Friday, September 20, 2024

ವಿಶ್ವಕರ್ಮ ಯೋಜನೆಯಡಿ ಕೇಂದ್ರ ಸರ್ಕಾರದಿಂದ 3 ಲಕ್ಷ ಸಾಲ ಸೌಲಭ್ಯ :ತರಬೇತಿಗೆ 500 ರೂ ಸ್ಟಪಂಡ್, ಜೊತೆಗೆ 15000/ಮೌಲ್ಯದ ಉಪಕರಣಕ್ಕೆ ಸಹಾಯಧನ:

ವಿಶ್ವಕರ್ಮ ಯೋಜನೆಯಡಿ ಕೇಂದ್ರ ಸರ್ಕಾರದಿಂದ 3 ಲಕ್ಷ ಸಾಲ ಸೌಲಭ್ಯ :
ತರಬೇತಿಗೆ 500 ರೂ ಸ್ಟಪಂಡ್, ಜೊತೆಗೆ 15000/ಮೌಲ್ಯದ ಉಪಕರಣಕ್ಕೆ ಸಹಾಯಧನ:
ಯಾವ ಯೋಜನೆ?ಯಾರ್‍ಯಾರಿಗೆ ಇದರ ಲಾಭ?ಯಾವ ಉದ್ಯೋಗಕ್ಕೆ ಸಾಲ? ಸಂಪೂರ್ಣ ಮಾಹಿತಿ ಈ ಅಂಕಣದಲ್ಲಿ

ಆತ್ಮೀಯ ಸ್ನೇಹಿತರೇ ಯಾವುದೇ ಒಂದು ದೇಶದ ಆರ್ಥಿಕ ಅಭಿವೃದ್ದಿ ಹೊಂದಬೇಕಾದರೇ ಆ ದೇಶದ ಕೃಷಿ ಮತ್ತು ಕೈಗಾರಿಕೆಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಹಲವಾರು ಕೈಗಾರಿಕೆಗಳು ಕೃಷಿಯನ್ನಾಧರಿಸಿವೆ. ಉದಾಹರಣೆಗೆ: ಹತ್ತಿಬಟ್ಟೆ , ಕಾಗದ, ಸಕ್ಕರೆ, ಸೆಣಬು, ತಂಬಾಕು ಮುಂತಾದವು. ಈ ಕೈಗಾರಿಕೆಗಳಿಗೆ ಅಗತ್ಯವಾದಂತಹ ಕಚ್ಚಾ ಪದಾರ್ಥಗಳು ಕೃಷಿಯಿಂದ ಪೂರೈಕೆಯಾಗುತ್ತವೆ.

ದೊಡ್ಡ ಪ್ರಮಾಣದ ಕೈಗಾರಿಕೆಗಳಿಂದ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಸಿಗುವುದು ಕಷ್ಟ.ಹಾಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಗೃಹ ಮತ್ತು ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಆದ್ಯತೆ ಕೊಡಬೇಕಾಗುತ್ತದೆ, ಇಂತಹ ಕೈಗಾರಿಕೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ಮೊದಲಿನಿಂದಲೂ ಕಂಡುಬರುತ್ತಿದ್ದವು, ಇವುಗಳ ಅಭಿವೃದ್ದಿಗೆ ಭಾರತವು ಸ್ವತಂತ್ರವಾದ ಮೇಲೆ ಹೆಚ್ಚು ಪ್ರೋತ್ಸಹ ಕೊಡಲಾಗುತ್ತಿದೆ, ರೈತರಿಗೆ ವರ್ಷದ ಎಲ್ಲ ತಿಂಗಳಲ್ಲಿ ಕೆಲಸವಿಲ್ಲದ್ದರಿಂದ ಅವರ ಸಂಪಾದನೆಗೆ ಪೂರಕವಾಗಿ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕೆಂದು ಮಹಾತ್ಮಾ ಗಾಂಧಿಯವರು ಒತ್ತಿ ಹೇಳಿದ್ದರು.

