ನಮಸ್ಕಾರ ರೈತರೇ, ಕಿಸಾನ್ ಸಮ್ಮಾನ್ ನಿಧಿಯೋಜನೆಯಡಿ ರೈತರಿಗೆ ಇದೇ ತಿಂಗಳಲ್ಲಿ ರೂ.2000 ಜಮೆ ಮಾಡಲು ಕೇಂದ್ರ ಸರಕಾರವು ಎಲ್ಲಾ ಸಿದ್ಧತೆಯನ್ನು ಮಾಡುತ್ತಿದ್ದು ಆದ್ದರಿಂದ ಎಲ್ಲಾ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳು ತಪ್ಪದೇ ಇಕೆವೈಸಿ ಮತ್ತು ಬ್ಯಾಂಕ್ ಆಧಾರ್ ಲಿಂಕ್ ಮಾಡಿಸಿರುವುದು ಕಡ್ಡಾಯವಾಗಿದೆ.
ಕೇಂದ್ರ ಸರಕಾರದಿಂದ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(kisan samman) ಯೋಜನೆಯ 19ನೇ ಕಂತಿನ ಹಣವನ್ನು ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಬಿಡುಗಡೆ ಮಾಡುವ ದಿನಾಂಕವನ್ನು ಕೇಂದ್ರ ಕೃಷಿ ಸಚಿವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (Pmkisan) ಒಂದು ವರ್ಷಕ್ಕೆ ಒಬ್ಬ ರೈತರ ಖಾತೆಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ತಲಾ ರೂ.2000 ದಂತೆ ಒಟ್ಟು ಮೂರು ಕಂತುಗಳಲ್ಲಿ ರೂ.6000 ವನ್ನು ರೈತರ ಖಾತೆಗೆ ಈ ಯೋಜನೆಯಡಿ ಹಣ ಜಮೆ ಮಾಡಲಾಗುತ್ತದೆ.
ಇದನ್ನೂ ಓದಿ:ಕೃಷಿ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳು ಮತ್ತು ಮಾನದಂಡಗಳು!
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ(Pmkisan) ಇಲ್ಲಿಯವರೆಗೆ ಒಟ್ಟು 18 ಕಂತುಗಳು ಹಣ ರೈತರಿಗೆ ಜಮೆ ಮಾಡಲಾಗಿದ್ದು. ಪ್ರಸ್ತುತ ಈಗ 19ನೇ ಕಂತು ನೀರಿಕ್ಷೆಯಲ್ಲಿರುವ ರೈತಾಪಿ ವರ್ಗದವರಿಗೆ ಕೇಂದ್ರ ಕೃಷಿ ಸಚಿವರು ಸಿಹಿ ಸುದ್ಧಿಯನ್ನು ನೀಡಿದ್ದಾರೆ.
ಫಲಾನುಭವಿಗಳು ಈ ಕೆಲಸವನ್ನು ಕಡ್ಡಾಯವಾಗಿ ಮಾಡಿರಬೇಕು?
1)ಇಕೆವೈಸಿ(ekyc)
2)ಆಧಾರ್ ಬ್ಯಾಂಕ್ ಲಿಂಕ್
3)NPCI aadhar maping
Pmkisan ekyc checking-ಪಿಎಂ ಕಿಸಾನ್ ಇಕೆವೈಸಿ ಚೆಕ್ ಮಾಡುವ ವಿಧಾನ:
ಮೊದಲಿಗೆ ಇಲ್ಲಿ ನೀಡಲಾದ PM kisan.gov.in ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಪ್ರವೇಶ ಮಾಡಬೇಕು. ನಿಮಗೆ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ.
ವಿಧಾನ-1: ಪಿಎಮ್ ಕಿಸಾನ್ ಸಮ್ಮಾನ್ ನಿಧಿ ವೆಬ್ಸೈಟ್ ತೆರೆದುಕೊಂಡ ಮೇಲೆ Farmers Corner ನಲ್ಲಿ ಹಲವಾರು ಅಂಕಣಗಳಿವೆ E-kyc ಅಂಕಣ,New farmer registration ಅಂಕಣ, Know your status ಅಂಕಣ, Beneficiary list ಅಂಕಣ,Name correction as per Aadhar ಅಂಕಣ ಹೀಗೆ ಹಲವಾರು ಅಂಕಣಗಳಿವೆ.
ಇದನ್ನೂ ಓದಿ:ನಿಮ್ಮದು ರೈತರ ನೊಂದಣಿ ಆಗಿದೆಯೇ? ಇಲ್ಲವೇ ತಿಳಿಯಬೇಕೆ? ಇಲ್ಲಿದೆ ಮಾಹಿತಿ.
ವಿಧಾನ-2: ಈ ಎಲ್ಲಾ ಅಂಕಣಗಳಲ್ಲಿ ನೀವು E-kyc ಅಂಕಣ ಮೇಲೆ ಕ್ಲಿಕ್ ಮಾಡಿ.
ವಿಧಾನ-3: ನಂತರ E-kyc ಅಂಕಣ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಆಧಾರ ನಂಬರ್ ಹಾಕಿ E-kyc ಆಗಿದಯೇ ಇಲ್ಲವೋ ಎಂದು ತಿಳಿದು ಕೊಳ್ಳಬಹುದು.