Ganga Kalyana Scheme 2023 :ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಅರ್ಜಿ ಆಹ್ವಾನ:
ಯಾವ ಯಾವ ನಿಗಮ? ಯೋಜನೆ ವಿವರವೇನು? ಮಾನದಂಡಗಳೇನು? ದಾಖಲೆಗಳೇನು? ಅರ್ಜಿ ಎಲ್ಲಿ ಸಲ್ಲಿಸಬೇಕು? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ.
ಆತ್ಮೀಯ ರೈತ ಬಾಂದವರೇ ಗಂಗಾ ಕಲ್ಯಾಣ ಯೋಜನೆಯಡಿ ಸಣ್ಣ ಹಾಗೂ ಅತೀ ಸಣ್ಣ ರೈತರು ಅರ್ಜಿ ಸಲ್ಲಿಸಿ ಉಚಿತವಾಗಿ ಕೊಳವೆ ಬಾವಿ/ ತೆರೆದ ಬಾವಿಯ ಸೌಲಭ್ಯ ಪಡೆಯಬಹುದಾಗಿದ್ದು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯ ಸರಕಾರದ ಬಜೆಟ್‌ನಲ್ಲಿ ಬಿಡುಗಡೆಯಾದ ಅನುದಾನದ ಆಧಾರದ ಮೇಲೆ ಗಂಗಾ ಕಲ್ಯಾಣ ಯೋಜನೆಗೆ ಹಣ ಬಿಡುಗಡೆ ಆಗುತ್ತದೆ. ಅಂದರೆ ಆಯಾ ನಿಗಮಗಳಲ್ಲಿ ಅದರದ್ದೇ ಆದ ನಿಯಮಗಳು ಜಾರಿಯಲ್ಲಿವೆ.
ಏನಿದು ಗಂಗಾ ಕಲ್ಯಾಣ ಯೋಜನೆಯ ವಿವರ:
ಬೋರ್‌ವೆಲ್ ಕೊರೆಯುವ ಮೂಲಕ ಹಾಗೂ ತೆರೆದ ಬಾವಿ ತೋಡುವ ಮೂಲಕ ಕೃಷಿ ಭೂಮಿಗೆ ನೀರನ್ನು ಪೂರೈಸುವುದೇ ಗಂಗಾ ಕಲಾಣ ಯೋಜನೆಯಾಗಿದೆ.
ಅಲ್ಲದೇ ಈ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ಪಂಪ್-ಮೋಟಾರ್ ಅಳವಡಿಸುವುದಾಗಿದೆ.
ಮಾನದಂಡಗಳು:
ಸಣ್ಣ ಮತ್ತು ಅತೀ ಸಣ್ಣ ರೈತರಾಗಿರಬೇಕು. ಪ್ರವರ್ಗ 1, 2ಎ, 3ಎ, 3ಬಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು.
ಅರ್ಜಿದಾರ ಯಾವುದೇ ಕೇಂದ್ರ-ರಾಜ್ಯ ಸರಕಾರದ ಹುದ್ದೆಯಲ್ಲಿ ಇರಬಾರದು.
ರಾಜ್ಯ ಖಾಯಂ ನಿವಾಸಿ ಆಗಿರಬೇಕು.
ಅರ್ಜಿದಾರರು 18-55 ವರ್ಷಗಳ ನಡುವೆ ಇರಬೇಕು
ಈ ಯೋಜನೆ ಲಾಭ ಪಡೆಯಲು ಕನಿಷ್ಠ 1.20 ಎಕ್ರೆ ,ಗರಿಷ್ಠ 5 ಎಕ್ರೆ ಜಮೀನು ಹೊಂದಿರಬೇಕು.
ಹಾಗೂ
ಅಂತರ್ಜಲ ಕಡಿಮೆಯಾಗಿರುವ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಅನ್ವಯವಾಗುತ್ತದೆ. ಆರ್ಥಿಕ ಸಹಾಯವನ್ನು 4 ಲಕ್ಷ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. 3.5 ಲಕ್ಷ ಸಹಾಯಧನ ಇರುತ್ತದೆ. ಉಳಿದ ಐವತ್ತು ಸಾವಿರ ರೂಪಾಯಿಯನ್ನು ಶೇ.4 ರ ಬಡ್ಡಿಯಲ್ಲಿ ನೀಡಲಾಗುತ್ತದೆ.
ಇತರ ಜಿಲ್ಲೆಗಳಿಗೆ 3 ಲಕ್ಷ ರೂ. ಸಹಾಯಧನ ನಿಗದಿಪಡಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಯ ರೈತರಿಗೆ ಕನಿಷ್ಠ 1 ಎಕ್ರೆ ಇದ್ದರೆ ಸಾಕು ಯೋಜನೆ ಲಾಭ ಪಡೆಯಬಹುದಾಗಿರುತ್ತದೆ.
ಇದನ್ನೂ ಓದಿ: Tractor Juction : ಕೃಷಿಗೆ ಬೇಕಾದ ಸೆಕೆಂಡ್ ಹ್ಯಾಂಡ್ ಕೃಷಿ ಯಂತ್ರಗಳು :
ಇದನ್ನೂ ಓದಿ: ಶೇಕಡಾ 90 ರ ಸಹಾಯಧನದಲ್ಲಿ ನೀರಾವರಿ ಘಟಕಗಳಿಗೆ ಅರ್ಜಿ:
ಯಾವ ಯಾವ ನಿಗಮದಿಂದ ಅರ್ಜಿ?
- ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
- ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
- ಪರಿಶಿಷ್ಟ ಜಾತಿ- ವರ್ಗಗಳ ಅಭಿವೃದ್ಧಿ ನಿಗಮ
- ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
- ವಿಶ್ವಕರ್ಮ ಅಭಿವೃದ್ಧಿ ನಿಗಮ
- ಉಪ್ಪಾರ ಅಭಿವೃದ್ಧಿ ನಿಗಮ
- ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
- ನಿಜಗುಣ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
- ಬೋವಿ ಸಮುದಾಯದ ಅಭಿವೃದ್ಧಿ ನಿಗಮ
ಇದನ್ನೂ ಓದಿ: ಆಧಾರ್ ಕಾರ್ಡ ಯಾವ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದೆ ಎಂದು ತಿಳಿಯಲು ಜಾಲತಾಣದ ಲಿಂಕ್
ವೈಯಕ್ತಿಕ ಬೋರ್‌ವೆಲ್‌ಗೆ ಠೇವಣಿ
- ನೋಂದಣಿ ಶುಲ್ಕ – 50 ರೂ. ಪ್ಲಸ್ ಶೇ.18 ಜಿಎಸ್‌ಟಿ
- ಭದ್ರತಾ ಠೇವಣಿ ಶುಲ್ಕ- 1290 ರೂ., 1 ಎಚ್‌ಪಿಗೆ 3. ಮೀಟರ್ ಸುರಕ್ಷ ಠೇವಣಿ 3 ಸಾವಿರ ರೂ.,
- ಮೀಟರ್ ಬಾಕ್ಸ್ 2100 ರೂ.
- ಮೇಲ್ವಿಚಾರಣ ಶುಲ್ಕ 150 ಪ್ಲಸ್ ಶೇ.18 ಜಿಎಸ್‌ಟಿ
ಆಯ್ಕೆ ಪ್ರಕ್ರಿಯೆ ಹೇಗೆ?
ಜಿಲ್ಲಾ ವ್ಯವಸ್ಥಾಪಕರು ಪ್ರತೀ ಜಿಲ್ಲೆಯಲ್ಲಿ ಜಾಹೀರಾತಿನ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸುತ್ತಾರೆ.
ಆನ್‌ಲೈನ್‌ನಲ್ಲಿ ದಾಖಲಾತಿಯೊಂದಿಗೆ ಸಲ್ಲಿಸಿದ ಅರ್ಜಿಗಳನ್ನು ಜಿಲ್ಲಾ ವ್ಯವಸ್ಥಾಪಕರು ಗಮನಿಸಿ ಶಾಸಕರ ನೇತೃತ್ವದ ತಾಲೂಕು ಸಮಿತಿಗೆ ಅರ್ಜಿ ವರ್ಗಾಯಿಸುತ್ತಾರೆ. ಅನಂತರ ಸಮಿತಿಯು ಸಂಬಂಧಿಸಿದ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸುತ್ತದೆ. ಈ ಸಂಬಂಧ ಗಂಗಾ ಕಲ್ಯಾಣ ಯೋಜನೆಯ ವಿವರಗಳನ್ನುhttps://kmvstdcl.karnataka.gov.in/info-2 /Ganga+Kalyana+Scheme/en eg ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸುವುದು ಎಲ್ಲಿ??
ಈ ಯೋಜನೆಯಡಿ ಅರ್ಜಿಯನ್ನು ಹತ್ತಿರದ ಬೆಂಗಳೂರು ಒನ್/ಕರ್ನಾಟಕ ಒನ್/ನಾಗರಿಕ ಸೇವಾ ಕೇಂದ್ರ/ ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಸಬಹುದಾಗಿರುತ್ತದೆ.
ಕೊನೆಯ ದಿನಾಂಕ :
ಈ ಯೋಜನೆ ಮೇಲೆ ಕಾಣಿಸಿರುವ ಇಲ್ಲಾ ಸಮುದಾಯದವರು ಇದೇ ತಿಂಗಳ ಸೆ.18 ರ ಒಳಗೆ ಅರ್ಜಿ ಸಲ್ಲಿಸಿ.
ಅರ್ಹ ರೈತರು https://kmvstdcl.karnataka.gov.ininfo-2 /Ganga+ Kalyana+Scheme/en ನೀಡಬಹುದಾಗಿದೆ.
ಬೇಕಾದ ದಾಖಲೆಗಳು:
ಈ ಯೋಜನೆಯಡಿ ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಫಲಾನುಭವಿಗಳ ಭಾವಚಿತ್ರ,
ಬ್ಯಾಂಕ್ ಪಾಸ್ ಬುಕ್,
ಹೊಲದ ದಾಖಲೆ, ಜಾತಿ-ಆದಾಯ ಪ್ರಮಾಣ ಪತ್ರ,
ಆಧಾರ್ ಕಾರ್ಡ್,
ಪಾನ್ ಕಾರ್ಡ್,
ಸ್ವಯಂ ಘೋಷಿತ ಪತ್ರ ಅವಶ್ಯ.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
ರೈತರ ನೋಂದಣಿ ಸಂಖ್ಯೆ.
ಅಲ್ಲದೇ ಹೆಚ್ಚಿನ ಮಾಹಿತಿಗಾಗಿ ಅರ್ಹರು +91 08022864720ಕ್ಕೆ ಸಂಪರ್ಕಿಸಬಹುದು.