಂದವರಿಗೆ ಗ್ರಾಮೀಣ/ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ಮತ್ತು ಕೃಷಿಯೇತರ ಕೆಲಸ/ಕಾಮಗಾರಿಗಳನ್ನು ಪ್ರಾರಂಭ ಮಾಡಲು ಆರ್ಥಿಕವಾಗಿ ಸಹಾಯಧನ ಒದಗಿಸಲು ಮತ್ತು ಗ್ರಾಮೀಣ ಭಾಗದ ಜನರಿಗೆ ಗ್ರಾಮೀಣ ಪ್ರದೇಶದಲ್ಲೇ ಸ್ವ ಇಚ್ಚೆಯಿಂದ ಕೆಲಸ/ ಮಾಡಲು ಮುಂದಾಗುವ ಜನರಿಗೆ ಉದ್ಯೋಗ ಒದಗಿಸುವ ದೇಸೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (Mgnreg Scheme-2023) ನಮ್ಮ ರಾಜ್ಯದ ವಿವಿಧ ಅಭಿವೃದ್ಧಿ ಇಲಾಖೆಗಳಿಂದ ಅನುಷ್ಠಾನ ಮಾಡಲಾಗುತ್ತದೆ.

ಬೇಡಿಕೆಯ ಪ್ರಕಾರ ಒಂದು ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬಕ್ಕೆ 100 ದಿನಗಳಿಗಿಂತ ಕಡಿಮೆ ಇಲ್ಲದಂತೆ ಅಕೌಶಲ್ಯ ದೈಹಿಕ ಉದ್ಯೋಗವನ್ನು ಒದಗಿಸುವುದಾಗಿ ಹಿಂದೆ ಇದ್ದ ಆದೇಶವನ್ನು ಬದಲಾವಣೆ ಮಾಡಲಾಗುವುದು ಎಂದು ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ. ನಿಗಧಿತ ಗುಣಮಟ್ಟ ಹಾಗೂ ಬಾಳಿಕೆ ಬರುವ ಉತ್ಪಾದನಾಶೀಲ ಆಸ್ತಿಗಳ ಸೃಜನೆ ಮಾಡುವ ಉದ್ದೇಶದಿಂದಾಗಿ ಕಳೆದ ಅನೇಕ ವರ್ಷಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ಅನುಷ್ಠಾನ ಮಾಡಲಾಗಿರುತ್ತದೆ.

MGNREG ಯೋಜನೆಯಡಿ ಕೂಲಿ ದಿನಗಳು ಹೆಚ್ಚಳ:


ರಾಜ್ಯದಲ್ಲಿ ಮಳೆ ಕೊರತೆ ಮುಂದುವರೆದಿದ್ದು ಈಗಾಗಲೇ 195 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಣೆ ಮಾಡಲಾಗಿರುತ್ತದೆ. ಈ ತಿಂಗಳ ಕೊನೆಯಲ್ಲಿ ಇನ್ನಷ್ಷು ತಾಲೂಕುಗಳನ್ನು ಬರ ಪರಿಸ್ಥಿತಿ ಸಮೀಕ್ಷೆ ಕೈಗೊಳ್ಳಲು ತಿರ್ಮಾನಿಸಲಾಗುವುದು ಎಂದು ಹೇಳಿದ್ದಾರೆ. ಜೊತೆಗೆ ಬರಪೀಡಿತ ತಾಲ್ಲೂಕುಗಳಲ್ಲಿ ಮಹಾತ್ಮ ಗಾಂದಿ ಉದ್ಯೋಗ ಖಾತ್ರಿ ಯೋಜನೆಯಡಿ ಕುಟುಂಬದ ಕೂಲಿ ದಿನಗಳನ್ನು ನೂರರಿಂದ 150 ಕ್ಕೆ ಹೆಚ್ಚಿಸಲು ತಿರ್ಮಾನ ಮಾಡಲಾಗಿದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ.

