2024-25ನೇ ಸಾಲಿನಲ್ಲಿ ಕೃಷಿ ಇಲಾಖೆಯ ಯೋಜನೆಗಳಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಎಲ್ಲಾ ಜಿಲ್ಲೆಗಳಿಗೆ ಮರು ಚಾಲನೆಯನ್ನು ಗೊಳಿಸಲಾಗಿದೆ. ಕೃಷಿ ಭಾಗ್ಯ ಯೋಜನೆಯಲ್ಲಿ ಏನೆಲ್ಲ ರೈತರಿಗೆ ಸಹಾಯಧನದಲ್ಲಿ ಸೌಲಭ್ಯ ಸಿಗಲಿವೆ ಅದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುವುದು.
ಕರ್ನಾಟಕ ರಾಜ್ಯದಲ್ಲಿ 2023 ರಲ್ಲಿ ಮಳೆ ತುಂಬಾ ಕಡಿಮೆ ಬಂದು ಹಲವಾರು ಗ್ರಾಮಗಳು ಬರ ಪೀಡಿತವಾಗಿದ್ದವು. ಹಾಗೂ ಇನ್ನೂ ರೈತರಿಗೆ ಬೆಳೆಗಳಿಗೆ ನೀರು ಇಲ್ಲದೆ ಕೃಷಿ ಮಾಡಲು ಕಷ್ಟವಾಗಿತ್ತು. ಅಂತಹ ಸಮಯದಲ್ಲಿ ಕೃಷಿ ಹೊಂಡಗಳ ನೀರನ್ನು ಬಳಸಿ ಕೃಷಿ ಮಾಡಲು ಅನುಕೂಲವಾಗಲು ಪ್ರತಿಯೊಬ್ಬ ರೈತರು ಕೃಷಿ ಹೊಂಡಗಳನ್ನು ಮಾಡಿಕೊಂಡಲ್ಲಿ ಪ್ರಯೋಜನಕ್ಕೆ ಬರುತ್ತದೆ.
ಕೃಷಿ ಹೊಂಡಗಳನ್ನು ಮಾಡಿಕೊಂಡರೆ ಮಳೆ ಬರದೆ ಇದ್ದ ಸಮಯದಲ್ಲಿ ಬೆಳೆಗಳಿಗೆ ಕೃಷಿ ಹೊಂಡದ ನೀರು ಬಳಕೆ ಮಾಡಿ ಕೃಷಿ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ. ಹಾಗೂ ನೀರು ಭೂಮಿಗೆ ಇಂಗುವುದರಿಂದ ಹತ್ತಿರದಲ್ಲಿ ಬೋರವೆಲ್ ಇದ್ದರೆ ಬೋರವೆಲ್ ರೀಚಾರ್ಜ್ ಮಾಡಿದ ಹಾಗೆ ಆಗುತ್ತದೆ.
ಕೃಷಿ ಭಾಗ್ಯದ ಉದ್ದೇಶಗಳು:
1)ರಾಜ್ಯದ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವುದು.
2)ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸುವುದು ಮತ್ತುಆದಾಯವನ್ನು ಹೆಚ್ಚಿಸುವುದು.
3)ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ಕೆ ಸ್ಥಳದಲ್ಲಿ ಕೃಷಿಹೊಂಡ ತೆಗೆದು ಜಲ ಇಂಗಿಸುವುದು.
4)ಸಂಗ್ರಹಿಸಿದ ನೀರನ್ನು ಬೆಳೆಗಳಿಗೆ ಸಂದಿಗ್ಧ ಹಂತಗಳಲ್ಲಿ ಬಳಕೆ ಮಾಡುವುದು.
ಕೃಷಿ ಭಾಗ್ಯ ಯೋಜನೆಯಡಿ ಒದಗಿಸಲಾಗುವ ಸೌಲಭ್ಯಗಳು:
1)ಕೃಷಿ ಹೊಂಡ(FARM POND)
2)ನೀರು ಇಂಗದಂತೆ ತಡೆಯಲು ಫಾಲಿಥೀನ್ ಹೊದಿಕೆ
3)ಕೃಷಿ ಹೊಂಡದ ಸುತ್ತಲು ತಂತಿ ಬೇಲಿ
4)ಹೊಂಡದಿಂದ ನೀರು ಎತ್ತಲು ಡೀಸೆಲ್ ಪಂಪಸೆಟ್.
5)ನೀರು ಬೆಳೆಗಳಿಗೆ ಕೊಡಲು ತುಂತುರು ನೀರಾವರಿ(ಸ್ಪಿಂಕ್ಲರ್)
ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
1)ಕನಿಷ್ಠ 1 ಎಕರೆ ಕೃಷಿ ಜಮೀನು ಹೊಂದಿರಬೇಕು.
2)ಆಧಾರ್ ಕಾರ್ಡ್ ಪ್ರತಿ
3)ಬ್ಯಾಂಕ್ ಪಾಸ್ ಬುಕ್ ಪ್ರತಿ
4)1 ಫೋಟೋ
5)ಕೃಷಿ ಭಾಗ್ಯ ಯೋಜನೆಯ ಇಲಾಖೆಯ ಅರ್ಜಿ ನಮೂನೆ
6)ಈ ಹಿಂದೆ ಕೃಷಿ ಇಲಾಖೆಯಿಂದ ಕೃಷಿ ಹೊಂಡ ಮಾಡಿರಬಾರದು.
ಸೂಚನೆ: ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸುವುದು.