Sunday, September 8, 2024

First installment drought relief: ಮೊದಲ ಕಂತಿನ ಬರ ಪರಿಹಾರ ಹಣ ಜಮಾ ನಿಮಗೂ ಬಂದಿರುವುದು ಚೆಕ್ ಮಾಡಿ!!!

ಆತ್ಮೀಯ ರೈತ ಬಾಂದವರೇ ರಾಜ್ಯ ಸರ್ಕಾರ ರಾಜ್ಯದ ಅನ್ನದಾತರಿಗೆ ಶುಭ ಸುದ್ದಿ ನೀಡಿದೆ, ರಾಜ್ಯ ಸರ್ಕಾರದಿಂದ 2023 24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಬರಗಾಲ ಉಂಟಾದ ಹಿನ್ನೆಲೆಯಲ್ಲಿ ಘೋಷಿಸಲಾದ ಪರಿಹಾರ ಧನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಹೌದು ಗರಿಷ್ಠ 2000/- ರೂ. ವರೆಗೆ ತಾತ್ಕಾಲಿಕ ಬೆಳೆ ಪರಿಹಾರವನ್ನ ಆರ್ಹ ರೈತರಿಗೆ ನೀಡಲು ರಾಜ್ಯ ಸರ್ಕಾರ ಶುಕ್ರವಾರ 105 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ರೈತರ ಖಾತೆಗೆ ಹಣ ಜಮಾ ಆಗಿರುವ ಸ್ಟೇಟಸ್ ಚೆಕ್ ಮಾಡುವ ಸಂಪೂರ್ಣ ವಿಧಾನ ಈ ಲೇಖನದಲ್ಲಿ ವಿವರಿಸಲಾಗಿದೆ.

2023ನೇ ಸಾಲಿನ ಜೂನ್ ರಿಂದ ಸೆಪ್ಟೆಂಬರ್ ಮಾಹೆಯವರೆಗಿನ ಮುಂಗಾರಿನಲ್ಲಿ ಶೇ. 25 ರಷ್ಟು ಮಳೆಕೊರತೆ ಕಂಡು ಬಂದಿದೆ. ಕೇಂದ್ರ ಸರ್ಕಾರದ ಬರ ಕೈಪಿಡಿ-2020 ರಲ್ಲಿ ಬರ ಪರಿಸ್ಥಿತಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳಂತೆ,
ಹಂತ-1 ರಲ್ಲಿ ಕಡ್ಡಾಯ ಮಾನದಂಡಗಳಾದ ಮಳೆ ಕೊರತೆ (ಶೇ.60ಕ್ಕಿಂತ ಹೆಚ್ಚು) ಅಥವಾ ಸತತ ಮೂರು ವಾರಗಳ ಅಥವಾ ಅದಕ್ಕಿಂತ ಹೆಚ್ಚು ಶುಷ್ಕ ವಾತಾವರಣ (Dry Spell) ಕಂಡು ಬಂದಿರಬೇಕು.


ಹಂತ-2 ರಲ್ಲಿ ತತ್ಪರಿಣಾಮ ಮಾನದಂಡಗಳಾದ ಕೃಷಿ ಬಿತ್ತನೆ ಪ್ರದೇಶ ಉಪಗ್ರಹ ಆಧಾರಿತ ಬೆಳೆ ಆರೋಗ್ಯ ಸೂಚ್ಯಂಕ (NDVI/ NDWI-Dev (%) and VIC (%)) ತೇವಾಂಶ ಕೊರತೆ (MAI) ಹಾಗೂ ನದಿಗಳಲ್ಲಿನ ಹರಿವು, ಜಲಾಶಯಗಳ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟ ಸೂಚ್ಯಂಕಗಳಲ್ಲಿನ ತೀವ್ರತೆಯನ್ನು ಪರಿಶೀಲಿಸಿ ಬರಕ್ಕೆ ತುತ್ತಾಗಿರುವ ತಾಲ್ಲೂಕುಗಳನ್ನು ಗುರುತಿಸಿ, ಬೆಳೆ ಸಮೀಕ್ಷೆ ದೃಡೀಕರಣ (Ground Truthing) ವರದಿ . ಜಿಲ್ಲಾಧಿಕಾರಿಗಳಿಂದ ಪಡೆದು, ಬರ ವರ್ಗೀಕರಣ (ಸಾಧಾರಣ & ತೀವ್ರ) ಮಾಡಲಾಗಿದೆ.

ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ಬರ ನಿರ್ವಹಣೆ ಕೈಪಿಡಿ 2020 ರನ್ವಯ, ಜೂನ್ 1 ರಿಂದ ಆಗಸ್ಟ್ 19 ರವರೆಗಿನ ಅವಧಿಗೆ ಎಲ್ಲಾ ಮಾನದಂಡಗಳನ್ನು ವಿಶ್ಲೇಷಿಸಿ 195 ತಾಲ್ಲೂಕುಗಳನ್ನು ಬರ ಪರಿಸ್ಥಿತಿ ಕಂಡುಬಂದಿರುವ ತಾಲ್ಲೂಕುಗಳೆಂದು ಗುರುತಿಸಿ ಈ ತಾಲ್ಲೂಕುಗಳಲ್ಲಿ ಬೆಳೆ ಸಮೀಕ್ಷೆ ದೃಢೀಕರಣ (GT) ಕೈಗೊಂಡು 195 ತಾಲ್ಲೂಕುಗಳನ್ನು ಮೇಲೆ ಒದಲಾದ (1)ರ ಸರ್ಕಾರಿ ಆದೇಶ ದಿನಾಂಕ:13-9-2023ರಂದು ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ.

ಜೂನ್ ರಿಂದ ಸೆಪ್ಟಂಬರ್ ಅಂತ್ಯದ ಅವಧಿಗೆ ಎಲ್ಲಾ ಮಾನದಂಡಗಳನ್ನು ವಿಶ್ಲೇಷಿಸಿ 21 ತಾಲ್ಲೂಕುಗಳನ್ನು ಬರ ಪರಿಸ್ಥಿತಿ ಕಂಡುಬಂದಿರುವ ತಾಲ್ಲೂಕುಗಳೆಂದು ಗುರುತಿಸಿ ಈ ತಾಲ್ಲೂಕುಗಳಲ್ಲಿ ಬೆಳೆ ಸಮೀಕ್ಷೆ ದೃಢೀಕರಣ (GT) ಕೈಗೊಂಡು 21 ತಾಲ್ಲೂಕುಗಳನ್ನು ಮೇಲೆ ಒದಲಾದ (1)ರ ಆದೇಶ ದಿನಾಂಕ:12-10-2023ರಂದು ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ ಮತ್ತು ಜೂನ್ ರಿಂದ ಅಕ್ಟೋಬರ್ ಅಂತ್ಯದ ವರೆಗಿನ ಹವಾಮಾನ ಪರಿಸ್ಥಿತಿ ಅನುಗುಣವಾಗಿ 7 ತಾಲ್ಲೂಕುಗಳನ್ನು ಬರ ಪರಿಸ್ಥಿತಿ ಕಂಡುಬಂದಿರುವ ತಾಲ್ಲೂಕುಗಳೆಂದು ಗುರುತಿಸಿ, ಬೆಳೆ ಸಮೀಕ್ಷೆ ದೃಢೀಕರಣ (GT) ಕೈಗೊಂಡು 7 ತಾಲ್ಲೂಕುಗಳನ್ನು ಮೇಲೆ ಒದಲಾದ (1)ರ ಸರ್ಕಾರಿ ಆದೇಶ ದಿನಾಂಕ:04-11-2023ರಂದು ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ.