ಈ ಯೋಜನೆಯಡಿ 2023 ನೇ ವರ್ಷದಲ್ಲಿ ವೈಯಕ್ತಿಕವಾಗಿ ರೈತರು ತಮ್ಮ ಜಮೀನಿದಲ್ಲಿ ಯಾವೆಲ್ಲ ಕಾಮಕಾರಿಗಳನ್ನು ಕೈಗೊಳ್ಳಬವುದು ಎಂದು ಜಿಲ್ಲಾ ಪಂಚಾಯತ ಬೆಳಗಾವಿ ಕಚೇರಿಯಿಂದ ಹೊರಡಿಸಿರುವ ಪ್ರಕಟಣೆ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಬೋರವೆಲ್ ತೆಗಿಸಲು ಅರ್ಜಿ ಆಹ್ವಾನ
ಇದನ್ನೂ ಓದಿ: ಶೇಕಡಾ 90 ರ ಸಹಾಯಧನದಲ್ಲಿ ನೀರಾವರಿ ಘಟಕಗಳಿಗೆ ಅರ್ಜಿ

MGNREG scheme Benefits-2023: ಮನರೇಗಾ ಯೋಜನೆಯಡಿ ಯಾರೆಲ್ಲಾ ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆಯಬಹುದು?

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಜನಾಂಗ,

ಬಿಪಿಎಲ್ ಕುಟುಂಬಗಳು, ಬುಡಕಟ್ಟು ಜನಾಂಗ, ಸಣ್ಣ &

ಅತಿ ಸಣ್ಣ ರೈತರು, ಲಿಂಗತ್ವ ಅಲ್ಪಸಂಖ್ಯಾತರಿಗೂ

ಯೋಜನೆಯಡಿ ಅವಕಾಶವಿರುತ್ತದೆ, ವಿಕಲಚೇತನ
ಪ್ರಧಾನ ಕುಟುಂಬಗಳು, ಸ್ತ್ರೀ ಪ್ರಧಾನ ಕುಟುಂಬಗಳು.
ಈ ಯೋಜನೆಯಡಿ ಕೆಲಸ ಮಾಡಿ ಸ್ವಾಭಿಮಾನದ ಬದುಕು ಸಾಗಿಸಿ ವಿಶೇಷ ವರ್ಗದ ಜಾಬ್ ಕಾರ್ಡ್‌ ಪಡೆದು, 100 ಹಾಗೂ ಬದಲಾವಣೆ ಆದ 150 ದಿನಗಳ ಕಾಲ ಯೋಜನೆಯಡಿ ಕೆಲಸ ನಿರ್ವಹಿಸಬಹುದಾಗಿರುತ್ತದೆ,ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ ಪಡೆಯಬಹುದು ಮತ್ತು ಈ ಯೋಜನೆಯಡಿ ಗಂಡು ಹೆಣ್ಣಿಗೆ ಸಮಾನ ಕೂಲಿ ಒದಗಿಸಲಾಗುತ್ತದೆ.

udyoga khatri yojane-2023: ಯೋಜನೆಯಡಿ ಯಾವೆಲ್ಲ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನ ಮಾಡಬವುದು? ಮತ್ತು ಅನುದಾನದ ವಿವರ:


ಪಂಚಾಯತಿ ಅಥವಾ ಹತ್ತಿರದ ಕಾಮಗಾರಿ ಸಂಬಂದಪಟ್ಟ ಇಲಾಖೆ ಅಂದರೆ ಕೃಷಿ ತೋಟಗಾರಿಕೆ,ರೇಷ್ಮೆ ಪಶುಪಾಲನೆ, ಅರಣ್ಯ ಇಲಾಖೆ ಕಚೇರಿಗಳಿಗೆ ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲೆ ಕೊಟ್ಟು ಅರ್ಜಿ ಹಾಕಬಹುದಾಗಿರುತ್ತದೆ. ಅಥವಾ ಕಾಯಕ ಮಿತ್ರ ಮೊಬೈಲ್ ಅಪ್ಲಿಕೇಶನ್ ಮೂಲಕವು ಸಹ ಅರ್ಜಿ ಸಲ್ಲಿಸಬಹುದು. ಕಾಯಕ ಮಿತ್ರ ಮೊಬೈಲ್ ಅಪ್ಲಿಕೇಶನ್ ಲಿಂಕ್:

https://play.google.com/store/apps/details? id=com.effiatech.kayakamitra

Nrega work process- ಕಾಮಗಾರಿ ಅನುಷ್ಠಾನ ಪ್ರಕ್ರಿಯೆ:

