Monday, October 7, 2024

ಶ್ರಮಕ್ಕೆ ತಕ್ಕ ಪ್ರತಿಫಲ ಪಡೆದ ಶ್ರಮಜೀವಿ: ತಿಂಗಳೊಪ್ಪತ್ತಿನಲ್ಲಿ ಕೋಟಿ ಆದಾಯ ಪಡೆದ ರೈತ.

ಆತ್ಮೀಯ ರೈತ ಬಾಂದವರೇ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಅನ್ನೋ ಗಾದೆ ಅಂತೆ ಇಲ್ಲೋಬ್ಬ ರೈತ ಆ ನಾಣ್ನುಡಿಗೆ ನಿದರ್ಶನವಾಗಿದ್ದಾರೆ. ಕೃಷಿಯಿಂದ ಪ್ರತಿಫಲ ಅಪೇಕ್ಷೆಯನ್ನು ಬಯಸದೆ ತನ್ನ ಕಾಯಕದಲ್ಲಿ ನಿರತರಾಗಿದ್ದ ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಪಾಚ್ಚರ್‍ ಗ್ರಾಮದ ರೈತನಿಗೆ ಸಿರಿವಂತಿಕೆ ತಂದ ಟೊಮೆಟೊ ಬೆಳೆ ಯಶೋಗಾಥೆ.

ದಿನೇ ದಿನೇ ಟೊಮೆಟೋ ಬೆಲೆ ಗಗನಕ್ಕೆರುತ್ತಿದ್ದು ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದ್ದರೆ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ರೈತರೊಬ್ಬರು ಟೊಮೊಟೊ ಮಾರಿ ತಿಂಗಳಲ್ಲಿ ರೂ.3 ಕೋಟಿ ಆದಾಯ ಗಳಿಸಿದ್ದಾರೆ.
ಪುಣೆ ಜಿಲ್ಲೆಯ ಜುನ್ನಾರ ತಾಲ್ಲೂಕಿನ ಪಾಚ್ಫರ್ ಗ್ರಾಮದ ಈಶ‍್ವರ್ ಗಾಯ್ಕರ್ ಭರ್ಜರಿ ಆದಾಯ ಗಳಿಸಿದ ರೈತ.

ಇದನ್ನೂ ಓದಿ: ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್‌ ಅನ್ನು ಬದಲಾಯಿಸುವುದು ಹೇಗೆ?

ಇದೇ 2023ರ ಮೇ ತಿಂಗಳಲ್ಲಿ ಟೊಮೆಟೊ ಬೆಳೆದಿದ್ದ ಈಶ‍್ವರ, ಬೆಲೆ ಕುಸಿತದಿಂದಾಗಿ ಬೆಳೆಯನ್ನು ರಸ್ತೆಗೆ ಎಸೆಯಬೇಕಾದ ಕಠಿಣ ಸವಾಲನ್ನು ಎದುರಿಸಬೇಕಾಯಿತು. ಆದರೂ ವಿಚಲಿತರಾಗದೇ ಈಗಾಗಲೇ ತಮ್ಮ 12 ಎಕರೆಯಲ್ಲಿ ಬೆಳೆಯುತ್ತಿದ್ದ ಟೊಮೆಟೊ ಬೆಳೆಯನ್ನು ಉಳಿಸಿಕೊಳ್ಳುವ ಅಚಲ ನಿರ್ಧಾರವನ್ನು ಕೈಗೊಂಡರು. ಇದಕ್ಕಾಗಿ ಹಗಲೂ ರಾತ್ರಿ ದಣಿವರಿಯದೇ ದುಡಿದರು.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಾಚ್ಫರ್ ಗ್ರಾಮದ ತಮ್ಮ ಟೊಮೆಟೊ ಹೊಲದಲ್ಲಿ ಪತ್ನಿಯೊಂದಿಗೆ ರೈತ ಈಶ‍್ವರ್ ಗಾಯ್ಕರ್
ಜೂನ್ 11 ರಿಂದ ಜುಲೈ 18ರ ನಡುವೆ ಜುನ್ನಾರ ತಾಲೂಕಿನ ನಾರಾಯಣಗಾಂವ್ ಎಪಿಎಂಸಿಯಲ್ಲಿ 18 ಸಾವಿರ ಕ್ರೆಟ್ಗಳಷ್ಟು(1ಕ್ರೆಟ್ಗೆ 20 ಕೆ.ಜಿ) ಟೊಮೆಟೊ ಮಾರಿರುವ ಈಶ‍್ವರ ರೂ. 3 ಕೋಟಿ ಗಳಿಸಿದ್ದಾರೆ.
ಉಳಿದಿರುವ ಸುಮಾರು 4 ಸಾವಿರ ಕ್ರೆಟ್ಗಳಷ್ಟು ಟೊಮೆಟೊ ಮಾರಿ ರೂ. 50 ಲಕ್ಷ ಹೆಚ್ಚುವರಿ ಆದಾಯ ಪಡೆಯುವ ನೀರೀಕ್ಷೆ ಅವರದ್ದು.


ಟೊಮೆಟೊ ಬೆಳೆಯಲು, ನಿರ್ವಹಣೆ ಮತ್ತು ಸಾಗಣೆಗಾಗಿ ಒಟ್ಟು 40 ಲಕ್ಷ ವೆಚ್ಚವಾಗಿದೆ.

