Tuesday, February 11, 2025

Fertilizer checking-ರಸಗೊಬ್ಬರ ಕಲಬೆರೆಕೆ ತಿಳಿದುಕೊಳ್ಳುವ ವಿಧಾನ!

ಆತ್ಮೀಯ ರೈತರಿಗೆ ನಮಸ್ಕಾರ ತಾವೆಲ್ಲರೂ ಬಳಕೆ ಮಾಡುವಂತಹ ರಸಗೊಬ್ಬರಗಳು ಎಷ್ಟು ಮಟ್ಟಿಗೆ ಶುದ್ಧವಾಗಿದೆ ಎಂದು ಹೇಗೆ ತಿಳಿದುಕೊಳ್ಳಬೇಕು ಮತ್ತು ಅದನ್ನು ಯಾವ ರೀತಿ ಚೆಕ್ ಮಾಡಬೇಕು ಎಂದು ನಿಮಗೆ ನಾವು ಈ ದಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಅದೇ ರೀತಿ ಮಾರುಕಟ್ಟೆಯಲ್ಲಿ ಸಿಗುವಂತಹ ರಸಗೊಬ್ಬರಗಳು ಕಲಬೆರೆಕೆ ಆಗಿದೆಯೋ ಇಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳಬೇಕು ಎಂದು ತಿಳಿಸಲಾಗುತ್ತದೆ. ಆಧುನಿಕ ಕೃಷಿಯಲ್ಲಿ ರೈತರು ಅಧಿಕ ಇಳುವರಿ ಪಡೆಯಲು ಹೆಚ್ಚಾಗಿ ರಾಸಾಯನಿಕ ರಸಗೊಬ್ಬರಗಳ ಮೇಲೆ ಅವಲಂಬಿತರಾಗಿದ್ದಾರೆ.

ಆದರೆ ಕೆಲವು ರಸಗೊಬ್ಬರಗಳು ಕಲಬೆರೆಕೆಯಾಗಿರುತ್ತವೆ. ಈ ಅಂಶವನ್ನು ಅರಿಯದ ರೈತರು ಮೋಸ ಹೋಗುತ್ತಾರೆ. ರೈತರು ಮನೆಯಲ್ಲಿ ತಾವೇ ಸ್ವತಃ ರಸಗೊಬ್ಬರಗಳ ಕಲಬೆರೆಕೆ ಬಗ್ಗೆ ಪರೀಕ್ಷಿಸಲು ತಿಳಿದರೆ ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂದು ತಿಳಿದುಕೊಳ್ಳಬೇಕೆ? ಇಲ್ಲಿದೆ ಮಾಹಿತಿ.

ರಸಗೊಬ್ಬರಗಳು ಕಲಬೆರೆಕೆ ಆಗಿರುವಿಕೆಯನ್ನು ಕಂಡು ಹಿಡಿಯುವ ವಿಧಾನ:

1)ಭೌತಿಕ ಪರೀಕ್ಷೆ:

ಹರಳು ರೂಪದ ರಸಗೊಬ್ಬರಗಳು ಒಂದೇ ಬಣ್ಣ, ಆಕಾರ, ಗಾತ್ರದಿಂದ ಕೂಡಿದ್ದು ಕಣ್ಣಿಗೆ ಕಾಣುವಂತಹ ಇತರೆ ಪದಾರ್ಥಗಳು ರಸಗೊಬ್ಬರದಲ್ಲಿ ಇರಬಾರದು ಹೆಚ್ಚು ಪುಡಿಯಾಗಿರಬಾರದು ಹೆಚ್ಚಿನ ತೇವಾಂಶವನ್ನು ಹೊಂದಿರಬಾರದು.

