Thursday, September 19, 2024

COW Farming-ಪಶು ಸಂಗೋಪನೆಯಲ್ಲಿ ಲಾಭ ಹೆಚ್ಚಿಸಲು ಈ ಕ್ರಮಗಳನ್ನು ಅನುಸರಿಸಿ ಸಾಕು!

ಕೃಷಿಯಲ್ಲಿ ಪಶುಸಂಗೋಪನೆಯು ಆದಾಯ ಕೊಡುಗೆ ನೀಡುವ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ. ಜಾನುವಾರುಗಳ ನಿರ್ವಹಣೆಯ ಕ್ರಮಗಳನ್ನು ಸರಿಯಾಗಿ ಅನುಸರಿಸದೆ ಹೈನುಗಾರಿಕೆಯಲ್ಲಿ ರೈತರು ನಷ್ಟವನ್ನು ಅನುಭವಿಸುತ್ತಿದ್ದಾರೆ. ಯಾವೆಲ್ಲ ಕ್ರಮಗಳನ್ನು ಅನುಸರಿಸಿದರೆ ಲಾಭವನ್ನು ಪಡೆಯಬಹುದು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವ.

ನಮ್ಮ ದೇಶದಲ್ಲಿ ಇಂದಿಗೂ ಹೈನುಗಾರಿಕೆ ಹಳೆಯ ಪದ್ಧತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವುದರಿಂದ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭಗಳಿಸಲು ಆಗುತ್ತಿಲ್ಲ, ಹೈನುಗಾರಿಕೆಯಲ್ಲಿ ಕಡಿಮೆ ಖರ್ಚು ಹೆಚ್ಚು ಲಾಭವನ್ನು ಪಡೆಯಬೇಕೆಂದರೆ ವೈಜ್ಞಾನಿಕ ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ.

ಪಶು ಸಂಗೋಪನೆಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅನುಸರಿ ಲಾಭ ಪಡೆಯಲು ಯಾವೆಲ್ಲ ಕ್ರಮಗಳನ್ನು ಅನುಸರಿಸಿದರೆ ಸೂಕ್ತ ಎಂದು ಈ ಕೆಳಗಿನ ಮಾಹಿತಿಯಲ್ಲಿ ತಿಳಿಯಬಹುದು.

ಇದನ್ನೂ ಓದಿ: ಕಂದಾಯ ಇಲಾಖೆಯಿಂದ ಪ್ರತಿ ತಿಂಗಳು ಪಿಂಚಣಿ(ಹಣ) ಬರುವ ಯೋಜನೆಗಳು!

ಈ ಕೆಳಗಿನ ಕ್ರಮಗಳನ್ನು ಅನುಸರಿಸಿ ಹೈನುಗಾರಿಕೆಯಲ್ಲಿ ಲಾಭ ಹೆಚ್ಚಿಸಬಹುದು:

1)ಪಶುಗಳನ್ನು ಆಯ್ಕೆ ಮಾಡುವಾಗ ಆದಷ್ಟು ಕಡಿಮೆ ವಯಸ್ಸಿನ (4-5 ವರ್ಷದೊಳಗಿನವು) ಹಾಗೂ ಕಡಿಮೆ ಸೂಲಿನ (3 ಸೂಲಿನೊಳಗಿನವು), ಆರೋಗ್ಯವಂತ ಹಾಗೂ ಹೆಚ್ಚು ಹಾಲು ಹಿಂಡುವ ದನಗಳನ್ನು ಖರೀದಿಸಿದಲ್ಲಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬಹುದು.

2)ಪಶುಗಳ ಮನೆಯನ್ನು ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುಗಳನ್ನು ಉಪಯೋಗಿಸಿ ಕಡಿಮೆ ಖರ್ಚಿನಲ್ಲಿ ಕಟ್ಟಬೇಕು. ಪಶುಗಳಿಗೆ ಮೇವನ್ನು ಖರೀದಿ ಮಾಡಿ ಕೊಡುವಬದಲು ಸ್ವತಃಬೆಳೆದು ಮೇಯಿಸಿದರೆ ಮೇವಿನ ಖರ್ಚು ಕಡಿಮೆ ಮಾಡಬಹುದು.

