Sunday, October 6, 2024

Plant nutrient deficiency-ನಿಮ್ಮ ಬೆಳೆಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಉಪ ಪ್ರಧಾನ ಪೋಷಕಾಂಶ/ಗೊಬ್ಬರಗಳ ಕೊರತೆ ಇದೆ ಎಂದರ್ಥ!

ಸಸ್ಯಗಳ ಆರೋಗ್ಯಪೂರ್ಣ ಬೆಳವಣಿಗೆಗೆ ಓಟ್ಟು 16 ಪೋಷಕಾಂಶಗಳು ಅವಶ್ಯವೆಂದು ಗುರುತಿಸಲಾಗಿದೆ. ಈ ಪೈಕಿ ವಾತಾವರಣ ಮತ್ತು ನೀರಿನಿಂದ ದೊರೆಯುವ ಅತಿ ಹೆಚ್ಚು ಪ್ರಮಾಣದಲ್ಲಿ ಬೇಕಾಗುವ ಇಂಗಾಲ, ಆಮ್ಲಜನಕ, ಜಲಜನಕಗಳನ್ನು ಹೊರತುಪಡಿಸಿ, ಉಳಿದವುಗಳನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.

1)ಪ್ರಧಾನ ಪೋಷಕಾಂಶಗಳು-ಸಾರಜನಕ, ರಂಜಕ, ಪೊಟ್ಯಾಷ್‌

2)ಉಪ ಪ್ರಧಾನ ಪೋಷಕಾಂಶಗಳು-ಕ್ಯಾಲ್ಸಿಯಂ, ಮೆಗ್ನೀಷಿಯಂ, ಗಂಧಕ

3)ಲಘು ಪೋಷಕಾಂಶಗಳು-ಕಬ್ಬಿಣ, ಮ್ಯಾಂಗನೀಸ್‌, ಸತು, ಬೋರಾನ್‌, ತಾಮ್ರ, ಮಾಲಿಬ್ಡಿನಂ, ಕ್ಲೋರಿನ್.‌

ಇದನ್ನೂ ಓದಿ:ಕ್ರಿಮಿನಾಶಕಗಳನ್ನು ಬಳಸುವಾಗ ರೈತರು ತೆಗೆದುಕೊಳ್ಳಬೇಕಾದ ಮುನ್ನಚ್ಚೆರಿಕೆ ಕ್ರಮಗಳ ಬಗ್ಗೆ ನಿಮಗೆ ಗೊತ್ತೆ?

ಈಗ ನಾವು ಉಪ ಪ್ರಧಾನ ಪೋಷಕಾಂಶಗಳಾದ-ಕ್ಯಾಲ್ಸಿಯಂ, ಮೆಗ್ನೀಷಿಯಂ, ಗಂಧಕ ಇವುಗಳ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳುವ.

                              ಸುಣ್ಣ(ಕ್ಯಾಲ್ಸಿಯಂ)

ಪ್ರಾರಂಭದಲ್ಲಿ ಬೇರು ಮತ್ತು ಕುಡಿಗಳ ಬೆಳವಣಿಗೆಗೆ ನೆರವಾಗುತ್ತದೆ. ಭೂಮಿಯಲ್ಲಿ ಸಸ್ಯ ವಸ್ತುಗಳು ಕಳಿಯಲು ಹಾಗೂ ಆ ವಸ್ತುಗಳಿಂದ ನೈಟ್ರೇಟ್‌ ಸಿದ್ಧವಾಗಲು ಸಹಾಯಕ ಮಣ್ಣಿನ ಭೌತಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಆಮ್ಲತೆಯನ್ನು ಕಡಿಮೆ ಮಾಡಿ ನಂಜಿನ ವಸ್ತುಗಳಿಂದಾಗುವ ಹಾನಿಯನ್ನು ತಪ್ಪಿಸುತ್ತದೆ. ಎಲೆ ಮುದುರುವಿಕೆ ಮೊದಲಾದ ರೋಗಗಳಿಂದ ಸಸ್ಯಗಳನ್ನು ರಕ್ಷಿಸುತ್ತದೆ. ಇತರೆ ಸಸ್ಯ ಪೋಷಕಾಂಶಗಳನ್ನು ಬೆಳೆಗಳು ಪಡೆಯಲು ನೆರವಾಗುತ್ತದೆ. ಕ್ಯಾಲ್ಸಿಯಂ ಇದರ ನಿವಾರಣೆಗೆ ಭೂಮಿಗೆ ಸುಣ್ಣ ಹಾಕಬೇಕು.

ಸುಣ್ಣ(ಕ್ಯಾಲ್ಸಿಯಂ) ಕೊರತೆಯ ಲಕ್ಷಣಗಳು:

1)ಸಸ್ಯಗಳ ತುದಿಗಳು ಸರಿಯಾಗಿ ಬೆಳೆಯುದಿಲ್ಲ ಹಾಗೂ ಬಾಡಿದಂತೆ ಕಾಣುತ್ತದೆ.

2)ಸರಿಯಾಗಿ ಹೂ ಬಿಡುವುದಿಲ್ಲ.

3)ಬೇರುಗಳ ಬೆಳವಣಿಗೆ ಕುಂಠಿತ.

