ಆತ್ಮೀಯ ಮೀತ್ರರೇ ನಿಮ್ಮ ಮನೆಯ ಮಹಿಳೆಯರಿಗೆ ವಿಶೇಷ ಆರೋಗ್ಯ ಸೇವೆಗಳನ್ನು ಒದಗಿಸಲು ಆಯುಷ್ಮತಿ ಕ್ಲಿನಿಕ್ ಗಳನ್ನು ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ಸ್ಥಾಪಿಸಲಾಗುತ್ತಿದೆ. ಈ ಒಂದು ಯೋಜನೆಯಲ್ಲಿ
ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಮಹಿಳಾ ಆರೋಗ್ಯ ಸೇವೆಗಳಿಗಾಗಿ ಕರ್ನಾಟಕ ರಾಜ್ಯಾದ್ಯಂತ 128 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲಾ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಆರೋಗ್ಯ ಸೇವೆಯನ್ನು ಒದಗಿಸಲು ಆಯುಷ್ಮತಿ ಕ್ಲಿನಿಕ್ ಆರೋಗ್ಯ ಕೇಂದ್ರ ಸ್ಥಾಪಿಸಿದೆ.
ಇದನ್ನೂ ಓದಿ: ನಿರುದ್ಯೋಗ ಯುವಕರಿಗೆ ಜನೌಷಧಿ ತೆರೆಯಲು ಉತ್ತಮ ಅವಕಾಶ
ಯಾವ ಯಾವ ವಯಸ್ಸಿನ ಮಹಿಳೆಯರಿಗೆ ಚಿಕಿತ್ಸೆ ಸಿಗುವುದು:
*ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ *ಈ ಚಿಕಿತ್ಸಾಲಯಗಳು ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ಹೆಚ್ಚಿನ ಚಿಕಿತ್ಸೆಯನ್ನು ನೀಡುತ್ತಾರೆ.
*ವೈದ್ಯರು ಮಧುಮೇಹ ಮತ್ತು ರಕ್ತದೊತ್ತಡ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತಾರೆ.
*ಈ ಕೇಂದ್ರದಲ್ಲಿ ಗರ್ಭಿಣಿಯರಿಗೆ ಆಹಾರ ಮತ್ತು ನೈರ್ಮಲ್ಯದ ಪದ್ದತಿಯ ಬಗ್ಗೆ ಸಲಹೆಗಳನ್ನು ನೀಡುತ್ತವೆ.
*ಈ ಕೇಂದ್ರದಲ್ಲಿ ತಪಾಸಣೆಯೊಂದಿಗೆ ಉಚಿತ ಔಷಧಿಗಳನ್ನು ಒದಗಿಸಲಾಗುವುದು.
ಮಹಿಳೆಯರಿಗೆ ಈ ಎಲ್ಲಾ ಚಿಕಿತ್ಸೆಗಳು ಲಭ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ.
`ಆಯುಷ್ಮತಿ ಕ್ಲಿನಿಕ್ ನಲ್ಲಿ ಸಿಗುವ ಸೌಲಭ್ಯಗಳು:
*ಮಹಿಳೆಯರಿಗೆ ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸುವುದು,
*ಹದಿಹರಿಯದ ಹೆಣ್ಣುಮಕ್ಕಳಿಗೆ ದೈಹಿಕ ಬದಲಾವಣೆ, ನೈರ್ಮಲ್ಯ ಮತ್ತು ಸಂತಾನೋತ್ಪತ್ತಿ ಕುರಿತು ಅರಿವು ಮೂಡಿಸುವುದು
*ಆಪ್ತ ಸಮಾಲೋಚನೆ ನಡೆಸುವುದು. 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಅಸಾಂಕ್ರಾಮಿಕ ರೋಗಗಳ ತಪಾಸಣೆ ನಡೆಸುವುದು.
*ಲ್ಯಾಬ್ ಪರೀಕ್ಷೆಗಳು, ಔಷಧಿ, ಕ್ಷೇಮ ಚಟುವಟಿಕೆಗಳಾದ ಯೋಗ ಮತ್ತು ಧ್ಯಾನ ಹಾಗೂ ರೆಫೆರಲ್ ಸೇವೆಗಳು ಲಭ್ಯವಿರುತ್ತದೆ..
ಇದನ್ನೂ ಓದಿ: ಸಮಗ್ರ ಕೃಷಿಯಿಂದ ವಾರ್ಷಿಕ 12 ರಿಂದ 15 ಲಕ್ಷ ಆದಾಯ ಪಡೆಯುವ ಕಡಲತೀರದ ಸಾಧಕ ರೈತ.
ಈ ಕೇಂದ್ರದಲ್ಲಿ ವೈದ್ಯರ (ತಜ್ಞರ) ವಿವರ :
*ಈ ಕ್ಲಿನಿಕ ನಲ್ಲಿ ಸೋಮವಾರ ಪಿಜಿಷಿಯನ್(ಸಾಮಾನ್ಯ ರೋಗ ತಜ್ಞರು),
*ಮಂಗಳವಾರ (ಮೂಳೆ ಮತ್ತು ಕೀಲು ತಜ್ಞರು,)*ಬುಧವಾರ (ಶಸ್ತ್ರ ಚಿಕಿತ್ಸಕ ತಜ್ಞರು, )
*ಗುರುವಾರ (ಮಕ್ಕಳ ತಜ್ಞರು,)
*ಶುಕ್ರವಾರ( ಸ್ತ್ರೀ ರೋಗ ತಜ್ಞರು)*ಶನಿವಾರ (ಇತರ ತಜ್ಞರಲ್ಲಿ ಕಿವಿ, ಮೂಗು, ಗಂಟಲು ತಜ್ಞರು, ನೇತ್ರ ತಜ್ಞರು, ಚರ್ಮರೋಗ ತಜ್ಞರು, ಮಾನಸಿಕ ರೋಗ ತಜ್ಞರು, ದಂತ ತಜ್ಞರು ಹಾಗೂ ಇತರ ಆರೋಗ್ಯ ತಜ್ಞರು ) ಸಾರ್ವಜನಿಕರಿಗೆ ಸೇವೆಯನ್ನು ನೀಡಲಿದ್ದಾರೆ.
ವಿಶೇಷ ಸೂಚನೆ: ಈ ಕೇಂದ್ರವನ್ನು ಗುರುತಿಸಲು ಕಟ್ಟಡಗಳಿಗೆ ಗುಲಾಬಿ ಬಣ್ಣ ಪೇಂಟ್ ಮಾಡಲಾಗಿರುತ್ತದೆ.
ಇದನ್ನೂ ಓದಿ: ಈ ಕಾರಣಗಳಿಂದ ನಿಮ್ಮ ರೇಶನ್ ಕಾರ್ಡ ರದ್ದಾಗಬಹುದು ಎಚ್ಚರ ರೇಶನ್ ಕಾರ್ಡ ಹೊಂದಿರುವವರು ಗಮನಿಸಬೇಕಾದ ಮುಖ್ಯ ಮಾಹಿತಿ.
ಕಚೇರಿಯ ಸಮಯ:
ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30 ಗಂಟೆಯವರೆಗೆ ಹಾಜರಿರುತ್ತಾರೆ.
ನಗರ ವ್ಯಾಪ್ತಿಯ ಹಾಗೂ ಗ್ರಾಮೀಣ ವ್ಯಾಪ್ತಿಯ ಮಹಿಳೆಯರು ಈ ಕ್ಲಿನಿಕ್ನ ಸೇವೆ ಪಡೆಯಬಹುದಾಗಿರುತ್ತವೆ.