3)ಹಸಿರು ಮೇವನ್ನು 2/3 ಏಕದಳ ಮೇವು (ಮೆಕ್ಕೆ ಜೋಳ/ಜೋಳ) ಮತ್ತು 1/3 ದ್ವಿದಳ ಮೇವು(ಕುದುರೆ ಮೆಂತೆ/ಅವರೆ/ಅಲಸಂದಿ/ಹುರುಳಿ) ಪ್ರಮಾಣದಲ್ಲಿ ಬೆಳೆದು 1 ರಿಂದ 2 ಅಂಗಲ ಉದ್ದ ತುಂಡರಿಸಿ ಪಶುಗಳಿಗೆ ಮೇಯಿಸಿದರೆ ದಾಣಿ ಮಿಶ್ರಣ ತಿನ್ನಿಸುವ ಪ್ರಮಾಣವನ್ನು ಶೇ.50 ರಷ್ಟು ಕಡಿಮೆ ಮಾಡಿ, ಹೆಚ್ಚು ಹಾಲಿನ ಉತ್ಪಾದನೆ ಪಡೆದು ಉತ್ಪಾದನಾ ಖರ್ಚನ್ನು ಕಡಿಮೆ ಮಾಡಬಹುದು.

4)ಮಳೆಗಾಲದಲ್ಲಿ ಹೆಚ್ಚಾಗಿ ಸಿಗುವ ಹಸಿರು ಮೇವನ್ನು ರಸ ಮೇವಾಗಿ  ಸಂಗ್ರಹಿಸಿದಾಗ ಹಸಿರು ಮೇವು ಸಿಗದೆ ಇದ್ದಾಗ ಅದನ್ನು ಮೇಯಿಸಿ, ಬೇಸಿಗೆಯಲ್ಲಿಯೂ ಹೆಚ್ಚಿನ ಹಾಲಿನ ಉತ್ಪಾದನೆ ಪಡೆದು ಲಾಭ ಹೆಚ್ಚಿಸಬಹುದು.

ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜಗಳನ್ನು ಪಡೆಯಬೇಕಾದರೆ ಈ ಕೆಲಸ ಮಾಡುವುದು ಕಡ್ಡಾಯ!

5)ದಾಣಿ ಮಿಶ್ರಣವನ್ನು ಸ್ವತಃತಯಾರಿಸಿ ತಿನ್ನಿಸಿದರೆ ಅದರ ಗುಣಧರ್ಮ ಖಾತ್ರಿ ಇರುವುದಲ್ಲದೆ, ಖರ್ಚನ್ನು ಕಡಿಮೆ ಮಾಡಬಹುದು. ದಾಣಿ ಮಿಶ್ರಣದ ಕಚ್ಚಾ ಪದಾರ್ಥಗಳನ್ನು ಆದಷ್ಟು ಸುಗ್ಗಿಯ ಕಾಲದಲ್ಲಿ ಕಡಿಮೆ ಬೆಲೆಗೆ ಸಿಗುವಾಗ ಸಾಕಷ್ಟು ಪ್ರಮಾಣದಲ್ಲಿ ಖರೀದಿಸಿ ಶೇಖರಿಸಿಟ್ಟುಕೊಳ್ಳುವುದರಿಂದ ಅದರ ಖರ್ಚುನ್ನು ಕಡಿಮೆ ಮಾಡಬಹುದು.

6)ಕರುಗಳಿಗೆ ಸರಿಯಾಗಿ ಗಿಣ್ಣದ ಹಾಲನ್ನು ಕುಡಿಸಿ, ಪೋಷಿಸಿ ಮುಂದೆ ಮಣಕಗಳನ್ನು ಆದಷ್ಟು ಬೇಗನೆ ಒಂದೂವರೆ ವರ್ಷದಿಂದ 2 ವರ್ಷದೊಳಗೆ ಬೆದೆಗೆ ಬಂದು ಗರ್ಭಧರಿಸುವ ಹಾಗೆ ಪೋಷಿಸಿದರೆ ಹೆಚ್ಚು ಲಾಭ ಪಡೆಯಬಹುದು.