2)ನೀರಿನಲ್ಲಿ ಕರಗಿಸುವ ಪರೀಕ್ಷೆ:

ಕೆಲವು ರಸಗೊಬ್ಬರಗಳು ನೀರಿನಲ್ಲಿ ಸಂಪೂರ್ಣವಾಗಿ ಕರಗುತ್ತವೆ. ಅಂತಹ ರಸಗೊಬ್ಬರಗಳನ್ನು ನೀರಿನಲ್ಲಿ ಕರಗಿಸಿದಾಗ ಕರಗದೆ ಇರುವ ಪದಾರ್ಥ ಉಳಿದರೆ ಅದು ಕಲಬೆರೆಕೆಯಾಗಿರುತ್ತದೆ.  ಉದಾಹರಣೆ: ಯೂರಿಯಾ, ಅಮೋನಿಯಂ ಸಲ್ಪೇಟ್, ಅಮೋನಿಯಂ ಕ್ಲೋರೈಡ್, ಮ್ಯುರೇಟ್ ಆಫ್ ಪೋಟ್ಯಾಷ್, ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್, ಸತುವಿನ ಸಲ್ಪೇಟ್, ಮೆಗ್ನೀಷಿಯಂ ಸಲ್ಪೇಟ್ ಮತ್ತು ಶೇ.100 ರಷ್ಟು ನೀರಿನಲ್ಲಿ ಕರಗುವ ರಸಗೊಬ್ಬರಗಳು.

ನೀರಿನಲ್ಲಿ ಕರಗಿಸಿದಾಗ ಆಗುವ ಅನುಭವ:

1)ಕೆಲವು ರಸಗೊಬ್ಬರಗಳು ನೀರಿನಲ್ಲಿ ಕರಗಿಸಿದಾಗ ತಣ್ಣನೆ ಅನುಭವ ನೀಡುತ್ತವೆ.

2)ಹಾಗೆ ನೀಡದಿದ್ದಲ್ಲಿ ಅಂತಹ ರಸಗೊಬ್ಬರಗಳು ಕಲಬೆರೆಕೆಯಾಗಿರುವ ಸಾಧ್ಯತೆಗಳಿರುತ್ತದೆ.

ಇದನ್ನೂ ಓದಿ:ಕೃಷಿ ಇಲಾಖೆಯಲ್ಲಿ ಶೇ.80% ಸಹಾಯಧನದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ!

3)ಬಿಸಿ ಮಾಡುವ ಪರೀಕ್ಷೆ:

ಯೂರಿಯಾ ರಸಗೊಬ್ಬರವನ್ನು ಬಿಸಿ ಮಾಡಿದಾಗ ಸಂಪೂರ್ಣವಾಗಿ ಕರಗಿ ನೀರಾಗುತ್ತದೆ. ಕರಗದೇ ಇರುವ ವಸ್ತು ಉಳಿದರೆ ರಸಗೊಬ್ಬರ ಕಲಬೆರೆಕೆಯಾಗಿದೆ ಎಂದು ತಿಳಿಯಬಹುದು.

ಡಿ.ಎ.ಪಿ ರಸಗೊಬ್ಬವನ್ನ ರೈತರಲ್ಲಿ ಲಭ್ಯವಿರುವ ಒಂದು ತಗಡಿನ ಮೇಲೆ ಬಿಸಿ ಮಾಡಿದಾಗ ಡಿ.ಎ.ಪಿ. ಹರಳುಗಳು ಸುಣ್ಣದಂತೆ ಅರಳುತ್ತದೆ ಮತ್ತು ತಣ್ಣಗಾದ ಮೇಲೆ ತಳಕ್ಕೆ ಅಂಟಿಕೊಳ್ಳುತ್ತವೆ. ಹರಳುಗಳು ಅರಳದೇ ತಳಕ್ಕೆ ಅಂಟಿಕೊಳ್ಳದಿದ್ದರೆ ರಸಗೊಬ್ಬರವು ಕಲಬೆರೆಕೆ/ನಕಲಿ ಆಗಿರಬಹುದೆಂದು ತಿಳಿಯಬಹುದು.

ಸೂಚನೆ: ರಸಗೊಬ್ಬರಗಳು ಕಲಬೆರೆಕೆ ಎಂದು ಕಂಡು ಬಂದರೆ ಕೂಡಲೇ ಹತ್ತಿರದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ. ಹೆಚ್ಚಿನ ಜನ ರೈತರಿಗೆ ಆಗುವ ಮೋಸವನ್ನು ತಡೆಯಬಹುದು.

ಇತ್ತೀಚಿನ ಸುದ್ದಿಗಳು

Related Articles