Thursday, September 19, 2024

ಇಲಾಖೆಯಿಂದ ರೈತರಿಗೆ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ ಖರೀದಿಗೆ ಸಹಾಯಧನದಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ.

ಇತ್ತೀಚೀನ ದಿನಮಾನಗಳಲ್ಲಿ ರೈತರಿಗೆ ಕೃಷಿ ಮಾಡಲು ಕೂಲಿಗಳ ಸಮಸ್ಯೆ ಬಹಳ ತೊಂದರೆಯಾಗಿರುವುದು ನಮಗೆಲ್ಲಾ ಗೋತ್ತಿರುವ ವಿಚಾರ ,ಆಧುನಿಕ ಯುಗದಲ್ಲಿ ಕೂಲಿಗಳಿಂದ ಕೆಲಸ ಮಾಡಿಸುವುದರಿಂದ ಬಹಳ ನಿಧಾನವಾಗಿ ಕೆಲಸ ಆಗುತ್ತೆ,ಹಾಗಾಗಿ ರೈತರು ಯಂತ್ರೋಪಕರಣಗಳ ಕೃಷಿ ಬಳಸುವುದರಿಂದ ಕೆಲಸ ವೇಗ ಪಡೆದು ಮುಂದಿನ ಕೆಲಸಕ್ಕೆ ಅನುವು ಮಾಡಿಕೊಳ್ಳಬಹುದು.

ಕೃಷಿ ಯಾಂತ್ರಿಕರಣ ಯೋಜನೆಯಡಿಯಲ್ಲಿ ರೈತರಿಗೆ ಕೃಷಿ ಉಪಕರಣಗಳ ಖರೀದಿಗೆ 3 ಲಕ್ಷ ರೂಪಾಯಿ ವರೆಗೆ ಸಹಾಯಧನ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಯಾವ್ಯಾವ ಉಪಕರಣಗಳಿವೆ ಎಷ್ಟು ಸಬ್ಸಿಡಿ? ಸಂಪೂರ್ಣ ಮಾಹಿತಿ ಇಲ್ಲಿದೆ.


ಇಂದು ಜಾನುವಾರು ಆಧಾರಿತ ಕೃಷಿ ಕಾರ್ಯಗಳು ಕಡಿಮೆಯಾಗಿದ್ದು ಬಹುತೇಕ ಕೃಷಿ ಚಟುವಟಿಕೆಗಳು ಯಂತ್ರೋಪಕರಣಗಳ ಮೇಲೇಯೆ ಅವಲಂಬಿತವಾಗುತ್ತಿವೆ. ಇದಕ್ಕೆ ಪೂರಕವಾಗಿ ಸರಕಾರ ಕೂಡ ಕೃಷಿ ಯಂತ್ರಧಾರೆ, ಕೃಷಿ ಯಾಂತ್ರಿಕತಣ ಯೋಜನೆಯಂತಹ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

ಮಾತ್ರವಲ್ಲ ಇದೇ ಜನವರಿ 31 ರಂದು ರೈತರು ಬಳಸುವ ಕೃಷಿ ಯಂತ್ರಗಳಿಗೆ ಉಚಿತ ಡೀಸೆಲ್ ನೀಡುವ ರೈತ ಶಕ್ತಿ ಯೋಜನೆಯನ್ನು ಕೂಡ ಅನುಷ್ಟಾನಗೊಳಿಸಲಾಗಿದೆ.