7)ಹೆಚ್ಚು ಹಾಲು ಹಿಂಡುವ ಆಕಳುಗಳು ಆದಷ್ಟು ಮೇ-ಜೂನ್‌ ತಿಂಗಳಲ್ಲಿ ಕರು ಹಾಕುವ ಹಾಗೆ ಏರ್ಪಾಡು ಮಾಡಿದರೆ ಮುಂದೆ ಮಳೆಗಾಲದಲ್ಲಿ ಹೆಚ್ಚು ಹಸಿರು ಮೇಯ್ದು ಹಾಲು ಉತ್ಪಾದನೆ ಹೆಚ್ಚಾಗಿ ಲಾಭದಾಯಕವಾಗುತ್ತದೆ.

8)ಕಡಿಮೆ ಹಾಲು ಉತ್ಪಾದಿಸುವ, ಸರಿಯಾಗಿ ಬೆದೆಗೆ ಬಾರದ ಹಾಗೂ ಗರ್ಭಧರಿಸದ, ಬೆಳವಣಿಗೆ ಕುಂಠಿತವಾಗಿರುವ, ಅನಾರೋಗ್ಯದ ಹಾಗೂ ಹೆಚ್ಚಾದ ಪಶುಗಳನ್ನು ಮಾರಾಟ ಮಾಡುವುದರಿಂದ ಮೇಯಿಸುವ ಖರ್ಚನ್ನು ಉಳಿಸಬಹುದು.

9)ಪಶುಗಳಿಗೆ ಮುಂಜಾಗ್ರತೆ ಕ್ರಮಗಳಾದ ಚುಚ್ಚುಮದ್ದು ಹಾಕಿಸುವುದು, ಜಂತು ಹಾಗೂ ಉಣ್ಣೆಗಳನ್ನು ನಿಯಂತ್ರಿಸುವದನ್ನು ಸರಿಯಾಗಿ ಅನುಸರಿಸಿದರೆ,ಪಶುಗಳು ಸಾಯುವ ಪ್ರಮಾಣವನ್ನು ಕಡಿಮೆ ಮಾಡಬಹುದು.

10)ಪಶುಗಳಿಗೆ ಜೀವವಿಮೆ ಮಾಡಿಸುವುದರಿಂದ ಅವುಗಳಿಂದ ಅಕಾಲಿಕ ಮರಣದ ಹಾನಿಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಒಂದು ವೇಳೆ ಮರಣ ಹೊಂದಿದಲ್ಲಿ ಜೀವವಿಮೆ ಹಣ ಪಡೆಯಬಹುದು.

11)ಬೇಸಿಗೆಯಲ್ಲಿ ಪಶುಗಳನ್ನು ಆದಷ್ಟು ತಂಪಾಗಿಟ್ಟು ಮೇಲಿಂದ ಮೇಲೆ ಮೈಮೇಲೆ ನೀರು ಹಾಕಿ ಸಾಕಷ್ಟು ಪ್ರಮಾಣ ನೀರು ಕುಡಿಸಬೇಕು.

12)ಮನೆಯವರು ಎಲ್ಲರೂ ಪಶುಪಾಲನೆಯಲ್ಲಿ ತೊಡಗಿಕೊಂಡರೆ ಕೃಷಿ ಕಾರ್ಮಿಕರನ್ನು ಕಡಿಮೆ ಮಾಡಿ ಲಾಭ ಹೆಚ್ಚಿಸಬಹುದು.

13)ಸಗಣಿಯಿಂದ ಜೈವಿಕ ಅನಿಲ ಬಳಕೆ ಹಾಗೂ ಎರೆಹುಳು ಗೊಬ್ಬರ ತಯಾರಿಸಿ ಮಾರಾಟ ಮಾಡಿ ಲಾಭಗಳಿಸಬಹುದು.

ಇತ್ತೀಚಿನ ಸುದ್ದಿಗಳು

Related Articles