Monday, January 20, 2025

KRISHI VIGYANA KENDRA-ಕೃಷಿ ವಿಜ್ಞಾನ ಕೇಂದ್ರಗಳು ರೈತರ ಸೇವೆಯಲ್ಲಿ, ರೈತರಿಗೆ ಸಿಗುವ ಸೌಲಭ್ಯಗಳು ಮತ್ತು ಸಂಪರ್ಕ ಸಂಖ್ಯೆಗಳ ಮಾಹಿತಿ.

ಭಾರತ ದೇಶವು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ರೈತರ ಕೃಷಿ ಅಭಿವೃದ್ಧಿಗೆ ಸರಕಾರಗಳಿಂದ ಹಲವಾರು ಯೋಜನೆಗಳನ್ನು ಮತ್ತು ಇಲಾಖೆಗಳು, ಸಂಸ್ಥೆಗಳನ್ನು ರಚನೆ ಮಾಡಲಾಗಿದೆ. ಹಲವು ಸಂಸ್ಥೆಗಳಲ್ಲಿ ಕೃಷಿ ವಿಜ್ಞಾನ ಕೇಂದ್ರಗಳ ರಚನೆ ಕೂಡ ಒಂದಾಗಿದೆ.

ಕೃಷಿ ವಿಜ್ಞಾನ ಕೇಂದ್ರಗಳು ರಾಜ್ಯದ ಕೃಷಿ ವಿಶ್ವ ವಿದ್ಯಾಲಯಗಳಡಿ ಕಾರ್ಯಚರಣೆ ಮಾಡುತ್ತವೆ. ಕೃಷಿ ವಿಜ್ಞಾನ ಕೇಂದ್ರಗಳು ಜಿಲ್ಲೆಗೆ ಒಂದರಂತೆ ಕಾರ್ಯಚರಣೆಯಲ್ಲಿವೆ. ಇವು ರೈತರಿಗೆ ಸ್ಥಳೀಯ ಬೆಳೆಗಳ ಕೀಟ ಮತ್ತು ರೋಗಗಳ ನಿಯಂತ್ರಣ ಕುರಿತು ಹಾಗೂ ಹೊಸ ತಳಿಗಳ ಪರಿಚಯ ಮತ್ತು ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಮಾಡುತ್ತವೆ.

ಕೃಷಿ ವಿಜ್ಞಾನ ಕೇಂದ್ರಗಳು ಜಿಲ್ಲೆಯಲ್ಲಿ ಸಂಚಲನಾತ್ಮಕ ಕೇಂದ್ರಗಳಾಗಿದ್ದು ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಸಸ್ಯ ಸಂರಕ್ಷಣೆ, ಆದಾಯ ವೃದ್ಧಿಸುವ ಚಟುವಟಿಕೆಗಳು ಹಾಗೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡುತ್ತಿವೆ.

ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜಗಳನ್ನು ಪಡೆಯಬೇಕಾದರೆ ಈ ಕೆಲಸ ಮಾಡುವುದು ಕಡ್ಡಾಯ!

ಕೃಷಿ ವಿಜ್ಞಾನ ಕೇಂದ್ರಗಳ ಪ್ರಯೋಜನಗಳು:

1)ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಯುವಕ, ಯುವತಿಯರಿಗೆ ಕೃಷಿಯಲ್ಲಿ ಆಸಕ್ತಿ ಇರುವವರಿಗೆ ಕೃಷಿಯಲ್ಲಿ ಆದಾಯ ಬರುವ ಚಟುವಟಿಕೆಗಳ ಬಗ್ಗೆ ತರಬೇತಿಗಳನ್ನು ನೀಡುತ್ತದೆ.

2)ವಿವಿಧ ಕೃಷಿ ಪದ್ಧತಿಗಳಲ್ಲಿ ಆವಿಸ್ಕರಿಸಲ್ಪಟ್ಟ ನೂತನ ಕೃಷಿ ತಾಂತ್ರಿಕತೆಗಳನ್ನು ಸ್ಥಳೀಯ ಸೂಕ್ತತೆಯ ಆಧಾರದ ಮೇಲೆ ರೈತರಿಗೆ ಮಾಹಿತಿ ನೀಡುವುದು.

3)ಕೃಷಿ ಹಾಗೂ ಸಂಬಂಧಿತ ಕೇಂದ್ರಗಳಲ್ಲಿ ಉತ್ಪಾದನೆ ಹೆಚ್ಚಿಸಲು ರೈತರ ಹೊಲಗಳಲ್ಲಿ ನವೀನ ತಾಂತ್ರಿಕತೆಗಳನ್ನು ಬಳಸಿ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವುದು.

4)ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ಗುಣಮಟ್ಟದ ಬೀಜ, ಸಸಿಗಳು, ತೋಟಗಾರಿಕೆಗಳ ಉತ್ಪನ್ನಗಳು, ಕುಕ್ಕಟ ಹಾಗೂ ಜಾನುವಾರುಗಳು ವಿವಿಧ ಜೈವಿಕ ಹಾಗೂ ಕೃಷಿ ಪರಿಕರಗಳನ್ನು ಉತ್ಪಾದಿಸಿ ರೈತ ಸಮುದಾಯಕ್ಕೆ ಪೂರೈಸುವುದು.

