ವಂಶಾವಳಿ ಅಥವಾ ವಂಶವೃಕ್ಷ, ವಾಸಸ್ಥಳ ಪ್ರಮಾಣ ಪತ್ರವಗಳನ್ನು ಹೇಗೆ ಪಡೆಯಬೇಕು, ವಂಶಾವಳಿ ಪ್ರಮಾಣ ಪತ್ರ ಅವಶ್ಯಕತೆ ಏನು, ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ವಂಶಾವಳಿ ಪ್ರಮಾಣ ಪತ್ರ ಪಡೆಯಲು ಬೇಕಾಗುವ ದಾಖಲೆಗಳು ಏನು ಇಲ್ಲಿದೆ ಸಂಪೂರ್ಣ ಮಾಹಿತಿ.
ಸರ್ಕಾರವು ಪ್ರಮಾಣ ಪತ್ರಗಳನ್ನು ಪಡೆಯಲು ಸರಳೀಕರಣಗೊಳಿಸಿ, ಕಾಗದರಹಿತ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕಾಗಿ ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಆನ್ಲೈನ್ ನಲ್ಲಿಯೇ ನೆಟ್ ಬ್ಯಾಂಕಿಂಗ್ ಮೂಲಕ ಪ್ರಮಾಣ ಪತ್ರಗಳಿಗೆ ನಿಗದಿಪಡಿಸಿದ ಶುಲ್ಕ ಪಾವತಿಸಿ ನಿರ್ಧಷ್ಟ ಅವಧಿಯಲ್ಲಿ ಪ್ರಮಾಣ ಪತ್ರ ಪಡೆಯಬಹುದು. ಹಾಗೂ ನಿಮ್ಮ ಗ್ರಾಮದಲ್ಲಿರುವ ಗ್ರಾಮ ಆಡಳಿತ ಅಧಿಕಾರಿ/ಗ್ರಾಮ ಲೆಕ್ಕಾಧಿಕಾರಿಗಳಲ್ಲಿ ವಂಶಾವಳಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.
ಇದನ್ನೂ ಓದಿ:ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆ ಲಕ್ಷಣಗಳು ಮತ್ತು ನಿರ್ವಹಣೆ ಕ್ರಮಗಳು!
ವಂಶಾವಳಿ ಬಗ್ಗೆ ಅನೇಕ ಗೊಂದಲಗಳು ಇರುತ್ತದೆ. ಹೆಣ್ಣು ಮಕ್ಕಳು ಮದುವೆಯಾದ ಬಳಿಕ ಅವರ ಹೆಸರು ಬೇಕಾ ಹೀಗೆ ಅನೇಕ ಗೊಂದಲ ಇರುತ್ತದೆ. ಆದರೆ ವಂಶಾವಳಿಯಲ್ಲಿ ಕುಟುಂಬದ ಸದಸ್ಯರೇ ಇರುವ ಕಾರಣ ಮಗಳು, ಸೊಸೆ, ಮೊಮ್ಮಗಳು ಎಲ್ಲರ ಹೆಸರು ಮಾಹಿತಿ ಇರಬೇಕು. ಅದೆ ರೀತಿ ಆಸ್ತಿ ಹಂಚಿಕೆ ಮಾಡುವಾಗ ವಂಶಾವಳಿಯಲ್ಲಿ ಇರುವವರಿಗೆ ಎಲ್ಲರಿಗೂ ಆಸ್ತಿ ನೀಡಬೇಕು ಎಂಬ ನಿಯಮ ಇಲ್ಲ. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಬೇಕು ಆದರೆ ಸ್ಚಯಾರ್ಜಿತ ಆಸ್ತಿಯಲ್ಲಿ ಭಾಗ ನೀಡುವ ಅಗತ್ಯ ಇರಲಾರದು
ವಂಶಾವಳಿ ಪತ್ರದ ಅವಶ್ಯಕತೆ ಎಲ್ಲೇಲ್ಲಿ?
* ಮನೆ & ಜಮೀನು ಭಾಗ ಸಮಯದಲ್ಲಿ ವಂಶಾವಳಿ ಪತ್ರ ಕಡ್ಡಾಯ.
* ಕುಟುಂಬದ ಆಸ್ತಿ ತಕರಾರಿಗೆ ಹಕ್ಕು ಸಾಧಿಸಲು.
