ಆತ್ಮೀಯ ರೈತ ಬಾಂದವರೇ ಈ ವರ್ಷದ ಮುಂಗಾರು ಹಂಗಾಮಿನ ವರುಣ ದೇವ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೈ ಕೊಟ್ಟ ಕಾರಣ ಮುಂಗಾರು ಬೆಳೆ ರೈತನಿಗೆ ಯಾವುದೇ ರೀತಿ ಆಸರೆ ಆಗದ ಕಾರಣ ರಾಜ್ಯ ಸರಕಾರ ಈ ವರ್ಷ ರಾಜ್ಯದ 235 ತಾಲೂಕುಗಳ ಪೈಕಿ 216 ತಾಲುಕುಗಳನ್ನು ಬರ ಪ್ರದೇಶವೆಂದು ಘೋಷಣೆ ಮಾಡಿರುತ್ತದೆ.
ಇದನ್ನೂ ಓದಿ: Mixed breed cow Unit: ಶೇ.90 ರ ಸಹಾಯಧನದಲ್ಲಿ ಮಿಶ್ರ ತಳಿ ಹಸು ವಿತರಣೆ:
ಬರ ಪರಿಹಾರ ಜಮಾ ಆಗಲು ಈ ಕೆಲಸ ಕಡ್ಡಾಯ:
ರೈತರು FRUITS ID ಜೊತೆಗೆ ತಮ್ಮ ಹೆಸರಿನಲ್ಲಿರುವ ಎಲ್ಲ ಸರ್ವೇ ನಂಬರ್‌ಗಳನ್ನು ಸೇರಿಸಿಕೊಳ್ಳದೆ ಇದ್ದಲ್ಲಿ ಪೂರ್ಣ ಪ್ರಮಾಣದಲ್ಲಿ ರೈತರಿಗೆ ಬೆಳೆ ನಷ್ಟ ಪರಿಹಾರ ಸಿಗುವುದಿಲ್ಲ. ಕಾರಣ FRUITS ID ಹೊಂದಿರುವ ರೈತರು ಆಧಾರ ಕಾರ್ಡ್ ಹಾಗೂ ಉತಾರ್ (ರೇಕಾರ್ಡ ) ಸೇರಿಸುವುದು ಬಾಕಿ ಇದೆ ಎನ್ನಲಾಗಿದೆ.
ಕೃಷಿ ಇಲಾಖೆಯ ಅಂಕಿ-ಅಂಶದ ಮಾಹಿತಿಯ ಪ್ರಕಾರ ಇನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು ಲಭ್ಯವಿರುವ ಸರ್ವೆ ನಂಬರ್ ಗಳ ಪೈಕಿ ಇನ್ನು ಶೇ 30 ರಷ್ಟು ಜಮೀನಿನ ಸರ್ವೆ ನಂಬರ್ ಗಳನ್ನು ತಪ್ಪದೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಮತ್ತು ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗೆ ಭೇಟಿ ಮಾಡಿ ಬಿಟ್ಟು ಹೋಗಿರುವ ಸರ್ವೆ ನಂಬರ್ ಅನ್ನು ನೋಂದಣಿ ಮಾಡಿಸಬೇಕಾಗಿರುತ್ತದೆ.
ಇದನ್ನೂ ಓದಿ: ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಅಹ್ವಾನ : ಅರ್ಹತೆಗಳೇನು? ಸಂಪೂರ್ಣ ಮಾಹಿತಿ
Required documents for FID numberಎಫ್ ಐ ಡಿ ಮಾಡಿಸಲು ಬೇಕಾಗುವ ದಾಖಲಾತಿಗಳು:
- ಆಧಾರ್ ಕಾರ್ಡ್ ಪ್ರತಿ
- ಪಹಣಿ ಪ್ರತಿ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಮೊಬೈಲ್ ಸಂಖ್ಯೆ
- ST/SC ಪ್ರಮಾಣ ಪತ್ರ.
