Sunday, April 20, 2025

Horticulture department-ರೈತರಿಗೆ ಪ್ರೋತ್ಸಾಹಧನ ನೀಡಲು ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನ!

ನಮಸ್ಕಾರ ರೈತರೇ, 2025-26ನೇ ಸಾಲಿನ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ವಿವಿಧ ಸರಕಾರಿ ಸಹಾಯಧನದಲ್ಲಿ ಸೌಲಭ್ಯಗಳನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕನಿಷ್ಠ ಅರ್ಧ ಎಕರೆಗಿಂತ 5 ಎಕರೆವರೆಗೆ ಜಮೀನು ಹೊಂದಿರುವ ರೈತರಿಗೆ ಕಾಳುಮೆಣಸು, ಕೋಕೋ, ಗೇರು, ತಾಳೆ ಬೆಳೆ, ರಂಬೂಟಾನ್‌, ಡ್ರಾಗನ್‌ ಫ್ರುಟ್‌, ಮ್ಯಾಂಗೋಸ್ಟಿನ್‌, ತೆಂಗಿನ ತೋಟದಲ್ಲಿ ಅಂತರ ಬೆಳೆಯಾಗಿ ದಾಲ್ಚಿನಿ(ಚಕ್ಕೆ) ಬೆಳೆಗಳ ಪ್ರದೇಶ ವಿಸ್ತರಣೆಗೆ (ಹೊಸ ತೋಟ) ಶೇ 40% ಸಹಾಯಧನ, ಕಾಳುಮೆಣಸು ಪುನಶ್ಚೇತನಕ್ಕೆ ಶೇ.50% ಸಹಾಯಧನ, ನೀರು ಸಂಗ್ರಹಣಾ ಘಟಕಗಳ ಸ್ಥಾಪನೆಗೆ ಸಹಾಯಧನ, ಜೇನು ಸಾಕಾಣಿಕೆ ಯೋಜನೆಯಡಿ ಜೇನು ಪೆಟ್ಟಿಗೆ ಹಾಗೂ ಕುಟುಂಬ ಖರೀದಿಗೆ ಶೇ.70% ಸಹಾಯಧನ ಇರುತ್ತದೆ.

ಕ್ಷೇತ್ರ ಮಟ್ಟದ ಗೋದಾಮು ನಿರ್ಮಾಣಕ್ಕೆ (ಶೇ.50%) 1ಲಕ್ಷ ರೂ. ಸಹಾಯಧನ, ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕಕ್ಕೆ ಶೇ.40% ರಲ್ಲಿ 10 ಲಕ್ಷ ರೂ ಸಹಾಯಧನ, ಅಣಬೆ ಉತ್ಪಾದನೆ ಘಟಕಕ್ಕೆ ಶೇ.40 ರಂತೆ ಗರಿಷ್ಠ 8ಲಕ್ಷ ರೂ. ಸಹಾಯಧನ, ಸೋಲಾರ್‌ ಪಂಪ್‌ ಅಳವಡಿಕೆಗೆ ಗರಿಷ್ಠ 1.50 ಲಕ್ಷ ರೂ.

ಇದನ್ನೂ ಓದಿ:ಕೃಷಿ ಸಾಲ ಪಡೆಯಲು ಈ ಕೆಲಸ ಆಗಿರಬೇಕು?

ಪ್ಯಾಕ್‌ ಹೌಸ್‌ ನಿರ್ಮಾಣಕ್ಕೆ ಗರಿಷ್ಠ 2ಲಕ್ಷ ರೂ. ಸಂರಕ್ಷಿತ ಬೇಸಾಯ ಘಟಕ (ಪಾಲಿಹೌಸ್‌ ಮತ್ತು ನೆರಳು ಪರದೆ ಘಟಕಕ್ಕೆ) ಶೇ.50, ಹನಿ ನೀರಾವರಿ, ತುಂತುರು ನೀರಾವರಿಗೆ ಶೇ.90%, ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆ ಹಾಗೂ ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗ ನಿಯಂತ್ರಣಕ್ಕೆ  ಬಳಕೆ  ಮಾಡುವ ಕೀಟನಾಶಕ, ರೋಗನಾಶಕಗಳ ಖರೀದಿಗೆ ಶೇ.30%ರ ಸಹಾಯಧನ ಇರುತ್ತದೆ.

ರೈತರ ಗಮನಕ್ಕೆ: ಮೇಲೆ ತಿಳಿಸಿದ ಯೋಜನೆಗಳು ಜಿಲ್ಲೆಯಿಂದ ಜಿಲ್ಲೆಗೆ ಕೆಲವು ಬಾರಿ ವ್ಯತ್ಯಾಸ ಇರುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆಯ ಕಛೇರಿಯನ್ನು ಭೇಟಿ ಮಾಡಿ.

Apply documents-ಅರ್ಜಿ ಸಲ್ಲಿಸಲು  ಬೇಕಾಗುವ ದಾಖಲೆಗಳು:

1)ರೈತರ ಪಹಣಿ/ಆರ್‌ ಟಿ ಸಿ

2)ಆಧಾರ್‌ ಪ್ರತಿ

3)ಬ್ಯಾಂಕ್‌ ಪ್ರತಿ

4)sc/st ಜಾತಿ ಪ್ರಮಾನ ಪತ್ರ

5)1ಫೋಟೋ

6)ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸುವ ಇತರೆ ದಾಖಲೆಗಳು

ಇದನ್ನೂ ಓದಿ:ಕೃಷಿ ಇಲಾಖೆಯ ಕಪ್ಪು ಟಾರ್ಪಲ್‌ ಸಬ್ಸಿಡಿ ದರಲ್ಲಿ ಲಭ್ಯ!

Where Application apply-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು:

ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸಬೇಕು.

ಇತ್ತೀಚಿನ ಸುದ್ದಿಗಳು

Related Articles