Sunday, April 20, 2025

Pmkisan reject list-ಪಿ ಎಂ ಕಿಸಾನ್ ಯೋಜನೆಯಡಿ 10 ಲಕ್ಷ ರೈತರು ಅನರ್ಹಗೊಂಡಿದ್ದಾರೆ! ಇಲ್ಲಿದೆ ಅಧಿಕೃತ ಪಟ್ಟಿ.

ನಮಸ್ಕಾರ ರೈತರೇ, ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರಾಜ್ಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(PM Kisan latest update 2025) ಅರ್ಜಿ ಸಲ್ಲಿಸಿದ ರೈತರಲ್ಲಿ 10 ಲಕ್ಷ ರೈತರ ಅರ್ಜಿಗಳು ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿವೆ ಅದರ ಮಾಹಿತಿ ಈ ಲೇಖನದಲ್ಲಿ ತಿಳಿದುಕೊಳ್ಳುವ.

ಯಾವೆಲ್ಲ ಕಾರಣಗಳಿಂದ ಅರ್ಜಿ ತಿರಸ್ಕೃತಗೊಂಡಿವೆ ಎಂದರೆ ಇ-ಕೆವೈಸಿ ಮಾಡಿಕೊಳ್ಳದ ಮತ್ತು ಆಸ್ತಿ ತೆರಿಗೆಯನ್ನು ಪಾವತಿ ಮಾಡುವ, ಭೂ ದಾಖಲೆಗಳು ಸರಿಯಾಗಿಲ್ಲದ ಒಟ್ಟು10 ಲಕ್ಷ ರೈತರಿಗೆ ಈ ಯೋಜನೆಯ ಆರ್ಥಿಕ ನೆರವು ಕೈತಪ್ಪಿದು ಈ ಕುರಿತು ಇದಕ್ಕೆ ಸಂಬಂಧಿಸಿದ ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದ(PM Kisan latest update) ಎಲ್ಲ ವರ್ಗದ ರೈತರಿಗೆ ಒಂದು ವರ್ಷದಲ್ಲಿ ತಲಾ ಮೂರು ಕಂತುಗಳಲ್ಲಿ ರೂ 2,000 ಸಾವಿರದಂತೆ ಒಟ್ಟು ರೂ 6,000 ಆರ್ಥಿಕ ನೆರವನ್ನು ಈ ಯೋಜನೆಯಡಿ ನೇರ ನಗದು ವರ್ಗಾವಣೆ(DBT) ಮೂಲಕ ಜಮಾ ಮಾಡಲಾಗುತ್ತದೆ.

ಕಿಸಾನ್ ನಿಧಿ ಯೋಜನೆಯಡಿ ಕೆಲವು(PM Kisan status) ತಾಂತ್ರಿಕ ಕಾರಣಗಳಿಂದ ಮತ್ತು ಮಾರ್ಗಸೂಚಿಯನ್ವಯ ಅನರ್ಹ ರೈತರಿಗೆ ಈ ಯೋಜನೆಯ ಹಣ ವರ್ಗಾವಣೆ ಸ್ಥಗಿತವಾಗಿದ್ದು ಇದರ ಮಾಹಿತಿಯನ್ನು ರೈತರು ತಮ್ಮ ಮೊಬೈಲ್ ನಲ್ಲೇ ಮನೆಯಲ್ಲಿದ್ದು ಅರ್ಹ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಹೇಗೆ ಚೆಕ್ ಮಾಬೇಕು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ:ಕೃಷಿ ಇಲಾಖೆಯಿಂದ ಕಪ್ಪು ಟಾರ್ಪಾಲ್ ವಿತರಣೆ!

PM Kisan rejected farmers list-10 ಲಕ್ಷ ರೈತರ ಕೈತಪ್ಪಿದ ಪಿಎಂ ಕಿಸಾನ್ ಹಣ:

ಅಂಕಿ-ಅಂಶದ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಇಲ್ಲಿಯವರೆಗೆ ಸರಿಸುಮಾರು 10 ಲಕ್ಷ ರೈತರಿಗೆ ಈ ಯೋಜನೆಯಡಿ ಆರ್ಥಿಕ ನೆರವು ಸ್ಥಗಿತವಾಗಿದ್ದು ಇದಕ್ಕೆ ಸೂಕ್ತ ಕಾರಣಗಳ ಪಟ್ಟಿ ಈ ಕೆಳಗೆ ತಿಳಿಸಲಾಗಿದೆ.

1)ಇಲ್ಲಿಯವರೆಗೂ ಇಕೆವೈಸಿ ಮಾಡದ ರೈತರು.                                       

2)ಆಧಾರ ನಲ್ಲಿರುವ ಹೆಸರು ಮತ್ತು ಆರ್ ಟಿ ಸಿ / ಪಹಣಿ ಹೆಸರು ಹೊಂದಾಣಿಕೆ ಆಗದೆ ಇರುವುದು.        3)ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೆ ಇರುವವರು.                      

4)ಅರ್ಜಿ ಸಲ್ಲಿಸಿದ್ದು income tax/ gst pay ಮಾಡುವವರು.                       

5)ಒಂದೇ ಮನೆಯಲ್ಲಿ ಗಂಡ/ಹೆಂಡತಿ ಇಬ್ಬರು ಈ ಯೋಜನೆಗೆ ಅರ್ಜಿ ಸಲ್ಲಿಸಿರುವವರು.

PM Kisan beneficiary list 2025-ಪಿ ಎಂ ಕಿಸಾನ್ ಅರ್ಹ ರೈತರ ಪಟ್ಟಿ:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಅರ್ಜಿ ಸಲ್ಲಿಸಿರುವ ರೈತರು ಈ ಯೋಜನೆಯ ಅಧಿಕೃತ https://pmkisan.gov.in/ ಜಾಲತಾಣವನ್ನು ನಿಮ್ಮ ಮೊಬೈಲ್ ನಲ್ಲೇ ನೇರವಾಗಿ ಭೇಟಿ ಮಾಡಿ ಮನೆಯಲ್ಲೇ ಕುಳಿತು ಅರ್ಹ ರೈತರ ಪಟ್ಟಿ.

ವಿಧಾನ-1: ಮೊದಲಿಗೆ ಇಲ್ಲಿ ಕ್ಲಿಕ್ PM Kisan beneficiary list ಮಾಡಿ ಅಧಿಕೃತ ಕಿಸಾನ್ ಸಮ್ಮಾನ್ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: ಕಂದಾಯ ಇಲಾಖೆಯಿಂದ ಅಕ್ರಮ-ಸಕ್ರಮ ಜಮೀನಿಗೆ ಪಹಣಿ/ಆರ್ ಟಿ ಸಿ ವಿತರಣೆ!

ವಿಧಾನ-2: ಅಧಿಕೃತ ಜಾಲತಾಣವನ್ನು ಭೇಟಿ ಮಾಡಿದ ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ “Beneficiary List” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ವಿಧಾನ-3: ನಂತರ ಈ ಪೇಜ್ ನಲ್ಲಿ ರೈತರು ರಾಜ್ಯ-Karnataka ಮತ್ತು ಪಕ್ಕದ ಕಾಲಂ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹಳ್ಳಿಯ ಹೆಸರನ್ನು ಆಯ್ಕೆ ಮಾಡಿಕೊಂಡು “Get Report” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ಗೋಚರಿಸುತ್ತದೆ. ಒಮ್ಮೆ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಚೆಕ್ ಮಾಡಿಕೊಳ್ಳಬೇಕು.

ಇತ್ತೀಚಿನ ಸುದ್ದಿಗಳು

Related Articles