ಈ ಒಂದು ಉದ್ಯಮಕ್ಕೆ ಗೃಹ ಕೈಗಾರಿಗಕೆ ಮತ್ತು ಗುಡಿ ಕೈಗಾರಿಕೆಗಳಂತಲೂ ಕರೆಯುತ್ತಾರೆ. ಇವುಗಳನ್ನು ಕುಶಲ ಕರ್ಮಿಗಳು ಅವರ ಮನೆಗಳಲ್ಲಿ ನಡೆಸುತ್ತಾರೆ ಇವರಿಗೆ ಅವರ ಕುಟುಂಬದ ಸದಸ್ಯರ ಮತ್ತು ಕಲಿಯುವವರು ಸಹಾಯ ಮಾಡುತ್ತಾರೆ ಇವು ಪ್ರಧಾನವಾಗಿ ಹಳ್ಳಿಗಳಲ್ಲಿ ಹೆಚ್ಚು ಕೇಂದ್ರೀಕೃತವಾಗಿರುತ್ತವೆ, ಕೇತ್ತನೆ ಕೆಲಸ, ಬುಟ್ಟಿ ಹೆಣೆಯುವುದು, ಬೊಂಬೆ ತಯಾರು ಮಾಡುವುದು ಕೈ ಮಗ್ಗದಲ್ಲಿ ಬಟ್ಟೆ ಹಾಗೂ ಕಂಬಳಿ ನೇಯುವುದು, ಚಾಪೆ ತಯಾರಿಕೆ ಹಗ್ಗ ತಯಾರಿಸುವುದು, ಬಡಗಿತನ, ಕಮ್ಮಾರಿಕೆ, ಕುಂಚರಿಕೆ ಮುಂತಾದವು ಉದಾಹರಣೆಗಳಾಗಿದ್ದು ಇವುಗಳಲ್ಲಿ ಕೆಲವು ವಂಶಪಾರಂಪರ್ಯದಿಂದ ಬಂದುಗಳಾಗಿವೆ.

ಈ ಕೈಗಾರಿಕೆಗಳು ಹೆಚ್ಚಾಗಿ ಸ್ಥಳೀಯ ಮಾರುಕಟ್ಟೆಗಾಗಿ ವಸ್ತುಗಳನ್ನು ಉತ್ಪಾದಿಸುತ್ತವೆ. ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ವಿದ್ಯುಚ್ಚಕ್ತಿಯನ್ನು ಬಳಸುತ್ತಾರೆ, ಉದಾಹರಣೆಗೆ, ಎತ್ತಿನಗಾಣದ ಬದಲು ವಿದ್ಯುತ್ ಗಾಣಗಳು ಬಂದಿವೆ ಕೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಾರೆ ಒಂದು ನಿರ್ದಿಷ್ಟ ಕಟ್ಟಡದಲ್ಲಿ ಈ ಕೈಗಾರಿಕೆಗಳು ಸ್ಥಾಪಿಸಲ್ಪಟ್ಟಿರುತ್ತವೆ ಸರಕುಗಳ ಉತ್ಪಾದನೆಗೆ ಆಧುನಿಕ ಕೌಶಲ್ಯಗಳನ್ನು ಬಳಸಿಕೊಳ್ಳತ್ತಾರೆ. ರಾಸಾಯನಿಕ ವಸ್ತುಗಳು ಇಂಜಿನೀಯರಿಂಗ್ ವಸ್ತುಗಳು ಪಾದರಕ್ಷೆಗಳು ಸೈಕಲ್ಲುಗಳು ರೇಡಿಯೋ.

