ನಮಸ್ಕಾರ ರೈತರೇ, ಮೊನ್ನೆ ತಾನೇ ಕೇಂದ್ರ ಸರಕಾರದ ಕೇಂದ್ರ ಬಜೆಟ್ ಘೋಷಣೆಯಾಗಿದ್ದು ಅದರಲ್ಲಿ ರೈತರಿಗೆ ಖುಷಿ ಸುದ್ಧಿಯೊಂದಿದ್ದು ಅದು ಏನೆಂದರೆ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ(KCC card) ರೈತರಿಗೆ ಕಡಿಮೆ ದರದಲ್ಲಿ ಕೃಷಿ ಲೋನ್ ಸಿಗುತ್ತದೆ.
ಕೇಂದ್ರ ಸರಕಾರದ ಕಿಸಾನ್ ಕ್ರೆಡಿಟ್ ಕಾರ್ಡ್(KCC card) ಯೋಜನೆಯಡಿ ಅರ್ಹ ರೈತರಿಗೆ ಪಶುಸಂಗೋಪನೆ ಚಟುವಟಿಕೆಗಳಿಗೆ ಅಂದರೆ ಹೈನುಗಾರಿಕೆ, ಕುರಿ-ಮೇಕೆ, ಕೋಳಿ, ಹಂದಿ, ಮೊಲ ಸಾಕಾಣಿಕೆಗೆ ಒದಗಿಸುವ ಆರ್ಥಿಕ ನೆರವಿನ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ.
ಕಳೆದ ಫೆಬ್ರುವರಿ 2 ರಂದು ಮಂಡನೆಯಾದ 2025-26ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕೆಸಿಸಿ ಸಾಲ ಮಿತಿ ಹೆಚ್ಚಳ ಮಾಡಲು ಘೋಷಿಸಲಾಗಿದೆ. ಇನ್ಮುಂದೆ ರೈತರು ಪಶುಪಾಲನೆ ಚಟುವಟಿಕೆಗಳಿಗೆ ಅತೀ ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷ ರೂ ವರೆಗೂ ಸಾಲ ಪಡೆಯಬಹುದಾಗಿದೆ.
ಇದನ್ನೂ ಓದಿ:ಸರ್ವೇ ನಂಬರ್ ಹಾಕಿ ನಿಮ್ಮ ಜಮೀನಿನ ಮೇಲೆ ಎಷ್ಟು ಕೃಷಿ ಸಾಲ ಇದೆ ಎಂದು ತಿಳಿದುಕೊಳ್ಳಬಹುದು!
3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಕೆಸಿಸಿ ಲೋನ್
ದೇಶಾದ್ಯಂತ ಸುಮಾರು 77 ಕೋಟಿ ರೈತರಿಗೆ (ಕೃಷಿ, ಮೀನುಗಾರರು, ಹೈನುಗಾರರು ಸೇರಿದಂತೆ) ಅಲ್ಪಾವಧಿ ಸಾಲ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ (KCC card) ಅಡಿಯಲ್ಲಿ ಸಾಲದ ಮಿತಿಯನ್ನು ಪ್ರಸ್ತುತ 3ಲಕ್ಷದಿಂದ 5ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಏನಿದು ಕಿಸಾನ್ ಕ್ರೆಡಿಟ್ ಕಾರ್ಡ್ (KCC card)?
ಕಿಸಾನ್ ಕ್ರೆಡಿಟ್ ಕಾರ್ಡ್ (kisan credit card yojana-KCC) ಯೋಜನೆಯು ದೇಶದ ಎಲ್ಲಾ ರಾಜ್ಯಗಳಲ್ಲಿ ಚಾಲನೆಯಲ್ಲಿದೆ. ಈ ಯೋಜನೆಯಡಿ ಕರಷಿ ಜೊತೆಗೆ ಉಪಕಸುಬುಗಳಾದ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ-ಆಡು ಸಾಕಾಣಿಕೆ, ಹಂದಿ ಸಾಕಾಣಿಕೆ, ಮೊಲ ಸಾಕಾಣಿಕೆ ಇನ್ನಿತರ ಕೃಷಿ ಉಪಕಸುಬುಗಳನ್ನು ಮಾಡುವ ರೈತರಿಗೆ ಅನುಕೂಲವಾಗಲು ಅಲ್ಪಾವಧಿ ಸಾಲ ನೀಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಸಾಲದ ಬಡ್ಡಿ ಸಹಾಯಧನ ಸೌಲಭ್ಯ
ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ ಪಡೆಯುವ ಸಾಲಕ್ಕೆ ಶೇ.2ರಷ್ಟು ಬಡ್ಡಿ ಸಹಾಯಧನ ನೀಡುತ್ತಿದ್ದು, ಈ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಹೆಚ್ಚುವರಿಯಾಗಿ ವಾರ್ಷಿಕ ಶೇ.3ರಷ್ಟು ಬಡ್ಡಿ ಸಹಾಯಧನದ ಸೌಲಭ್ಯವನ್ನು ಪಡೆಯಬಹುದಾಗಿದೆ.
ರೈತರು ಅವರ ಕಾರ್ಯವ್ಯಾಪ್ತಿಯ ಬ್ಯಾಂಕುಗಳಿಂದ ಪಡೆಯುವ ಸಾಲದ ಬಡ್ಡಿದರಕ್ಕೆ ಒಟ್ಟಾರೆ ಶೇ.5ರಷ್ಟು ಬಡ್ಡಿ ರಿಯಾಯಿತಿಯನ್ನು ಭಾರತ ಸರ್ಕಾರದಿಂದ ಪಡೆಯಬಹುದಾಗಿದೆ.
ಇದನ್ನೂ ಓದಿ:ರಸಗೊಬ್ಬರಗಳ ಕಲಬೆರೆಕೆ ಕಂಡು ಹಿಡಿಯುವ ವಿಧಾನ!
ಸಾಲ ನೀಡುವ ಬ್ಯಾಂಕುಗಳು:
ಕೃಷಿ ಪತ್ತಿನ ಸಹಕಾರಿ ಬ್ಯಾಂಕುಗಳು ಮತ್ತು ರಾಷ್ಟ್ರೀಕೃತ ಬ್ಯಾಂಕಗಳ ಮೂಲಕ ಸಾಲವನ್ನು ಪಡೆಯಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ರೈತರು ಮೊದಲು ಸ್ಥಳೀಯ ಬ್ಯಾಂಕ್ ಅಥವಾ ಸೊಸೈಟಿಗಳಲ್ಲಿ ಭೇಟಿ ನೀಡಿ. ಕಿಸಾನ್ ಕ್ರೆಡಿಟ್ ಕಾರ್ಡ್ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ನಂತರ ಅವರು ಹೇಳಿದ ರೀತಿಯಾಗಿ ತಾವು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬಹುದು.
ಸೂಚನೆ: ಈ ಒಂದು ಯೋಜನೆಯ ಲಾಭವು ಎಪ್ರಿಲ್ ನಂತರ ಚಾಲನೆಯಾಗುತ್ತದೆ. ಏಕೆಂದರೆ ಬಜೆಟ್ 2025-26ನೇ ಸಾಲಿನದ್ದಾಗಿದೆ.