ಕೃಷಿ ಇಲಾಖೆಯಲ್ಲಿ ಮುಂಗಾರು ಹಂಗಾಮಿನಿ ಬಿತ್ತನೆ ಬೀಜ ವಿತರಣೆ ಆಗುತ್ತಿದ್ದು ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಪಡೆಯಬೇಕಾದರೆ RTC/ಪಹಣಿ/ಉತಾರ್ ಗೆ ರೈತರು ಆಧಾರ್ ಕಾರ್ಡ್ ನ್ನು ಜೋಡಣೆ ಮಾಡಬೇಕು ಇಲ್ಲವಾದಲ್ಲಿ ಬೀಜ ಸಿಗುವುದಿಲ್ಲ ಹಾಗಾಗಿ ಎಲ್ಲಾ ರೈತರು RTC/ಪಹಣಿ/ಉತಾರ್ ಗೆ ಆಧಾರ್ ಜೋಡಣೆ ಆಗಿದೆಯಾ ಇಲ್ಲವೋ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ.
ಕೃಷಿ ಇಲಾಖೆಯಿಂದ ಬಿತ್ತನೆ ಬೀಜಗಳು RTC ಕೊಟ್ಟರೆ ಕೊಡುತ್ತಿದ್ದರು, ಆದರೆ ಇನ್ನೂ ಮುಂದಕ್ಕೆ ಬಿತ್ತನೆ ಬೀಜಕ್ಕೆ ಹಾಗೂ ಇತರೆ ಕೃಷಿ ಇಲಾಖೆ ಸೌಲಭ್ಯಗಳಿಗೆ RTC ಗೆ ಆಧಾರ್ ಜೋಡಣೆ ಮಾಡಿಸುವುದು ಕಡ್ಡಾಯವಾಗಿದೆ. RTC ಗೆ ಆಧಾರ್ ಜೋಡಣೆ ಕೆಲಸ ಸುಮಾರು 2-3 ವರ್ಷಗಳಿಂದ ನಡಿತಾ ಬರ್ತಾ ಇದೆ. ಇದನ್ನು ಈ ಭಾರಿ ಕಂದಾಯ ಇಲಾಖೆಯ ಸಹಯೋಗದಲ್ಲಿ ಕಡ್ಡಾಯವಾಗಿ ರೈತರ ಜಮೀನಿನ ಎಲ್ಲಾ ಸರ್ವೇ ನಂಬರ್ ಗಳಿಗೆ ಆಧಾರ್ ಜೋಡಣೆ ಮಾಡಲು ತಿಳಿಸಿದೆ.
ರೈತರು ತಮ್ಮ ಎಲ್ಲಾ ಸರ್ವೇ ನಂಬರ್ ಗಳ RTC/ಪಹಣಿ/ಉತಾರ್ ವನ್ನು ತೆಗೆದುಕೊಂಡು ಹತ್ತಿರದ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳಿಗೆ ಭೇಟಿ ಮಾಡಿದರೆ, ಗ್ರಾಮ ಲೆಕ್ಕಾಧಿಕಾರಿಗಳು, ಕೃಷಿ ಅಧಿಕಾರಿಗಳು, ತೋಟಗಾರಿಕೆ ಅಧಿಕಾರಿಗಳು ನಿಮ್ಮ RTC ಗೆ ಆಧಾರ್ ಜೋಡಣೆ ಮಾಡಿಕೊಡುತ್ತಾರೆ. RTC ಗೆ ಆಧಾರ್ ಜೋಡಣೆ ಕೆಲಸ ಆದ ಮೇಲೆ ಕೃಷಿ ಇಲಾಖೆಯಿಂದ ಬಿತ್ತನೆ ಬೀಜಗಳನ್ನು ಪಡೆಯಬಹುದು.
ಇದನ್ನೂ ಓದಿ: ವಿದೇಸಿ ಹಣ್ಣು ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿಯಾದ ಯುವ ರೈತ.
RTC ಗೆ ಆಧಾರ್ ಜೋಡಣೆಗೆ ಬೇಕಾಗುವ ದಾಖಲೆಗಳು:
1)RTC ಅಥವಾ ಎಲ್ಲಾ ಸರ್ವೇ ನಂಬರ್ ಖಾತೆ ಪ್ರತಿ
2)ಆಧಾರ್ ಕಾರ್ಡ ಜೆರಾಕ್ಸ ಪ್ರತಿ
3)ಬ್ಯಾಂಕ ಪಾಸ ಬುಕ್ ಜೆರಾಕ್ಸ ಪ್ರತಿ
4)ಪಾಸ್ ಪೋರ್ಟ ಸೈಜ್ 1 ಪೋಟೋ
ಅನೇಕ ರೈತರಲ್ಲಿ ಈ ಪ್ರಶ್ನೆ ಸಹಜವಾಗಿ ಬಂದಿರುತ್ತದೆ. ನಾವು ಏಕೆ ನಮ್ಮ RTC/ಪಹಣಿ/ಉತಾರ್ ಗೆ ಆಧಾರ್ ಜೋಡಣೆ ಏಕೆ ಮಾಡಿಸಬೇಕು ಎಂದು ಅದರ ಮಾಹಿತಿ ಇದರ ಕೆಳಗಿನ ಲೇಖನದಲ್ಲಿದೆ.
1)ಜಮೀನಿನ ಮಾಲೀಕರ ನೈಜನೆಯನ್ನು ನಿಖರವಾಗಿ ತಿಳಿದುಕೊಳ್ಳಲು.
2)ಕಂದಾಯ ಇಲಾಖೆಗೆ ರೈತರ ಜಮೀನಿನ ದಾಖಲೆಗಳನ್ನು digital ಮಾದರಿಯಲ್ಲಿ ಸಂಗ್ರಹಣೆ ಮಾಡಿಡಲು ಸಹಕಾರಿಯಾಗಿದೆ.
3)ಕೃಷಿಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬೆಳೆ ಪರಿಹಾರ ಸೌಲಭ್ಯ ಸಿಗಲು ಸಹಾಯವಾಗುತ್ತದೆ.
4)ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳ ಸಹಾಯಧನದಡಿಯಲ್ಲಿ ಸೌಲಭ್ಯ ಸಿಗಲು ಸಹಾಯವಾಗುತ್ತದೆ.
5)ಕೃಷಿಕರಿಗೆ ಕೃಷಿ ಸಹಕಾರಿ ಸಂಘಗಳಿಂದ ಕೃಷಿ ಸಾಲ ಪಡೆಯಲು ಸಹಾಯವಾಗುತ್ತದೆ.
6)ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಸಹಾಯವಾಗುತ್ತದೆ.
ಕೃಷಿ ಇಲಾಖೆಯ ಸೌಲಭ್ಯಗಳು
A)ಬಿತ್ತನೆ ಬೀಜಗಳನ್ನು ಪಡೆಯಲು
B)ಕೃಷಿ ಪರಿಕರಗಳನ್ನು ಪಡೆಯಲು
C)ಕೃಷಿ ಯಂತ್ರೋಪಕರಣಗಳನ್ನು ಪಡೆಯಲು
D)ಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆಯಲು
E)ತುಂತುರು ನೀರಾವರಿ ಹಾಗೂ ಹನಿ ನೀರಾವರಿ ಘಟಕದ ಪೈಪಗಳನ್ನು ಪಡೆಯಲು