Monday, February 10, 2025

Podi abhiyana-ರೈತರಿಗೆ ಸಿಹಿ ಸುದ್ಧಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ!

ಕಂದಾಯ ಇಲಾಖೆಯಿಂದ ರೈತರ ಜಮೀನಿನ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮವನ್ನು ಕೈಗೊಳ್ಳಲು ಸಿದ್ಧತೆಯನ್ನು ನಡೆಸಿದ್ದು ಈ ಕುರಿತು ಕಂದಾಯ ಸಚಿವರು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಪೋಡಿ ಎಂದರೇನು? ಪೋಡಿ ಏಕೆ ಮಾಡಿಸಿಕೊಳ್ಳಬೇಕು? ಎನ್ನುವುದರ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಪ್ರತಿ ವರ್ಷವು ಕಂದಾಯ ಇಲಾಖೆಯಿಂದ  ಪೋಡಿ ದುರಸ್ತಿ ಕಾರ್ಯವನ್ನು ಮಾಡಲಾಗುತ್ತದೆ. ಆದರೆ ಅನೇಕ ರೈತರು ದೂರುತ್ತಾರೆ ಇದನ್ನು ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಲು ಕಂದಾಯ ಇಲಾಖೆಯಿಂದ ನೂತನ ಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ.

ಪೋಡಿ ದುರಸ್ತಿ ಕುರಿತು ಕಂದಾಯ ಇಲಾಖೆಯಿಂದ ಹಂಚಿಕೊಂಡಿರುವ ಮಾಹಿತಿಯನ್ನು ಈ ಕೆಳಗೆ ತಿಳಿಸಿದ್ದು ಇದರ ಜೊತೆಗೆ ಪೋಡಿ ಎಂದರೇನು? ಪೋಡಿಯನ್ನು ಸರಿಪಡಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳು ಏನು? ಎಂಬ ಇತ್ಯಾದಿ ಉಪಯುಕ್ತ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಇದನ್ನೂ ಓದಿ:ಗೃಹಲಕ್ಷ್ಮೀ ಹಣ ಬಿಡುಗಡೆ ನಿಮಗೆ ಬಂತಾ? ಹೀಗೆ ಚೆಕ್ ಮಾಡಿಕೊಳ್ಳಿ!

Podi durasti abhiyana-ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಅಭಿಯಾನ:

ರಾಜ್ಯಾದ್ಯಂತ 30 ವರ್ಷಗಳಿಂದ ಹಾಗೆಯೇ ಉಳಿದುಕೊಂಡಿರುವ ರೈತರಿಗೆ ಮಂಜೂರಾದ ಸರಕಾರಿ ಜಮೀನುಗಳು ಪೋಡಿ ಆಗದೆ ಲಕ್ಷಾಂತರ ರೈತರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಿಂದ ಪೋಡಿ ಅಭಿಯಾನವನ್ನು ಪ್ರಾರಂಭಿಸಿದೆ.

ಡಿಸೆಂಬರ್ ತಿಂಗಳಾಂತ್ಯಕ್ಕೆ 50,000 ರೈತರ ಜಮೀನು ಸರ್ವೆಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೆಗೌಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದಕ್ಕೆ ಸಂಬಂಧಪಟ್ಟಂತೆ ಕಂದಾಯ ಸಚಿವರು ತಹಶೀಲ್ದಾರ್ ಗಳಿಗೆ ಬಗರ್ ಹುಕುಂ ಮತ್ತು ನಮೂನೆ 1 ರಿಂದ 5ರ ದುರಸ್ತಿ ಕಾರ್ಯಗಳ ಕುರಿತು ವಿಡಿಯೋ ಸಂವಾದ ನಡೆಸಿ ಸೂಚನೆ ನೀಡಿದ್ದಾರೆ.

What is podi-ಪೋಡಿ ಎಂದರೇನು?

ಒಂದು ಜಮೀನಿನ ಸರ್ವೆ ನಂಬರಿನ ಪಹಣಿ/ಆರ್ ಟಿ ಸಿ ಯಲ್ಲಿ ಒಬ್ಬರಿಗಿಂತ ಹೆಚ್ಚು ಜನರ ಹೆಸರುಗಳು ಒಂದೆ ಸರ್ವೇ ನಂಬರಿನಲ್ಲಿ ಇದ್ದರೆ ಅದನ್ನು ಬೇರ್ಪಡಿಸಿ ಬಹುಮಾಲಿಕತ್ವದಿಂದ ಏಕ ಮಾಲಿಕತ್ವಕ್ಕೆ  ಪರಿವರ್ತನೆ ಮಾಡಿ ಹಿಸ್ಸಾ ನಂಬರ್ ನೀಡಿ ಮಾಲೀಕರನ್ನು ಪ್ರತ್ಯೇಕಿಸಿ ಒಂದು ಪಹಣಿಯಲ್ಲಿ ಒಬ್ಬರ ಹೆಸರು ಬರುವ ಹಾಗೆ ಮಾಡುವುದಕ್ಕೆ ಪೋಡಿ ಎಂದು ಕರೆಯಲಾಗುತ್ತದೆ.

ಪೋಡಿ ಏಕೆ ಮಾಡಿಸಬೇಕು? ಇದರಿಂದ ಆಗುವ ಪ್ರಯೋಜನಗಳು:

ಜಮೀನಿನ ಪಹಣಿಯಲ್ಲಿ ಬಹು ಮಾಲೀಕತ್ವವಿದ್ದಲ್ಲಿ ಬ್ಯಾಂಕ್ ಮೂಲಕ ಸಾಲ ಪಡೆಯುವ ಸಮಯದಲ್ಲಿ ಮತ್ತು ಸರಕಾರದ ವಿವಿಧ ಯೋಜನೆಯಡಿ ಸಬ್ಸಿಡಿಯ ಪ್ರಯೋಜನ ಪಡೆಯಲು ಒಪ್ಪಿಗೆ ಪತ್ರ ನೀಡಬೇಕಾಗುತ್ತದೆ. ಅಲ್ಲದೇ ನಿಮ್ಮ ಜಮೀನಿನ ಜಂಟಿ ಮಾಲೀಕರು ಇದಕ್ಕೆ ಒಪ್ಪದೇ ಇದ್ದಲ್ಲಿ  ಸವಲತ್ತು/ಸೌಲಭ್ಯ ಸಿಗುವುದು ಸಾದ್ಯವಿಲ್ಲ ಈ ಕಾರಣದಿಂದ ಪೋಡಿ ಮಾಡಿಸಿಕೊಳ್ಳಬೇಕು.

ಇದನ್ನೂ ಓದಿ:ನಿಮ್ಮದು ರೈತರ ನೋಂದಣಿ ಆಗಿದಯೇ ತಿಳಿಯಬೇಕೇ? ಇಲ್ಲಿದೆ ಮಾಹಿತಿ!

Podi apply where-ಪೋಡಿ ದುರಸ್ತಿ ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ರೈತರು ತಮ್ಮ ಹೋಬಳಿಯ ಕಂದಾಯ ಇಲಾಖೆಯ ನಾಡಕಛೇರಿಯನ್ನು ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ/ ಗ್ರಾಮ ಆಡಳಿತ ಅಧಿಕಾರಿ ಅವರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು.

ಇತ್ತೀಚಿನ ಸುದ್ದಿಗಳು

Related Articles