Sunday, April 20, 2025

Bisilin rakshane-ಬೇಸಿಗೆ ಸಮಯದಲ್ಲಿ ಬಿಸಿಲಿನಿಂದ ತೋಟಗಾರಿಕೆ ಬೆಳೆಗಳ ರಕ್ಷಣೆ ಹೇಗೆ? ಇಲ್ಲಿದೆ ಮಾಹಿತಿ.

ನಮಸ್ಕಾರ ರೈತರೇ, ಬಿರು ಬಿಸಿಲಿನ ಹೊಡೆತಕ್ಕೆ ತೋಟಗಾರಿಕೆ ಬೆಳೆಗಳು ನಲುಗುತ್ತಿವೆ. ಅದರಲ್ಲೂ ರಾಜ್ಯದ ಪ್ರಧಾನ ತೋಟಗಾರಿಕೆ ಬೆಳೆಗಳಲ್ಲಿ ತೆಂಗಿಗೆ ಬಿಸಿಲು ತಾಗುವುದು ಹೆಚ್ಚಾಗಿದೆ. ಅದಾರಿಂದ ಹೇಗೆ ರಕ್ಷಣೆ ಮಾಡಬೇಕು ಅದರ ಕ್ರಮಗಳ ಬಗ್ಗೆ ನಿಮಗೆ ಈ ಲೇಖನದಲ್ಲಿ ತಿಳಿಸಲಾಗುತ್ತದೆ.

ರಾಜ್ಯದಲ್ಲಿ ತೆಂಗು ಪ್ರಮುಖ ವಾಣಿಜ್ಯ ಬೆಳೆ. ವಿಶೇಷವಾಗಿ ಕಲ್ಪತರು ನಾಡು ತುಮಕೂರು ಒಂದರಲ್ಲೇ 2 ಲಕ್ಷ ಹೆಕ್ಟರ್‌ ಪ್ರದೇಶ ಮತ್ತು ರಾಜ್ಯದಲ್ಲಿ 7 ಲಕ್ಷ ಹೆಕ್ಟರ್‌ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ರೋಗಗಳಿಂದ ಬಳಲಿದ್ದ ತೆಂಗಿಗೆ ಈ ವರ್ಷ ಇನ್ನಿಲ್ಲದಂತೆ ಬಿರಿ ಬಿಸಿಲಿನ ತಾಪ ಕಾಡುತ್ತಿದೆ.

ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಇರುವ ರೈತರು ಬೆಳೆಗಳಿಗೆ ವಾರದಲ್ಲಿ ಎರಡರಿಂದ ಮೂರು ಬಾರಿ ಆದರೂ ನೀರು ಕೊಡಬೇಕಾಗುತ್ತದೆ. ನೀರು ಇಲ್ಲದೆ ಇದ್ದಲ್ಲಿ ಗಿಡದ ಬೆಳವಣಿಗೆ ಮತ್ತು ಇಳುವರಿ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ:ವಂಶವೃಕ್ಷ ಪ್ರಮಾಣ ಪತ್ರವನ್ನು ಎಲ್ಲಿ ಪಡೆಯಬೇಕು? ಮತ್ತು ಅದರ ಪ್ರಯೋಜನಗಳು!

ಬಿಸಿಲಿನಿಂದ ತೆಂಗು ರಕ್ಷಣೆ ಹೇಗೆ?

1)ತೆಂಗು ಬೆಳೆಗಾರರು ತೋಟದಲ್ಲಿ ತೇವಾಂಶ, ಕಳೆ ಮತ್ತು ಫಲವತ್ತತೆ ನಿರ್ವಹಣೆಗೆ ಹೆಚ್ಚಿನ ಗಮನಕೊಡಬೇಕು.

2)ಬಿಸಿಲಿನಲ್ಲಿ ನೀರು ಹೆಚ್ಚಾಗಿ ಆವಿ ಆಗುವುದರಿಂದ, ತೆಂಗಿನ ತೋಟದಲ್ಲಿ ತೇವಾಂಶ ಕಡಿಮೆಯಾಗದಂತೆ ನೋಡಬೇಕು.

3)ತೇವಾಂಶ ರಕ್ಷಣೆಗೆ ಹೊದಿಕೆ ಕ್ರಮ ಅತ್ಯಂತ ಪರಿಣಾಮ ಕಾರಿ ಕ್ರಮವಾಗಿದೆ.

4)ಮುಖ್ಯವಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು.