ವಿದ್ಯುತ್ ಪಂಕಗಳು ಹೊಲಿಗೆ ಯಂತ್ರಗಳು, ಸಿದ್ದಪಡಿಸಿದ ಉಡುಪುಗಳು ಸಾಬೂನು ಮುಂತಾದವು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಉದಾಹರಣೆಗಳಾಗಿವೆ. ಈ ಕೈಗಾರಿಕೆಗಳ ಅನೇಕ ಉತ್ಪಾನ್ನಗಳು ರಫ್ತಾಗುತ್ತವೆ. ಇಂತಹ ತಯಾರಿಕೆಗಾರರಿಗೆ ಕೇಂದ್ರ ಸರ್ಕಾರ ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ರೂಪಿಸಿದೆ. ಈ ಸಾಲ ಸೌಲಭ್ಯದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಕೇಂದ್ರ ಸರ್ಕಾರ “ವಿಶ್ವಕರ್ಮ” ಯೋಜನೆಯಡಿ ಕುಶಲಕರ್ಮಿಗಳಿಗೆ ತಲಾ 3 ಲಕ್ಷ ಸಾಲ ನೀಡಲು ತೀರ್ಮಾನಿಸಿದೆ.ಇದಕ್ಕಾಗಿ ಕೇಂದ್ರ ಸರ್ಕಾರ ಒಟ್ಟಾರೆಯಾಗಿ 13000 ಕೋಟಿ ವೆಚ್ಚ ಮಾಡಲಿದೆ. ಈ ಯೋಜನೆಯಿಂದ ದೇಶದ ಸುಮಾರು 30 ಲಕ್ಷ ಕುಶಲ ಕರ್ಮಿಗಳಿಗೆ ಲಾಭವಾಗಲಿದೆ ಅಂತ ಮಾಹಿತಿ ನೀಡಿರುತ್ತದೆ.

ಕೃಷಿಗೆ ಸಂಬಂಧಿಸಿದ ಇತರೆ ಮಾಹಿತಿಗಳು:

ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಲು ಸಹಾಯಧನ
ಇದನ್ನೂ ಓದಿ: ಹೊಲ/ ಗದ್ದೆ / ಜಾಗ ಖರಿದೀಸುವ ಮುನ್ನ ಅವಶ್ಯಕವಾಗಿ ಇದರ ಗಮನವಿರಲಿ.
ಇದನ್ನೂ ಓದಿ: ಕಲ್ಪವೃಕ್ಷ (ತೆಂಗಿನಮರಕ್ಕೂ) ವಿಮೆ! ಎಲ್ಲಿ ಅರ್ಜಿಸಲ್ಲಿಸಬೇಕು ?
ಇದನ್ನೂ ಓದಿ: Chaff cutter subsidy: ಮೇವು ಕತ್ತರಿಸುವ ಯಂತ್ರ ವಿತರಣೆಗೆ ಸಹಾಯಧನ:

ಸುಮಾರು 30 ಲಕ್ಷ ಕುಶಲ ಕರ್ಮಿಗಳಿಗೆ ಶೇ.5ರಷ್ಟು ಅಗ್ಗದ ಬಡ್ಡಿ ದರದಲ್ಲಿ 3 ಲಕ್ಷರು. ಸಾಲ ಸೇರಿದಂತೆ ವಿವಿಧ ರೀತಿಯಲ್ಲಿ ನೆರವು ನೀಡುವ 13 ಸಾವಿರ ಕೋಟಿ ರು. ಮೊತ್ತದ ವಿಶ್ವಕರ್ಮ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿರುತ್ತದೆ. ಈ ಬಗ್ಗೆ ದೇಶದ ಪ್ರಧಾನಿ ನರೇಂದ್ರ ಮೋದಿಜಿ ಮಾಹಿತಿ ನೀಡಿರುತ್ತಾರೆ.
ಈ ಯೋಜನೆ ಅನ್ವಯ ಕುಶಲಕರ್ಮಿಗಳಿಗೆ ಶೇ.5ರಷ್ಟು ಬಡ್ಡಿದರದಲ್ಲಿ 1 ಲಕ್ಷ ರು.ವರೆಗೆ ಸಾಲ ನೀಡಲಾಗುವುದು. ಈ ಪೈಕಿ ಮೊದಲ ಹಂತದಲ್ಲಿ 1 ಲಕ್ಷರು, ಮತ್ತು 2ನೇ ಹಂತದಲ್ಲಿ 2 ಲಕ್ಷ ರು. ಸಾಲ ವಿತರಿಸಲಾಗುವುದು. ಮುಂದಿನ 5 ವರ್ಷಗಳ ಅವಧಿಯಲ್ಲಿ ಯೋಜನೆಗಾಗಿ ಕೇಂದ್ರ ಸರ್ಕಾರ 13 ಸಾವಿರ ಕೋಟಿ ರು. ವೆಚ್ಚ ಮಾಡಲಿದೆ.

