Thursday, September 19, 2024

ಅಡಿಕೆ ಬೆಳೆಯಲ್ಲಿ ಸುಳಿ ತಿಗಣೆ ಮತ್ತು ನುಸಿ ಬಾಧೆಯ ಲಕ್ಷಣ ಮತ್ತು ಹತೋಟಿ ಕ್ರಮಗಳು ಸಂಪೂರ್ಣ ಮಾಹಿತಿ:

ಸುಳಿ ತಿಗಣೆ ಲಕ್ಷಣ:


ಆತ್ಮೀಯ ಅಡಿಕೆ ಬೆಳೆಗಾರರೆ ಅಡಿಕೆ ಬೆಳೆಯಲ್ಲಿ ಪ್ರಮುಖವಾಗಿ ಮಳೆಗಾಲದ ಅಂತ್ಯಕ್ಕೆ ಈ ತಗಣಿಗಳು ಬಹುಬೇಗ ವಂಶಭಿವೃದ್ದಿಯಾಗಿ ಅಡಿಕೆ ಮರಗಳಿಗೆ ಅಧಿಕ ಹಾನಿಯನ್ನುಂಟು ಮಾಡುತ್ತವೆ. ಎಳೆಯ ಸಿರಿಯ ಒಳಭಾಗದಲ್ಲಿ ಈ ಕೀಟಗಳು ಸೇರಿಖಕೊಂಡು ರಸವನ್ನು ಹಿರುತ್ತಿರುತ್ತವೆ. ರಸ ಹೀರಿದ ಎಳೆಯ ಸಿರಿಯು ಹೊರಬಂದಾಗ ಗರಿಗಳು ಬಿಡಿಸಿಕೊಳ್ಳದೆ. ಅಂಟಿಕೊಂಡು ಒಂದು ಕಡೆ ಬಾಗಿ ಮುದುರಿಕೊಂಡಿರುತ್ತವೆ.ಬಾಧೆ ತೀವ್ರವಾದಾಗ ಇಂತಹ ಗರಿಗಳು ಒಣಗಿ ಹೋಗುತ್ತವೆ.ಈ ತಿಗಣೆಗಳು ಕೆಂಪುಮಿಶ್ರಿತ ಕಂದು ಬಣ್ಣವಿದ್ದು ಅಪ್ಸರೆಗಳು ನಸು ಹಳದಿ ಛಾಯೆಯ ಹಸಿರು ಬಣ್ಣದ್ದಿರುತ್ತವೆ.

ಇದನ್ನೂ ಓದಿ: ಸರ್ಕಾರದಿಂದ ಗುಡ್ ನ್ಯೂಸ್ : `ಮಹಿಳೆಯರಿಗಾಗಿ ಈ ಕ್ಲಿನಿಕ್ ಏನೆಲ್ಲಾ ಸೌಲಭ್ಯಗಳು ನೀಡಲಾಗಿದೆ ತಿಳಿಯಿರಿ.

ಸುಳಿ ತಿಗಣೆ ನಿರ್ವಹಣೆ :

ಸುಳಿ ತಿಗಣೆ ಅಥವಾ ಹೂ ಗೊಂಚಲು ತಿನ್ನುವ ಹುಳು ಅಡಿಕೆ ಗಿಡಗಳಲ್ಲಿ ಕಾಣಿಸಿಕೊಂಡಾಗ ಎರಡು ಮಿ.ಲೀ. ಕ್ವಿನಾಲ್‌ಪಾಸ್‌ ಅಥವಾ 1.5 ಮಿ.ಲೀ. ಮೊನೊಕ್ರೋಟಪಪಾಸ್ ಪ್ರತಿ ಲೀಟರ್‍ ನೀರಿಗೆ ಬೆರೆಸಿ ಸಿಂಪಡಿಸಬೇಕಾಗುತ್ತದೆ. ಸುಳಿ ಸುತ್ತಲಿನ ಎಲೆಗಳ ಬುಡದಲ್ಲಿ 3 ತಿಂಗಳಿಗೊಮ್ಮೆ 10 ಗ್ರಾಂ. ಪೋರೆಟ್ ಹರಳುಗಳನ್ನು ಚಿಕ್ಕ ಪಾಲಿಥಿನ್ ಚೀಲಗಳಲ್ಲಿ ರಂಧ್ರಗಳನ್ನು ಮಾಡಿ ಇಡುವುದರಿಂದ ಸುಳಿ ತಿಗಣೆ ಬಾಧೆಯನ್ನು ಹತೋಟಿ ಮಾಡಬಹುದು ಎಂದು ತೋಟಗಾರಿಕಾ ತಜ್ಞರ ಅಭಿಪ್ರಾಯವಾಗಿರುತ್ತದೆ.

