ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೊದಲೆಲ್ಲಾ ಖುಷ್ಕಿ ಜಮೀನುಗಳಲ್ಲಿ ಕೃಷಿ ಬೆಳೆಗಳಾದ ಅರ್ಧವಾರ್ಷಿಕ ಬೆಳೆಗಳು, ಏಕವಾರ್ಷಿಕ ಬೆಳೆಗಳನ್ನು ಬೆಳೆಯುತ್ತಿದ್ದರು. ಕರಾವಳಿ ಹಾಗೂ ಮಲೆನಾಡಿನ ಪ್ರಮುಖ ಬೆಳೆ ಎಂದೇ ಪ್ರಸಿದ್ದವಾಗಿದ್ದ ಅಡಿಕೆಗೆ ಸಿಗುತ್ತಿರುವ ಚಿನ್ನದ ಬೆಲೆಯು ಬಯಲು ಸೀಮೆಯ ರೈತರನ್ನು ಬೆರಗುಗೊಳಿಸಿದೆ. ಇತ್ತಿಚೀನ ದಿನಮಾನಗಳಲ್ಲಿ ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಅಡಿಕೆ ಬೆಳೆಯ ಕ್ಷೇತ್ರ ವರ್ಷದಿಂದ ವರ್ಷಕ್ಕೆ ವಿಸ್ತೀರ್ಣ ಜಾಸ್ತಿಯಾಗುತ್ತಿರುವುದು ಕಾಣುತ್ತಿದ್ದೆವೆ.
ಅಂತರಾಷ್ಟೀಯ ಮಾರುಕಟ್ಟೆ ಹಾಗೂ ಭಾರತದಲ್ಲೂ ಇದರ ಬೇಡಿಕೆ ತುಂಬಾ ಹೆಚ್ಚಾಗಿದ್ದು, ಅಡಿಕೆ ಉತ್ಪಾದನೆಯಲ್ಲಿ ರೈತರಿಗೆ ಉತ್ತಮ ಲಾಭ ಬರಲು ಕೂಡ ಇದೆ ಕಾರಣ. ಯಾವ ತಳಿ ಯಾವ ಪ್ರದೇಶಕ್ಕೆ ಸೂಕ್ತ ಮತ್ತು ಯಾವ ಅಡಿಕೆ ತಳಿಯಿಂದ ಎಷ್ಟೂ ಇಳುವರಿ ನೀಡುತ್ತೆಎಂಬ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.
ಸ್ಥಳೀಯ ತಳಿಗಳು ಮತ್ತು ಯಾವ ಪ್ರದೇಶಕ್ಕೆ ಸೂಕ್ತ :
1.ತೀರ್ಥಹಳ್ಳಿ: ಮಲೆನಾಡು ಮತ್ತು ಮೈದಾನ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಸ್ಥಳೀಯ ಎತ್ತರ ತಳಿ. ಬೀಜ ಉದ್ದನೆಯ ಆಕಾರದ ಸಣ್ಣ ಗಾತ್ರವನ್ನು ಹೊಂದಿರುತ್ತದೆ. ಕೆಂಪು ಅಡಿಕೆಗೆ ಸೂಕ್ತವಾಗಿರುವ ತಳಿ .
2.ದಕ್ಷಿಣ ಕನ್ನಡ : ಕರಾವಳಿಯಲ್ಲಿ ಪ್ರಚಲಿತದಲ್ಲಿರುವ ಸ್ಥಳೀಯ ತಳಿ. ಬೀಜ ದುಂಡಗೆ ಹಾಗೂ ದೊಡ್ಡಗಾತ್ರ ಹೊಂದಿದ್ದು ಪ್ರತಿ ಮರದಿಂದ 2 ಕಿ.ಗ್ರಾಂ ಚಾಲಿ ಅಡಿಕೆ ಇಳುವರಿಯನ್ನು ಪಡೆಯಬಹುದು.
3.ಶ್ರೀವರ್ಧನ : ಇದು ಮಹರಾಷ್ಟದ ಉತ್ತಮ ಗುಣಮಟ್ಟದ ಸ್ಥಳೀಯ ತಳಿ. ದುಂಡಗೆ ಹಾಗೂ ಮಧ್ಯಮ ಗಾತ್ರದ ಬೀಜವನ್ನು ಹೊಂದಿದ್ದು, ಪ್ರತಿ ಮರದಿಂದ 2. ಕಿ.ಗ್ರಾಂ ಇಳುವರಿಯನ್ನು ನಿರೀಕ್ಷಿಸಬಹುದು.
4. ಮಂಗಳ: ಕರಾವಳಿಗೆ ಸೂಕ್ತವಾದ ಮಧ್ಯಮ ಎತ್ತರ ಹಾಗೂ ಶ್ರೀಘ್ರ ಇಳುವರಿ ಕೊಡುವ, ದುಂಡಕಾರದ ಸಣ್ಣ ಗಾತ್ರದ ಬೀಜವನ್ನು ಹೊಂದಿರುವ ತಳಿ ಪ್ರತಿ ಮರದಿಂದ 3.ಕಿ.ಗ್ರಾಂನ಼ಷ್ಟು ಚಾಲಿ ಅಡಿಕೆ ಇಳುವರಿಯನ್ನು ಪಡೆಯಬಹುದು.
