ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ನೆಲೆಸಿರುವ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಇಲ್ಲಿಯವರೆಗೆ ಇ-ಸ್ವತ್ತು (E-swathu abhiyana) ಮಾಡಿಕೊಳ್ಳದಿದ್ದಲ್ಲಿ ಇಂತಹ ಆಸ್ತಿ ಮಾಲೀಕರಿಗೆ ರಾಜ್ಯ ಸರಕಾರದಿಂದ ಸಿಹಿ ಸುದ್ಧಿ ಬಂದಿದೆ ಇ-ಸ್ವತ್ತು ವಿತರಣಾ ಆಂದೋಲನವನ್ನು ಆರಂಭಿಸಿದೆ. ಇ-ಸ್ವತ್ತು ಮಾಡಿಸಲು ಏನು ದಾಖಲೆಗಳು ಬೇಕು ಮತ್ತು ಎಲ್ಲಿ ಮಾಡಿಸಬೇಕು ಎಂಬ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ರಾಜ್ಯ ಸರಕಾರದ ಮಾರ್ಗಸೂಚಿ ಪ್ರಕಾರ ಆಸ್ತಿಯನ್ನು ನಗರ ಮತ್ತು ಗ್ರಾಮೀಣ ಭಾಗದ ಜನರು ತಮ್ಮ ತಮ್ಮ ಆಸ್ತಿಯ ಮಾಲೀಕತ್ವವನ್ನು ಕಾನೂನಾತ್ಮಕ ಸಾಬೀತು ಪಡಿಸಲು ಇ-ಸ್ವತ್ತು(E-swathu) ಪ್ರಮಾಣ ಪತ್ರವನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ.
ಪ್ರಸ್ತುತ ಇಲ್ಲಿಯವರೆಗೆ ಬಹುದೊಡ್ಡ ಸಂಖ್ಯೆಯ ಆಸ್ತಿಯ ಮಾಲೀಕರು ಇ-ಸ್ವತ್ತು ದಾಖಲೆಗಳನ್ನು ಪಡೆದಿರುವುದಿಲ್ಲ ಸದರಿ ಕಾರಣದಿಂದ ಸರಕಾರಕ್ಕೆ ದೊಡ್ಡ ಮೊತ್ತದ ತೆರಿಗೆ ನಷ್ಟವಾಗುತ್ತಿದ್ದು ಇದಲ್ಲದೆ ಆಸ್ತಿಯ ಮಾಲೀಕರಿಗೂ ಸಹ ಅಧಿಕೃತ ದಾಖಲೆಗಳು ಬೇಕಿರುವ ಕಾರಣ ಈ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಸರಕಾರದಿಂದ ಇ-ಸ್ವತ್ತು ವಿತರಣಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ:ಹಸಿರೆಲೆ ಗೊಬ್ಬರದ ಮಹತ್ವ ಮತ್ತು ಅದರ ಪ್ರಯೋಜನಗಳು!
E-swathu benefits-ಏನಿದು ಇ-ಸ್ವತ್ತು ದಾಖಲೆ? ಅದರ ಲಾಭಗಳು?
ಇ-ಸ್ವತ್ತು ಎಂದರೆ ಒಂದು ಆಸ್ತಿಯ ಮಾಲೀಕರ ವಿವರ ಮತ್ತು ಆ ಸ್ಥಳದ ವಿಸ್ತೀರ್ಣ ಮತ್ತು ಜಾಗದ ಗುರುತನ್ನು ನಿಖರವಾಗಿ ಗುರುತಿಸುವ ದಾಖಲೆಯಾಗಿದೆ.
ಆಸ್ತಿಯ ಮಾಲೀಕರು ತಮ್ಮ ಆಸ್ತಿಯನ್ನು ಮಾರಾಟ ಮಾಡಲು ಅಥವಾ ಆಸ್ತಿಯ ಮೇಲೆ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಇ-ಸ್ವತ್ತು ದಾಖಲೆಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ. ಇದಲ್ಲದೇ ನಿಮ್ಮ ಆಸ್ತಿಯ ಮಾಲೀಕತ್ವವನ್ನು ಅಧಿಕೃತವಾಗಿ ಸಾಬೀತುಪಡಿಸುವ ದಾಖಲೆ ಎಂದು ಸಹ ಹೇಳಬಹುದು.
E-swathu-ಇ-ಸ್ವತ್ತು ಪಡೆಯಲು ಯಾರು ಅರ್ಜಿ ಸಲ್ಲಿಸಬಹುದು?
ಗ್ರಾಮ ಠಾಣಾ ಪ್ರದೇಶದಲ್ಲಿ ಒಳಪಡುವ ನಿವೇಶನಗಳು, ಖಾಲಿ ಜಾಗ, ಕಟ್ಟಡಗಳು, 94(ಸಿಸಿ) ಕಾಯ್ದೆಯಡಿ ನಿರ್ಮಿಸಿ ಕೊಂಡಿರುವ ಮನೆಗಳು, ಪಹಣಿಯನ್ನು ಹೊಂದಿದ್ದು ಕೃಷಿ ಭೂಮಿಯಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಂಡಿರುವವರು ಇ-ಸ್ವತ್ತು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.
E-swathu-ಇ-ಸ್ವತ್ತು ಪಡೆಯಲು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು?
ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹಳ್ಳಿಯ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ನೇರವಾಗಿ ಭೇಟಿಮಾಡಿ ಅರ್ಜಿಯನ್ನು ಸಲ್ಲಿಸಿ ಈ ಇ-ಸ್ವತ್ತು ದಾಖಲೆಯನ್ನು ಪಡೆಯಬಹುದು.
ಇದನ್ನೂ ಓದಿ:ಗೃಹಲಕ್ಷ್ಮೀ ಹಣ ನಿಮಗೆ ಬಂತಾ ಹೀಗೆ ಚೆಕ್ ಮಾಡಿಕೊಳ್ಳಿ!
Documents for E-swathu-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
1)ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
2)ಸ್ಥಳದ ಫೋಟೋ ಆಸ್ತಿಯ ಮಾಲೀಕರೊಂದಿಗೆ
3)ವಂಶವೃಕ್ಷ
4)ವಿದ್ಯುತ್ ಬಿಲ್
5)ತೆರಿಗೆ ಪಾವತಿ ರಶೀದಿ
6)ವಂಶವೃಕ್ಷದಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಪ್ರತಿ ಮತ್ತು ಫೋಟೋ
7)ಕೈ ಬರಹದ ಅರ್ಜಿ
8)ಅರ್ಜಿದಾರನ ಮೊಬೈಲ್ ನಂಬರ್
ಸೂಚನೆ: ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಗ್ರಾಮ ಪಂಚಾಯತ್ ಭೇಟಿ ಮಾಡಿ.