ನಮಸ್ಕಾರ ರೈತರೇ, 2024ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯ ಕಾರ್ಯ ಸಂಪೂರ್ಣ ಮುಕ್ತಾಯವಾಗಿದ್ದು, ಈ ಒಂದು ಕಾರ್ಯವನ್ನು ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆಗಳು ಸೇರಿಕೊಂಡು ನಿರ್ವಹಣೆ ಮಾಡಲಾಗಿದೆ.
ಈಗಾಗಲೇ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯ ಕಾರ್ಯ ಸಂಪೂರ್ಣ ಮುಕ್ತಾಯವಾಗಿದ್ದು ನಿಮ್ಮ ಪಹಣಿ/ Rtc ದಾಖಲಾದ ಬೆಳೆಗಳ ವಿವರವನ್ನು ಹೇಗೆ ನೋಡಬೇಕು ಎಂದು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.
ಈ ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ಹಾನಿ ಪರಿಹಾರ, ಬೆಳೆ ಸಾಲ ಹಾಗೂ ವಿವಿಧ ಸರಕಾರಿ ಸೌಲಭ್ಯಗಳಿಗೆ ಬಳಸಲಾಗುತ್ತದೆ. ಆದ್ದರಿಂದ ಪ್ರತಿ ವರ್ಷವು ಬೆಳೆ ಸಮೀಕ್ಷೆ ಕಾರ್ಯ ಮಾಡಿ ಅದನ್ನು ನಿಮ್ಮ ಪಹಣಿ/ Rtc ದಾಖಲು ಮಾಡುವುದು ಕಡ್ಡಾಯವಾಗಿದೆ.
ಕೃಷಿ ಇಲಾಖೆಯಿಂದ ಜಿಪಿಎಸ್ ಆಧಾರಿತ ಬೆಳೆ ಸಮೀಕ್ಷೆಯಲ್ಲಿ ಸಂಗ್ರಹಣೆ ಮಾಡಿದ ಬೆಳೆ ಮಾಹಿತಿಯ ರೈತರ ಸರ್ವೆ ನಂಬರ್ ನಲ್ಲಿ ದಾಖಲಾಗಿರುತ್ತದೆ. ಇಲ್ಲಿ ನಮೂದಿಸಿರುವ ಬೆಳೆ ಮಾಹಿತಿ ಮತ್ತು ಜಮೀನಿನಲ್ಲಿ ಬೆಳೆದ ಬೆಳೆ ಹೆಸರು ತಾಳೆ/ಹೊಂದಾಣಿಕೆ ಆಗುವುದು ಅತೀ ಮುಖ್ಯ ಏಕೆಂದರೆ ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಹಾಗೂ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಇದೆ ಮಾಹಿತಿಯನ್ನು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ:ಕೃಷಿ ಇಲಾಖೆವತಿಯಿಂದ ವಿವಿಧ ಕೃಷಿ ಯಂತ್ರೋಪಕರಣಗಳ ಸಹಾಯಧನಕ್ಕೆ ಅರ್ಜಿ ಆಹ್ವಾನ!
Rtc crop details-ದಾಖಲಾದ ಬೆಳೆ ವಿವರ ತಿಳಿಯುವ ವಿಧಾನ.
1)ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ bele darshank app ನ್ನು GOOGLE PLYSTORE ಹೋಗಿ ಅಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
2)ನಂತರ ನಿಮಗೆ ಅದರಲ್ಲಿ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ,ಗ್ರಾಮ ಕೇಳುತ್ತದೆ ಅದನ್ನೂ ಹಾಕಿ ಮುಂದೆವರೆಯಿರಿ.
3)ಇದಾದ ಮೇಲೆ ನಿಮ್ಮ ಸರ್ವೆ ನಂಬರ್ ಹಾಕಿ ವಿವರ ಪಡೆಯಿರಿ ಮೇಲೆ ಕ್ಲಿಕ್ ಮಾಡಿ.
