Sunday, November 10, 2024

ಇ-ಸ್ವತ್ತು ಮಾಡುವುದು ಹೇಗೆ? ಗ್ರಾಮ ಪಂಚಾಯತಿಯಲ್ಲಿ ಆಸ್ತಿ ನೋಂದಣಿ ಮಾಡುವುದು ಹೇಗೆ ?ಇಲ್ಲಿದೆ ಸಂಪೂರ್ಣ ಮಾಹಿತಿ…

ನಮ್ಮ ದೇಶ ಹಳ್ಳಿಗಳಿಂದ ಕೂಡಿದ್ದು ಹಳ್ಳಿಗಳಲ್ಲಿ ಜನಸಾಮಾನ್ಯರಿಗೆ ಮತ್ತು ಅನಕ್ಷರಸ್ಥರಿಗೆ ತಮ್ಮ ವಂಶ ಪಾರಂಪರಿಕವಾಗಿ ಬಂದಿರುವಂತ ಆಸ್ತಿಯನ್ನು ನೋಂದಣಿ ಮಾಡಲು ತಿಳಿದಿರುವುದಿಲ್ಲ. ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಲು ಆಸ್ತಿ ನೋಂದಣಿ ಕಡ್ಡಾಯವಾಗಿರುತ್ತದೆ. ಗ್ರಾಮ ಪಂಚಾಯತಿಯಡಿಯಲ್ಲಿ ಬರುವ ಆಸ್ತಿಗಳನ್ನು ನೋಂದಣಿ ಮಡುವ ಪದ್ದತಿ ಹೇಗೆ? ಗ್ರಾಮ ಪಂಚಾಯತಿಯಲ್ಲಿರುವ ಆಸ್ತಿಗಳನ್ನು ಯಾವ ರೀತಿ ಫಾರ್ಮ-9 ಮತ್ತು ಪಾರ್ಮ-11 ಇ-ಸ್ವತ್ತು ಅಡಿಯಲ್ಲಿ ಮಾಡಿಕೊಳ್ಳಬಹುದು? ಇ-ಸ್ವತ್ತು ಎಂದರೆ ಏನು? ನಿಮ್ಮ ಆಸ್ತಿಗೆ ಇ-ಸ್ವತ್ತು ಮಾಡುವ ಪ್ರಕ್ರಿಯೆ ಹೆಗಿರುತ್ತದೆ? ಇ-ಸ್ವತ್ತಿಗೆ ಅರ್ಜಿ ಸಲ್ಲಿಸಲು ದಾಖಲೆಗಳು ಏನೆನು ಬೇಕು? ಈ ಕುರಿತು ಈ ಕೆಳಗೆ ವಿವರಿಸಲಾಗಿದೆ.

ಇ-ಸ್ವತ್ತು ಎಂದರೇನು?

ನಾಗರಿಕರು/ಸಾರ್ವಜನಿಕರು ಗ್ರಾಮ ಪಂಚಾಯತ ಅಡಿಯಲ್ಲಿ ಆಸ್ತಿ ಖರೀದಿ ಮಾಡಿದರೆ ಅಥವಾ ಈಗಿರುವ ಆಸ್ತಿಗಳನ್ನು ಸರ್ಕಾರ ಸಿದ್ದಪಡಿಸಿರುವ ಇ-ಸ್ವತ್ತು ಎನ್ನುವ ತಂತ್ರಾಂಶದಿಂದ ಆಸ್ತಿಗೆ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿ ವಿಶಿಷ್ಠ ಸಂಖ್ಯೆಯನ್ನು ಪಡೆದುಕೊಂಡು ಅಸ್ತಿಯನ್ನು ನಿಮ್ಮದಾಗಿಸುವುದಕ್ಕೆ ಇ-ಸ್ವತ್ತು ಎಂದು ಕರೆಯುತ್ತಾರೆ.

ಇದನ್ನೂ ಓದಿ : 90% ಸಹಾಯಧನದಲ್ಲಿ ಹನಿ ನೀರಾವರಿ ಅಳವಡಿಸಲು ಇಲಾಖೆಯಿಂದ ಅರ್ಜಿ ಆಹ್ವಾನ

ಇ-ಸ್ವತ್ತಿಗೆ ಬೇಕಾದ ದಾಖಲಾತಿಗಳು:

* ಮಾಲೀಕನ ವಿಳಾಸದ ಗುರುತಿನ ಪತ್ರ: ಆಧಾರ ಕಾರ್ಡ/ಡ್ರೈವಿಂಗ್ ಲೈಸೆನ್ಸ್/ವೋಟಿಂಗ್ ಕಾರ್ಡ

* ಆಸ್ತಿಯ ಮಾಲಿಕತ್ವದ ದಾಖಲೆಗಳು

* ಚೆಕ್ಕುಬಂದಿ ವಿವರ

* ಅರ್ಜಿದಾರರ ಆಧಾರ ಕಾರ್ಡ ಝೆರಾಕ್ಷ ಪ್ರತಿ

* ಅರ್ಜಿದಾರರ ಫೋಟೊ

* ನಿವೇಶನದ ನಕ್ಷೆ

* ಕ್ರಯಪತ್ರ

* ಪಹಣಿ ಪತ್ರ

* ಕಟ್ಟಡದ ತೆರಿಗೆ ರಶೀದಿ ಪತ್ರ ಅಥವಾ ವಿದ್ಯುತ್ ಬಿಲ್.

ಇದನ್ನೂ ಓದಿ : ಬೋರ್ವೆಲ್ ಕೊರೆಸಲು 2 ಲಕ್ಷ ಸಹಾಯಧನ ಯಾವ ನಿಗಮದಿಂದ, ಯಾರಿಗೆ, ಮಾಹಿತಿ ತಿಳಿದುಕೊಳ್ಳಿ.

ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ನಿಮ್ಮ ಗ್ರಾಮ ಪಂಚಯತಗಳಿಗೆ ಸಲ್ಲಿಸಿ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು. ನಂತರ ಪಂಚಾಯತ ಅಭಿವೃದ್ದಿ ಅಧಿಕಾರಿಯು ದಾಖಲೆಗಳನ್ನು ಮತ್ತು ಸ್ಥಳದ ಪರಿಶೀಲನೆಯನ್ನು ನಡೆಸುತ್ತಾರೆ. ಪಂಚಾಯತ ಅಭಿವೃಧ್ಧಿ ಅಧಿಕಾರಿಯು ಇ-ಸ್ವತ್ತು ತಂತ್ರಾಂಶದ ಮೂಲಕ ನಿಮ್ಮರ್ಜಿಯನ್ನು ಅಪ್ಲೂಡ್ ಮಾಡಿ ಆಸ್ತಿ ನಕ್ಷೆ ಪಡೆಯಲು ಮೋಜಣಿಗೆ ವರ್ಗಾಯಿಸುತ್ತಾರೆ. ನಂತರ ನಾಡಕಚೇರಿಯಲ್ಲಿ ಮೋಜಣಿಗಾಗಿ ಶುಲ್ಕವನ್ನು ಪಾವತಿಸಿ, ಸ್ವೀಕೃತಿ ಪತ್ರ ಪಡೆದುಕೊಳ್ಳಬೇಕು.