5)ಮಳೆ ನೀರು ಹರಿದು ಹೋಗದಂತೆ ತಡೆದು, ಬೂಮಿಯಲ್ಲಿ ಇಂಗಿಸಬೇಕು.

6)ಹಸಿರೆಲೆ ಗೊಬ್ಬರಗಳ ಬಳಕೆ ಮಾಡುವುದರಿಂದ ತೇವಾಂಶ ಕಡಿಮೆ ಆಗದಂತೆ ಮಾಡಬಹುದು.

7)ಕೃಷಿ ತ್ಯಾಜ್ಯಗಲ ಬಳಕೆ ಮಾಡಬೇಕು (ತೆಂಗಿನ ಗರಿ, ಅಡಿಕೆ ಗರಿ, ಕಾಡು ಸೊಪ್ಪು, ಇತ್ಯಾದಿ ಬಳಕೆ.

8)ಬೇಸಿಗೆ ಆರಂಭದಲ್ಲಿ ತೋಟವನ್ನು ಸ್ವಚ್ಛಗೊಳಿಸಬಾರದು. ಕಾರಣ ಭೂಮಿಯ ತೇವಾಂಶ ಆವಿಗೆ ಅನುಕೂಲವಾಗುತ್ತದೆ. ನೇರ ಸೂರ್ಯನ ಬಿಸಿಲು ಬಿದ್ದು ತೇವಾಂಸ ಆವಿ ಆಗುತ್ತದೆ.

9)ಬೇಸಿಗೆ ಆರಂಭದಲ್ಲಿ ಹೊದಿಕೆ ಬೆಳೆಗಳನ್ನು ಬೆಳೆಯಬೇಕು.(ನಸುಗುನ್ನಿ, ಹಸಿರೆಲೆ ಗೊಬ್ಬರ, ದ್ವಿದಳ ಧಾನ್ಯದ ಬೆಳೆಗಳು.

10)ಕೃಷಿ ತ್ಯಾಜ್ಯ ವಸ್ತುಗಳಿಂದ ಗಿಡದ ಬುಡಕ್ಕೆ ಹೊದಿಕೆ ಮಾಡಬೇಕು.

11)ಬೇಸಿಗೆ ಸಮಯದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಭೂಮಿ ಉಳುಮೆ ಮಾಡಬಾರದು.

12)ಗಿಡಗಳ ಬುಡಕ್ಕೆ ನೀರು ಹಿಡಿದಿಟ್ಟು ಕೊಳ್ಳುವ ಕೃಷಿ ತ್ಯಾಜ್ಯ ವಸ್ತುಗಳನ್ನು ಬಳಸಬೇಕು.

ಇದನ್ನೂ ಓದಿ: ಎರೆಹುಳು ಗೊಬ್ಬರದ ಮಹತ್ವ ಮತ್ತು ಪ್ರಯೋಜನಗಳು!

ಬೇಸಿಗೆ ಸಮಯದಲ್ಲಿ ಗಿಡಗಳಿಗೆ ಹೆಚ್ಚಿನ ನೀರು ಬೇಕಾಗುತ್ತದೆ. ಆದ್ದರಿಂದ ಹನಿ ನೀರಾವರಿ ಪದ್ದತಿ ಅಳವಡಿಕೆ ಮಾಡುವುದರಿಂದ ಗಿಡಗಳಿಗೆ ತುಂಬಾ ಉಪಯುಕ್ತವಾಗುತ್ತದೆ. ಹಾಗೂ ನೀರನ್ನು ಮಿತ ಬಳಕೆ ಮಾಡುವುದರಿಂದ ಹೆಚ್ಚು ದಿನ ಬಳಕೆ ಮಾಡಬಹುದು.

ರೈತರು ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ತಮ್ಮ ಜಮೀನಿನಲ್ಲಿ ಕೃಷಿ ಹೊಂಡಗಳನ್ನು ಮಾಡಿಸಿಕೊಳ್ಳಿ. ಇದರಿಂದ ಮಳೆ ನೀರು ಸಂಗ್ರಹಣೆ ಹಾಗೂ ಇಂಗಿಸಲು ಸುಲಭವಾಗುತ್ತದೆ. ಇದರಿಂದ ಬೇಸಿಗೆಯಲ್ಲೂ ನಿಮ್ಮ ಜಮೀನಿನ ಬೋರುವೆಲ್ ಗಳಲ್ಲಿ ನೀರು ಇರುತ್ತದೆ.

ಇತ್ತೀಚಿನ ಸುದ್ದಿಗಳು

Related Articles