ಈ ವಿಶ್ವಕರ್ಮ ಯೋಜನೆ ಏಕೆ?:

ಕುಶಲಕರ್ಮಿಗಳ ಗುರು ಶಿಷ್ಯ ಪರಂಪರೆ ಅಥವಾ ಕುಟುಂಬ ಆಧರಿತ ಸಾಂಪ್ರದಾಯಿಕ ಕೌಶಲ್ಯವನ್ನು ಉಳಿಸಿ ಬೆಳೆಸು ವ ಸಲುವಾಗಿ ಸರ್ಕಾರ ಈ ಯೋಜನೆ ಜಾರಿಗೆ ತರುತ್ತಿದೆ. ಜೊತೆಗೆ ಈ ಯೋಜನೆ ಮೂಲಕ ಅವರ ಕೌಶಲ್ಯ ಅಭಿವೃದ್ಧಿ, ತನ್ಮೂಲಕ ಆದಾಯ ಹೆಚ್ಚಳದ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಈ ಯೋಜನೆಯ ಲಾಭ ಯಾರಾರಿಗೆ?:

ಮೊದಲ ಹಂತದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ 18 ಸಾಂಪ್ರದಾಯಿಕ ಉದ್ಯಮಗಳನ್ನು ಯೋಜನೆ ವ್ಯಾಪ್ತಿಗೆ ತರಲಾಗಿದೆ. ಅವುಗಳೆಂದರೆ ಬಡಗಿ, ಬೋಟ್ ನಿರ್ಮಾಣ ಮಾಡುವವರು, ಕಮಾರ, ಸುತ್ತಿಗೆ ಮತ್ತು ಟೂಲ್ ಕಿಟ್ ನಿರ್ಮಾಣ ಮಾಡುವವರು, ಶಸ್ತ್ರಾಸ್ತ್ರ ತಯಾರಿಸುವವರು. ಬೀಗ ತಯಾರಿಸುವವರು, ಅಕ್ಕಸಾಲಿಗ, ಕುಂಬಾರರು, ಶಿಲ್ಪ ಕೆತ್ತನೆ ಮಾಡುವವರು, ಚಮ್ಮಾರರು, ಮತ್ತು, ಮ್ಯಾಟ್/ಹಿಡಿ/ ಬಾಸ್ಕೆಟ್ ತಯಾರಿಸುವವರು.

ಒಟ್ಟಾರೆಯಾಗಿ ಈ ಕೆಳಗೆ ಕಾಣಿಸಿದ 18 ಸಾಂಪ್ರದಾಯಿಕ ಉದ್ಯೋಗಕ್ಕೆ ಸಾಲ ನೀಡಲು ಕೇಂದ್ರ ಹೇಳಿದೆ.

18 ರೀತಿ ಸಾಂಪ್ರದಾಯಿಕ ಗೃಹೋ ದ್ಯಮಗಳಿಗೆ ಈ ಯೋಜನೆ ಅನ್ವಯ

ಬಡಗಿ, ದೋಣಿ ನಿರಾಣ ಮಾಡುವ ವರು, ಕಮ್ಮಾರ, ಅಕ್ಕಸಾಲಿಗರಿಗೆ

ಈ ಶಸ್ತ್ರಾಸ್ತ್ರ ತಯಾರಕ, ಶಿಲ್ಪಿ, ಚಮ್ಮಾರ, ಟೂಲ್‌ಕಿಟ್ ನಿರ್ಮಾತೃಗಳಿಗೆ ಸಾಲ
ಮೇಸ್ತ್ರಿ, ದೋಬಿ, ದರ್ಜಿ, ಹಾರ, ಗೊಂಬೆ ತಯಾರಕರಿಗೂ ಅನ್ವಯ ಈ ಯೋಜನೆ ಅನ್ವಯವಾಗಲಿದೆ.

