Thursday, November 21, 2024

Agriculture deprt schemes-ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳು ಹಾಗೂ ಪಡೆದುಕೊಳ್ಳುವ ವಿಧಾನ!

ನಮಸ್ಕಾರ ರೈತರೇ, ರೈತರನ್ನು ಆರ್ಥಿಕವಾಗಿ ಸಭಲರನ್ನಾಗಿಸಲು ಹಲವಾರು ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ ಅದರಲ್ಲಿ ಕೃಷಿ ಇಲಾಖೆಯು ಒಂದಾಗಿದೆ. ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳು ಹಾಗೂ ಪಡೆದುಕೊಳ್ಳುವ ವಿಧಾನದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.

ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಪಶು ಸಂಗೋಪನೆ ಇಲಾಖೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ ಈ ಎಲ್ಲಾ ಇಲಾಖೆಗಳಲ್ಲಿ ರೈತರಿಗೆ ಹಲವಾರು ಯೋಜನೆಗಳು ಜಾರಿಯಲ್ಲಿವೆ ಈ ಎಲ್ಲಾ ಇಲಾಖೆಗಳು ರೈತರಿಗೆ ವಿವಿಧ ಸವಲತ್ತುಗಳನ್ನು ವಿರತಣೆ ಮಾಡುತ್ತವೆ.

ಕೃಷಿ ಇಲಾಖೆಯು ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರ ಕಛೇರಿಗಳನ್ನು ಹೊಂದಿದೆ. ಈ ಕಛೇರಿಗಳು ಹೋಬಳಿ ಮಟ್ಟದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತವೆ. ರೈತರು ತಮಗೆ ಕೃಷಿ ಮಾಹಿತಿ ಮತ್ತು ಸೌಲಭ್ಯಗಳು ಬೇಕಾದಲ್ಲಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ:ಪಿಎಂ ಕಿಸಾನ್ ಯೋಜನೆಯ 18ನೇ ಕಂತು ಬಿಡುಗಡೆಯ ದಿನಾಂಕ ಪ್ರಕಟ! ಇಕೆವೈಸಿ ಚೆಕ್ ಮಾಡಿಕೊಳ್ಳಿ.

Agriculture department schemes-ಕೃಷಿ ಇಲಾಖೆಯ ಸೌಲಭ್ಯಗಳು:

1)ಕೃಷಿ ಬಿತ್ತನೆ ಬೀಜಗಳು(ಪ್ರತಿ ಮೂರು ಹಂಗಾಮಿಗು ನೀಡಲಾಗುತ್ತದೆ)

2)ಲಘು ಪೋಷಕಾಂಶಗಳು(ಜಿಪ್ಸಂ,ಸುಣ್ಣ,ಬೋರಾನ್,ಜಿಂಕ್ ಸಲ್ಫೇಟ್)

3)ಸಸ್ಯ ಸಂರಕ್ಷಣಾ ಔಷಧಿಗಳು(ಬೆಳೆಗಳ ಮದ್ದು)

4)ಕೃಷಿ ಯಂತ್ರೋಪಕರಣಗಳು(ಪವರ್ ವೀಡರ್, ಪವರ್ ಸ್ರ್ಪೇಯರ್, ಪವರ್ ಟಿಲ್ಲರ್, ಟ್ರ್ಯಾಕ್ಟರ್, ಬ್ಯಾಕ್ ಪ್ಯಾಕ್ ಸ್ರ್ಪೇಯರ್, ಕೋನೋವೀಡರ್, ಇನ್ನಿತರ ಕೃಷಿ ವಸ್ತುಗಳು)

5)ತುಂತುರು ನೀರಾವರಿ ಯೋಜನೆಯಡಿ ಪಿ.ವಿ.ಸಿ ಪೈಪು, ಸ್ಪೀಂಕ್ಲರ್ ವಿತರಣೆ ಮತ್ತು ಡ್ರಿಪ್ ಪೈಪು ವಿತರಣೆ.

6)ಕೃಷಿ ಭಾಗ್ಯಯೋಜನೆ(ಕೃಷಿ ಹೊಂಡ)

7)ಕಿಸಾನ್ ಸಮ್ಮಾನ ನಿಧಿ ಯೋಜನೆ.

8)ಮಣ್ಣು ಆರೋಗ್ಯ ಕಾರ್ಡ್ ವಿತರಣೆ.

9)ರೈತರ ನೊಂದಣಿ(FID).

10)ಆತ್ಮ ಯೋಜನೆ(ತರಬೇತಿಗಳು, ಪ್ರವಾಸ, ಪ್ರಾತ್ಯಕ್ಷಿಕೆ)

ಇದನ್ನೂ ಓದಿ:ರಾಜ್ಯದ ರೈತರಿಗೆ ಕಂದಾಯ ಸಚಿವರಿಂದ ಸಿಹಿ ಸುದ್ಧಿ “ಬಗರ್ ಹುಕುಂ” ಮರು ಚಾಲನೆ!

Application documents-ಸೌಲಭ್ಯಗಳನ್ನು ಪಡೆಯಲು ದಾಖಲೆಗಳು:

1)RTC/ಪಹಣಿ ಪ್ರತಿ.

2)ಆಧಾರ್ ಕಾರ್ಡ್ ಪ್ರತಿ.

3)ಬ್ಯಾಂಕ್ ಪಾಸ್ ಬುಕ್ ಪ್ರತಿ.

4)ರೇಷನ್ ಕಾರ್ಡ್ ಪ್ರತಿ.

5)1 ಫೋಟೋ

6)ಪ.ಜಾತಿ/ಪ.ಪಂಗಡ ಜಾತಿ ಪ್ರಮಾಣ ಪತ್ರ.

7)ಕೃಷಿ ಇಲಾಖೆ ಸೌಲಭ್ಯಗಳ ಅರ್ಜಿ ಫಾರ್ಂ.

8)ಕೃಷಿ ಅಧಿಕಾರಿಗಳು ಹೇಳುವ ಇತರೆ ದಾಖಲೆಗಳು.

ಹೆಚ್ಚಿನ ಮಾಹಿತಿಗೆ ರೈತರು ತಮ್ಮ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಮತ್ತು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಮಾಹಿತಿ ಪಡೆಯಬಹುದು.

ಇತ್ತೀಚಿನ ಸುದ್ದಿಗಳು

Related Articles