ಇದಾದ ನಂತರ 21 ದಿನಗಳ ಒಳಗಾಗಿ ಪಂಚಾಯತ ಅಭಿವೃದ್ಧಿ ಅಧಿಕಾರಿ, ಅರ್ಜಿದಾರರು ಮತ್ತು ಬಾಜುದಾರರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಯುತ್ತದೆ. ನಿಮ್ಮ ಆಸ್ತಿಗೆ ನಕ್ಷೆ ಬಂದ ನಂತರ ದ್ವಿತೀಯ ದರ್ಜೆ ಸಹಾಯಕ ಮೂಲಕ ಅದನ್ನು ಅನುಮೋದಿಸಿ ಕಾರ್ಯದರ್ಶಿ ಅಥವಾ ಪಂಚಾಯತ ಅಭಿವೃದ್ಧಿ ಅಧಿಕಾರಿಗೆ ಕಳುಹಿಸಲ್ಪಡುತ್ತದೆ. ನಂತರ ಇ-ಸ್ವತ್ತಿನ ಮೇಲೆ ಪಂಚಾಯತ ಅಭಿವೃದ್ಧಿ ಅಧಿಕಾರಿಯವರು  ಡಿಜಿಟಲ್ ಸಹಿ ಮಾಡುವ ಮೂಲಕ ಅನುಮೋದಿಸುತ್ತಾರೆ. ಇ-ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದರೆ 45 ದಿನಗಳ ಒಳಗಾಗಿ ಇ-ಸ್ವತ್ತು ನೀಡಬೇಕೆಂಬ ನಿಯಮ ಇದೆ.

ಇ-ಸ್ವತ್ತಿನ ದಾಖಲೆಗಳನ್ನು ನಿಮ್ಮ ಮೊಬೈಲ್ ನಲ್ಲೇ ಪರಿಶೀಲಿಸಬಹುದು.

https://e-swathu.kar.nic.in/ ಮೊದಲಿಗೆ ನಿಮ್ಮ ಮೊಬೈಲ್ನಲ್ಲಿ ಈ ವೆಬ್ಸೈಟ್ಗೆ ಭೇಟಿ ಮಾಡಿ ನಂತರ ಆಸ್ತಿಶೋಧನೆ ಆಯ್ಕೆ ಮಾಡಿಕೊಂಡು Form-9 ಅಥವಾ Form-11 ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತ, ಗ್ರಾಮ ಆಯ್ಕೆ ಮಾಡಿ, ‘’All’’ ಆಯ್ಕೆ ಒತ್ತಿ ‘’Search‘’ ಮಾಡಬೇಕು. ಇಲ್ಲಿ ನಿಮ್ಮ ಗ್ರಾಮದ ಎಲ್ಲಾ ಆಸ್ತಿಗಳ ವಿವರ ಗೋಚರಿಸುತ್ತದೆ.  ನಿಮ್ಮ ಹೆಸರನ್ನು ಹುಡುಕಿ ಅದರ ‘’PropertyId‘’ ಯನ್ನು ಒಂದು ಕಡೆ ನಮೂದಿಸಿಕೊಳ್ಳಬೇಕು.

ನಂತರ ಪರಿಶೀಲಿಸಿ/Verify ಆಯ್ಕೆ ಮೇಲೆ ಒತ್ತಿ ‘’ಈ ಆಸ್ತಿ ನೋಂದಣಿ ಮಾಡಬವುದೇ ಪರಿಶೀಲಿಸಿ’’ ಆಯ್ಕೆಯನ್ನು ಕ್ಲಿಕ್ ಮಾಡಿ ‘’PropertyId‘’ ಯನ್ನು ನಮೂದಿಸಿ ನಿಮ್ಮ ಆಸ್ತಿಯ ಪೂರ್ಣ ವಿವರವನ್ನು ನೋಡಬಹುದಾಗಿದೆ.

ಇ-ಸ್ವತ್ತು ಮಾಡಿಸುವುದರ ಉಪಯೋಗ ಏನು?

* ಇ-ಸ್ವತ್ತು ತಂತ್ರಾಂಶ ಬಳಸಿ  ಆನ್ ಲೈನ್ ಮೂಲಕ ವಿತರಿಸಿದ ಪಾರಂ-9 ಮತ್ತು ಪಾರಂ-11 ಅನ್ನು ನೋಂದಣಿಗೆ ಬಳಸಬಹುದು.

* ಪಂಚಾಯತ ಅಭಿವೃದ್ಧಿ ಅಧಿಕರಿಯು ಮಾತ್ರ ಡಿಜಿಟಲ್ ಸಹಿ ಹಾಕಲು ಅವಕಾಶವಿರುವುದರಿಂದ ಅಕ್ರಮಗಳನ್ನು ತಡೆಯಲು ಸಾದ್ಯವಾಗುತ್ತದೆ.

