ಪಶು ಧನ್ ಭೀಮಾ ಯೊಜನೆಯಡಿಯಲ್ಲಿ ರೈತರು ಸಹಕಾರಿ ಸೊಸೈಟಿಗಳು ಮತ್ತು ಹೈನುಗಾರಿಕೆ ಮಾಡುವ ಪ್ರತಿಯೊಬ್ಬ ರೈತರು ತಮ್ಮ ರಾಸುಗಳಿಗೆ(ಜಾನುವಾರ) ವಿಮೆ ಮಾಡಿಸಬಹುದು.
ವಿಮೆ ಮಾಡಿಸುವ ಒಟ್ಟೂ ಮೊತ್ತವು ಮಾರುಕಟ್ಟೆ ದರಕ್ಕಿಂತ 100% ಮೀರಬಾರದು. ಜಾನುವಾರಗಳ ತಳಿ , ಪ್ರದೇಶ ಹಾಗೂ ಸ್ಥಳಗಳಿಗೆ ಅನುಗುಣವಾಗಿ ಮಾರುಕಟ್ಟೆ ದರ ವ್ಯತ್ಯಾಸವಾಗುತ್ತದೆ.
ವಿಮೆಗೆ ಒಳಪಡುವ ಸನ್ನಿವೇಶಗಳು
ನೈಸರ್ಗಿಕ ಅಪಘಾತಗಳು , ಅನಿರೀಕ್ಷಿತ ಸನ್ನಿವೇಶಗಳು, ರೋಗದಿಂದ ಸಾವನ್ನೊಪ್ಪಿದ ಜಾನುವಾರ, ಶಸ್ತ್ರ ಚಿಕಿತ್ಸೆಗೆ ಒಳಪಡುವ ಜಾನುವಾರ, ಮತ್ತು ಇನ್ನಿತರ ಸನ್ನಿವೇಶ ಗಳಲ್ಲಿ ಸಾವನ್ನಪ್ಪಿದ ಜಾನುವಾರಗಳಿಗೆ ವಿಮೆ ಅನ್ವಯಿಸುತ್ತದೆ.
ವಿಮೆಗೆ ಒಳಪಡದೆ ಇರುವ ಸನ್ನಿವೇಶಗಳು
ಭಾಗಶಃ ಅಂಗವಿಕಲತೆ, ಅಂಗವಿಕಲತೆ ಶಾಶ್ವತವಾಗಿರಲಿ ಅಥವಾ ತಾತ್ಕಾಲಿತವಾಗಿರಲಿ ಅವು ಒಳಪಡುವುದಿಲ್ಲ.
ವಿಮಾ ಪಾಲಿಸಿ ಉಪಕ್ರಮಗೊಂಡ 15 ದಿನದ ಒಳಗೆ ಜಾನುವಾರಗಳು ಮರಣಹೊಂದಿದರೆ ಅನ್ವಯಿಸುವುದಿಲ್ಲ.
ಆಯ್ಕೆ ಹಾಗೂ ವಿಮಾ ಮೊತ್ತ ನಿರ್ಧರಿಸುವುದು ಹೇಗೆ ?
ವಿಮಾ ಪ್ರಸ್ತಾವನೆಯನ್ನು ತಾಲೂಕಾ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ಪಡೆದುಕೊಂಡು ಮುಂದುವರೆಯುವುದು ಸೂಕ್ತವಾಗಿರುತ್ತದೆ. ಜಾನುವಾರ ತಳಿ ಮತ್ತು ಆ ಪ್ರದೇಶಕ್ಕೆ ಅನುಗುಣವಾಗಿ ಮಾರುಕಟ್ಟೆ ದರ ವ್ಯತ್ಯಾಸವಾಗುತ್ತದೆ. ಆದ್ದರಿಂದ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವುದು ಉತ್ತಮ.
ವಿಮಾ ಪಾಲಿಸಿ ತೆಗೆದುಕೊಳ್ಳುವುದು ಹೇಗೆ ?
ರೈತರು ತಮ್ಮ ಜಿಲ್ಲೆಯ ಅಥವಾ ತಾಲೂಕಿನ ಅಥವಾ ಹೋಬಳೀಯ ಪಶು ವೈದ್ಯ ಆಸ್ಪತ್ರೆಗೆ ಭೇಟಿನೀಡಿ ಜಾನುವಾರಗಳ ವಿಮೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಪಶು ವೈದ್ಯರು ಪಶುವಿನ ಆರೋಗ್ಯ ತಪಾಸಣೆ ಮಾಡಿ ಪಶುಜವಿಗೆ ಸಂಬಂಧಿಸಿದ ಆರೋಗ್ಯ ಚೀಟಿಯನ್ನು (certificate) ನೀಡುತ್ತಾರೆ.
ವಿಮೆ ಮಾಡಲಾದ ಜಾನುವಾರಗಳನ್ನು ಗುರುತಿಸಲು ಅದರ ಕಿವಿಗೆ ಟ್ಯಾಗ್ ಅಥವಾ ಮೈಕ್ರೋಚಿಪ್ ಅನ್ನು ಅಳವಡಿಸಲಾಗುತ್ತದೆ.
ಮಾಲಿಕರು ಜಾನುವಾರಗಳ ಜೊತೆ ಫೋಟೊ ತೆಗೆಸಿಕೊಂಡ ನಂತರ ಪಶು ವೈದ್ಯಾಧಿಕಾರಿಗಳು ವಿಮಾ ಪಾಲಿಸಿಯನ್ನು ನೀಡುತ್ತಾರೆ.
ವಿಶೇಷ ಸೂಚನೆ :
ಹೆಚ್ಚಿನ ವಿವರಗಳಿಗಾಗಿ ನಿಮ್ಮ ಪಶು ವೈದ್ಯಕೀಯ ಇಲಾಖೆಯ ಅಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಿ.