Friday, January 17, 2025

Corp insurance :2023 ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ನೊಂದಣಿಗೆ ನಿಗಧಿಪಡಿಸಿದ ಅಂತಿಮ ದಿನಾಂಕ ಮತ್ತು ವಿಮಾ ಕಂತಿನ ದರ :

ಆತ್ಮೀಯ ರೈತ ಬಾಂದವರೇ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು (fasal Bima Yojana) ರೈತರ ಅನಿಶ್ಚಿತ ಕೃಷಿಯಲ್ಲಿ ಆದಾಯ ತರುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಜಿಲ್ಲೆಗೂ ಸರ್ಕಾರಗಳು ನಿಗಧಿ ಪಡಿಸಿದ ಇನಶ್ಯೂರೆನ್ಸ್ ಕಂಪನಿ ಸಹಯೋಗದೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿರುತ್ತದೆ.

ಆತ್ಮೀಯ ರೈತ ಸಮೂಹಕ್ಕೆ ಈ ಮೂಲಕ ನಾವು ಈ ಲೇಖನದಲ್ಲಿ ಶಿವಮೊಗ್ಗ ಜಿಲ್ಲೆಯ ಬೆಳೆ ವಿಮೆ bele vime ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯ fasal Bima Yojana ಅಡಿಯಲ್ಲಿ ಒಳಪಡುವ ಬೆಳೆ ವಿಮೆ ಬಗ್ಗೆ ಮಾಹಿತಿ ನೀಡಲು ಬಯಸುತ್ತೆವೆ. ಅದಕ್ಕೂ ಮೊದಲು ವಿಮೆ ಕಟ್ಟುವ ರೈತರಿಗೆ ಬೆಳೆ ವಿಮೆ ಅಂದರೆ ಏನು ಅದು ಹೇಗೆ ಪರಿಹಾರ ದೊರೆಯುತ್ತದೆ. ಅಂತ ಮಾಹಿತಿ ತಿಳಿಯಿರಿ.


ರೈತ ಬಾಂದವರೇ ನಾವು ಪ್ರತಿ ವರ್ಷ ಬೆಳೆ ವಿಮ ಕಟ್ಟುತ್ತೆವೆ ಆದರೆ ನಮಗೆ ಬೆಳೆ ವಿಮೆ ಪರಿಹಾರ ಬರುವುದೇ ಇಲ್ಲವೆಂದು ರೈತರ ಬೇಸರ ವ್ಯಕ್ತಪಡಿಸುತ್ತಿರುವುದು ವಾಸ್ತವ. ಆದರೆ ಬೆಳೆ ವಿಮೆ ಅಧಿಸೂಚಿತ ಘಟಕ ಅಂದರೆ ಒಂದು ಗ್ರಾಮ ಪಂಚಾಯಿತಿಗೆ ಒಂದು ಅಧಿಸೂಚಿತ ಘಟಕ ಎಂದು ಕರೆಯುತ್ತಾರೆ.ಆ ಒಂದು ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಅತೀ ಕಡಿಮೆ ಮತ್ತು ಅತೀ ಹೆಚ್ಚು ಆದಾಗ ಮತ್ತು ಶೇ 75 ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ಒಟ್ಟು ಬೆಳೆ ವಿಮೆ ಮೊತ್ತದ ಗರಿಷ್ಠ 25% ರಷ್ಟು ಪರಿಹಾರ ವಿಮಾ ಸಂಸ್ಥೆಯ ವಿಮೆ ಮಾಡಸಿದ ರೈತರಿಗೆ ನೀಡಬೇಕಾಗಿರುತ್ತದೆ.

ಇದನ್ನೂ ಓದಿ: P M Kisan Samman Nidhi Scheme: ಫಲಾನುಭವಿಗಳಿಗೆ ಆಧಾರಗೆ ಮೊಬೈಲ್ ಲಿಂಕ್ ಆಗದೇ ಇದ್ದರೂ ಕೆವೈಸಿ ಮಾಡಿಸಬಹುದು ಎಂದು ಸಿಹಿಸುದ್ದಿ ನೀಡಿದ ಇಲಾಖೆ:

