Monday, February 10, 2025

Green manure seeds-ಹಸಿರೆಲೆ ಗೊಬ್ಬರ ಬೆಳೆಸಿ ನಿಮ್ಮ ಜಮೀನಿನ ಮಣ್ಣಿನ ಪೋಷಕಾಂಶ ಹೆಚ್ಚಿಸಿ,  ಹಸಿರೆಲೆ ಗೊಬ್ಬರದ ಮಹತ್ವ ಮತ್ತು ವಿಶೇಷತೆ !

ಕೃಷಿಯಲ್ಲಿ ಹಸಿರೆಲೆ ಗೊಬ್ಬರಗಳ ಬಳಕೆ ನೂರಾರು ವರ್ಷಗಳಷ್ಟು ಹಿಂದಿನ ಕಾಲದಿಂದಲೂ ಬಂದ ಪದ್ಧತಿ. ಇದು ಕೃಷಿ ಮಣ್ಣಿನ ಫಲವತ್ತತೆ ಮತ್ತು ಬೌತಿಕ ಗುಣಧರ್ಮಗಳನ್ನು ಕಾಪಾಡುವಲ್ಲಿ ಮಹತ್ವದ ಸ್ಥಾನ ಪಡೆದಿದೆ. ಈ ಲೇಖನದಲ್ಲಿ ನಿಮಗೆ ಹಸಿರೆಲೆ ಗೊಬ್ಬರದ ಮಹತ್ವ ಮತ್ತು ಅದು ಎಲ್ಲಿ ಸಿಗುತ್ತದೆ ಎಂದು ತಿಳಿಸಿಕೊಡಲಾಗುತ್ತದೆ.

ಹಸಿರೆಲೆ ಗೊಬ್ಬರವು ಭೂಮಿಗೆ ಮತ್ತು ಬೆಳೆಗಳಿಗೆ ಅವಶ್ಯಕವಿರುವ ಮುಖ್ಯ ಪೋಷಕಾಂಶಗಳಾದ(ಗೊಬ್ಬರ) ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಗಳನ್ನಲ್ಲದೆ ಇತರ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುತ್ತದೆ.

*ಹಸಿರೆಲೆ ಗೊಬ್ಬರ ಬೇಸಾಯ* ಅಂದರೆ ಬಲಿಯದ ಸಸ್ಯಗಳು, ಸಸ್ಯದ ಎಲೆಗಳು ಮತ್ತು ಉಳಿದ ಎಳೆಯ ಸಸ್ಯ ಭಾಗಗಳನ್ನು ಉಳುಮೆ ಮಾಡುವ ಮೂಲಕ ಮಣ್ಣಿನಲ್ಲಿ ಕಳಿಸಿ (ಬೆರೆಸಿ) ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವದಾಗಿದೆ.

ಇದನ್ನೂ ಓದಿ:ರೈತರಿಗೆ ಸಿಹಿ ಸುದ್ಧಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ!

 1) ಸ್ಥಳದಲ್ಲಿ ಬೆಳೆಯುವ ಹಸಿರು ಗೊಬ್ಬರಗಳು :

ಹಸಿರೆಲೆ ಗೊಬ್ಬರದ ಸಸ್ಯಗಳನ್ನು ಹೊಲದಲ್ಲಿಯೇ ಬೆಳೆದು ಸ್ಥಳದಲ್ಲಿಯೇ ಮಣ್ಣಿನಲ್ಲಿ ಬೆರೆಸುವ ವಿಧಾನಕ್ಕೆ ಸ್ಥಳದಲ್ಲಿ ಬೆಳೆಯುವ ಹಸಿರು ಗೊಬ್ಬರಗಳು ಎಂದು ಕರೆಯುತ್ತಾರೆ.  ಈ ವಿಧಾನದಲ್ಲಿ ಹಸಿರು ಗೊಬ್ಬರ ಬೆಳೆಯ ಬೀಜಗಳನ್ನು ಮುಖ್ಯ ಬೆಳೆಯನ್ನು  ಬಿತ್ತುವ ಮೊದಲು ಅಥವಾ ಅದರ ಜೊತೆಗೆ ಬಿತ್ತಬಹುದಾಗಿದೆ.  ಸಾಮಾನ್ಯವಾಗಿ ಈ ಹಸಿರು ಗೊಬ್ಬರ ಬೆಳೆಯನ್ನು ಬಿತ್ತನೆ ಮಾಡಿದ 6 ವಾರಗಳ ನಂತರ ಮಣ್ಣಿನೊಂದಿಗೆ ಬೆರೆಸಲಾಗುವುದು. ಇದಕ್ಕೂ ಪೂರ್ವದಲ್ಲಿ ಬೆರೆಸಿದರೆ ಹಸಿರು ಗೊಬ್ಬರದ ಇಳುವರಿ ಕಡಿಮೆಯಾಗುವುದು, ನಂತರ ಬೆರೆಸಿದರೆ ಗೊಬ್ಬರದಲ್ಲಿ ನಾರಿನ ಅಂಶ ಹೆಚ್ಚಾಗಿ ಬೇಗನೆ ಕೊಳೆಯುವದಿಲ್ಲ.

ಉದಾಹರಣೆಗಳು:ಸೆಣಬು, ದಯಂಚಾ, ಚೊಗಚೆ, ಆಲಸಂದಿ, ಸೀಮಾ ಅವರೆ ಮತ್ತು ಹೆಸರು.