- ಪೋಟೋ
ಮೇಲೆ ತಿಳಿಸಿರುವ ದಾಖಲಾತಿಗಳೊಂದಿಗೆ ಹತ್ತಿರದ ಗ್ರಾಮ ಒನ್/ಸಾಮಾನ್ಯ ಸೇವಾ ಕೇಂದ್ರ ರೈತ ಸಂಪರ್ಕ ಕೇಂದ್ರಗಳು/ ಕಂದಾಯ ಇಲಾಖೆ / ತೋಟಗಾರಿಕೆ ಇಲಾಖೆ /ರೇಷ್ಮೆ ಇಲಾಖೆ ಪಶುಸಂಗೋಪನಾ ಇಲಾಖೆಗಳಿಗೆ ಭೇಟಿ ನೀಡಿ ತುರ್ತಾಗಿ ಬಾಕಿ ಇರುವ ಎಲ್ಲ ಜಮೀನುಗಳ ಸರ್ವೇ ನಂಬರ್‌ಗಳನ್ನು ಪ್ರೊಟ್ಸ್ (Fruits)ತಂತ್ರಾಂಶದಲ್ಲಿ ಸೇರಿಸಿಕೊಳ್ಳಲು ಈ ತಿಂಗಳು ಗಡುವು ನೀಡಲಾಗಿರುತ್ತದೆ.
ಒಂದೊಮ್ಮೆ ನಿಮ್ಮ ಜಮೀನಿನ ಸರ್ವೆ ನಂಬರ್ ಜಂಟಿ ಮಾಲೀಕರನ್ನು ಹೊಂದಿದ್ದರೆ ಎಲ್ಲಾ ಮಾಲೀಕರ ದಾಖಲಾತಿಗಳನ್ನು ಸಲ್ಲಿಸಿ ಪ್ರತೇಕವಾಗಿ ಒಂದೊಂದು FID ನಂಬರ್ ಅನ್ನು ರಚನೆ ಮಾಡಿಕೊಳ್ಳಬೇಕು. ಜಂಟಿ ಖಾತೆದಾರರು ಇದ್ದಲ್ಲಿ ಪ್ರತ್ಯೇಕವಾಗಿ FID ಮಾಡಿಸಿಕೊಳ್ಳಬೇಕು.
ಇದನ್ನೂ ಓದಿ: ಭೂ ರಹಿತರಿಗೆ ಭೂಮಿ ಕೊಳ್ಳಲು ಸಹಾಯಧನ
ಸರ್ಕಾರದ ಪರಿಹಾರ ಮೊತ್ತ :
ಎಸ್.ಡಿ.ಆರ್.ಎಫ್(SDRF) ಮಾರ್ಗಸೂಚಿಯ ಪ್ರಕಾರ ಶೇ. 33 ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿರುವ ರೈತರಿಗೆ ಕೃಷಿ ಪರಿಕರಗಳ ಸಹಾಯಧನ ನೀಡಲು ಮಳೆ ಆಶ್ರಿತ ಪ್ರದೇಶಗಳಲ್ಲಿ ಪ್ರತಿ ಹೆಕ್ಟೇರಿಗೆ 8500 ರೂಪಾಯಿ ಹಾಗೂ 17 ಸಾವಿರ ರೂಪಾಯಿ ನೀರಾವರಿ ಪ್ರದೇಶದ ರೈತರಿಗೆ ನೀಡಲಾಗುವುದು ಎಂದು ಮಾಹಿತಿ ಇರುತ್ತದೆ.
ಬೆಳೆ ಹಾನಿ ಪರಿಹಾರ ಜಮೆಯ ಸ್ಟೇಟಸ್ ಚೆಕ್ ಮಾಡಿ ಬೆಳೆ ಹಾನಿ ಪರಿಹಾರ ಜಮೆಯ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಲು ಈ
https://landrecords.karnataka.gov.in /PariharaPayment/ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ನಮೂದಿಸಿ ಸ್ಟೇಟಸ್ ಚೆಕ್ ಮಾಡಬಹುದು.