ಇದನ್ನೂ ಓದಿ: Drought relief Proposal: ಕೇಂದ್ರದಿಂದ 18,177 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ: ರಾಜ್ಯ ಸರ್ಕಾರ

ಮೊದಲ ಕಂತಿನ 2000/- ಹಣ ಬಿಡುಗಡೆ ಕೆಳಗೆ ಕೊಟ್ಟಿರುವ ಬೆಳೆ ಪರಿಹಾರದ ಸ್ಟೇಟಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊದಲು ಆಧಾರ್‍ ನಂಬರ್‍ ಹಾಕಿ, select calamity type ನಲ್ಲಿ drought ಆಯ್ಕೆ ಮಾಡಿ ವರ್ಷ ಸೀಸನ್ 2023-24 ಸೆಲೆಕ್ಟ್ ಮಾಡಿಕೊಳ್ಳಿ. ಆಧಾರ್‍ ನಮೂದಿಸಿ ನಂತರ captcha letter type ಗೇಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಪರಿಹಾರ ಜಮಾ ವಿವರ ಗೋಚರಿಸುತ್ತದೆ.

https://parihara.karnataka.gov.in/

ಸರ್ಕಾರ ಷರತ್ತುಗಳು ಹಾಗೂ ರೈತರಿಗೆ ಪರಿಹಾರ ಬಿಡುಗಡೆಗೊಳಿಸಿರುವ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ!!!

How much compensation for which crop ಯಾವ ಬೆಳೆಗೆ ಎಷ್ಟು ಪರಿಹಾರ?

ಮಳೆಯಾಶ್ರಿತ ಬೆಳೆ (ಪ್ರತಿ ಹೆಕ್ಟೇ‌ರ್) 8,500 ರೂ., ನೀರಾವರಿ ಬೆಳೆ 17,000 ರೂ., ಹಾಗೂ ಬಹು ವಾರ್ಷಿಕ ಬೆಳೆ 22,500 ರೂ. ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರ ಎನ್‌ಡಿಆರ್‌ವ್ ಅಡಿ ಈವರೆಗೂ ಅನುದಾನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಸದ್ಯಕ್ಕೆ ಬೆಳೆ ಹಾನಿ ಪರಿಹಾರದ ಮೊದಲ ಕಂತಾಗಿ ಪ್ರತಿ ರೈತರಿಗೆ ಗರಿಷ್ಠ 2 ಸಾವಿರ ರೂ. ವರೆಗೆ ಪಾವತಿ ಮಾಡಲು ರಾಜ್ಯ ಸರ್ಕಾರ 105 ಕೋಟಿ ರೂ.ಗಳನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರದ ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿ ಪ್ರಕಾರ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 8,500 ರು., ನೀರಾವರಿ ಬೆಳೆಗೆ 17,000 ರು., ಬಹುವಾರ್ಷಿಕ ಬೆಳೆಗೆ 22,500 ರು. ನಿಗದಿ ಮಾಡಲಾಗಿದೆ. ಆ ಪ್ರಕಾರ ಕೇಂದ್ರದಿಂದ ಬೆಳೆ ಹಾನಿ ಪರಿಹಾರ ಅನುದಾನ ಬಂದ ಬಳಿಕ ಹೆಚ್ಚುವರಿ ಮೊತ್ತಕ್ಕೆ ಅರ್ಹರಿರುವ ರೈತರಿಗೆ ಹೆಚ್ಚುವರಿ ಬೆಳೆಹಾನಿ ಪರಿಹಾರ ಬಿಡುಗಡೆಗೊಳಿಸಲಾಗುವುದು ಎ೦ದು ಕೂಡ ಸರ್ಕಾರ ಭರವಸೆ ನೀಡಿದೆ.

ಇದನ್ನೂ ಓದಿ: Krishi Bhagya Scheme 2023-24: 100 ಕೋಟಿ ವೆಚ್ಚ ದಲ್ಲಿ “ಕೃಷಿ ಭಾಗ್ಯ” ಯೋಜನೆ ಮರುಜಾರಿ:

ಇತ್ತೀಚಿನ ಸುದ್ದಿಗಳು

Related Articles