ಇದನ್ನೂ ಓದಿ: 10 ಲಕ್ಷ ಮೊತ್ತದ ಅಪಘಾತ ವಿಮೆ ಜಾರಿಗೊಳಿಸಿದ ಅಂಚೆ ಇಲಾಖೆ
5.ಸುಮಂಗಳ: ದುಂಡಗೆ ದೊಡ್ಡ ಗಾತ್ರದ ಬೀಜವನ್ನು ಹೊಂದಿರುವ ಎತ್ತರದ ಅಡಿಕೆ ತಳಿ. ಪ್ರತಿ ಮರದಿಂದ 3.18 ಕಿ.ಗ್ರಾಂ ಚಾಲಿ ಅಡಿಕೆಯನ್ನು ಪಡೆಯಬಹುದು. ಕರಾವಳಿ ಪ್ರದೇಶಕ್ಕೆ ಸೂಕ್ತವಾದ ತಳಿ ಆಗಿರುತ್ತದೆ.
6.ಮೋಹಿತ ನಗರ: ಕರಾವಳಿ ಮತ್ತು ಮೈದಾನ ಪ್ರದೇಶಕ್ಕೆ ಸೂಕ್ತ ತಳಿಯಾಗಿದೆ. ಎತ್ತರಕ್ಕೆ ಬೆಳೆದು ಮೊಟ್ಟೆಯಾಕಾರದಿಂದ ದುಂಡಗೆ ಮಧ್ಯಮ ಗಾತ್ರದ ಬೀಜವನ್ನು ಹೊಂದಿದ್ದು 3.67 ಕಿ.ಗ್ರಾಂ ಚಾಲಿ ಅಡಿಕೆ ಇಳುವರಿಯನ್ನು ಪ್ರತಿ ಮರದಿಂದ ಪಡೆಯಬಹುದಾಗಿರುತ್ತದೆ.
7.ಸಿರ್ಸಿ-1 (ಎಸ್.ಎ. ಎಸ್-1): ಮಲೆನಾಡಿನ ಗುಡ್ಡ ಗಾಡು ಪ್ರದೇಶಕ್ಕೆ ಸೂಕ್ತವಾದ ಎತ್ತರವಾಗಿ ಬೆಳೆಯುವ ತಳಿ.ಬೀಜಗಳು ದುಂಡಾಗಿದ್ದು, ಮಧ್ಯಮ ಗಾತ್ರವನ್ನು ಹೊಂದಿರುತ್ತವೆ. ಪ್ರತಿಮರದಿಂದ 4.60 ಕಿ.ಗ್ರಾಂ ಗಳಷ್ಟು ಚಾಲಿ ಇಳುವರಿಯನ್ನು ನಿರೀಕ್ಷಿಸಬಹುದು.
8.ಸ್ವರ್ಣ ಮಂಗಳ :ಕರಾವಳಿ ಪ್ರದೇಶಕ್ಕೆ ಶಿಫಾರಸ್ಸು ಮಾಡಿರುವ ಮಧ್ಯಮ ಗಾತ್ರದ ತಳಿ.ಬೀಜವು ದುಂಡಾಕಾರವಿದ್ದು. ಮಧ್ಯಮ ಗಾತ್ರ ಹೊಂದಿರುತ್ತದೆ.ಪ್ರತಿ ಮರದಿಂದ 3.ಕಿ.ಗ್ರಾಂ ಚಾಲಿ ಇಳುವರಿ ಪಡೆಯಬಹುದು.
ರಾಜ್ಯದ ಬೇರೆ ಬೇರೆ ಜಿಲ್ಲಾ ಪ್ರದೇಶಗಳಲ್ಲಿ 2017-2022 ವರೆಗಿನ ಅಂದಾಜು ಅಡಿಕೆ ವಿಸ್ತೀರ್ಣ ಈ ಕೆಳಗಿನಂತಿದೆ:
ತುಮಕೂರು-34,839 ಹೆಕ್ಟೇರ್, ಚಿತ್ರದುರ್ಗ- 20,061,ಹೆಕ್ಟೇರ್, ದಾವಣಗೆರಿ- 28,811,ಹೆಕ್ಟೇರ್, ಹಾವೇರಿ -5901,ಹೆಕ್ಟೇರ್,ಚಿಕ್ಕಮಗಳೂರು-24,214,ಹೆಕ್ಟೇರ್ , ಗದಗ ಜಿಲ್ಲೆಯಲ್ಲಿ ಐದು ವರ್ಷಗಳ ಹಿಂದೆ ಕೇವಲ 22 ಎಕರೆಯಷ್ಟಿದ್ದ ಅಡಿಕೆ ಕ್ಷೇತ್ರ ಇದೀಗ 250 ಎಕರೆಯಷ್ಟು ವಿಸ್ತರಿಣೆಗೊಂಡಿದೆ. ಹೀಗೆ ಪ್ರತಿ ವರ್ಷದಿಂದ ವರ್ಷಕ್ಕೆ ಅಡಿಕೆ ವಿಸ್ತೀರ್ಣ ವಿಸ್ತಾರವಾಗುತ್ತಿದೆ.