ಆತ್ಮೀಯ ರೈತ ಬಾಂದವರೇ ಕೃಷಿ ಭಾಗ್ಯ ಯೋಜನೆ Krishi Bhagya Scheme 2023-24 ರಾಜ್ಯದಲ್ಲಿ ಮರು ಜಾರಿ ಮಾಡಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಯೋಜನೆಯಡಿ ವಿವಿಧ ಚಟುವಟಿಕೆಗಳಿಗೆ/ಘಟಕಗಳಿಗೆ ವಿವಿಧ ರೀತಿಯ ಸಹಾಯಧನವನ್ನು ಒದಗಿಸುತ್ತದೆ.
ಈ ಯೋಜನೆ ಉದ್ದೇಶವೇನು? ಯೋಜನೆಯ ಗುರಿ?ವಿವಿಧ ಘಟಕಗಳಿಗೆ ಯಾವ ರೀತಿ ಸಹಾಯಧನ ನೀಡಿರುತ್ತಾರೆ ಎಂದು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ನೋಡೋಣ.
ಕರ್ನಾಟಕ ರಾಜ್ಯದಲ್ಲಿ ಸುಮಾರು ಶೇ.64 ರಷ್ಟು ಸಾಗುವಳಿ ಪ್ರದೇಶವು ಮಳೆ ಆಶ್ರಿತ ಪ್ರದೇಶವಾಗಿರುತ್ತದೆ. ಇದರಲ್ಲಿ ಶೇ.55 ರಷ್ಟು ಆಹಾರ ಧಾನ್ಯಗಳ ಮತ್ತು ಶೇ.75 ರಷ್ಟು ಎಣ್ಣೆಕಾಳುಗಳ ಉತ್ಪಾದನೆಯು ಮಳೆಯಾಶ್ರಿತ ಪ್ರದೇಶದ ಕೊಡುಗೆಯಾಗಿದೆ.
ನೀರಾವರಿ ಪ್ರದೇಶದ ರೈತರಿಗೆ ನೀರಿನ ಲಭ್ಯತೆ ಖಚಿತವಾದ ಕಾರಣ ನೀರಾವರಿಯಲ್ಲಿ ನಿರೀಕ್ಷಿತ ಆದಾಯ ಸಿಗುವುದರಿಂದ, ವಿವಿಧ ಯೋಜನೆಗಳ ಅನುಕೂಲಗಳನ್ನು ಪಡೆದು ವ್ಯವಸಾಯದಲ್ಲಿ ಹೂಡುವಳಿ ಮಾಡುತ್ತಾರೆ.
ಆದರೆ ಒಣ ಭೂಮಿ ರೈತರ ಆದಾಯ ಮಳೆ ಮೇಲೆ ಅವಲಂಬಿತವಾಗಿರುವುದರಿಂದ ಈ ಸವಲತ್ತುಗಳನ್ನು ಬಳಸಿಕೊಳ್ಳಲು ಸಾಧ್ಯವಾಗದೆ ಇವರ ಜೀವನೋಪಾಯದ ಮೇಲೆ ಪ್ರಭಾವ ಬೀರಿದೆ. ಕಡಿಮೆ ಮಳೆ ಬೀಳುವ ಬಹುತೇಕ ಪ್ರದೇಶಗಳಲ್ಲಿ, ರೈತರು 1000 ಅಡಿವರೆಗೂ ಕೊಳವೆಬಾವಿ ಕೊರೆಯಲು ರೂ.2.0 ಲಕ್ಷಗಳನ್ನು ವೆಚ್ಚ ಮಾಡುತ್ತಿದ್ದಾರೆ.