ಹಾಗೂ ರೈತರೂ ತಮ್ಮ ಜಮೀನುಗಳಲ್ಲಿ ಬೆಳೆ ಕಟಾವು ಮಾಡಿದ ನಂತರ ಗದ್ದೆಯಲ್ಲಿ ಒಣಗಲು ಬಿಟ್ಟಾಗ ಎರಡು ವಾರದ ಒಳಗಾಗಿ ಅಕಾಲಿಕ ಮಳೆ, ಚಂಡಮಾರುತದಿಂದ ಅಥವಾ ಪ್ರಕೃತಿ ವಿಕೋಪದಂತಹ ಪರಿಸ್ಥಿತಿಗಳಿಗೆ ಸಿಲುಕಿ ನಷ್ಟವಾದಗ 48 ಗಂಟೆಯೊಳಗೆ ವಿಮೆ ಸಂಸ್ಥೆ ಮಾಹಿತಿ ನೀಡಿದ್ದಲ್ಲಿ ಅಥವಾ ಹತ್ತಿರದ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದ ನಂತರ ರೈತರ ಸಂಪೂರ್ಣ ನಷ್ಟ ಲೆಕ್ಕಾಚಾರ ಮಾಡಿ ಸರ್ಕಾರ ಮಾರ್ಗಸೂಚಿ ಅನುಗುಣವಾಗಿ ವಿಮಾ ಸಂಸ್ಥೆಯಿಂದ ರೈತರಿಗೆ ಬೆಳೆ ವಿಮೆ ಪಾವತಿಸಲು ಅವಕಾಶ ವಿರುತ್ತದೆ.

ಇನ್ನೊಂದು ಪ್ರಕಾರದ ವಿಮೆ ಒದಗುವುದು ಅದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ಮತ್ತು ಕೃಷಿಯೇತರ ಇಲಾಖೆ ಅಧಿಕಾರಿಗಳು ಮತ್ತು ವಿಮಾ ಸಂಸ್ಥೆಯ ಪ್ರತಿನಿಧಿ ಸಹಯೋಗದಲ್ಲಿ ನಾಲ್ಕು ಕಡೆ Crop cutting Experiment ಬೆಳೆ ಅಂದಾಜು ಸಮೀಕ್ಷೆ ಮಾಡಲಾಗುತ್ತದೆ. ಈ ನಾಲ್ಕು ಸಮೀಕ್ಷೆಯಲ್ಲಿ ಅಧಿಸೂಚಿತ ಬೆಳೆ ವಿಮೆ 5*5 ಮೀಟರ್‍ ಅಳತೆಯಲ್ಲಿ ಬೆಳೆಯನ್ನು ಕಟಾವು ಮಾಡುವುದರ ಮೂಲಕ ಇಳುವರಿಯನ್ನು ಲೆಕ್ಕಚಾರ ಮಾಡಿ. ಅಂತಿಮವಾಗಿ ಸರಾಸರಿ ಇಳುವರಿ ಕಡಿಮೆ ಬಂದಲ್ಲಿ ಆ ಒಂದು ಗ್ರಾಮ ಪಂಚಾಯಿತಿ ಒಳಪಡುವ ಅಥವಾ ಅಧಿಸೂಚಿತ ಘಟಕದಡಿ ಬರುವ ರೈತರಿಗೆ ಬೆಳೆ ವಿಮೆಯನ್ನು ಸಂಬಂದ ಪಟ್ಟ ವಿಮಾ ಕಂಪನಿಗಳು ಪಾವತಿಸಬೇಕಾಗುತ್ತದೆ.

ಶಿವಮೊಗ್ಗ ಜಿಲ್ಲೆಯ ,ರೈತರ ವಿಮಾ ಕಂತಿನ ದರಗಳು ಮತ್ತು ನೋಂದಣಿಗೆ ಅಂತಿಮ ದಿನಾಂಕಗಳ ವಿವರ ಈ ಕೆಳಕಂಡತಿದೆ:

ಹೋಬಳಿ ಮಟ್ಟ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಒಳಗೊಂಡಿರುವ ಬೆಳೆಗಳ ಪಟ್ಟಿ:

ಬೆಳೆ ವಿಮೆ ಅರ್ಜಿ ಚೆಕ್ ಮಾಡುವ ಲಿಂಕ್ : Bele Vime Status Check link:

https:/samrakshane.karnataka.gov.in/ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಕರಕ್ಷಣೆ ಪೋರ್ಟಲ್ ತೆರೆದ ಮೇಲೆ ಅರ್ಜಿದಾರರ ಆಧಾರ್‍ ನಂಬರ ಅಥವಾ ಮೊಬೈಲ್ ನಂಬರ್‍ ಹಕಿ ಬೆಳೆ ವಿಮೆ ಅರ್ಜಿಯ ಹಂತ ವಿಕ್ಷೀಸಬಹುದು.

ಇತ್ತೀಚಿನ ಸುದ್ದಿಗಳು

Related Articles