ಆತ್ಮೀಯ ಗ್ರಾಹಕರೇ, ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯ ರೂ.2000 ಹಣವನ್ನು ಇದೇ ತಿಂಗಳು 25 ರಂದು ಹಣ ಬಿಡುಗಡೆ ಮಾಡಲಾಗಿದ್ದು. ನಿಮ್ಮ ಖಾತೆಗೆ ಹಣ ಜಮೆಯ ವಿವರ ಚೆಕ್ ಮಾಡುವುದು ಹೇಗೆ ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.
ಪ್ರತಿ ತಿಂಗಳು ಮನೆ ಯಜಮಾನಿ ಮಹಿಳೆಯರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಇಲ್ಲಿಯವರೆಗೆ ನಿಮಗೆ ಕಂತುಗಳು ಎಷ್ಟು ಜಮೆ ಆಗಿದೆ ಎಂದು ನಿಮ್ಮ ಮೊಬೈಲ್ ನಲ್ಲಿ ಅದನ್ನು ಹೇಗೆ ತಿಳಿಯಬೇಕು ಎಂದು ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.
ಗೃಹಲಕ್ಷ್ಮೀ ಯೋಜನೆಯ ಎಲ್ಲಾ ಬಗೆಯ ಅರ್ಜಿ ವಿಲೇವಾರಿ ಮತ್ತುಅರ್ಹ ಮತ್ತು ಅನರ್ಹ ಫಲಾನುಭವಿಗಳನ್ನು ಗುರುತಿಸಲು, ಫಲಾನುಭವಿಗಳಿಗೆ ಪ್ರತಿ ತಿಂಗಳು ಹಣ ವರ್ಗಾವಣೆ ಉಸ್ತುವಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ನಿರ್ವಹಿಸಲಾಗುತ್ತಿದೆ. ಆದ್ದರಿಂದ ನಿಮ್ಮ ಹಣ ಬಾರದೆ ಇದ್ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ಇದನ್ನೂ ಓದಿ:ರೈತರೇ ನಿಮ್ಮದು ರೈತರ ನೊಂದಣಿ ಆಗಿದೆಯೇ ಇಲ್ಲವೇ ತಿಳಿದುಕೊಳ್ಳಲು ಇಲ್ಲಿದೆ ಮಾಹಿತಿ!
Gruhalakshmi apply-ಗೃಹಲಕ್ಷ್ಮೀ ಯೋಜನೆಗೆ ಹೊಸ ಅರ್ಜಿ ಸಲ್ಲಿಸಲು ಅವಕಾಶ:
ಈ ಯೋಜನೆಯ ಆರ್ಥಿಕ ನೆರವು ಪಡೆಯಲು ಅರ್ಹರಿರುವನ ಅರ್ಜಿದಾರರು ಪ್ರಸ್ತುತ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ನಿಮ್ಮ ಗ್ರಾಮದ ಅಂಗನವಾಡಿ ಕೇಂದ್ರಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡು ಅಥವಾ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದ ಗ್ರಾಮ ಒನ್/ಸೇವಾ ಸಿಂಧು ಸೈಬರ್ ನಲ್ಲಿ ಅರ್ಜಿ ಸಲ್ಲಿಸಬಹುದು.
Gruhalakshmi amount status-ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ನಿಮಗೆ ಬಂತಾ ಚೆಕ್ ಮಾಡಿ:
Step-1:ಈ ಲಿಂಕ್ ಮೇಲೆ Gruhalakshmi amount status ಕಿಕ್ಲ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ ಅಧಿಕೃತ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ವಿವರ ತಿಳಿಯಲು ಡಿ ಬಿ ಟಿ ಕರ್ನಾಟಕ(DBT Karnataka mobile app)ಮೊಬೈಲ್ ಅಪ್ಲೀಕೇಶನ್ ಅನ್ನು ಡೌನ್ಲೋಡ್ ಮಾಡಬೇಕು.
Step-2:ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡಿ ಬಿ ಟಿ ಕರ್ನಾಟಕ(DBT Karnataka mobile app)ಮೊಬೈಲ್ ಅಪ್ಲೀಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ನಂತರ ನಿಮ್ಮ ಮೊಬೈಲ್ ನಲ್ಲಿ ಈ ಅಪ್ಲಿಕೇಶನ್ ತೆರೆದು ಮೊದಲಿಗೆ ಅರ್ಜಿದಾರರ ಆಧಾರ್ ಕಾರ್ಡ ಸಂಖ್ಯೆಯನ್ನು ಹಾಕಿ ಬಳಕೆದಾರರ ನೊಂದಣಿಯನ್ನು ಮಾಡಿಕೊಳ್ಳಬೇಕು.
ಇದಕ್ಕಾಗಿ ಆಧಾರ್ ಕಾರ್ಡ ನಂಬರ್ ಹಾಕಿ ನಂತರ ಆಧಾರ್ ನಲ್ಲಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ(OTP) ನ್ನು ನಮೂದಿಸಿ ತದನಂತರ ಈ ಅಪ್ಲಿಕೇಶನ್ ಗೆ ನಾಲ್ಕು ಅಂಕಿಯ ಪಾಸ್ವರ್ಡ(Password) ಅನ್ನು ರಚನೆ ಮಾಡಿಕೊಳ್ಳಬೇಕು.
ಇದನ್ನೂ ಓದಿ:ಕಿಸಾನ್ ಯೋಜನೆಯ ಹಣ ಎಷ್ಟು ಕಂತು ಜಮೆ ಆಗಿದೆ ತಿಳಿದುಕೊಳ್ಳಲು ಇಲ್ಲಿದೆ ಮಾಹಿತಿ!
Step-3:ಈ ಅಪ್ಲಿಕೇಶನ್ ಅನ್ನು ತೆರೆಯಲು ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ಹಾಕಿ ಲಾಗಿನ್(Login) ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-4:ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಈ ಅಪ್ಲಿಕೇಶನ್ ನ ಮುಖಪುಟದಲ್ಲಿ ನಾಲ್ಕು ಆಯ್ಕೆಗಳು ತೋರಿಸುತ್ತವೆ ಇದರಲ್ಲಿ ಮೊದಲಿಗೆ ಕಾಣುವ ಪಾವತಿ ಸ್ಥಿತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ(Gruhalakshmi) “ಗೃಹಲಕ್ಷ್ಮಿ” ಎಂದು ತೋರಿಸುತ್ತದೆ ಈ ಬಟನ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ಈ ಯೋಜನೆಯಡಿ ಪ್ರತಿ ತಿಂಗಳು ಯಾವ ಯಾವ ದಿನಾಂಕದಂದು ನಿಮ್ಮ ಖಾತೆಗೆ ನೇರ ನಗದು ವರ್ಗಾವಣೆಯ ಮೂಲಕ ಹಣ ಜಮಾ ಅಗಿದೆ ಎನ್ನುವ ಮಾಹಿತಿ ಜೊತೆಗೆ ಹಣ ಜಮಾ ಅದ ಬ್ಯಾಂಕ್ ಹೆಸರು, ಯು.ಟಿ.ಆರ್(UTR) ನಂಬರ್ ಮತ್ತು ಫಲಾನುಭವಿ ಖಾತೆಯ ಹೆಸರು ತೋರಿಸುತ್ತದೆ.