5)ಜಿಲ್ಲೆಯ ಕೃಷಿ ಆರ್ಥಿಕ ಅಭಿವೃದ್ಧಿಗೆ ಸಾರ್ವಜನಿಕ, ಖಾಸಗಿ ಸ್ವಯಂ ಸೇವಾ ಘಟಕಗಳಿಗೆ ತಂತ್ರಜ್ಞಾನವನ್ನು ಒದಗಿಸುವ ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸುವುದು.

6)ತರಭೇತಿಗೆ ಬರುವ ರೈತರಿಗೆ ವಸತಿ ಸೌಕರ್ಯ ಹಾಗೂ ಊಟದ ವ್ಯವಸ್ಥೆ ಉಚಿತ ವಾಗಿರುತ್ತದೆ.

7)ಪ್ರತಿ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಪ್ರಾತ್ಯಕ್ಷಿಕೆ ಘಟಕಗಳಾಗಿ ಹೈನುಗಾರಿಕೆ, ಆಡು, ಕುರಿ, ಕೋಳಿ, ತೋಟಗಾರಿಕೆ, ಕೈತೋಟ, ಸಸ್ಯಾಭಿವೃದ್ಧಿ, ಮಣ್ಣು ಮತ್ತು ನೀರು ಸಂರಕ್ಷಣೆ ಮೊದಲಾದ ಪ್ರಾತ್ಯಕ್ಷಿಕೆ ಘಟಕಗಳನ್ನು ರಚಿಸಲಾಗಿರುತ್ತದೆ.

8)ಆಯಾ ಜಿಲ್ಲೆಯ ಕೃಷಿಕರಿಗೆ ತಂತ್ರಜ್ಞಾನವನ್ನು ಗುರುತಿಸುವುದು, ಮಾರ್ಪಡಿಸುವುದು, ಅಳವಡಿಸಿಕೊಳ್ಳುವುದು ಹಾಗೂ ಮಾಹಿತಿಯನ್ನು ಸಂಗ್ರಹಿಸಿ ನಿರ್ವಹಿಸುವುದು.

ಇದನ್ನೂ ಓದಿ: ಕಂದಾಯ ಇಲಾಖೆಯಿಂದ ಪ್ರತಿ ತಿಂಗಳು ಪಿಂಚಣಿ(ಹಣ) ಬರುವ ಯೋಜನೆಗಳು!

9)ನೇರ ರೈತರ ಕೇತ್ರಗಳಿಗೆ ಭೇಟಿ ಮಾಡಿ ರೈತರ ಬೆಳೆಗಳ ಸಸ್ಯ ಸಂರಕ್ಷಣೆ ಕ್ರಮಗಳು, ಕೀಟಗಳ ನಿರ್ವಹಣೆ ಮತ್ತು ಮಣ್ಣು ಸಂರಕ್ಷಣೆ ಕ್ರಮಗಳ ಬಗ್ಗೆ ಮಾಹಿತಿ ನೀಡುವುದು.

10)ರೈತರಿಗೆ ಸಮಗ್ರ ಕೃಷಿ ಪದ್ದತಿ ಅಳವಡಿಸಲು ಸೂಕ್ತವಾದ ಸಲಹೆ ಸೂಚನೆಗಳನ್ನು ನೀಡುವುದು.

ಕೃಷಿ ವಿಜ್ಞಾನ ಕೇಂದ್ರಗಳ ಸಂಪರ್ಕ ಸಂಖ್ಯೆಗಳು:

ಕಾರವಾರ(ಶಿರಶಿ)08384-228411, ಉಡುಪಿ08202-563923, ತುಮಕೂರು08134-298955, 0816-2243175, ರಾಮನಗರ080-29899388, ರಾಯಚೂರು08532-220196, ಮೈಸೂರು08211-295018, ಮಂಡ್ಯ08232-277456, ಕೋಲಾರ08152-295098, ಕೊಡಗು08274-247274, ಹಾವೇರಿ08373-253524, ಹಾಸನ08172-256092, ಕಲಬುರ್ಗಿ08472-274596, ಗದಗ08372-289325, ಧಾರವಾಡ0836-2970246, ದಾವಣಗೆರೆ08192-263462, ಮಂಗಳೂರು0824-2431872, ಚಿತ್ರದುರ್ಗ08193-200081, ಚಿಕ್ಕಮಗಳೂರು08263-228198, ಚಾಮರಾಜನಗರ08226-297050, ವಿಜಯಪುರ08352-200140, ಬೀದರ08482-244155, ಬಳ್ಳಾರಿ0839-2265080, ಬೆಳಗಾವಿ09535604747, ಬಾಗಲಕೋಟೆ08354-223543

ಇತ್ತೀಚಿನ ಸುದ್ದಿಗಳು

Related Articles