ಜೂನ್ 11 ರಂದು ಒಂದು ಕ್ರೇಟ್ಗೆ ರೂ. 770ರಂತೆ ಮಾರಿದ್ದೆ. ಆಗ ಬೆಲೆ ಕೆಜಿಗೆ ರೂ.37 ರಿಂದ 38 ಇತ್ತು. ಆದರೆ ಜುಲೈ 18 ರಂದು ಒಂದು ಕ್ರೇಟ್ಗೆ ರೂ. 2,200 ಪಡೆದಿದ್ದೆ. ಆಗ 1 ಕೆಜಿಗೆ ರೂ. 110 ಆಗತ್ತು ಎಂದು ಈಶ್ವರ ಮಾಹಿತಿ ನೀಡಿದರು.

‘ಟೊಮೆಟೊ ಬೆಳೆಗಾರರಿಗೆ ಇದು ಉತ್ತಮ ಸಮಯ. ಆದರೆ, ನಾನು ಕೆಟ್ಟ ಸಮಯವನ್ನೂ ನೋಡಿದ್ದೇನೆ. ಇದೇ ವರ್ಷದ ಮೇ ತಿಂಗಳಲ್ಲಿ ಒಂದು ಎಕರೆಯಷ್ಟು ಮಾತ್ರ ಟೊಮೆಟೊ ಬೆಳೆ ಕೈಗೆ ಬಂದಿತ್ತು. ಆದರೆ ಆಗ ಬೆಲೆ ತೀವ್ರ ಕುಸಿತವಾಗಿದ್ದರಿಂದ ಬೆಳೆದ ಬಹುಪಾಲು ಬೆಳೆಯನ್ನು ಎಸೆಯಬೇಕಾಯಿತು. ಆಗ ಪ್ರತಿ ಕ್ರೇಟ್ ದರ ಕೇವಲ ರೂ.50 ಇತ್ತು ಅಂದರೆ 1 ಕೆ.ಜಿ. ಟೊಮೆಟೊಗೆ ಕೇವಲ ಎರಡುವರೆ ರೂಪಾಯಿ ಇತ್ತು’ ಎಂದು ಟೊಮೊಟೊ ಬೆಳೆದ ರೈತನಾದ ಈಶ್ವರ್‍ ಮೇಲುಕುಹಾಕಿಕೊಂಡರು.

ಇದನ್ನೂ ಓದಿ: Crop insurance: ಬೆಳೆ ವಿಮೆ ಪರಿಹಾರ ಹೇಗೆ ರೈತರಿಗೆ ದೊರೆಯುವುದು ???

ಬೆಲೆ ಏರಿಕೆಗೆ ಕಾರಣ ಏನು? What is the reason for price increase ?

ಹೌದು ಈ ತರ ಹೆಚ್ಚನ ಬೆಲೆ ಏರಿಕೆ ಕಾರಣ ತಿಳಿಯಿರಿ ದೇಶದಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಜನವರಿ ಮತ್ತು ಫೆಬ್ರುವರಿ ಮಾಹೆಯಲ್ಲಿ ನಾಟಿ ಮಾಡಿರುವ ಬೆಳೆಯು ಜೂನ್ ಮತ್ತು ಜುಲೈ ಮಾಹೆಯಲ್ಲಿ ಮಾರುಕಟ್ಟೆಗೆ ಬರಬೇಕಾಗಿತ್ತು. ಹೆಚ್ಚು ಕಾಲದವರೆಗೆ ಬೇಸಿಗೆ ಮತ್ತು ಅಧಿಕ ಸಮಯದವರೆಗೆ ಚಳಿ , ಹಾಗೂ ತಾಪಮಾನದಿಂದ ಮುಂಗಾರು ಮಳೆ (Mansoon rain)ಬರಲು ಸ್ವಲ್ಪ ದಿನಗಳ ಕಾಲ ವಿಳಂಬವಾಗಿದ್ದರ ಕಾರಣ ಟೊಮೊಟೊ Tomato yield ಇಳುವರಿ ಅನೀರಿಕ್ಷಿತ ಪ್ರಮಾಣದಲ್ಲಿ ಬಂದಿರುವುದಿಲ್ಲ.

ಇದರ ಜೊತೆಗೆ ನಮ್ಮ ಕರ್ನಾಟಕ ಕೆಲವು ಜಿಲ್ಲೆಗಳಾದ ಕೋಲಾರ ,ಸೇರಿದಂತೆ, ನೇರೆಯ ರಾಜ್ಯವಾದ ಆಂಧ್ರಪ್ರದೇಶದ ಟೊಮೊಟೊ ಪ್ರದೇಶದಲ್ಲಿ ಬಿಳಿ ನೋಣ ಭಾದೆ ಮತ್ತು ಶಿಲೀಂದ್ರ Fungs ರೋಗಗಳು ಕಾಣಿಸಿಕೊಂಡು ಗಣನೀಯವಾಗಿ ಕಡಿಮೆಯಾಗಿರುತ್ತದೆ. ಇದೇ ಸಮಯದಲ್ಲಿ ಮಹಾರಾಷ್ಟ,ಮಧ್ಯಪ್ರದೇಶ ದಲ್ಲಿ ಬಿತ್ತನೆ ಮಾಡಿದ್ದ ಟೊಮೊಟೊ ಬೆಳೆಗಳಿಗೂ Fungs disease ರೋಗಗಳಿಗೆ ತುತ್ತಾಗಿ. ದೇಶದ ಮಧ್ಯ ಭಾರತ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಅನಿರೀಕ್ಷತ ಮಳೆಯ ಕಾರಣದಿಂದ ಟೊಮೊಟೊ ಬೆಳೆ ನಾಶವಾಗಿದೆ. ಈ ಎಲ್ಲಾ ಕಾರಣದಿಂದಾಗಿ ಇಳುವರಿ ಕಡಿಮೆಯಾಗಿ ಬೆಲೆಯು ಏರಿಕೆಯಾಗಿದೆ.

ಇತ್ತೀಚಿನ ಸುದ್ದಿಗಳು

Related Articles