ನಮಸ್ಕಾರ ರೈತರೇ, ನಿಮ್ಮ ಬಳಿ ಕಿಸಾನ್ ಕ್ರೆಡಿಟ್ ಕಾರ್ಡ್(KISAN CREDIT CARD) ಹೊಂದಿದ್ದರೆ ನಿಮಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮುಖಾಂತರ ಹಲವು ಆರ್ಥಿಕ ನೆರವು ಸಿಗಲಿದೆ ಅದರ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು.
2019-20ನೇ ಸಾಲಿನಿಂದ ಭಾರತ ಸರಕಾರವು ಕಿಸಾನ್ ಕ್ರೆಡಿಟ್ ಕಾರ್ಡ್(K.C.C) ಸೌಲಭ್ಯವನ್ನು ಪಶುಪಾಲಕರಿಗೂ ವಿಸ್ತರಿಸಿದೆ. ಈ ಕಾರ್ಯಕ್ರಮವು ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಹಂದಿ ಮತ್ತು ಮೊಲ ಸಾಕಾಣಿಕೆ ಕಸುಬುಗಳಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಅಲ್ಪಾವಧಿಯ ದುಡಿಯುವ ಬಂಡವಾಳಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶ ಹೊಂದಿದೆ.
ಈ ಯೋಜನೆಯಡಿ ಅವರ ಅಗತ್ಯತೆಕ್ಕೆ ತಕ್ಕಂತೆ ದುಡಿಯುವ ಬಂಡವಾಳಕ್ಕೆ ಬ್ಯಾಂಕ್ ಗಳಿಂದ ಆರ್ಥಿಕ ನೆರವು ಪಡೆಯಬಹುದಾಗಿದ್ದು, 3 ಲಕ್ಷ ರೂ ಗಳವರೆಗೆ ಸಾಲದ ಮೊತ್ತಕ್ಕೆ ಶೇ.2 ರಷ್ಟು ಬಡ್ಡಿ ಸಹಾಯಧನ ಲಭ್ಯವಿದೆ. ಹಾಗೂ ಸಾಲವನ್ನು ನಿಗದಿತ ಅವಧಿಯಲ್ಲಿ ಮರು ಪಾವತಿ ಮಾಡಿದಲ್ಲಿ ವಾರ್ಷಿಕ ಶೇ.3 ರಷ್ಟು ಹೆಚ್ಚುವರಿ ಬಡ್ಡಿ ಸಹಾಯಧನ ಪಡೆಯಬಹುದಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ ಪಡೆಯಬಹುದಾದ ಆರ್ಥಿಕ ಸಾಲದ ನೆರವಿನ ವಿವರ:
1)ಹೈನುಗಾರಿಕೆ ಘಟಕ: ಮಿಶ್ರತಳಿ ಹಸು ಘಟಕ(2ಕ್ಕೆ ಸೀಮಿತ) 36,000/-
ದೇಶಿ ತಳಿ ಹಸು ಘಟಕ(2ಕ್ಕೆ ಸೀಮಿತ) 14,000/-
ಸುಧಾರಿತ ತಳಿಯ ಎಮ್ಮೆ ಘಟಕ(2ಕ್ಕೆ ಸೀಮಿತ) 42,000/-
2)ಕುರಿ/ಮೇಕೆ ಘಟಕ: ತಳಿ ಸಂವರ್ಧನೆ ಘಟಕ(8 ತಿಂಗಳ ಅವಧಿಗೆ ಮಾತ್ರ)
10+1ಘಟಕ=29,950/-, 20+1 ಘಟಕ=57,200/-
ಸಾಂಪ್ರದಾಯಿಕ ಪದ್ಧತಿ: (8 ತಿಂಗಳ ಅವಧಿಗೆ ಮಾತ್ರ) ಹೊರಗಡೆ ಬಿಟ್ಟು ಮೇಯಿಸುವುದು ಮತ್ತು ವಾರಕೊಮ್ಮೆ ಸಮತೋಲನ ಆಹಾರ ನೀಡುವುದು
10+1ಘಟಕ=14,700/-, 20+1 ಘಟಕ=28,200/-
ಕುರಿಗಳ ಕೊಬ್ಬಿಸುವಿಕೆ ಘಟಕ(6 ತಿಂಗಳ ಅವಧಿ)
10+1ಘಟಕ=13,120/-, 20+1 ಘಟಕ=26,200/-
3)ಕೋಳಿ ಸಾಕಾಣಿಕೆ ಘಟಕ:
ಮಾಂಸದ ಕೋಳಿ ಘಟಕ:1ಸಾವಿರ ಕೋಳಿಗಳಿಗೆ 1,00,000/-
ಮೊಟ್ಟೆ ಕೋಳಿ ಘಟಕ:1ಸಾವಿರ ಕೋಳಿಗಳಿಗೆ 2,00,000/-
4)ಹಂದಿ ಸಾಕಾಣಿಕೆ ಘಟಕ:
10 ಹಂದಿಗಳ ಕೊಬ್ಬಿಸುವಿಕೆ( 6 ತಿಂಗಳ ಅವಧಿಗೆ) 60,000/-
5) ಮೊಲ ಸಾಕಾಣಿಕೆ ಘಟಕ:
50 ಹೆಣ್ಣು+10 ಗಂಡು (1 ವರ್ಷದ ಅವಧಿಗೆ) 50,000/-
ಆರ್ಥಿಕ ನೆರವು ಪಡೆಯಲು ಸಲ್ಲಿಸಬೇಕಾದ ದಾಖಲೆಗಳು:
1)ಅರ್ಜಿ ನಮೂನೆ
2)ಬ್ಯಾಂಕ್ ಪ್ರತಿ
3)ಆರ್,ಟಿ,ಸಿ
4)ಆಧಾರ್ ಕಾರ್ಡ ಪ್ರತಿ
5)ಫೋಟೋ
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈಧ್ಯಾಧಿಕಾರಿ/ ತಾಲೂಕಿನ ಮುಖ್ಯ ಪಶುವೈಧ್ಯಾಧಿಕಾರಿ/ ಜಿಲ್ಲಾ ಉಪ ನಿರ್ದೇಶಕರನ್ನು ಸಂಪರ್ಕಿಸಿ ಸಲಹೆ ಪಡೆದುಕೊಂಡು ಮುಂದೆವರೆಯಿರಿ.