ನಮಸ್ಕಾರ ರೈತ ಭಾಂದವರೇ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ, ರೇಷ್ಮೆ ಇಲಾಖೆ, ಜಲಾನಯನ ಇಲಾಖೆ ಈ ಮೂರು ಇಲಾಖೆಗಳಲ್ಲಿ ರೈತರಿಗೆ ಸಹಾಯಧನದಲ್ಲಿ ವಿವಿಧ ಕೃಷಿ ಪರಿಕರಗಳು ಮತ್ತು ಯಂತ್ರೋಪಕರಣಗಳು ಸಹಾಯಧನದಲ್ಲಿ ನೀಡಲಾಗುತ್ತದೆ.
ಕೃಷಿ ಇಲಾಖೆಯಲ್ಲಿ ಹಲವು ಜಿಲ್ಲೆಗಳಲ್ಲಿ 2024-25ನೇ ಸಾಲಿನ ಸಹಾಯಧನದಡಿ ಕೃಷಿ ಯಂತ್ರೋಪಕರಣಗಳ ವಿತರಣೆಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ಇರುವ ಹತ್ತಿರದ ರೈತ ಸಂಪರ್ಕ ಕೇಂದ್ರ (ಕೃಷಿ ಇಲಾಖೆ ಕಛೇರಿ) ಭೇಟಿ ಮಾಡಿ ಕೃಷಿ ಯಂತ್ರೋಪಕರಣಗಳಿಗೆ ಅರ್ಜಿ ಸಲ್ಲಿಸಬಹುದು.
ಕೃಷಿ ಇಲಾಖೆಯಲ್ಲಿ ಪವರ ಸ್ಪ್ರೇಯರ್, ಪವರ್ ವೀಡರ್, ಟಿಲ್ಲರ್, ಮಿನಿ ಟ್ರ್ಯಾಕ್ಟರ್, ಟ್ರ್ಯಾಕ್ಟರ್, ಮೋಟೋಕಾರ್ಟ್(ಕೈಗಾಡಿ), ಕೋನೋ ವೀಡರ್, ಪೆಟ್ರೋಲ್ ಬ್ಯಾಕ್ ಪ್ಯಾಕ್ ಸ್ಪ್ರೇಯರ್, ಕೆಲವು ಜಿಲ್ಲೆಗಳಲ್ಲಿ ಕಬ್ಬು ಕಟಾವು ಮೆಷಿನ್, ರಾಗಿ ಮತ್ತು ಭತ್ತ ಕಟಾವು ಮೆಷಿನ್, ಹೆಸರು, ಉದ್ದು ಕಟಾವು ಮೆಷಿನ್ ಇನ್ನೂ ಹಲವು ಕೃಷಿ ಸಂಬಂದಿಸಿದ ಯಂತ್ರೋಪಕರಣಗಳಿಗೆ ಅರ್ಜಿ ಸಲ್ಲಿಸಬಹುದು.
ಕೆಲವು ಜಿಲ್ಲೆಗಳಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಇದ್ದು ಇನ್ನೂ ಕೆಲವು ಜಿಲ್ಲೆಗಳಲ್ಲಿ ಅರ್ಜಿ ಬಂದ ಕೂಡಲೇ ಸೌಲಭ್ಯ ನೀಡುವ ವ್ಯವಸ್ಥೆ ಇರುತ್ತದೆ. ಆದ್ದರಿಂದ ಕೃಷಿ ಇಲಾಖೆ ಭೇಟಿ ಮಾಡಿ ಮಾಹಿತಿ ತಿಳಿದುಕೊಳ್ಳಿ.
ಸಹಾಯಧನ ನೀಡುವ ವಿಧಾನ:
ಸಾಮಾನ್ಯ ವರ್ಗದ ಜನರಿಗೆ ಶೇ.50% ಸಹಾಯಧನ ನೀಡಲಾಗುತ್ತದೆ.
ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ದವರಿಗೆ ಶೇ.90% ಸಹಾಯಧನ ನೀಡಲಾಗುತ್ತದೆ.
ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು:
1)ನಿಗದಿತ ಅರ್ಜಿ ನಮೂನೆ
2)ಪಹಣಿ/RTC ಪ್ರತಿ
3)ಆಧಾರ್ ಪ್ರತಿ
4)ಬ್ಯಾಂಕ್ ಪಾಸ್ ಬುಕ್ ಪ್ರತಿ
5)2 ಫೋಟೋ
6)stamp paper
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಹಾಗೂ ಹತ್ತಿರದ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ವಿಚಾರಿಸಿ.