                        ಮೇಗ್ನಿಷಿಯಂ

ಮೇಗ್ನಿಷಿಯಂ ಪತ್ರ ಹರಿತ್ತಿನ ಒಂದು ಭಾಗವಾಗಿದ್ದು, ಬೆಳೆಗಳಿಗೆ ದಟ್ಟ ಹಸಿರು ಬಣ್ಣ ಬರಲು ಕಾರಣವಾಗಿದೆ. ಹಲವಾರು ಕಿಣ್ವಗಳ ಕ್ರಿಯೆಯಲ್ಲಿ ಪಾತ್ರವಹಿಸುತ್ತದೆ. ಮೇಗ್ನಿಷಿಯಂ ತೆನೆಗಳ ನಿರ್ಮಾಣ ಹಾಗೂ ಬೆಳೆಗಳ ಮಾಗುವಿಕೆಯಲ್ಲಿ, ದ್ವಿದಳ ಧಾನ್ಯಗಳ ಬೇರುಗಳ ಮೇಲಿನ ಗಂಟುಗಳ ನಿರ್ಮಾಣ, ತೆಂಡೆಗಳು ಒಡೆಯುವುದಕ್ಕೆ ನೆರವಾಗುತ್ತದೆ. ಮೇಗ್ನಿಷಿಯಂ ಇದರ ನಿವಾರಣೆಗೆ ಶಿಫಾರಸ್ಸಿನ ಪ್ರಮಾಣದಲ್ಲಿ ಮೇಗ್ನಿಷಿಯಂ ಸಲ್ಫೇಟ್‌ ಉಪಯೋಗಿಸಬೇಕು.

ಮೇಗ್ನಿಷಿಯಂ ಕೊರತೆಯ ಲಕ್ಷಣಗಳು:

1)ಕೆಳಗಿನ ಎಲೆಗಳ ಕೆಳಭಾಗವು ತಿಳಿ ನೇರಳೆ ಬಣ್ಣಕ್ಕೆ ತಿರುಗುವುದು.

2)ಎಲೆಗಳು ಬಹಳ ತೆಳುವಾಗುತ್ತವೆ ಹಾಗೂ ಮೇಲ್ಭಾಗಕ್ಕೆ ಮುದುರಿಕೊಳ್ಳುವುದು.

3)ಎಳೆ ಎಲೆಗಳು ಒಣಗಿ ಉದುರುವುದು.

ಇದನ್ನೂ ಓದಿ:ಮನೆಯಲ್ಲೇ ಕುಳಿತು ಆಧಾರ್‌ ಕಾರ್ಡ ಸಂಖ್ಯೆ ಹಾಕಿ ಯಾವ ಯೋಜನೆಗಳಡಿ ಎಷ್ಟು ಹಣ ಬಂದಿದೆ ಎಂದು ತಿಳಿದುಕೊಳ್ಳಲು ಇಲ್ಲಿದೆ ಮಾಹಿತಿ.

                              ಗಂಧಕ

ಬೇರುಗಳ ಬೆಳವಣಿಗೆಯಲ್ಲಿ ನೆರವಾಗುತ್ತದೆ. ಬೀಜಗಳ ಬೆಳವಣಿಗೆಯಲ್ಲೂ ಚೇತನ ನೀಡುವುದು. ಬೀಜಗಳಲ್ಲಿ ಎಣ್ಣೆ ಅಂಶ ಹೆಚ್ಚಿಸಲು ಸಹಾಯವಾಗುವುದು. ಪೈರು ಶಕ್ತಿಯುತವಾಗಿ ಬೆಳೆಯಲು ಸಹಕಾರಿ. ಗಂಧಕದ ನಿವಾರಣೆಗೆ ಅಮೋನಿಯಂ ಸಲ್ಫೇಟ್‌ ಗೊಬ್ಬರ ಹಾಗೂ ಸಾವಯವ ಗೊಬ್ಬರ ಉಪಯೋಗಿಸುವುದು.

ಗಂಧಕ ಕೊರತೆಯ ಲಕ್ಷಣಗಳು:

1)ಎಳೆ ಎಲೆಗಳು ತಿಳಿ ಹಸಿರು ಬಣ್ಣದಿಂದಿದ್ದು ಹಳದಿ ಬಣ್ಣಕ್ಕೆ ತಿರುಗುತ್ತದೆ.

2)ಕಾಂಡಗಳು ಚಿಕ್ಕದಾಗಿ ಮೃದುವಾಗಿರುತ್ತದೆ.

3)ಬೆಳವಣಿಗೆ ಕುಂಠಿತಗೊಳ್ಳುತ್ತದೆ.

4)ಕಾಯಿಗಳು ಸರಿಯಾಗಿ ಮಾಗದೆ ತಿಳಿ ಹಸಿರು ಬಣ್ಣಕ್ಕೆ ತಿರುಗುತ್ತದೆ.

5)ತೆನೆಗಳು ಚಿಕ್ಕದಾಗಿ ಕಾಳುಗಳ ಸಂಖ್ಯೆ ಕಡಿಮೆಯಾಗುತ್ತದೆ.

6)ಬೆಳೆ ಮಾಗುವುದು ನಿಧಾನ.

ಇತ್ತೀಚಿನ ಸುದ್ದಿಗಳು

Related Articles