ಈ ಕೊಳವೆಬಾವಿ ವಿಫಲವಾದರೆ ಅಥವಾ ಕೆಲವು ವರ್ಷಗಳ ನಂತರ ಬತ್ತಿಹೋದ ಸಂದರ್ಭದಲ್ಲಿ ರೈತರು ಸಾಲಭಾಧೆಗೆ ಸಿಲುಕುತ್ತಿದ್ದಾರೆ. ಆದ್ದರಿಂದ ರೈತರು ಕೊಳವೆಬಾವಿಯ ಬದಲಾಗಿ ಹೂಡಿಕೆಯನ್ನು ಕೃಷಿ ಭಾಗ್ಯ ಯೋಜನೆಯ ಘಟಕಗಳಲ್ಲಿ ಹೂಡಿಕೆ ಮಾಡಿ ಸುಸ್ಥಿರ ಕೃಷಿಗಾಗಿ ಬಳಸಬಹುದಾಗಿದೆ.
2023-24ರ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕಂಡಿಕೆ- 39 ರಲ್ಲಿ “ನಮ್ಮ ಸರ್ಕಾರ ಹಿಂದೆ ಜಾರಿಗೊಳಿಸಿದ ಕೃಷಿ ಭಾಗ್ಯ ಯೋಜನೆಯು ಅತ್ಯಂತ ಜನಪ್ರಿಯ ಹಾಗೂ ಉಪಯುಕ್ತವಾಗಿತ್ತು.
ಈ ಯೋಜನೆಯನ್ನು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ 100 ಕೋಟಿ ರೂ ವೆಚ್ಚದಲ್ಲಿ ಮರು ಜಾರಿಗೊಳಿಸಲಾಗುವುದು” ಎಂದು ಘೋಷಿಸಿರುತ್ತಾರೆ. ಅದರಂತೆ ಪ್ರಸ್ತುತ ವರ್ಷದಲ್ಲಿ ಪೂರಕ ಅಂದಾಜು-1 ರಲ್ಲಿ ರೂ. 100 ಕೋಟಿಗಳ ಅನುದಾನವನ್ನು ಒದಗಿಸಲು ಸಹಮತಿಸಿದ್ದು,
ಅನುಮೋದನೆ ನೀಡಿ ಅಧಿಸೂಚಿಸಲಾಗಿರುತ್ತದೆ.
ಯೋಜನಾ ವ್ಯಾಪ್ತಿ ಕೃಷಿ ಭಾಗ್ಯ ಯೋಜನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDMF)ಯಡಿಯ ಕಾರ್ಯಕ್ರಮವನ್ನು ಮಳೆಯಾಶ್ರಿತ ಕೃಷಿ ನೀತಿ, 2014 ರನ್ಮಯರಾಜ್ಯದ 5 ಒಣ ಹವಾಮಾನ ವಲಯಗಳ 24 ಜಿಲ್ಲೆಗಳಲ್ಲಿ (106 ತಾಲ್ಲೂಕುಗಳಲ್ಲಿ) ಅನುಷ್ಠಾನ ಮಾಡಲಾಗುವುದು. ಸದರಿ ಪ್ರದೇಶದ ಅಚ್ಚು, ಕಟ್ಟು ಪ್ರದೇಶ ಹೊರತುಪಡಿಸಿ ಇತರೆ ಎಲ್ಲಾ ಪ್ರದೇಶದಲ್ಲಿ ಅನುಷ್ಠಾನ ಮಾಡಲಾಗುವುದು.
ಕೃಷಿ ಭಾಗ್ಯ ಪ್ಯಾಕೇಜ್ ಯೋಜನೆಯ ಈ ಕೆಳಗಿನ ಅನುಷ್ಠಾನ ಮಾರ್ಗಸೂಚಿಗಳು NDMF, CEPMIZ ಹಾಗೂ ಇನ್ನಿತರ ಯೋಜನೆಗಳಿಂದ ಲಭ್ಯವಾಗುವ ಅನುದಾನಕ್ಕೂ, ಅನ್ವಯಿಸುತ್ತವೆ.