ಇದನ್ನೂ ಓದಿ: ಅಡಿಕೆ ಬೆಳೆಗಾರರಿಗೆ ಸಿಹಿಸುದ್ದಿ ಕೊಟ್ಟ ರಾಜ್ಯ ಸರ್ಕಾರ:

ನುಸಿ ಬಾಧೆಯ ಲಕ್ಷಣ:


ಡಿಸೆಂಬರ್ ನಿಂದ ಏಪ್ರಿಲ್ ತಿಂಗಳವರೆಗೆ ತಾಪಮಾನ ಹೆಚ್ಚಾಗಿರುವುದರಿಂದ ನುಸಿಗಳ ವಂಶಾಭಿವೃದ್ಧಿಗೆ ಉತ್ತಮ ಸಮಯವಾಗಿದೆ. ಅಡಿಕೆಯಲ್ಲಿ ಈ ಸಮಯದಲ್ಲಿ ನುಸಿ ಬಾಧೆ ಹೆಚ್ಚಾಗಿ ಕಂಡು ಬರುತ್ತದೆ, ಸಾಮಾನ್ಯವಾಗಿ ನೀರು ಹಾಗೂ ನೆರಳು ಸಮರ್ಪಕವಾಗಿ ದೊರೆಯದ ತೋಟಗಳಲ್ಲಿ ಇವುಗಳು ಹೆಚ್ಚಾಗಿ ಕಂಡು ಬರುತ್ತದೆ.

ನುಸಿ ಮೊಟ್ಟೆ ಮತ್ತು ಅದರಿಂದ ಹೊರಬಂದ ಎಲ್ಲಾ ಹಂತದ ಮರಿಗಳು ಎಲೆಗಳ ಕೆಳಭಾಗದಲ್ಲಿ ಜೀವಿಸುತ್ತವೆ. ನುಸಿ ಬಾಧಿತ ಎಲೆಯ ಕೆಳಭಾಗವನ್ನ ಬೆರಳಿನಿಂದ ಒತ್ತಿ ಎಳೆದಾಗ ಬೆರಳುಗಳು ರಕ್ತದಂತೆ ಕೆಂಪಾಗಿ ಕಂಡು ಬರುತ್ತವೆ. ಇವುಗಳು ಸೂಜಿಯಂತೆ ಚೂಪಾಗಿರುವ ನಳಿಕೆಯ ಮೂಲಕ ರಸವನ್ನು ಹೀರುವುದರಿಂದ, ರಸ ಹೀರಿದ ಭಾಗದಲ್ಲಿ ಹಳದಿ ಚುಕ್ಕೆಗಳು ಮೂಡಿ ನಂತರ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ನುಸಿ ಬಾಧೆ ಉಲ್ಬಣಗೊಂಡಾಗ ಗರಿಗಳು ಸೀಳುವುದರ ಜೊತೆಗೆ ಒಣಗಿ ಸಾಯುತ್ತವೆ.

ಇದನ್ನೂ ಓದಿ: ಯಾವ ಪ್ರದೇಶಕ್ಕೆ ಯಾವ ಅಡಿಕೆ ತಳಿ ಸೂಕ್ತ ? ಯಾವ ಪ್ರದೇಶದಲ್ಲಿ ಏಷ್ಟು ಹೇಕ್ಟರ್‍ ಅಡಿಕೆ ವಿಸ್ತರಿಸಿದೆ??
ಈ ರೋಗ ನಿಯಂತ್ರಣಕ್ಕೆ ನಿರ್ವಾಹಣಾ ಕ್ರಮಗಳು:

ಕಡಿಮೆ ವಯಸ್ಸಿನ ಅಡಿಕೆ ತೋಟಗಳಲ್ಲಿ ಸಮರ್ಪಕವಾಗಿ ನೆರಳನ್ನು ಒದಗಿಸುವ ಬಾಳೆಯನ್ನು ಅಂತರ ಬೆಳೆಯಾಗಿ ಬೆಳೆಯುವುದು ಸೂಕ್ತ. ಅಡಿಕೆ ಸೋಗೆ ಅಥವಾ ತೆಂಗಿನ ಸೋಗೆಯಿಂದ ಎಳೆಯ ಗಿಡಗಳಿಗೆ ನೆರಳನ್ನು ಒದಗಿಸಬೇಕು. ತೀವ್ರ ಹಾನಿಗೊಳಗಾದಂತೆ ಕಾಣುವ ಎಲೆಗಳನ್ನು ಕೂಡಲೇ ತೆಗೆದು ಹಾಕಬೇಕು.

ನುಸಿಯ ಬಾಧೆ ತೀವ್ರವಾಗಿ ಕಂಡು ಬಂದಾಗ, ರೋಗದ ನಿಯಂತ್ರಣಕ್ಕಾಗಿ 2.5 ಮಿ.ಲೀ ಡೈಕೋಫಾಲ್ 18.5 ಇ.ಸಿ ಅಥವಾ 2.0 ಮಿ.ಲೀ ಮಿಟ್ 40 ಇ.ಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಎಲೆಗಳ ಕೆಳಭಾಗ ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಿಸಬೇಕು. ನುಸಿ ಬಾಧೆ ಪುನಃ ಮರುಕಳಿಸಿದರೆ ಎರಡು ವಾರಗಳ ನಂತರ ಇದೇ ಸಿಂಪರಣೆಯನ್ನು ಮಾಡಬೇಕು.

(ವಿಶೇಷ ಸೂಚನೆ: ಇದು ತೋಟಗಾರಿಕಾ ತಜ್ಞರ ಸಲಹೆಯಾಗಿರುತ್ತದೆ.)
ಇದನ್ನೂ ಓದಿ: ಸಮಗ್ರ ಕೃಷಿಯಿಂದ ವಾರ್ಷಿಕ 12 ರಿಂದ 15 ಲಕ್ಷ ಆದಾಯ ಪಡೆಯುವ ಕಡಲತೀರದ ಸಾಧಕ ರೈತ.

ಇತ್ತೀಚಿನ ಸುದ್ದಿಗಳು

Related Articles