* ಸಾರ್ವಜನಿಕರು ಅವಶ್ಯಕತೆ ಇದ್ದಲ್ಲಿ ಇ-ಸ್ವತ್ತು ದಾಖಲೆ ಮಾಡಿಸಿಕೊಂಡು ಉಪ ನೋಂದಣಿ ಅಧಿಕಾರಿಗಳ ಕಛೆರಿಯಲ್ಲಿ ಆಸ್ತಿ ನೋಂದಾಯಿಸಿಕೊಳ್ಳಬಹುದು.

* ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಆಸ್ತಿಯನ್ನು ಮಾರುವಾಗ/ಕೊಳ್ಳುವಾಗ ಇ-ಸ್ವತ್ತು ಕಡ್ಡಾಯವಾಗಿದೆ.

* ಆಸ್ತಿಯನ್ನು ತಮ್ಮ ಹೆಸರಿಗೆ ಸರಳವಾಗಿ ವಾರ್ಗಾಯಿಸಿಕೊಳ್ಳಲು ಸಹಾಯವಾಗುತ್ತದೆ.

ನಮೂನೆ-9 ( Form -9) ಎಂದರೇನು?

ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮ 2006 ಮತ್ತು ತಿದ್ದುಪಡಿ ನಿಯಮಗಳು 2013ರನ್ವಯ ನಿಯಮ 28ರನ್ವಯ ಗ್ರಾಮ ಪಂಚಾಯತಿಯು ತನ್ನ ವ್ಯಾಪ್ತಿಯಲ್ಲಿರುವ ಕೃಷಿಯೇತರ ಆಸ್ತಿಗಳಿಗೆ ದಾಖಲೆಗಳನ್ನು ಒದಗಿಸುವುದು ನಮೂನೆ-9 (Form -9) ಆಗಿರುತ್ತದೆ.

ನಮೂನೆ-11 (Form -11) ಎಂದರೇನು?

ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮ 2006 ಮತ್ತು ತಿದ್ದುಪಡಿ ನಿಯಮಗಳು 2013ರನ್ವಯ ನಿಯಮ 30ರನ್ವಯ ಗ್ರಾಮ ಪಂಚಾಯತಿಯನ್ನು ತನ್ನ ವ್ಯಾಪ್ತಿಯಲ್ಲಿರುವ ಕೃಷಿಯೇತರ ಆಸ್ತಿಗಳಿಗೆ ವಿತರಿಸುವ ನಮೂನಯೇ ನಮೂನೆ-11 (Form-11) ಇದನ್ನು ಭೂಮಿ ಮತ್ತು ಕಟ್ಟಡಗಳ ಬಾಡಿಗೆ, ವಸೂಲಿ ಮತ್ತು ಬಾಕಿಗಳ ವಹಿ ಎಂತಲು ಕರೆಯಲಾಗುತ್ತದೆ. 2005 ದಿನಾಂಕ:06-04-2006ರನ್ವಯ ನಮೂನೆ-9 ಮತ್ತು 11 ಕಂದಾಯ ಇಲಾಖೆಯ 2013ರಲ್ಲಿ ತಿದ್ದುಪಡಿಯನ್ವಯ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೃಷಿಯೇತರ ಆಸ್ತಿಗಳ ನೋಂದಣಿಗೆ ಈ ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ. ತಮ್ಮ ಆಸ್ತಿಗಳನ್ನು ಮಾರಾಟ ಮಾಡಲು ಬಯಸುವ ಸಾರ್ವಜನಿಕರು ನಮೂನೆ-9 ಮತ್ತು ನಮೂನೆ-11ನ್ನು ಪಡೆಯಲು ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಬೇಕು.

ಇತ್ತೀಚಿನ ಸುದ್ದಿಗಳು

Related Articles