ನೀವು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಗ್ರಾಮ ಪಂಚಾಯತಿ ಕಾರ್ಯಲಯದಲ್ಲಿ ಜರುಗುವ ಸಭೆಯಲ್ಲಿ ನಿಮ್ಮ ಕಾಮಗಾರಿ ವಿವರವನ್ನು ಮಂಡಿಸಿ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದು ಸಂಬಂದಪಟ್ಟ ಇಲಾಖೆಗೆ ಕಡತವನ್ನು ವರ್ಗಾಹಿಸಿ ಅರ್ಜಿದಾರರಿಗೆ ಕೆಲಸ ಪ್ರಾರಂಭಿಸಲು ವರ್ಕ್ ಆರ್ಡರ್ ನೀಡಲಾಗುತ್ತದೆ, ಇದಾದ ಬಳಿಕ ಕಾಮಕಾರಿ ಪ್ರಾರಂಭವಾಗುವ ಮುಂಚಿತವಾಗಿ ಒಂದು ಜಿಪಿಎಸ್ ಪೋಟೋ ಮತ್ತು ಕಾಮಕಾರಿ ನಡೆಯುತ್ತಿರುವಾಗ ಮತ್ತು ಕಾಮಕಾರಿ 30% ಪೂರ್ಣಗೊಂಡಾಗ ಹೀಗೆ ವಿವಿಧ ಹಂತಗಳಲ್ಲಿ ಜಿಪಿಎಸ್‌ ಪೋಟೊ ಮತ್ತು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾ ನೇರ ನಗದು ವರ್ಗಾವಣೆ ಮೂಲಕ ಕಾಮಗಾರಿ ಹಣವನ್ನು ಈ ಯೋಜನೆಯಡಿ ಪಾವತಿ ಮಾಡಲಾಗುತ್ತದೆ.

ಹಣ ಪಾವತಿಯು ಎರಡು ವಿಭಾಗವನ್ನು ಹೊಂದಿದ್ದು ಒಂದು ಮೇಟಿರಿಯಲ್ ಬಿಲ್/ ಪರಿಕರ ವೆಚ್ಚ ಮತ್ತೊಂದು ವರ್ಕಸ್ ಬಿಲ್/ಕೂಲಿ ವೆಚ್ಚ ಒಳಗೊಡಿರುತ್ತದೆ.

ಇದನ್ನೂ ಓದಿ: ವಾಹನ ಖರೀದಿಸಲು ಧನಸಹಾಯ ಇಂದೇ ಅರ್ಜಿ ಸಲ್ಲಿಸಿ !!
ಇದನ್ನೂ ಓದಿ: ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಮತ್ತು ಕೋಳಿ ಸಾಕಾಣಿಕೆಗೆ ಸಾಲ ಸೌಲಭ್ಯ

ಹೆಚ್ಚಿನ ಮಾಹಿತಿಗಾಗಿ: ಈ ಯೋಜನೆಯಡಿ ಮೇಲೆ ತಿಳಿಸಿರುವ ವೈಯಕ್ತಿಕ ಕಾಮಗಾರಿಯನ್ನು ತಮ್ಮ ಜಮೀನಿನಲ್ಲಿ ಅನುಷ್ಠಾನ ಮಾಡಲು ಆಸಕ್ತಿ ಹೊಂದಿದಲ್ಲಿ ನರೇಗಾ ಯೋಜನೆಯ ಈ 1800 425 8666 ಸಹಾಯವಾಣಿಗೆ ಕರೆಮಾಡಿ ಸಧ್ಯ ನಿಮ್ಮ ಭಾಗಕ್ಕೆ ಲಭ್ಯವಿರುವ ಯೋಜನೆ ಮಾಹಿತಿ ಮತ್ತು ಈ ಯೋಜನೆಯ ಕುರಿತು ಇತರೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬವುದಾಗಿದೆ.

ಇತ್ತೀಚಿನ ಸುದ್ದಿಗಳು

Related Articles