* ಕುಟುಂಬ ಗುರುತಿಗಾಗಿ & ಸರ್ಕಾರದhesha Vani ಸೌಲಭ್ಯಕ್ಕಾಗಿ.
* ಜಮೀನು / ಮನೆ ಪಾಲು ಆಗಲು ವಂಶಾವಳಿ ಪತ್ರ ಕಡ್ಡಾಯ.
ವಂಶಾವಳಿ ಪತ್ರದ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.
* ಆಧಾರ ಕಾರ್ಡ್ ಬೇಕು. ಇಲ್ಲದಿದ್ದ ಪಕ್ಷದಲ್ಲಿ Vishesha Vani ವೋಟರ್ ಐಡಿ ಕಾರ್ಡ್.
* ಜನನ ಪತ್ರ.
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
* ಕಡ್ಡಾಯವಾಗಿ ನೀವು ಮೂಲ ನಿವಾಸಿಗಳು ಆಗಿರಬೇಕು.
* ರಹವಾಸಿ ಪತ್ರ ಹೊಂದಿರಬೇಕು.
ಉಪಯೋಗ ಏನು?
ಬ್ಯಾಂಕ ಸಾಲ, ಸರಕಾರದ ಸೌಲಭ್ಯಗಳು, ಅನುಕಂಪದ ನೌಕರಿ & ಯೋಜನಾ ನಿರಾಶ್ರಿತರ ಪರಿಹಾರ ಪಡೆಯಲು ಅವಶ್ಯಕತೆ ಇದೆ. ಅರ್ಜಿ ಸಲ್ಲಿಸಿದ ಕೇವಲ 7 ದಿನದಲ್ಲಿ ಈ ಪತ್ರವು ನಿಮಗೆ ದೊರೆಯುತ್ತದೆ.
ಇದನ್ನೂ ಓದಿ:ರೈತರ ಮಕ್ಕಳಿಗೆ 10ತಿಂಗಳ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ!
ಮನೆಯಲ್ಲಿಯೇ ವಂಶಾವಳಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬಯಸುವವರು https://nadakacheri.karnataka.gov.in/ajsk
ಈ ಮೇಲೆ ತಿಳಿಸಿದ ಲಿಂಕ್ ಮೂಲಕ ನಿಮ್ಮ ಮೊಬೈಲ್ ಗೂಗಲ್ ನಲ್ಲಿ ನಾಡ ಕಚೇರಿಯ ವೆಬ್ಸ್ಟೈಟ್ ಓಪನ್ ಮಾಡಿ. ಅಲ್ಲಿ ಆನ್ಲೈನ್ ಅಪ್ಲಿಕೇಷನ್ ಮೇಲೆ ಕ್ಲಿಕ್ ಮಾಡಬೇಕು. ಅಪ್ಲೈ ಆನ್ಲೈನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಿದ ನಂತರ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಬೇಕು. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಪೂರ್ಣಗೊಂಡನಂತರ ವಂಶಾವಳಿ ಅರ್ಜಿಯನ್ನು ಗ್ರಾ ಗ್ರಾಮ ಲೆಕ್ಕಾಧಿಕಾರಿಗೆ ನಂತರ ಕಂದಾಯ ನಿರೀಕ್ಷಕರಿಗೆ ಸಲ್ಲಿಸಲಾಗುತ್ತದೆ. ಅರ್ಜಿ ಪರಿಶೀಲಿಸಿದ ನಂತರ ಅವರು ಉಪ ತಹಸೀಲ್ದಾರರಿಗೆ ಸಲ್ಲಿಸುತ್ತಾರೆ. ಎಲ್ಲಾ ಹಂತಗಳು ಪೂರ್ಣಗೊಂಡನಂತರ 7 ದಿನಗಳೊಳಗೆ ಅರ್ಜಿ ಪಡೆಯಬಹುದು.
ಸೂಚನೆ: ಹೆಚ್ಚಿನ ಮಾಹಿತಿಗೆ ನಿಮ್ಮ ಗ್ರಾಮದಲ್ಲಿರುವ ಗ್ರಾಮ ಆಡಳಿತ ಅಧಿಕಾರಿ/ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ ಭೇಟಿ ಮಾಡಿ ವಿಚಾರಿಸಿ.