ಇದನ್ನೂ ಓದಿ: ಸಿರಿಧಾನ್ಯ ಬೆಳೆದ ರೈತರಿಗೆ ಹೆಕ್ಟೇರ್‍ ಗೆ 15,000 ರೂ ಪ್ರೋತ್ಸಾಹಧನ


ಶೇ. 90ರಷ್ಟು ಸಹಾಯಧನ


ಬಹುಮುಖ್ಯವಾಗಿ ರೈತರ ಕೃಷಿ, ತೋಟಗಾರಿಕೆ ಚಟುವಟಿಕೆಗಳನ್ನು ಸುಲಭಗೊಳಿಸುವ ಹಾಗೂ ಖರ್ಚು ಸಮಯವನ್ನು ಕಡಿಮೆ ಮಾಡುವ ಸದುದ್ದೇಶದಿಂದ ಅನುಷ್ಠಾನಗೊಳಿಸಿರುವ ಕೃಷಿ ಯಾಂತ್ರಿಕರಣ ಯೋಜನೆಯಲ್ಲಿ ರೈತರಿಗೆ ಕೃಷಿ ಉಪಕರಣಗಳ ಖರೀದಿಗೆ ಶೇ. 90ರಷ್ಟು ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯವತಿಯಿಂದ ಭೂಮಿ ಸಿದ್ದತೆಯಿಂದ ಹಿಡಿದು ಕೊಯ್ಲುವರೆಗೂ ವಿವಿಧ ಕೃಷಿ ಯಂತ್ರೋಪಕರಣಗಳ ಖರೀದಿಗೆ ಈ ಸಹಾಯಧನ ನೀಡಲಾಗುತ್ತಿದೆ.


ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಲಭ್ಯತೆ ಆಧಾರದ ಮೇಲೆ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಟ್ರ್ಯಾಕ್ಟರ್ ಚಾಲಿತ ಎಂ.ಬಿ.ಪ್ಲೋ, ರೋಟೋವೇಟರ್, ಡಿಸ್ಕ್ ಪ್ಲೋ, ಡಿಸ್ಕ ಹ್ಯಾರೋ ಸೇರಿದಂತೆ ವಿವಿಧ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಸಿಗಲಿದೆ.

ಯಾವುದಕ್ಕೆ ಎಷ್ಟು ಸಹಾಯಧನ?


ಮಿನಿ ಟ್ರ್ಯಾಕ್ಟರ್ : ಮಿನಿ ಟ್ರ್ಯಾಕ್ಟರ್ ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗರಿಷ್ಠ 3 ಲಕ್ಷ ರೂಪಾಯಿ ವರೆಗೆ ಸಹಾಯಧನ ಸಿಗಲಿದೆ. ಸಾಮಾನ್ಯ ವರ್ಗದವರಿಗೆ 75,000/-ರೂಪಾಯಿ ವರೆಗೆ ಸಹಾಯಧನ ಸಿಗಲಿದೆ.


ಪವರ್ ಟಿಲ್ಲರ್ : ಖರೀದಿಗೆ ಸಾಮಾನ್ಯ ವರ್ಗದವರಿಗೆ ಶೇ 50ರಷ್ಟು ಸಹಾಯಧನ ಗರಿಷ್ಠ 72,500/- ರೂಪಾಯಿವರೆಗೆ ಸಹಾಯಧನ ಸಿಗಲಿದೆ. ಅದೇರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.90ರಷ್ಟು ಸಹಾಯಧನ, ಗರಿಷ್ಟ 1 ಲಕ್ಷ ರೂಪಾಯಿವರೆಗೆ ಸಹಾಯಧನ ಸಿಗಲಿದೆ.

ಟ್ರ್ಯಾಕ್ಟರ್ ಚಾಲಿತ ಎಂ.ಬಿ.ಪ್ಲೋ ಪಿಕ್ಸ್ಡ್ : ಸಾಮಾನ್ಯ ವರ್ಗದವರಿಗೆ 14,100/- ರೂಪಾಯಿ ರಿವರ್ಸಿಬಲ್ ಎಂ.ಬಿ.ಪ್ಲೋಗೆ 25,800/- ರೂಪಾಯಿ ಸಹಾಯಧನ ಸಿಗಲಿದೆ. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಎಂ.ಬಿ.ಪ್ಲೋಗೆ 25,830/- ರೂಪಾಯಿ ರಿವರ್ಸಿಬಲ್ ಎಂ.ಬಿ.ಪ್ಲೋಗೆ 51,300/- ರೂಪಾಯಿ ಸಹಾಯಧನ ಸಿಗಲಿದೆ.

ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಪ್ಲೋ : ಖರೀದಿಗೆ ಸಾಮಾನ್ಯ ವರ್ಗದವರಿಗೆ 29,000/- ದಿಂದ 36500/- ರೂಪಾಯಿ ವರೆಗೆ ಪರಿಶಿಷ್ಟ ಜಾತಿ ಪಂಗಡದವರಿಗೆ 52,200/- ರೂಪಾಯಿಯಿಂದ 65,700 ರೂಪಾಯಿ ವರೆಗೆ ಸಹಾಯಧನ ಸಿಗಲಿದೆ.
ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಹ್ಯಾರೋ: ಸಾಮಾನ್ಯ ವರ್ಗದವರಿಗೆ 29,000-35,000/- ರೂಪಾಯಿ ವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 52,200 ರಿಂದ 63,000/-ರೂಪಾಯಿ ವರೆಗೆ ಸಹಾಯಧನ ಸಿಗಲಿದೆ.

ಇದನ್ನೂ ಓದಿ: ಬೋರ ವೆಲ್ ಕೊರೆಸಲು 2 ಲಕ್ಷ ಸಹಾಯಧನ ಯಾವ ನಿಗಮದಿಂದ , ಯಾರಿಗೆ ಮಾಹಿತಿ ತಿಳಿದುಕೊಳ್ಳಿ.

ಈ ಸೌಲಭ್ಯ ಪಡೆಯಲು ಬೇಕಾಗುವ ದಾಖಲೆಗಳೆನು?

ರೈತರ ಜಮೀನಿನ ಪಹಣಿ (RTC), ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್ ಹೊಂದಿರಬೇಕು. ಪಹಣಿ ಜಂಟಿಯಾಗಿದ್ದರೆ ಒಪ್ಪಿಗೆ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕು. ಜೊತೆಗೆ ರೈತರು Fruits ID ಹೊಂದಿರಬೇಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು ರೈತರು ಯಾವ ಕೃಷಿ ಯಂತ್ರೋಪಕರಣಕ್ಕೆ ಅರ್ಜಿ ಸಲ್ಲಿಸುತ್ತಾರೋ ಆ ಅರ್ಜಿ ನಮೂನೆ ಹೊಂದಿರಬೇಕು.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಪ್ರತಿ ವರ್ಷ ಕೃಷಿ ಯಾಂತ್ರಿಕರಣ ಯೋಜನೆಯಡಿ ಕೃಷಿ ಉಪಕರಣ ಖರೀದಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಜಿಲ್ಲಾವರು ಅರ್ಜಿ ಆವ್ಹಾನಿಸಲಾಗಿರುತ್ತದೆ. ಆಗ ಆಯಾಯ ಜಿಲ್ಲೆಯ ರೈತರು ಅರ್ಜಿ ಸಲ್ಲಿಸಿ ಈ ಯೋಜನೆಯ ಸೌಲಭ್ಯ ಪಡೆಯಬಹುದು. ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಲಭ್ಯತೆ ಆಧಾರದ ಮೇರೆಗೆ ನೀಡಲಾಗುವುದು ಲಭ್ಯತೆ ಮತ್ತು ಹಿರಿತನ ಎಂದರೆ ಆಯಾಯ ಜಿಲ್ಲೆಯಲ್ಲಿರುವ ಅನುಧಾನ ಲಭ್ಯತೆ ಹಾಗೂ ಮೊದಲು ಬಂದ ಅರ್ಜಿ ಆಧಾರದ ಮೇಲೆ ಕೃಷಿ ಯಾಂತ್ರಿಕರಣ ಯೋಜನೆ ಸೌಲಭ್ಯ ನೀಡಲಾಗುತ್ತದೆ.


ಈ ಕುರಿತು ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

ಇತ್ತೀಚಿನ ಸುದ್ದಿಗಳು

Related Articles