- Aim Of the Scheme: ಯೋಜನೆಯ ಗುರಿ:
ಮಳೆಯಾಶ್ರಿತ ಕೃಷಿ ನೀತಿ 2014 ರನ್ವಯ ರಾಜ್ಯದ 5 ಒಣ ಹವಾಮಾನ ವಲಯಗಳ 24 ಬರ ಪೀಡಿತ ಜಿಲ್ಲೆಗಳಲ್ಲಿನ 106 ತಾಲ್ಲೂಕುಗಳಲ್ಲಿ ಹಾಗೂ ಗಣಿಗಾರಿಕೆಯಿಂದ ಬಾದಿತ ಪ್ರದೇಶದಲ್ಲಿ ಸುಸ್ಥಿರ ಕೃಷಿಯನ್ನು ಉತ್ತೇಜಿಸಿ ಬೆಳೆ ಉತ್ಪಾದಕತೆ ಮತ್ತು ರೈತರ ಜೀವನಮಟ್ಟವನ್ನು ಸುಧಾರಿಸುವುದರೊಂದಿಗೆ ಬರ ಉಪಶಮನದ ಗುರಿಯನ್ನು ಹೊಂದಿರುತ್ತದೆ.
2.Objective of the Scheme: ಯೋಜನೆಯ ಉದ್ದೇಶಗಳು:
ರಾಜ್ಯದ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವುದು.
ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆಪದ್ಮತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮಪಡಿಸುವುದು ಮತ್ತು ಆದಾಯವನ್ನು ಹೆಚ್ಚಿಸುವುದು.
ಮಳೆ ನೀರನ್ನು ವ್ಯರ್ಥಮಾಡದೆ ಆಯ್ಕಸ್ಥಳದಲ್ಲಿ ಕೃಷಿ ಹೊಂಡತೆಗೆದು ಜಲ ಸಂಗ್ರಹಿಸಿ, ಬೆಳೆಗಳ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು
Details of the Scheme Facilities: ಕೃಷಿ ಭಾಗ್ಯ ಯೋಜನೆಯಡಿ ಒದಗಿಸಲಾಗುವ ಸೌಲಭ್ಯಗಳ/ಘಟಕಗಳ ವಿವರಗಳು:
- ಕ್ಷೇತ್ರ ಬದು ನಿರ್ಮಾಣ
- ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ).
- ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ
- ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (GI Wire Stone Fencing)
- ಹೊಂಡದಿಂದ ನೀರು ಎತ್ತಲು ಡೀಸೇಲ್/ಪೆಟ್ರೋಲ್/ಸೋಲಾರ್ ಪಂಪಸೆಟ್
- ನೀರನ್ನು ಬೆಳಗೆ ಹಾಯಿಸಲು ಸೂಕ್ತ (ತುಂತುರು/ಹನಿ)ನೀರಾವರಿ
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, 2023-24ರ ಆಯವ್ಯಯದ ಕಂಡಿಕೆ-39 ರಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಮರು ಜಾರಿಗೊಳಿಸಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿರುತ್ತಾರೆ. ಅದರಂತೆ ಪ್ರಸ್ತುತ ವರ್ಷದಲ್ಲಿ ಪೂರಕ ಅಂದಾಜು-1 ರಲ್ಲಿ ರೂ. 100 ಕೋಟಿಗಳ ಅನುದಾನವನ್ನು ಒದಗಿಸಲು ಅನುಮೋದನೆ ನೀಡಿ ಅಧಿಸೂಚಿಸಲಾಗಿರುತ್ತದೆ
ಯಾವ ಮಣ್ಣಿಗೆ ಮತ್ತು ಯಾವ ಅಳತೆಗೆ ಸಹಾಯಧನ ? ಸಾಮಾನ್ಯ ಮತ್ತು ಪ.ಜಾತಿ/ಪ.ಪಂ ಎಷ್ಟು?
ಕೃಷಿ ಭಾಗ್ಯ ಯೋಜನೆಯಡಿ ನೀಡಲಾಗುವ ಸೌಲಭ್ಯಗಳ ಹಾಗೂ ಸಹಾಯಧನ ವಿವರ:
ಹೆಚ್ಚಿನ ಮಾಹಿತಿಗಾಗಿ : ನಿಮ್ಮ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.
ಯೋಜನೆ ಸಂಪೂರ್ಣ ವಿವರಣೆಗಾಗಿ ಇಲ್ಲಿ ಓತ್ತಿ. Click here