ಕುಶಲಕರ್ಮಿಲಗಳನ್ನು ಗುರುತಿಸುವುದು:


ಈ ವಿಶ್ವ ಕರ್ಮ ಯೋಜನೆಯಡಿ ಪಿಎಂ ವಿಶ್ವಕರ್ಮ ಸರ್ಟಿಫಿಕೇಟ್ ಮತ್ತು ಗುರುತು ಕಾರ್ಡ್‌ ID card ಮೂಲಕ ಕುಶಲಕರ್ಮಿಗಳನ್ನು ಗುರುತಿಸಲಾಗುವುದು.
ಮೊದಲ ಹಂತದಲ್ಲಿ 1 ಲಕ್ಷ ಕುಶಲಕರ್ಮಿಗಳನ್ನು ಈ ಯೋಜನೆಯಡಿ ಗುರುತಿಸಲಾಗುವುದು ಎಂದು ಕೇಂದ್ರ ಮಾಹಿತಿ ನೀಡಿರುತ್ತದೆ.
ಎರಡನೇ ಹಂತದಲ್ಲಿ ಈ ಯೋಜನೆಯಡಿ ಸುಮಾರು 2 ಲಕ್ಷದವರೆಗೆ ರಿಯಾಯಿತಿ ದರದ ಸಾಲ ಸೌಲಭ್ಯ ದೊರೆಯುತ್ತದೆ.

ಕುಶಲಕರ್ಮಿಲಗಳಿಗೆ ತರಬೇತಿಗೆ ಧನಸಹಾಯ:

ಈ ಯೋಜನೆಯಡಿ ಪ್ರಾರಂಭಿಕ ಹಂತ ಮತ್ತು ಉನ್ನತಮಟ್ಟದ ಕೌಶಲ್ಯ ತರಬೇತಿಯ ಯೋಜನೆಗಳನ್ನು ರೂಪಿಸಲಾಗುವುದು. ಕೌಶಲ್ಯ ತರಬೇತಿ ಪಡೆಯುವವರಿಗೆ 500 ರೂಪಾಯಿ ಸ್ಟಪಂಡ್ ನೀಡಲಾಗುತ್ತದೆ. ಜೊತೆಗೆ 15,000 ರೂ. ಮೌಲ್ಯದ ಆಧುನಿಕ ಉಪಕರಣಗಳನ್ನೂ ಅವರಿಗೆ ಕೊಡಲಾಗುವುದು.
ಮೊದಲ ವರ್ಷ 5 ಲಕ್ಷ ಕುಟುಂಬಗಳಿಗೆ ಈ ಸೌಲಭ್ಯ ನೀಡಲಾಗುತ್ತದೆ. 5 ವರ್ಷಗಳಲ್ಲಿ ಒಟ್ಟು 30 ಲಕ್ಷ ಕುಟುಂಬಗಳಿಗೆ ನೆರವು ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ.

ಕುಶಲಕರ್ಮಿಗಳು, ಉತ್ಪಾದಿಸುವ ವಸ್ತುಗಳ ಗುಣಮಟ್ಟ ಹೆಚ್ಚಿಸುವುದು ಹಾಗೂ ಆವು ಹೆಚ್ಚು ಜನರಿಗೆ ತಲುಪುವಂತೆ ಮಾಡುವುದೂ ಕೂಡ ಈ ಯೋಜನೆಯಲ್ಲಿ ಸೇರಿದೆ ಒಟ್ಟು 18 ಉದ್ಯೋಗಗಳನ್ನು ಈ ಯೋಜನೆಯಲ್ಲಿ ಗುರುತಿಸಲಾಗಿದೆ ಎಂದು ಕೇಂದ್ರ ಮಾಹಿತಿ ತಿಳಿಸಿರುತ್ತದೆ.

ಇತ್ತೀಚಿನ ಸುದ್ದಿಗಳು

Related Articles