2) ಹಸಿರೆಲೆ ಗೊಬ್ಬರಗಳು :ಈ ವಿಧಾನದಲ್ಲಿ ಬೇರೆ ಸ್ಥಳದಲ್ಲಿ ಲಭ್ಯವಿರುವ ಬಹುವಾರ್ಷಿಕ ಸಸ್ಯಗಳ ಹಸಿರೆಲೆಗಳನ್ನು ಕಟಾವು ಮಾಡಿ ತಂದು ಮಣ್ಣಿನಲ್ಲಿ ಬೆರೆಸುತ್ತಾರೆ.  ಈ ವಿಧಾನದಲ್ಲಿ ಹೊಲದ ಬದುಗಳಲ್ಲಿ ಅಥವಾ ಇತರ ಸಮೀಪದ ಸ್ಥಳದಲ್ಲಿ ಈ ಬೆಳೆಗಳನ್ನು ಬೆಳೆಯುತ್ತಾರೆ. 

ಉದಾ : ಗ್ಲಿರಿಸಿಡಿಯಾ, ಹೊಂಗೆ, ಸುಬಾಬುಲ್

ಹಸಿರೆಲೆ ಗೊಬ್ಬರದ ಲಾಭಗಳು : 

1) ಈ ವಿಧಾನದಲ್ಲಿ ಭೂಮಿಗೆ ಅಧಿಕ ಪ್ರಮಾಣದಲ್ಲಿ ಪೋಷಕಾಂಶಗಳು ದೊರೆಯುತ್ತವೆ.  ಮತ್ತು ಮಣ್ಣಿನ ಭೌತಿಕ, ರಸಾಯನಿಕ ಮತ್ತು ಜೈವಿಕ ಗುಣಧರ್ಮಗಳು ಸುಧಾರಿಸುತ್ತವೆ. 

2) ಹಸಿರೆಲೆ ಗೊಬ್ಬರ ಕೊಳೆಯುವ ಸಂದರ್ಭದಲ್ಲಿ ಉತ್ಪನ್ನವಾದ ಆಮ್ಲಗಳು, ರಂಜಕ ಸಸ್ಯಗಳಿಗೆ ದೊರೆಯುವಂತೆ ಪರಿವರ್ತಿಸಲು ನೆರವಾಗುತ್ತವೆ.

3) ಹಸಿರೆಲೆ ಗೊಬ್ಬರ ಸಾರಜನಕ ಸ್ಥಿರಿಕರಿಸಿ ಬೆಳೆಗಳಿಗೆ ಸಿಗುವ ಹಾಗೆ ಮಾಡುತ್ತದೆ.

4) ಈ ಬೆಳೆಗಳು ಭೂಮಿಯ ಆಳವಾದ ಪೊದರಿನಲ್ಲಿರುವ ಪೋಷಕಾಂಶಗಳನ್ನು ಹೀರಿಕೊಂಡು ಮೇಲ್ಮಣ್ಣಿನಲ್ಲಿ ಸೇರಿಸಿ- ವಾರ್ಷಿಕ ಬೆಳೆಗಳ ಪೋಷಕಾಂಶ ನಿರ್ವಹಣೆಯಲ್ಲಿ ನೆರವಾಗುತ್ತವೆ. 

5)ಇದೊಂದು ಸಾವಯವ ಕೃಷಿ ಮಾಡುವರಿಗೆ ವರದಾನವಾಗಿದೆ. ಇದರಿಂದ ಯಾವುದೇ ರಾಸಾಯನಿಕ ಗೊಬ್ಬರದ ಬಳಕೆ ಮಾಡದೆ ಕೃಷಿ ಮಾಡಬಹುದು.

6) ಇದೊಂದು ಕಡಿಮೆ ಖರ್ಚಿನ ಲಾಭದಾಯಕ ಬೇಸಾಯ ಕ್ರಮ ಎನಿಸಿದೆ.

ಇದನ್ನೂ ಓದಿ:ನಿಮ್ಮ ಜಮೀನಿನಲ್ಲಿ ನೀರಿನ ಸಮಸ್ಯೆಯೇ ಶೇ.80 ಸಹಾಯಧನದಲ್ಲಿ ಕೃಷಿ ಹೊಂಡ ಮಾಡಲು ಸಹಾಯಧನ ನೀಡಲಿದೆ!

ಹಸಿರೆಲೆ ಗೊಬ್ಬರದ ಬೀಜಗಳು ದೊರೆಯುವುದು ಎಲ್ಲಿ?

ಹಸಿರೆಲೆ ಗೊಬ್ಬರದ ಬೀಜಗಳು ಕೃಷಿ ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ.(ಸೆಣಬು, ದಯಂಚಾ ಬೀಜಗಳು). ಇನ್ನೂ ನಿಮ್ಮ ಹತ್ತಿರದ ಕೃಷಿ ಬೀಜ ಮಾರಾಟ ಅಂಗಡಿಗಳಲ್ಲಿ ಕೇಳಿ ಪಡೆದುಕೊಳ್ಳಬಹುದು.

ಇನ್ನೂ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ವೀಕ್ಷಣೆ ಮಾಡಬಹುದು: click here green manure cultuvation

ಇತ್ತೀಚಿನ ಸುದ್ದಿಗಳು

Related Articles