Sunday, April 20, 2025

Tarpal subsidy-ಕೃಷಿ ಇಲಾಖೆಯ ಮೂಲಕ ಸಬ್ಸಿಡಿ ದರದಲ್ಲಿ ಕಪ್ಪು ಟಾರ್ಪಾಲ್ ಪಡೆದುಕೊಳ್ಳುವ ವಿಧಾನ ಮತ್ತು ದಾಖಲೆಗಳು!

ನಮಸ್ಕಾರ ರೈತರೇ, ಕೃಷಿ ಇಲಾಖೆಯಲ್ಲಿ ರೈತರಿಗೆ ಹಲವಾರು ಕೃಷಿ ಉಪಯೋಗಕ್ಕೆ ಕೃಷಿ ವಸ್ತುಗಳ ವಿತರಣೆ ಮಾಡಲಾಗುತ್ತಿದೆ. ಅದರಲ್ಲಿ ಕೃಷಿ ರಾಶಿ ಮಾಡುವಾಗ, ಬೆಳೆ ಕೊಯ್ಲು ಮಾಡುವಾಗ ಮತ್ತು ಬೆಳೆಯನ್ನು ಮೇಶಿನ್ ಗೆ ಹಾಕುವಾಗ ಮತ್ತು ಮಳೆ ಬರುವ ಸಮಯದಲ್ಲಿ ಬೆಳೆ ರಕ್ಷಣೆ ಮಾಡಲು  ರೈತರಿಗೆ ಅನುಕೂಲವಾಗಲೆಂದು ಕಪ್ಪು ಟಾರ್ಪಾಲ್ ವಿತರಣೆ ಬಗ್ಗೆ ತಿಳಿದುಕೊಳ್ಳುವ.

ಹೌದು ರೈತರೇ, ಕೃಷಿ ಇಲಾಖೆಯಲ್ಲಿ ವಿತರಣೆ ಮಾಡುವ ಕೃಷಿ ಕಪ್ಪು ಟಾರ್ಪಾಲ್ ಅದನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ಅದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವವು ಎಂಬ ಇತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು.

ಕೆಲವು ಜಿಲ್ಲೆಗಳಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಇದ್ದು ಇನ್ನೂ ಕೆಲವು ಜಿಲ್ಲೆಗಳಲ್ಲಿ ಅರ್ಜಿ ಬಂದ ಕೂಡಲೇ ಸೌಲಭ್ಯ ನೀಡುವ ವ್ಯವಸ್ಥೆ ಇರುತ್ತದೆ. ಆದ್ದರಿಂದ ಕೃಷಿ ಇಲಾಖೆ ಭೇಟಿ ಮಾಡಿ ಮಾಹಿತಿ ವಿಚಾರಿಸಿ.

ಇದನ್ನೂ ಓದಿ:ಹಳದಿ ಕಲ್ಲಂಗಡಿ ಬೆಳೆದು ತೋರಿಸಿದ ಧಾರವಾಡದ ರೈತ! ಇಲ್ಲಿದೆ ಮಾಹಿತಿ.

ಕೃಷಿ ಇಲಾಖೆಯಲ್ಲಿ ಸಿಗುವ ಇತರೆ ಸೌಲಭ್ಯಗಳು:

ಕೃಷಿ ಇಲಾಖೆಯಲ್ಲಿ ಪವರ ಸ್ಪ್ರೇಯರ್, ಪವರ್ ವೀಡರ್, ಟಿಲ್ಲರ್, ಮಿನಿ ಟ್ರ್ಯಾಕ್ಟರ್, ಟ್ರ್ಯಾಕ್ಟರ್, ಮೋಟೋಕಾರ್ಟ್(ಕೈಗಾಡಿ), ಕೋನೋ ವೀಡರ್, ಪೆಟ್ರೋಲ್ ಬ್ಯಾಕ್ ಪ್ಯಾಕ್ ಸ್ಪ್ರೇಯರ್, ಕೆಲವು ಜಿಲ್ಲೆಗಳಲ್ಲಿ ಕಬ್ಬು ಕಟಾವು ಮೆಷಿನ್, ರಾಗಿ ಮತ್ತು ಭತ್ತ ಕಟಾವು ಮೆಷಿನ್, ಹೆಸರು, ಉದ್ದು ಕಟಾವು ಮೆಷಿನ್ ಇನ್ನೂ ಹಲವು ಕೃಷಿ ಸಂಬಂದಿಸಿದ ಯಂತ್ರೋಪಕರಣಗಳಿಗೆ ಅರ್ಜಿ ಸಲ್ಲಿಸಬಹುದು.

ಕೆಲವು ಜಿಲ್ಲೆಗಳಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಇದ್ದು ಇನ್ನೂ ಕೆಲವು ಜಿಲ್ಲೆಗಳಲ್ಲಿ ಅರ್ಜಿ ಬಂದ ಕೂಡಲೇ ಸೌಲಭ್ಯ ನೀಡುವ ವ್ಯವಸ್ಥೆ ಇರುತ್ತದೆ. ಆದ್ದರಿಂದ ಕೃಷಿ ಇಲಾಖೆ ಭೇಟಿ ಮಾಡಿ ಮಾಹಿತಿ ತಿಳಿದುಕೊಳ್ಳಿ.

Subsidy system-ಸಹಾಯಧನ ನೀಡುವ ವಿಧಾನ:

ಸಾಮಾನ್ಯ ವರ್ಗದ ಜನರಿಗೆ ಶೇ.50% ಸಹಾಯಧನ ನೀಡಲಾಗುತ್ತದೆ.

ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ದವರಿಗೆ ಶೇ.90% ಸಹಾಯಧನ ನೀಡಲಾಗುತ್ತದೆ.

Apply documents-ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು:

1)ನಿಗದಿತ ಅರ್ಜಿ ನಮೂನೆ

2)ಪಹಣಿ/RTC ಪ್ರತಿ

3)ಆಧಾರ್ ಪ್ರತಿ

4)ಬ್ಯಾಂಕ್ ಪಾಸ್ ಬುಕ್ ಪ್ರತಿ

5)1 ಫೋಟೋ

ಇದನ್ನೂ ಓದಿ:ನಿಮ್ಮ ಜಮೀನಿನ ಜಂಟಿ ಖಾತೆ/ಪಹಣಿ ಸರಿಪಡಿಸಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ.

ಟಾರ್ಪಾಲ್ ಮತ್ತು ಕೃಷಿ ಸವಲತ್ತುಗಳಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು:

ನಿಮ್ಮ ನಿಮ್ಮ ತಾಲೂಕಿನ ಹೋಬಳಿ ಮಟ್ಟದಲ್ಲಿರುವ ರೈತ ಸಂರ್ಪಕ ಕೇಂದ್ರ (ಕೃಷಿ ಇಲಾಖೆ) ಗಳಲ್ಲಿ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಹಾಗೂ ಹತ್ತಿರದ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ವಿಚಾರಿಸಿ.

ಇತ್ತೀಚಿನ ಸುದ್ದಿಗಳು

Related Articles