4) ನಂತರ ನಿಮಗೆ ನಿಮ್ಮ ಸರ್ವೇ ನಂಬರಿನ್ ಹಿಸ್ಸಾ ನಂಬರ್ ಬರುತ್ತವೆ ಅದನ್ನು ಆಯ್ಕೆ ಮಾಡಿಕೊಳ್ಳಿ.
5)ಇದಾದ ಮೇಲೆ ಮಾಲೀಕರ ವಿವರ ಆಯ್ಕೆ ಮಾಡಿ ಮುಂದರೆವರೆಯಿರಿ.
6)ನಂತರ ಸಮೀಕ್ಷೆ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿ ಮುಂದೆವರೆಯಿರಿ.
7)ಕ್ಲಿಕ್ ಮಾಡಿದ ಮೇಲೆ ನಿಮಗೆ ಅಲ್ಲಿ ಸಮೀಕ್ಷೆಗಾರರ ಹೆಸರು, ಮೊಬೈಲ್ ಸಂಖ್ಯೆ, ಸಮೀಕ್ಷೆಯ ದಿನಾಂಕ ಕಾಣುತ್ತದೆ ಅದರ ಕೆಳಗಡೆ ಇರುವ ಮೊಬೈಲ್ ನಂಬರ್ ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ತಿಳಿ ಹಸಿರು ಬಣ್ಣದ ಬದಲಾವಣೆ ಕಾಣುತ್ತದೆ.
8)ನಂತರ ನಿಮಗೆ ಅದರ ಕೆಳಗಡೆ ಕಾಣುವ ಬೆಳೆ ವಿವರ ವೀಕ್ಷಿಸಿ ಮೇಲೆ ಕ್ಲಿಕ್ ಮಾಡಿ.
9)ಆಗ ನಿಮಗೆ ರೈತನ ಹೆಸರು, ಸರ್ವೇ ನಂಬರ್, ಮೊಬೈಲ್ ನಂ, ಅದರ ಕೆಳಗಡೆ ಬೆಳೆ ಹೆಸರು , ವಿಸ್ತೀರ್ಣ, ವರ್ಗ, ನೀರಾವರಿ ವಿಧ, ಷರಾ, ಛಾಯಾಚಿತ್ರ ವೀಕ್ಷಿಸಿ, ಎಂಬ ಆಯ್ಕೆಗಳು ಕಾಣಿಸುತ್ತವೆ.
ಇದನ್ನೂ ಓದಿ:ಬೆಳೆ ವಿಮೆ ಹಣ ನಿಮಗೆ ಇನ್ನೂ ಜಮೆ ಆಗಿಲ್ಲವೇ ನಿಮ್ಮ ಅರ್ಜಿ ಸ್ಥಿತಿ ಬಗ್ಗೆ ತಿಳಿದುಕೊಳ್ಳಿ!
10)ತಮಗೆ ಕಾಣುವ ಬೆಳೆಯ ಹೆಸರು ಏನು ನಮೂದಾಗಿದೆ ಎಂದು ತಿಳಿಯುತ್ತದೆ. ಹಾಗೂ ನಿಮ್ಮ ಬೆಳೆಯ ಪೋಟೋ ಸಹ ತಾವು ಅಲ್ಲಿ ನೋಡಬಹುದು.
ಸೂಚನೆ:ಈ ಆ್ಯಪ್ ನಿಂದ ಕಳೆದ 5 ವರ್ಷಗಳ ಹಳೆಯ ಬೆಳೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ದಾಖಲಾದ ಬೆಳೆ ವಿವರ ಕುರಿತು ಇಲ್ಲಿದೆ ಲಿಂಕ್ Click here….
ನೇರ ಪಹಣಿಗೆ ದಾಖಲಾದ ಬೆಳೆ ವಿವರ ನೋಡಲು ಲಿಂಕ್ Click here….