ಪ್ರೀಯ ರೈತ ಬಾಂದವರೇ ರೈತರು ತಮ್ಮ ಸರ್ವೆ ನಂಬರ್ ನಲ್ಲಿ ಯಾರ ಯಾರ ಹೆಸರಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ,. ಹೌದು, ಹಾಗೇಯೇ ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೇ, ಹಿಂದಿನ ವರ್ಷ ಯಾವ ಬೆಳೆ ನಮೂದಾಗಿದೆ, ಜಮೀನಿನ ವಿಸ್ತೀರ್ಣ ಎನಾದ್ರೂ ಬದಲಾವಣೆ ಆಗಿದೇ ಹಾಗಿದ್ದರೆ ಇದಕ್ಕಾಗಿ ಯಾರ ಸಹಾಯವೂ ಇಲ್ಲದೆ ನಿಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಎಂಬ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ರೈತರ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಸುಲಭವಾಗಿ ಸಿಗಬೇಕು. ಜಮೀನಿನ ದಾಖಲೆಗಳನ್ನು ಪಡೆಯಲು ತಹಶೀಲ್ದಾರ್ ಕಚೇರಿ, ನಾಡ ಕಚೇರಿಗಳ ಮುಂದೆ ಗಂಟೆಗಟ್ಟಲೇ ಕಾಯಬಾರದೆಂಬ ಉದ್ದೇಶದಿಂದ ಕಂದಾಯ ಇಲಾಖೆಯರು ರೈತರ ದಾಖಲೆಗಳನ್ನು ಗಣಕೀಕರಣಗೊಳಿಸಿದೆ.
ಹೌದು, ರೈತರು ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ ಜಮೀನಿನ ದಾಖಲೆಗಳನ್ನು ಪರಿಶೀಲಿಸಬಹುದು. ಜಮೀನಿನ ಪಹಣಿ (ಆರ್.ಟಿ.ಸಿ)RTC , ಮುಟೇಶನ್, Mutation Status, ಆಕಾರಬಂದ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಚೆಕ್ ಮಾಡಬಹುದು. ಹಾಗೂ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಹಾಗೂ ದಾಖಲೆಗಳ ಮಾರ್ಪಾಡು ಮಾಡಲು ಆನ್ಸೆನ್ ನಲ್ಲೇ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ಇದನ್ನೂ ಓದಿ: PMKSY-OI Scheme: PVC Pipe ಮತ್ತು Diesel pumpset – ಶೇ. 50 ರ ಸಹಾಯಧನದಲ್ಲಿ ವಿತರಣೆ:
ಒಂದು ಸರ್ವೆ ನಂಬರ್ ನಲ್ಲಿ ಯಾರ ಯಾರ ಹೆಸರುಗಳನ್ನು ಸೇರಿಸಲಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ಸರ್ವೆ ನಂಬರ್ ನಲ್ಲಿ ಇನ್ನೂ ಯಾರ ಯಾರ ಹೆಸರುಗಳನ್ನು ಸೇರಿಸಲಾಗಿದೆ ಅವರ ಹೆಸರಿಗೆ ಎಷ್ಟು ಎಕರೆ ಜಮೀನು ಇದೆ ಅವರ ಜಮೀನಿನ ಮೇಲೆ ಸಾಲವಿದೆಯೇ ? ಯಾವ ಬೆಳೆ ಬೆಳೆಯಲಾಗಿದೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಚೆಕ್ ಮಾಡಲು ಈ https://landrecords.karnataka.gov.in/Service2/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
ಆಗ ಭೂಮಿ Online ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆನ್ಸೆನ್ ಲ್ಯಾಂಡ್ ರಿಕಾರ್ಡ್ಸ್ ಪೇಜ್ ಓಪನ್ ಆಗುತ್ತದೆ.
ಹಂತ:1: ನಂತರ ಅಲ್ಲಿ ನೀವು ನಿಮ್ಮ ಜಿಲ್ಲೆ District,ಆಯ್ಕೆ ಮಾಡಿಕೊಳ್ಳಬೇಕು. ತಾಲೂಕುTaluk, ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ Hobli,ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಊರು village ಆಯ್ಕೆ ಮಾಡಿಕೊಳ್ಳಬೇಕು.ನಿಮ್ಮ ಜಮೀನಿನ ಸರ್ವೆ ನಂಬರ್ Survey Number ನಮೂದಿಸಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು.
ಹಂತ:2: ಇದಾದ ನಂತರ ಸರ್ನೋಕ್ Surnoc ಹಾಗೂ ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. Select Period ನಲ್ಲಿ ಪ್ರಸಕ್ತ ವರ್ಷ 2023-24 ಆಯ್ಕೆ ಮಾಡಿಕೊಳ್ಳಬೇಕು.
ಹಂತ:3: Select Year ನಲ್ಲಿಯೂ ಸಹ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಯಾವ ಯಾವ ರೈತರ ಹೆಸರಿದೆ? ಆ ರೈತರ ಹೆಸರು, ತಂದೆಯ ಹೆಸರು, ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಖಾತಾ ನಂಬರ್ ಗೋಚರಿಸುತ್ತದೆ.
ಹಂತ: 4: ನಂತರ ಅಲ್ಲಿ ಕೆಳಗೆ ಕಾಣುವ View ಮೇಲೆ ಕ್ಲಿಕ್ ಮಾಡಿದರೆ ಜಮೀನಿನ ಪಹಣಿ (ಆರ್.ಟಿ.ಸಿ)RTC ಓಪನ್ ಆಗುತ್ತದೆ. ಅಲ್ಲಿ ನೀವು ನಮೂದಿಸಿದ ಸರ್ವೆ ನಂಬರ್ನಲ್ಲಿಒಟ್ಟು ಎಷ್ಟು ಎಕರೆ ಜಮೀನಿದೆ? ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಇರುತ್ತದೆ. ಜಮೀನಿನ ಮಾಲಿಕರ ಹೆಸರು, ಹಾಗೂ ಎಕರೆ ಕಾಣಿಸುತ್ತದೆ. ಇದರೊಂದಿಗೆ ಜಮೀನು ಮುಟೇಶನ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಇರುತ್ತದೆ.
ಇದರೊಂದಿಗೆ ಜಮೀನಿನ ಮಾಲಿಕರು ಯಾವುದೇ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರೆ ಆ ಸಾಲದ ಮಾಹಿತಿ ಸಹ ಇರುತ್ತದೆ. ಜಮೀನು ಜಂಟಿಯಾಗಿದ್ದರೆ ಯಾವ ಯಾವ ರೈತರ ಜಮೀನು ಜಂಟಿಯಾಗಿದೆ ಎಂಬ ಮಾಹಿತಿ ಸಹ ಕಾಣಿಸುತ್ತದೆ.
ಪ್ರಸಕ್ತ ವರ್ಷ 2023-24 ನೇ ಸಾಲಿನಲ್ಲಿ ಯಾವ ಬೆಳೆಗಳನ್ನು ತಮ್ಮ ಪಹಣಿಯಲ್ಲಿ ನಮೂದಿಸಲಾಗಿದೆ ಅಂತ ಮಾಹಿತಿ ಗೋಚರಿಸುತ್ತದೆ..
ಇದನ್ನೂ ಓದಿ: Drought relief Grant district wise: ಯಾವ ಜಿಲ್ಲೆಗೆ ಎಷ್ಟು ಬರ ಪರಿಹಾರ ಹಣ? ಯಾರಿಗೆ ಜಮಾ ?